Chikkaballapur News: ಹಿರಿಯರಿಂದ ಕಿರಿಯರಿಗೆ ದೀಪ ವರ್ಗಾವಣೆ; ಕುಟುಂಬದ ಐಕ್ಯತೆ, ಕುಲಪರಂಪರೆ ಸಾರಿದ ವಿಶಿಷ್ಟ ಸಂಪ್ರದಾಯ
ಮಹಿಳೆಯರೇ ಸೇರಿಕೊಂಡು ಪುರುಷರ ನೆರವಿಲ್ಲದೆ ಮಾಡುವ ಹೊಸದ್ಯಾವರ ಆಚರಣೆಯು ಹಿರಿಯರಿಂದ ಕಿರಿಯರಿಗೆ ದೀಪವನ್ನು ವರ್ಗಾಯಿಸುವ ಮಹತ್ವಪೂರ್ಣ ಪದ್ಧತಿ. ಈ ಆಚರಣೆಯ ಪ್ರಮುಖ ಆಕರ್ಷಣೆಯೇ ಜ್ಯೋತಿ ಅಥವಾ ದೀಪ. ಹಿರಿಯರು ಪಾಲಿಸಿಕೊಂಡು ಬಂದ ಧಾರ್ಮಿಕ ಆಚರಣೆಗಳು, ಸಂಸ್ಕೃತಿ ಮತ್ತು ಸಂಪ್ರದಾಯಗಳು ಮುಂದಿನ ಪೀಳಿಗೆಗೂ ನಿರಂತರವಾಗಿ ಸಾಗಬೇಕು ಎಂಬ ಸಂದೇಶವನ್ನು ಈ ಪದ್ಧತಿ ಸಾರುತ್ತದೆ.
ಜಿಲ್ಲೆಯಾದ್ಯಂತ ಮೊರಸು ಒಕ್ಕಲಿಗ ಸಮುದಾಯದವರು ಭಾನುವಾರ ಸಂಪ್ರದಾಯಬದ್ಧವಾಗಿ ಹೊಸದ್ಯಾವರ ಹಬ್ಬವನ್ನು ಶ್ರದ್ಧಾಭಕ್ತಿ ಮತ್ತು ಸಡಗರ, ಸಂಭ್ರಮದಿಂದ ಆಚರಿಸಿದರು. -
ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ ಮೊರಸು ಒಕ್ಕಲಿಗ ಸಮುದಾಯದವರು ಭಾನುವಾರ ಸಂಪ್ರದಾಯಬದ್ಧವಾಗಿ ಹೊಸದ್ಯಾವರ ಹಬ್ಬವನ್ನು ಶ್ರದ್ಧಾಭಕ್ತಿ ಮತ್ತು ಸಡಗರ, ಸಂಭ್ರಮದಿಂದ ಆಚರಿಸಿದರು.
700ಕ್ಕೂ ಹೆಚ್ಚು ವರ್ಷಗಳ ಇತಿಹಾಶವಿರುವ ಹೊಸದ್ಯಾವರ ಎಂಬ ಸಂಪ್ರದಾಯವನ್ನು ತಲೆಮಾರುಗಳಿಂದ ನಡೆಸಿಕೊಂಡು ಬರುತ್ತಿರುವ ಒಕ್ಕಲಿಗ ಸಮುದಾಯವು ಕುಲದೇವತಾ ಆರಾಧನೆ, ಹಿರಿಯರ ಗೌರವ ಮತ್ತು ಕುಟುಂಬದ ಒಗ್ಗಟ್ಟಿನ ಪ್ರತೀಕವಾಗಿದೆ. ಈ ಆಚರಣೆಯು ಮಾತೃದೇವತಾ ಪರಂಪರೆಗೆ ಜೀವತುಂಬುವ ಮೂಲಕ ಗ್ರಾಮೀಣ ಸಾಂಸ್ಕೃತಿಕ ಪರಂಪರೆಯ ವೈಶಿಷ್ಟ್ಯವನ್ನು ಅನಾವರಣಗೊಳಿಸಿದೆ
ಹೊಸದ್ಯಾವರ ಆಚರಣೆಯ ಅಂಗವಾಗಿ ವಿವಿಧ ಗ್ರಾಮಗಳಲ್ಲಿ ನೆಲೆಸಿರುವ ಕುಟುಂಬದ ಸದಸ್ಯರು, ಬಂಧುಗಳು ಹಾಗೂ ಸಂಬಂಧಿಕರು ಒಂದೆಡೆ ಸೇರಿ ಶ್ವೇತವಸ್ತ್ರಧಾರಿಗಳಾಗಿ ಸಂಪ್ರದಾಯದಂತೆ ಈ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.
ಇದನ್ನೂ ಓದಿ: Chikkaballapur News: ಹಿರಿಯರಿಂದ ಕಿರಿಯರಿಗೆ ದೀಪ ವರ್ಗಾವಣೆ; ಕುಟುಂಬದ ಐಕ್ಯತೆ, ಕುಲಪರಂಪರೆ ಸಾರಿದ ವಿಶಿಷ್ಟ ಸಂಪ್ರದಾಯ
ಮಹಿಳೆಯರೇ ಸೇರಿಕೊಂಡು ಪುರುಷರ ನೆರವಿಲ್ಲದೆ ಮಾಡುವ ಹೊಸದ್ಯಾವರ ಆಚರಣೆಯು ಹಿರಿಯರಿಂದ ಕಿರಿಯರಿಗೆ ದೀಪವನ್ನು ವರ್ಗಾಯಿಸುವ ಮಹತ್ವಪೂರ್ಣ ಪದ್ಧತಿ. ಈ ಆಚರಣೆಯ ಪ್ರಮುಖ ಆಕರ್ಷಣೆಯೇ ಜ್ಯೋತಿ ಅಥವಾ ದೀಪ. ಹಿರಿಯರು ಪಾಲಿಸಿಕೊಂಡು ಬಂದ ಧಾರ್ಮಿಕ ಆಚರಣೆಗಳು, ಸಂಸ್ಕೃತಿ ಮತ್ತು ಸಂಪ್ರದಾಯಗಳು ಮುಂದಿನ ಪೀಳಿಗೆಗೂ ನಿರಂತರವಾಗಿ ಸಾಗಬೇಕು ಎಂಬ ಸಂದೇಶವನ್ನು ಈ ಪದ್ಧತಿ ಸಾರುತ್ತದೆ.
