ಚಿಕ್ಕಬಳ್ಳಾಪುರ: ಭೀಮಕೋರೆಗಾಂವ್(BhimkoreGaon) ಭಾರತದ ಚರಿತ್ರೆಯಲ್ಲಿ ವ್ಯವಸ್ಥಿತವಾಗಿ ಮರೆ ಮಾಚಿದ್ದ ಅಪ್ಪಟ ಸ್ವಾಭಿಮಾನಿ ದಲಿತ ಚರಿತ್ರೆಯಾಗಿದೆ ಎಂದು ಉಪನ್ಯಾಸಕ ಚಂದ್ರಶೇಖರ್ ತಿಳಿಸಿದರು.
ನಗರದಲ್ಲಿ ದಲಿತ ಸಂಘರ್ಷ ಸಮಿತಿ ಏರ್ಪಡಿಸಿದ್ದ ಭೀಮಕೋರೆಗಾಂವ್ ವಿಜಯೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.
1817 ಡಿಸೆಂಬರ್ 31ಕ್ಕೆ ಮಾರಾಠ ಪೇಶ್ವೆಗಳ ವಿರುದ್ಧ ಪ್ರಾರಂಭವಾದ ಭೀಮಕೋರೆಗಾಂವ್ ಯುದ್ಧ 1818ರ ಜನವರಿ 1ರಂದು ಪೇಶ್ವೆಗಳ ವಿರುದ್ಧದ ವಿಜಯದಲ್ಲಿ ಕೊನೆಯಾಗುತ್ತದೆ. ಕೇವಲ 500 ಮಹಾರ್ ಸೈನಿಕರಿದ್ದ ರೆಜಿಮೆಂಟ್ ಪೇಶ್ವೆ ಕಡೆಯ ಸಾವಿರಾರು ಸೈನಿಕರನ್ನು ಸೋಲಿಸಿ ವಿಜಯ ಪಡೆದ ನೆನಪಿಗಾಗಿ ಆ ಯುದ್ದದಲ್ಲಿ ಮಡಿದ ವೀರಯೋಧರ ನೆನೆಪಿಗಾಗಿ ನಿರ್ಮಿಸಿರುವ ವಿಜಯ ಸ್ಥೂಪದ ವಿಚಾರವನ್ನು ಬಾಬಾ ಸಾಹೇಬ ಅಂಬೇಡ್ಕರ್ ಲಂಡನ್ ಗ್ರಂಥಾಲಯದಲ್ಲಿ ತಿಳಿದು ಮಮ್ಮಲ ಮರುಗುತ್ತಾರೆ, ಆನಂದ ಭಾಷ್ಪ ಸುರಿಸಿ ಭಾರತಕ್ಕೆ ಬಂದು ಇದನ್ನು ಪತ್ತೆ ಹಚ್ಚುವವರೆಗೆ ಭಾರತೀಯರಿಗೆ ಈ ಸತ್ಯ ಗೊತ್ತಿರಲಿಲ್ಲ ಎಂದರು.
ಇದನ್ನೂ ಓದಿ: Chikkaballapur News: ನೂರಾರು ಭಕ್ತರ ಸಮ್ಮುಖದಲ್ಲಿ: ವಾಪಸಂದ್ರದ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಕಲ್ಯಾಣ ಮಹೋತ್ಸವ
ಪೇಶ್ವೆ ಆಡಳಿತದಲ್ಲಿ ಮಹಾರ್ ಸಮುದಾಯಕ್ಕೆ ಸಾಮಾಜಿಕ, ಅನ್ಯಾಯ ಮತ್ತು ಅವಮಾನಗಳಿದ್ದ ಕಾರಣ ಈ ಯುದ್ಧವನ್ನು ಅನ್ಯಾಯದ ಪ್ರತಿರೋಧದ ಸಂಕೇತವಾಗಿ ನೋಡಲಾಗುತ್ತದೆ. ಈ ಯುದ್ಧದಲ್ಲಿ ಮೃತಪಟ್ಟ ಬ್ರಿಟೀಷ್ ರೆಜಿಮೆಂಟ್‌ನ ಭಾಗವಾಗಿದ್ದ ಮಹಾರ್ ಸೈನಿಕರ ಸ್ಮರಣಾರ್ಥ ವಾಗಿ ವಿಜಯಸ್ತಂಭ ನಿರ್ಮಿಸಲಾಗಿದೆ. ಆಸ್ತಂಭದ ಮೇಲೆ ಮಡಿತ ಸೈನಿಕರ ಹೆಸರುಗಳನ್ನು ಕೆತ್ತಲಾಗಿದೆ. ಈ ಸ್ತಂಭ ಇಂದು ಸಮಾನತೆ, ಧೈರ್ಯ, ಮತ್ತು ಹೋರಾಟದ ಚಿಹ್ನೆಯಾಗಿ ಪರಿಗಣಿತ ವಾಗಿದೆ ಎಂದರು.
