ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸೇವಾ ಕಾರ್ಯಗಳೊಂದಿಗೆ ರೈತರೊಂದಿಗೆ ಮರಳುಕುಂಟೆ ಕೃಷ್ಣಮೂರ್ತಿ ಜನ್ಮದಿನ ಆಚರಣೆ

ನಗರದ ಹೊರವಲಯದ ಹೂವಿನ ಮಾರುಕಟ್ಟೆಯಲ್ಲಿ ಭಾನುವಾರ ಬೆಳಗ್ಗೆಯಿಂದಲೇ ಜನಜಂಗುಳಿ ಕಂಡುಬಂತು. ಮಾರುಕಟ್ಟೆಯ ವರ್ತಕರು, ರೈತರು ಹಾಗೂ ಅಭಿಮಾನಿಗಳು ಕೃಷ್ಣಮೂರ್ತಿ ಅವರಿಗೆ ಹೂವಿನ ಹಾರ, ಪೇಟ ತೊಡಿಸಿ ಜನ್ಮದಿನದ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಂದಿಗೆ ಅನ್ನದಾನ ಏರ್ಪಡಿಸಲಾಗಿತ್ತು

ಚಿಕ್ಕಬಳ್ಳಾಪುರ: ಜನ್ಮದಿನವನ್ನು ಅದ್ಧೂರಿ ಆಚರಣೆಗೆ ಸೀಮಿತಗೊಳಿಸದೆ, ರೈತರು, ವೃದ್ಧರು ಹಾಗೂ ರೋಗಿಗಳಿಗೆ, ಅನಾಥರಿಗೆ ನೆರವಾಗುವ ಸೇವಾ ಕಾರ್ಯಗಳ ಮೂಲಕ ಆಚರಿಸುವ ಮೂಲಕ ಮಾಜಿ ಎಪಿಎಂಸಿ(APMC) ಅಧ್ಯಕ್ಷ, ಬಿಜೆಪಿ ಮುಖಂಡ ಮರಳುಕುಂಟೆ ಕೃಷ್ಣಮೂರ್ತಿ ಗಮನ ಸೆಳೆದರು.

ನಗರದ ಹೊರವಲಯದ ಹೂವಿನ ಮಾರುಕಟ್ಟೆಯಲ್ಲಿ ಭಾನುವಾರ ಬೆಳಗ್ಗೆಯಿಂದಲೇ ಜನಜಂಗುಳಿ ಕಂಡುಬಂತು. ಮಾರುಕಟ್ಟೆಯ ವರ್ತಕರು, ರೈತರು ಹಾಗೂ ಅಭಿಮಾನಿಗಳು ಕೃಷ್ಣಮೂರ್ತಿ ಅವರಿಗೆ ಹೂವಿನ ಹಾರ, ಪೇಟ ತೊಡಿಸಿ ಜನ್ಮದಿನದ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಂದಿಗೆ ಅನ್ನದಾನ ಏರ್ಪಡಿಸಲಾಗಿತ್ತು. ನಗರದ ಕೆನರಾ ಬ್ಯಾಂಕ್ ಎದುರಿನ ಟಿಎಪಿಸಿಎಂಎಸ್ ಕಟ್ಟಡದ ಆವರಣದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿಗೆ ಬಿರಿಯಾನಿ ವಿತರಿಸಲಾಯಿತು.

ಇದರ ಜತೆಗೆ ಸುಲ್ತಾನ್‌ಪೇಟೆಯ ಶ್ರೀ ಸಾಯಿದ್ವಾರಕಾಮಾಯಿ ವೃದ್ಧಾಶ್ರಮಕ್ಕೆ ಭೇಟಿ ನೀಡಿ ನಿವಾಸಿ ಗಳಿಗೆ ಒಂದು ದಿನದ ಊಟದ ವ್ಯವಸ್ಥೆ ಮಾಡಿದರು. ಅದರಂತೆ ಅನಾಥಾಶ್ರಮ,ಸರ್ಕಾರಿ ಆಸ್ಪತ್ರೆಯ ಹೊರರೋಗಿಗಳಿಗೆ ಹಣ್ಣುಹಂಪಲು ವಿತರಿಸುವ ಮೂಲಕ ರೋಗಿಗಳಿಗೂ ನೆರವಾದರು.

ಇದನ್ನೂ ಓದಿ: Chikkaballapur News: ಹಿರಿಯರಿಂದ ಕಿರಿಯರಿಗೆ ದೀಪ ವರ್ಗಾವಣೆ; ಕುಟುಂಬದ ಐಕ್ಯತೆ, ಕುಲಪರಂಪರೆ ಸಾರಿದ ವಿಶಿಷ್ಟ ಸಂಪ್ರದಾಯ

ಧಾರ್ಮಿಕ ಕಾರ್ಯಕ್ರಮದ ಭಾಗವಾಗಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ವೀರಾಂಜನೇಯ ಸ್ವಾಮಿ ಹಾಗೂ ಭೋಗನಂದೀಶ್ವರ ದೇವಾಲಯಗಳಲ್ಲಿ ಕೂಡ ವಿಶೇಷ ಪೂಜೆ ಸಲ್ಲಿಸಿ ಭಗವಂತನ ಆಶೀರ್ವಾದ ಪಡೆದರು.

