Gauribidanur News: ಪರಿಸರದ ಮಡಿಲಲ್ಲಿ ಪೋಷಕರ ಸಭೆ ಮತ್ತು ವಿಜ್ಞಾನ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ
ಶಾಲಾ ಮುಖ್ಯ ಶಿಕ್ಷಕಿ ಎಂ.ಶೋಭಾ ಪೋಷಕರ ಸಭೆ ನಡೆಸಿ, ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಪೋಷಕರ ಪಾತ್ರ ಪ್ರಧಾನವಾದದ್ದು, ಜವಾಬ್ದಾರಿಯುತ ಪಾಲಕತ್ವ ಉತ್ತರದಾಯಕತ್ವದಿಂದ ಕೂಡಿರ ಬೇಕು. ಪೋಷಕರು ಪರಿಸರ ಮತ್ತು ಪುಸ್ತಕ ಪ್ರೇಮಿಗಳಾಗಬೇಕು ಹಾಗೂ ಆಧುನಿಕ ಜೀವನದ ಒತ್ತಡದಿಂದ ಮುಕ್ತರಾಗಬೇಕು. ಪಾಲಕರು ಕಲಿಕಾ ಕೇಂದ್ರಗಳ ಅವಿಭಾಜ್ಯ ಅಂಗವೆಂದು ತಿಳಿಸಿದರು.
-
ಗೌರಿಬಿದನೂರು: ಪಟ್ಟಣದ ಮುನೇಶ್ವರ ಬಡಾವಣೆಯ ತೀರ್ಥ ಶಾಲೆಯ ಪೋಷಕರ ಮತ್ತು ಮಕ್ಕಳ ದಿನಾಚರಣೆಯನ್ನು ಹೊಸೂರಿನ ಸನಿಹದ ಡಾ.ಎಚ್.ನರಸಿಂಹಯ್ಯ ವಿಜ್ಞಾನ ಕೇಂದ್ರದಲ್ಲಿ ಏರ್ಪಡಿಸಲಾಗಿತ್ತು.
ಶಾಲಾ ಮುಖ್ಯ ಶಿಕ್ಷಕಿ ಎಂ.ಶೋಭಾ ಪೋಷಕರ ಸಭೆ ನಡೆಸಿ, ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಪೋಷಕರ ಪಾತ್ರ ಪ್ರಧಾನವಾದದ್ದು, ಜವಾಬ್ದಾರಿಯುತ ಪಾಲಕತ್ವ ಉತ್ತರದಾಯಕತ್ವ ದಿಂದ ಕೂಡಿರಬೇಕು. ಪೋಷಕರು ಪರಿಸರ ಮತ್ತು ಪುಸ್ತಕ ಪ್ರೇಮಿಗಳಾಗಬೇಕು ಹಾಗೂ ಆಧುನಿಕ ಜೀವನದ ಒತ್ತಡದಿಂದ ಮುಕ್ತರಾಗಬೇಕು. ಪಾಲಕರು ಕಲಿಕಾ ಕೇಂದ್ರಗಳ ಅವಿಭಾಜ್ಯ ಅಂಗವೆಂದು ತಿಳಿಸಿದರು.
ತದನಂತರ ಪೋಷಕರು ವಿಜ್ಞಾನ ಕೇಂದ್ರದ ಪ್ರಯೋಗಗಳ ಪ್ರಾತ್ಯಕ್ಷತೆಯ ಪ್ರಕ್ರಿಯೆಯಲ್ಲಿ ತಲ್ಲೀನರಾಗಿ ವೈಜ್ಞಾನಿಕ ಪರಿಕಲ್ಪನೆಗಳನ್ನು ಅರ್ಥೈಸಿಕೊಂಡರು.
