Gauribidanur News: ನ.2ಕ್ಕೆ ಮದಕರಿ ಯುವ ಬ್ರಿಗೇಡ್‌ನಿಂದ ಮದಕರಿ ಜಯಂತಿ
ತಾಲ್ಲೂಕಿನಲ್ಲಿ ಪ್ರಥಮ ಬಾರಿಗೆ ನಾಡ ದೊರೆ ವೀರ ಮದಕರಿ ನಾಯಕ ಜಯಂತಿಯನ್ನು ಆಚರಣೆ ಮಾಡಲು ಮದಕರಿ ಯುವ ಬ್ರಿಗ್ರೇಡ್ ವತಿಯಿಂದ ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆ, ತಾಲ್ಲೂಕಿನಲ್ಲಿ ಸಮುದಾಯದ ಜನಸಂಖ್ಯೆ ಹೆಚ್ಚಾಗಿದ್ದು, ಎಲ್ಲರೂ ಭಾಗವಹಿಸಬೇಕು, ಜಯಂತಿ ಗಳನ್ನು ಆಚರಣೆ ಮಾತ್ರ ಸೀಮಿತ ಗೊಳಿಸಬಾರದು, ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡ ಬೇಕು, ಈ ಕಾರ್ಯಕ್ರಮ ದಲ್ಲಿ ಸಮುದಾಯದ ಗಣ್ಯ ವ್ಯಕ್ತಿಗಳು ಮತ್ತು ಸಮುದಾಯ ದವರನ್ನು ಮಾತ್ರ ಅಹ್ವಾನ ನೀಡಲಾಗಿದೆ
ನಗರದ ಪ್ರವಾಸಿ ಮಂದಿರದಲ್ಲಿ ಮದಕರಿ ಯುವ ಬ್ರಿಗೇಡ್ ವತಿಯಿಂದ ನವೆಂಬರ್ ೨ ರಂದು ಮದಕರಿ ಜಯಂತಿ ಆಚರಿಸುವ ಕುರಿತು ಪತ್ರಿಕಾ ಗೋಷ್ಠಿಯನ್ನು ಶುಕ್ರವಾರ ನಡೆಸಲಾಯಿತು. -
Ashok Nayak
Nov 1, 2025 2:58 PM
ಗೌರಿಬಿದನೂರು : ನಗರದ ಪ್ರವಾಸಿ ಮಂದಿರದಲ್ಲಿ ಮದಕರಿ ಯುವ ಬ್ರಿಗೇಡ್ ವತಿಯಿಂದ ನ.೨ ರಂದು ಮದಕರಿ ಜಯಂತಿ ಆಚರಿಸುವ ಕುರಿತು ಪತ್ರಿಕಾ ಗೋಷ್ಠಿಯನ್ನು ಶುಕ್ರವಾರ ನಡೆಸಲಾಯಿತು.
ಸಮುದಾಯದ ಹಿರಿಯ ಮುಖಂಡ ಆರ್ ಅಶೋಕ್ ಮಾತನಾಡಿ, ನಗರದ ವಾಲ್ಮೀಕಿ ವೃತ್ತದಿಂದ ಎಚ್ ಎನ್ ಕಲಾ ಭವನದವರೆಗೆ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗುವುದು, ಈ ಕಾರ್ಯಕ್ರಮಕ್ಕೆ ಮಾಜಿ ಮಂತ್ರಿ ರಾಜುಗೌಡ ನರಸಿಂಹ ನಾಯಕ, ಅನಂತಪುರ ಸಂಸದ ಅಂಬಿಕಾ ಲಕ್ಷ್ಮೀ ನಾರಾಯಣ, ಹಾಗೂ ವಿಶೇಷ ಆಹ್ವಾನಿತರಾಗಿ ರವಿ ಡಿ ಚನ್ನಣ್ಣನವರ್, ಆಗಮಿಸಲಿದ್ದಾರೆ ಎಂದರು.
ಇದನ್ನೂ ಓದಿ: Gauribidanur News: ವಿಜ್ಞಾನ ಕಲಿಕೆ ಕ್ರಿಯಾತ್ಮಕವಾಗಿರಲಿ: ಕ್ಷೇತ್ರ ಶಿಕ್ಷಣಾಧಿಕಾರಿ ಗಂಗರೆಡ್ಡಿ
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಂಗನಾಥ್ ಮಾತನಾಡಿ, ನವೆಂಬರ್ ೨ ರಂದು ವೀರ ಮದಕರಿ ಜಯಂತಿಯನ್ನು ಹಮ್ಮಿಕೊಳ್ಳಲಾಗಿದೆ. ವಾಲ್ಮೀಕಿ ಪುತ್ತಳಿಗೆ ಮಾಲಾರ್ಪಣೆ ಮಾಡಿ, ನಂತರ ಬೈಕ್ ರ್ಯಾಲಿ ಮಾಡಲಾಗುವುದು, ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಮಂಜುನಾಥ್ ಎನ್ ಆರ್ ಮಾತನಾಡಿ, ತಾಲ್ಲೂಕಿ ನಲ್ಲಿ ಪ್ರಥಮ ಬಾರಿಗೆ ನಾಡ ದೊರೆ ವೀರ ಮದಕರಿ ನಾಯಕ ಜಯಂತಿಯನ್ನು ಆಚರಣೆ ಮಾಡಲು ಮದಕರಿ ಯುವ ಬ್ರಿಗ್ರೇಡ್ ವತಿಯಿಂದ ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆ, ತಾಲ್ಲೂಕಿ ನಲ್ಲಿ ಸಮುದಾಯದ ಜನಸಂಖ್ಯೆ ಹೆಚ್ಚಾಗಿದ್ದು, ಎಲ್ಲರೂ ಭಾಗವಹಿಸಬೇಕು, ಜಯಂತಿ ಗಳನ್ನು ಆಚರಣೆ ಮಾತ್ರ ಸೀಮಿತ ಗೊಳಿಸಬಾರದು, ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡ ಬೇಕು, ಈ ಕಾರ್ಯಕ್ರಮ ದಲ್ಲಿ ಸಮುದಾಯದ ಗಣ್ಯ ವ್ಯಕ್ತಿಗಳು ಮತ್ತು ಸಮುದಾಯದವರನ್ನು ಮಾತ್ರ ಅಹ್ವಾನ ನೀಡಲಾಗಿದೆ, ಬೇರೆ ಯಾವುದೇ ರಾಜಕೀಯವನ್ನು ಬೇರೆಸುತ್ತಿಲ್ಲ ಎಂದರು.
ಇದೇ ಸಂದರ್ಭದಲ್ಲಿ, ಪೊಲೀಸ್ ಅಧಿಕಾರಿ ನಾಗರಾಜಪ್ಪ, ಕರೆ ತಿಮ್ಮಯ್ಯ, ಲೋಕೇಶ್, ನಿರಂಜನ್, ಪ್ರಶಾಂತ್, ನವೀನ್, ಮುಂತಾದವರು ಹಾಜರಿದ್ದರು.