ಶ್ರೀಮಠಕ್ಕೆ ಭೇಟಿ ನೀಡಿದ್ದ ವೇಳೆ ಶ್ರೀ ಮಂಗಳನಾಥ ಸ್ವಾಮೀಜಿ ಅವರು ಕೃಷ್ಣಮೂರ್ತಿ ಅವರಿಗೆ ಶಾಲುಹೊದಿಸಿ ಸನ್ಮಾನಿಸಿದರಲ್ಲದೆ. ಪ್ರಸಾದ ನಿಲಯದಲ್ಲಿ ಸ್ವತಃ ಅನ್ನ ಬಡಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ರೈತರ ಸೇವೆಗೆ ಆದ್ಯತೆ ನೀಡಬೇಕು ಹಾಗೂ ಚಿಕ್ಕಬಳ್ಳಾಪುರ ಭಾಗಕ್ಕೆ ಶುದ್ಧ ನೀರು ಹರಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.

ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳ ಅಭಿಮಾನ ಸ್ವೀಕರಿಸಿ ಮಾತನಾಡಿದ ಕೃಷ್ಣ ಮೂರ್ತಿ, ಎಪಿಎಂಸಿ(APMC) ಅಧ್ಯಕ್ಷರಾಗಿದ್ದ ಅವಧಿಯಲ್ಲಿ ರೈತರ ಕಲ್ಯಾಣಕ್ಕಾಗಿ ಹಲವು ಕಾರ್ಯಕ್ರಮ ಗಳನ್ನು ರೂಪಿಸಲಾಗಿತ್ತು. ಹೂವು ಬೆಳೆಗಾರರ ಬಹುದಿನಗಳ ಬೇಡಿಕೆಯಾದ ಆಧುನಿಕ ಹೂವಿನ ಮಾರುಕಟ್ಟೆ ನಿರ್ಮಾಣಕ್ಕೆ ಬೊಮ್ಮಾಯಿ(Basavaraj Bommai) ಅವರ ಸರಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಡಾ.ಕೆ. ಸುಧಾಕರ್(Dr K Sudhakar) ಅವರ ಮೂಲಕ ಅಗಲಗುರ್ಕಿಬಳಿ ಮಾರುಕಟ್ಟೆಗೆ ಭೂಮಿ ಮಂಜೂರು, ನೂರು ಕೋಟಿ ರೂ. ಅನುದಾನ ಒದಗಿಸು ವಂತೆ ಮನವಿ ಮಾಡಲಾಗಿತ್ತು.ಕಾಂಗ್ರೆಸ್ ಸರಕಾರದಲ್ಲಿ ಈಕೆಲಸವಾಗಿಲ್ಲ, ರೈತರಿಗೆ ಅನುಕೂಲ ವಾಗುವ ಈ ಯೋಜನೆ ಸಾಕಾರಗೊಳ್ಳಬೇಕು ಎಂಬುದು ತಮ್ಮ ಆಶಯವಾಗಿದೆ ಎಂದರು.

15cbpm1swa ಒಕ

ಅನೇಕ ರಾಜಕೀಯ ಮುಖಂಡರು, ವಿವಿಧ ಪಕ್ಷಗಳ ನಾಯಕರು, ರೈತರು, ಮಾರುಕಟ್ಟೆ ವರ್ತಕರು ಹಾಗೂ ಅಭಿಮಾನಿಗಳು ಭಾಗವಹಿಸಿ ಶುಭ ಹಾರೈಸಿದರು. ಜನ್ಮದಿನದ ನೆಪದಲ್ಲಿ ನಡೆದ ಬೃಹತ್ ಅನ್ನದಾನ ಮತ್ತು ವಿವಿಧ ಸೇವಾ ಕಾರ್ಯಕ್ರಮಗಳು ಸಾರ್ವಜನಿಕರ ಗಮನ ಸೆಳೆದವು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಎನ್.ಕೆ.ಶಿವರೆಡ್ಡಿ, ಮರಳುಕುಂಟೆ ನಂಜುಂಡಪ್ಪ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ನಾಗೇಶ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಾಮಸ್ವಾಮಿ, ಮಂಚೇನಬೆಲೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀಧರ್, ಏರ್‌ಪೋರ್ಟ್ ಮುನಿರಾಜು, ನಾರಾಯಣಸ್ವಾಮಿ, ಮುಕ್ತ ಮುನಿಯಪ್ಪ, ಭರಣಿ ವೆಂಕಟೇಶ್, ಮಂಚೇನಹಳ್ಳಿ ಪ್ರಕಾಶ್, ಮಿಲ್ಟನ್ ವೆಂಕಟೇಶ್, ಮೋಹನ್ ರೆಡ್ಡಿ, ಉಲ್ವಾಡಿ ಅಶ್ವತ್ಥನಾರಾಯಣ ಬಾಬು, ಬಲಕುಂಟಳ್ಳಿ ಗಂಗಾಧರ್, ಚಿಕ್ಕಕಾಡಿಗೆನಹಳ್ಳಿ ಕೃಷ್ಣಮೂರ್ತಿ, ಎಸ್.ಆರ್.ಎಸ್. ದೇವರಾಜ್, ತರುಣ್ ಸೇರಿದಂತೆ ನೂರಾರು ಮುಖಂಡರು ಹಾಗೂ ಅಭಿಮಾನಿಗಳು ಉಪಸ್ಥಿತ ರಿದ್ದರು.