ಮಹಾರ್ ಸೈನಿಕರ ಸ್ವಾಭಿಮಾನ, ಧೈರ್ಯ, ದಿಟ್ಟ ಹೋರಾಟ ಯುವ ತಲೆಮಾರಿಗೆ ಮಾದರಿಯಾಗ ಬೇಕು. ಆ ಮೂಲಕ ದಲಿತ ಮುಖ್ಯಮಂತ್ರಿಯ ಸ್ಥಾನ ಬೇಡಿ ಪಡೆಯದೆ, ನ್ಯಾಯೋಚಿತ ರೀತಿಯಲ್ಲಿ ಸಂವಿಧಾನ ಬದ್ಧವಾಗಿ ಪಡೆಯಬೇಕಿದೆ.ದಲಿತ ಸಮುದಾಯ ಅನೇಕ ಅಪಾಯಗಳನ್ನು ಎದುರಿಸು ತ್ತಿದ್ದು ಇದರ ಬಗ್ಗೆ ಅರಿತು ಸಂಘಟಿತ ಹೋರಾಟ ನಡೆಸಬೇಕಿದೆ.
ಬಾಬಾ ಸಾಹೇಬರ ವಿಚಾರಧಾರೆಗಳನ್ನು ಕಟ್ಟಿಕೊಂಡು ಜನ್ಮ ತಳೆದ ದಸಂಸ ಸಾಮಾಜಿಕ ನ್ಯಾಯ ಕ್ಕಾಗಿ ಕಳೆದ 50 ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದ ಕಾರಣ ಅಷ್ಟೋ ಇಷ್ಟೋ ಗೌರವಾರ್ಹ ಬದುಕು ನಡೆಸುವಂತಾಗಿದೆ. ಸುಧಾ ವೆಂಕಟೇಶ್ ನೇತೃತ್ವದ ತಂಡ ಮೋಜು ಮಸ್ತಿಗೆ ಅವಕಾಶ ಮಾಡಿಕೊಡುವ ಹೊಸ ವರ್ಷದ ದಿನವೇ ಭೀಮಕೋರೆಗಾಂವ್ ವಿಜಯೋತ್ಸವ ಆಚರಿಸಿ ಇತಿಹಾಸವನ್ನು ಯುವ ಜನತೆಗೆ ತಿಳಿಸುವ ಕೆಲಸ ಮಾಡಿದೆ ಎಂದರು.
ಪ್ರೊಫೆಸರ್ ಕೋಡಿರಂಗಪ್ಪ ಮಾತನಾಡಿ ದಲಿತ ಸಮುದಾಯ ಓದಿಗೆ ತೆರೆದುಕೊಳ್ಳದಿದ್ದರೆ, ಸಾಮಾಜಿಕ ಅಸಮಾನತೆಗಳಿಗೆ ಕಾರಣಗಳೇ ಗೊತ್ತಾಗುವುದಿಲ್ಲ.ಮೊಬೈಲ್ ಗೀಳಿನಿಂದ ದೂರವಾಗಿ ನಿತ್ಯವೂ ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳದಿದ್ದರೆ ಲೋಕಜ್ಞಾನದಿಂದ ವಂಚಿತ ರಾಗುತ್ತೇವೆ. ಸಾಮಾಜಿಕ ಚಳವಳಿಗಳನ್ನು ಮುನ್ನಡೆಸುತ್ತಿರುವ ಮುಖಂಡರನ್ನು ಗೌರವಿಸಬೇಕಿದೆ. ಅವರ ಮೂಲಕವೇ ಇಂತಹ ವಿಜಯೋತ್ಸವ ಸಮಾಜಕ್ಕೆ ತಿಳಿಸಲು ಸಾಧ್ಯ ಎಂದರು.