ಇದನ್ನೂ ಓದಿ: Gauribidanur News: ಗೌರಿಬಿದನೂರಿನಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ
ಡಾ.ಎಚ್.ಎನ್.ವಿಜ್ಞಾನ ಕೇಂದ್ರದ ಸಿಬ್ಬಂದಿಯವರ ಸಹಕಾರದೊಂದಿಗೆ ಸಭಾಂಗಣದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ತೀರ್ಥ ಶಾಲೆಯ ಅಧ್ಯಕ್ಷರಾದ ಪ್ರೊ.ಕೆ. ವಿ.ಪ್ರಕಾಶ್, ಸ್ವತಂತ್ರ ಭಾರತದ ಪ್ರಥಮ ಪ್ರಧಾನ ಮಂತ್ರಿ, ಭಾರತ ರತ್ನ ಜವಾಹರ್ ಲಾಲ್ ನೆಹರುರವರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಿ ಮಾತನಾಡಿ, ನೆಹರುರವರು ನವ ಭಾರತದ ನಿರ್ಮಾತೃಗಳಾಗಿದ್ದರು.
ಜವಾಹರರಿಗೆ ಮಕ್ಕಳೆಂದರೆ ತುಂಬಾ ಪ್ರೀತಿ. ಆದ್ದರಿಂದ ರಾಷ್ಟ್ರಾದ್ಯಂತ ಅವರ ಜನ್ಮದಿನ ವಾದ ನವಂಬರ್ ೧೪ ನ್ನು ಮಕ್ಕಳ ದಿನಾಚರಣೆ ಅಥವಾ ಬಾಲದಿನೋತ್ಸವವಾಗಿ ಆಚರಿಸುತ್ತಿದ್ದೇವೆ. ಮಕ್ಕಳು ವಾತ್ಸಲ್ಯದಿಂದ ನೆಹರೂರವರನ್ನು ಚಾಚಾ ಎಂದು ಕರೆಯು ತ್ತಿದ್ದರು. ಜವಾಹರರಿಗೆ ಗುಲಾಬಿ ಮತ್ತು ಕುದುರೆ ಸವಾರಿ ಹೆಚ್ಚು ಮೆಚ್ಚುಗೆ ಯಾಗಿತ್ತು.
ನೆಹರುರವರು ವೈಜ್ಞಾನಿಕ ಮನೋಭಾವಕ್ಕೆ ಹೆಚ್ಚಿನ ಪ್ರಾಧ್ಯಾನತೆ ನೀಡಿರುವುದರಿಂದ ಇಂದು ನಾವು ವಿಜ್ಞಾನ ಕೇಂದ್ರಕ್ಕೆ ಸಂದರ್ಶನ ಮಾಡಿ ಮಕ್ಕಳಲ್ಲಿ ಮತ್ತು ಪಾಲಕರಲ್ಲಿ ವೈಜ್ಞಾನಿಕ ಮನೋಭಾವವನ್ನು ಮನದಟ್ಟು ಮಾಡುತ್ತಿದ್ದೇವೆ. ಅವರು ಪರಿಸರ ಪ್ರೇಮಿ ಆಗಿರುವುದರಿಂದ ಪರಿಸರದ ಮಡಿಲಲ್ಲಿ ಪಾಲಕರ ಸಭೆಯನ್ನು ಆಯೋಜಿಸಿದ್ದೇವೆ ಎಂದು ತಿಳಿಸಿದರು.
ಪ್ರವಾಸದ ಕೊನೆಯಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನಕ್ಕೆ ಭೇಟಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಡಾ.ಎಚ್.ಎನ್.ವಿಜ್ಞಾನ ಕೇಂದ್ರದ ವ್ಯವಸ್ಥಾಪಕರಾದ ಪ್ರಭು, ಶಾಲಾ ಶಿಕ್ಷಕಿಯರಾದ ಭಾರ್ಗವಿ, ಸುಜಾತ ಮತ್ತು ಪೋಷಕರಾದ ಅನುಪಮಾ ಸಂತೋಷ್ ರಾವ್, ಅಪರ್ಣ ಚಂದ್ರಶೇಖರ್, ಲೋಕೇಶ್, ವೈಷ್ಣವಿ, ಸ್ಟುಡಿಯೋ ಶ್ರೀನಿವಾಸ್ ಮತ್ತಿತರ ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರವಾಸದ ಕೊನೆಯಲ್ಲಿ ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನಕ್ಕೆ ಭೇಟಿ ನೀಡಲಾಯಿತು.