ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gauribidanur News: ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆದು ರೈತರ ಹಿತ ಕಾಪಾಡಬೇಕು: ಎಂ .ಆರ್. ಲಕ್ಷ್ಮೀನಾರಾಯಣ್ ಆಗ್ರಹ

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವಿನ ಸಮನ್ವಯ ಕೊರತೆಯಿಂದಾಗಿ, ಮೆಕ್ಕೆಜೋಳ ಬೆಳೆ ಬೆಳೆದ ರೈತರು ಬೀದಿಗೆ ಬಿದ್ದಿದಾರೆ, ಈ ಕೂಡಲೆ ರಾಜ್ಯ ಸರ್ಕಾರ ಮೆಕ್ಕೆಜೋಳ ಖರೀದಿ ಕೇಂದ್ರ ಗಳನ್ನು ತೆರೆದು ರೈತರ ಹಿತ ಕಾಪಾಡಬೇಕು, ವಿಳಂಬ ಮಾಡಿದರೆ ರೈತರ ಆಕ್ರೋಶವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗೌರಿಬಿದನೂರು: ಜಿಲ್ಲೆಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆದು ರೈತರ ಹಿತ ಕಾಪಾಡಲು ಜಿಲ್ಲಾಡಳಿತ ಮತ್ತು ಸರಕಾರ ಮುಂದಾಗಬೇಕು ಎಂದು ಪುಟ್ಟಣ್ಣಯ್ಯ ಬಣದ ರೈತ ಸಂಘದ ಜಿಲ್ಲಾಧ್ಯಕ್ಷ ನಾರಾಯಣ್ ಆಗ್ರಹಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವಿನ ಸಮನ್ವಯ ಕೊರತೆಯಿಂದಾಗಿ, ಮೆಕ್ಕೆಜೋಳ ಬೆಳೆ ಬೆಳೆದ ರೈತರು ಬೀದಿಗೆ ಬಿದ್ದಿದಾರೆ, ಈ ಕೂಡಲೆ ರಾಜ್ಯ ಸರ್ಕಾರ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆದು ರೈತರ ಹಿತ ಕಾಪಾಡಬೇಕು, ವಿಳಂಬ ಮಾಡಿದರೆ ರೈತರ ಆಕ್ರೋಶ ವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇದನ್ನೂ ಓದಿ: Gauribidanur News: ಪರಿಸರದ ಮಡಿಲಲ್ಲಿ ಪೋಷಕರ ಸಭೆ ಮತ್ತು ವಿಜ್ಞಾನ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