ಚಿಕ್ಕಬಳ್ಳಾಪುರ ತಾಲ್ಲೂಕಿನ ನಾಯನಹಳ್ಳಿ ಗ್ರಾಮದ ಮುಖಂಡ ರೈತ ಮುಖಂಡ ಬಿ.ಎನ್. ಮುನಿ ಕೃಷ್ಣಪ್ಪ ಅವರ ಮನೆಯಲ್ಲಿ ನಡೆದ ಹೊಸದ್ಯಾವರ ಹಬ್ಬದ ಆಚರಣೆ ವಿಶೇಷ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಶತಾಯುಷಿ 104 ವರ್ಷದ ನಾರಾಯಣಮ್ಮ ಅವರು ಮೊದಲಿಗೆ ದೀಪದ ಸಂಪ್ರದಾಯಕ್ಕೆ ಚಾಲನೆ ನೀಡಿದರು. ಬಳಿಕ ಅವರ ಪಂಗಡದ ಹಿರಿಯರು ತಮ್ಮ ತಲೆಯ ಮೇಲಿದ್ದ ದೀಪವನ್ನು ಕಿರಿಯರ ತಲೆಗೆ ವರ್ಗಾಯಿಸುವ ಮೂಲಕ ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ವಿಶಿಷ್ಟ ಆಚರಣೆಯನ್ನು ಸಾಂಗವಾಗಿ ನೆರವೇರಿಸಿದರು.
ನೂರಾರು ವರ್ಷಗಳ ಪರಂಪರೆಯನ್ನು ಪ್ರತಿನಿಧಿಸುವ ಈ ಸಂಪ್ರದಾಯದಲ್ಲಿ ಹಿರಿಯರಿಗೆ ನೀಡುವ ಗೌರವ, ಕುಟುಂಬದ ಹಿರಿಯರ ಆಶೀರ್ವಾದ ಪಡೆಯುವ ಸಂಸ್ಕೃತಿ ಹಾಗೂ ಕಿರಿಯರಿಗೆ ಪರಂಪರೆ ಯನ್ನು ಹಸ್ತಾಂತರಿಸುವ ಮೌಲ್ಯಗಳು ಅಡಕವಾಗಿವೆ. ಶತಾಯುಷಿ ನಾರಾಯಣಮ್ಮ ಅವರ ನೇತೃತ್ವದಲ್ಲಿ ನಡೆದ ಈ ಆಚರಣೆಯು ಕುಟುಂಬದ ಸದಸ್ಯರಲ್ಲಿ ವಿಶೇಷ ಸಂತಸ ಮೂಡಿಸಿತು.
ಹೊಸದ್ಯಾವರ ಹಬ್ಬವು ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ, ಕುಟುಂಬದ ಎಲ್ಲ ಸದಸ್ಯರು ಒಂದೆಡೆ ಸೇರಿ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಬಾಂಧವ್ಯವನ್ನು ಹಂಚಿಕೊಳ್ಳುವ ಸಂದರ್ಭವೂ ಆಗಿದೆ. ಉದ್ಯೋಗ, ವ್ಯಾಪಾರ ಮತ್ತಿತರ ಕಾರಣಗಳಿಂದ ವಿವಿಧೆಡೆ ನೆಲೆಸಿರುವ ಬಂಧುಗಳು ಹಬ್ಬದ ನೆಪದಲ್ಲಿ ತಮ್ಮ ಮೂಲ ಮನೆಗಳಿಗೆ ಆಗಮಿಸಿ ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡರು.
ಆಧುನಿಕ ಜೀವನಶೈಲಿಯ ಪರಿಣಾಮವಾಗಿ ಕುಟುಂಬದ ಸದಸ್ಯರು ಬೇರೆ ಬೇರೆ ಕಡೆಗಳಲ್ಲಿ ವಾಸಿಸುವ ಪರಿಸ್ಥಿತಿ ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ, ಇಂತಹ ಸಾಂಪ್ರದಾಯಿಕ ಆಚರಣೆಗಳು ಕುಟುಂಬದ ಸಂಬAಧಗಳನ್ನು ಗಟ್ಟಿಗೊಳಿಸುವುದರ ಜತೆಗೆ ನಮ್ಮ ನೆಲದ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ವೇದಿಕೆಯಾಗಿವೆ.
ಹಿರಿಯರಿಂದ ಕಿರಿಯರಿಗೆ ದೀಪ ವರ್ಗಾವಣೆಯ ಮೂಲಕ ಸಂಪ್ರದಾಯದ ಬೆಳಕನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಿದ ಹೊಸದ್ಯಾವರ ಹಬ್ಬವು ಜಿಲ್ಲೆಯ ಗ್ರಾಮೀಣ ಬದುಕಿನ ಸಾಂಸ್ಕೃತಿಕ ಶ್ರೀಮಂತಿಕೆಗೆ ಸಾಕ್ಷಿಯಾಯಿತು.