ಭೀಮಕೋರೆಗಾAವ್‌ಗೆ ಹೊಸ ಅರ್ಥ ಮತ್ತು ಜೀವ ತುಂಬಿದವರು ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್.ಅವರು ಈ ಸ್ಥಳಕ್ಕೆ ಭೇಟಿ ನೀಡಿ,ಇಲ್ಲಿ ನಡೆದ ಯುದ್ಧವನ್ನು ಕೇವಲ ಸೇನಾ ಸಂಘರ್ಷ ವಲ್ಲ, ಬದಲಾಗಿ ಮಾಣವ ಗೌರವ ಮತ್ತು ಸಮಾನತೆಯ ಹೋರಾಟ ಎಂದು ವಿವರಿಸಿದರು. ಅವರ ಪ್ರೇರಣೆಯಿಂದಲೇ ಭೀಮಾ ಕೋರೆಗಾಂವ್ ದಲಿತ ಚಳವಳಿಯ ಪ್ರಮುಖ ಸಂಕೇತವಾಗಿ ರೂಪು ಗೊಂಡಿತು ಎಂದರು.
ದಸಂಸ ರಾಜ್ಯ ಸಂಚಾಲಕ ಸುಲ್ತಾನಪೇಟೆ ದಾಸಪ್ಪ ವೆಂಕಟೇಶ್ ಮಾತನಾಡಿ 1818ರ ಭೀಮಾ ಕೋರೆಗಾಂವ್ ಯುದ್ಧ ಸಮಾಜದ ಆತ್ಮಸಾಕ್ಷಿಯನ್ನು ತಟ್ಟಿದ ಯುದ್ದವೆಂದೇ ಹೆಸರಾಗಿದೆ. ಮಹಾ ರಾಷ್ಟ್ರದ ಪುಣೆ ಜಿಲ್ಲೆಯ ಸಮೀಪವಿರುವ ಭೀಮಾ ಕೋರೆಗಾಂವ್ ಎಂಬ ಸಣ್ಣ ಗ್ರಾಮದ ಸರಹದ್ದಿ ನಲ್ಲಿ ನಡೆದ ಈ ಯುದ್ಧ ಸ್ವಾಭಿಮಾನಿ ಯುದ್ಧವಾಗಿತ್ತು.ಹೀಗಾಗಿ ಇದು ದೇಶದ ಸಾಮಾಜಿಕ ಸಾಂಸ್ಕೃತಿಕ ಚಳವಳಿಗಳ ಇತಿಹಾಸದಲ್ಲಿ ದೊಡ್ಡ ಸ್ಥಾನ ಪಡೆದಿದೆ ಎಂದರು.
ಪ್ರತಿವರ್ಷ ಜ.1ರಂದು ದೇಶದ ಮೂಲೆಮೂಲೆಗಳಿಂದ ಲಕ್ಷಾಂತರ ದಲಿತರು ಇಲ್ಲಿನ ಭೇಟಿ ನೀಡಿ ವಿಜಯಸ್ತಂಭಕ್ಕೆ ನಮಿಸುತ್ತಾರೆ. ಇದು ಶೌರ್ಯೋತ್ಸವ ಮಾತ್ರವಲ್ಲ, ಸಮಾನತೆ, ಸ್ವಾಭಿಮಾನ ಮತ್ತು ಸಾಮಾಜಿಕ ನ್ಯಾಯದ ಸಂಕಲ್ಪವನ್ನು ಪುನರುಚ್ಛರಿಸುವ ದಿನವಾಗಿದೆ ಎಂದರು.
ಈ ವೇಳೆ ಸೂಲಿಕುಂಟೆ ವೆಂಕಟೇಶ್, ವೆಂಕಟ್, ಕಂಡಕ್ಟರ್ ಶ್ರೀನಿವಾಸ್, ಆಂಜಿನಪ್ಪ, ಮುಕಳೆಪ್ಪ ಇತರರು ಇದ್ದರು.