ಈಗಾಗಲೆ ಕೇಂದ್ರ ಸರ್ಕಾರ ಒಂದು ಕ್ವಿಂಟಾಲ್ ಮೆಕ್ಕೆಜೋಳಕ್ಕೆ 2400 ರೂಪಾಯಿಗಳ ಬೆಂಬಲ ಬೆಲೆಯನ್ನು ಘೋಷಣೆ ಮಾಡಿದ್ದು, ರಾಜ್ಯ ಸರ್ಕಾರವು ಕೂಡ ಇದರ ಜೊತೆಗೆ 600 ರೂಪಾಯಿಗಳ ಬೆಂಬಲ ಬೆಲೆಯನ್ನು ಘೋಷಿಸಿ, ಒಟ್ಟು ಮೂರು ಸಾವಿರ ರೂಪಾಯಿಗಳಿಗೆ ರೈತರಿಂದ ಮೆಕ್ಕೆಜೋಳವನ್ನು ಖರೀದಿಸಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿ
ನಗರದಲ್ಲಿ ಇದೇ ತಿಂಗಳು 24 ರಂದು ಸೋಮವಾರ ರೈತರಿಂದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ಮತ್ತು ರಸ್ತೆ ತಡೆಯನ್ನು ನಡೆಸುವು ದಾಗಿ ತಿಳಿಸಿದ ಅವರು ನಗರದ ತಾಲೂಕು ಪಂಚಾಯತಿ ಆವರಣದಿಂದ ಎಪಿಎಂಸಿ ಮಾರುಕಟ್ಟೆಯವರೆಗೂ ರೈತರ ಪ್ರತಿಭಟನಾ ಜಾಥಾ ನಡೆಯಲಿದೆ ಎಂದು ತಿಳಿಸಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಲೋಕೇಶ್ ಗೌಡ ಮಾತನಾಡಿ, ಕೇಂದ್ರ ಸರ್ಕಾರ ವಿದೇಶ ಗಳಿಂದ ಸುಮಾರು ಎಪ್ಪತ್ತು ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ಅಮದು ಮಾಡಿ ಕೊಳ್ಳುತ್ತಿದೆ.  ಇದರಿಂದಾಗಿ ನಮ್ಮ ರೈತರು ಬೆಳೆಯುವ ಮೆಕ್ಕೆಜೋಳಕ್ಕೆ ಸರಿಯಾದ ಬೆಲೆ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ .ಕೇಂದ್ರ ಸರ್ಕಾರ ಈ ಕೂಡಲೆ ಮೆಕ್ಕೆಜೋಳದ ಅಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆಯುವ ವಿಚಾರವಾಗಿ ಸ್ಪಷ್ಟತೆ ಇಲ್ಲದ ಮಾಹಿತಿಯನ್ನು ನೀಡಿದ್ದು, ಸರ್ಕಾರ ಹತ್ತು ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ಮಾತ್ರ ಖರೀದಿಸಬಹುದಾಗಿದೆ ಎಂದು ಹೇಳಿರುವುದು ರೈತರನ್ನು ಆಘಾತಕ್ಕೆ ಈಡು ಮಾಡಿದೆ‌.

ರಾಜ್ಯದಲ್ಲಿ ಸುಮಾರು 55 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಈ ಬಾರಿ ಉತ್ಪತಿಯಾಗಲಿದೆ ಎಂಬ ಅಂದಾಜು ಇದ್ದು ,ಸರ್ಕಾರ ಕೇವಲ ಹತ್ತು ಲಕ್ಷ ಮೆಟ್ರಿಕ್ ಟನ್ ಮಾತ್ರ ಖರೀದಿಸಿದರೆ ಉಳಿದ ಮೆಕ್ಕೆಜೋಳವನ್ನು ಏನು ಮಾಡಬೇಕು ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಪ್ರಜಾ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಆರ್ ಎನ್.ರಾಜು ಮಾತನಾಡುತ್ತಾ ,ರೈತರು ಒಂದು ಏಕರೆ ಮೆಕ್ಕೆಜೋಳದ ಬೆಳೆ ಬೆಳೆಯಲು ಕನಿಷ್ಠ ಎಂದರೂ ನಲವತ್ತು ಸಾವಿರ ರೂಪಾಯಿಗಳ ಖರ್ಚು, ವೆಚ್ಚಗಳು ಬರುತ್ತಿದೆ. ಇದರ ಜೊತೆಗೆ ನಿರೀಕ್ಷಿತ ಪ್ರಮಾಣದ ಇಳುವರಿ ಇತ್ತೀಚಿನ ದಿನಗಳಲ್ಲಿ ಬರುತ್ತಿಲ್ಲ.

ಇದರಿಂದಾಗಿ ರೈತರ ವ್ಯವಸಾಯದಿಂದಲೇ ವಿಮುಕ್ತರಾಗುತ್ತಿರುವುದು ಅಘಾತಕಾರಿ ವಿಚಾರ ವಾಗಿದೆ. ಸರ್ಕಾರ ಈ ಕೂಡಲೆ ಕೇಂದ್ರ ಸರ್ಕಾರ ನೀಡುವ ಬೆಂಬಲ ಬೆಲೆಯೊಂದಿಗೆ ರಾಜ್ಯ ಸರ್ಕಾರ 600 ರೂಪಾಯಿಗಳ ಬೆಂಬಲ ಬೆಲೆಯನ್ನು ಘೋಷಿಸಿ, ಈ ಕೂಡಲೆ ಮೆಕ್ಕೆ ಜೋಳ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದರು.