ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Shidlaghatta News: ಶಿಡ್ಲಘಟ್ಟದಲ್ಲಿ ಬೃಹತ್ ಸಸ್ಯಾಹಾರ ಜನಜಾಗೃತಿ ಜಾಥಾ; ವೆಂಕಟೇಶ್ವರ ಚಿತ್ರಮಂದಿರದಲ್ಲಿ ಡಾ. ಸುಭಾಷ್ ಪತ್ರೀಜಿ ಜೀವನಾಧಾರಿತ ಕಿರುಚಿತ್ರ ಪ್ರದರ್ಶನ

ನಗರದಲ್ಲಿ ಪಿರಮಿಡ್ ಧ್ಯಾನ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಬೃಹತ್ ಸಸ್ಯಾಹಾರ ಜನಜಾಗೃತಿ ಜಾಥಾದ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿದಿನ ಧ್ಯಾನ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ, ಏಕಾಗ್ರತೆ ಹಾಗೂ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಧ್ಯಾನವು ವ್ಯಕ್ತಿಯ ಆಂತರಿಕ ಬೆಳವಣಿಗೆಗೆ ಪೂರಕವಾಗಿದ್ದು, ಜೀವನವನ್ನು ಶಾಂತಿ, ಸಂತೃಪ್ತಿ ಮತ್ತು ಸಮತೋಲನದತ್ತ ಕೊಂಡೊಯ್ಯುತ್ತದೆ

ಬ್ರಹ್ಮರ್ಷಿ ಪಿತಾಮಹ ಡಾ. ಸುಭಾಷ್ ಪತ್ರೀಜಿ ಅವರು ಸಾರಿದ ಧ್ಯಾನ ಮತ್ತು ಸಸ್ಯಾಹಾರದ ಸಂದೇಶವು ವ್ಯಕ್ತಿಯ ಬದುಕಿನಲ್ಲಿ ಸಕಾರಾತ್ಮಕ ಪರಿವರ್ತನೆ ತರುವ ಶಕ್ತಿಯನ್ನು ಹೊಂದಿದೆ ಎಂದು ಪಿರಮಿಡ್ ಧ್ಯಾನ ಮಾರ್ಗದರ್ಶಕಿ ಆರತಿ ಹೇಳಿದರು.

ಶಿಡ್ಲಘಟ್ಟ: ಬ್ರಹ್ಮರ್ಷಿ ಪಿತಾಮಹ ಡಾ. ಸುಭಾಷ್ ಪತ್ರೀಜಿ ಅವರು ಸಾರಿದ ಧ್ಯಾನ ಮತ್ತು ಸಸ್ಯಾಹಾರದ ಸಂದೇಶವು ವ್ಯಕ್ತಿಯ ಬದುಕಿನಲ್ಲಿ ಸಕಾರಾತ್ಮಕ ಪರಿವರ್ತನೆ ತರುವ ಶಕ್ತಿಯನ್ನು ಹೊಂದಿದೆ ಎಂದು ಪಿರಮಿಡ್ ಧ್ಯಾನ ಮಾರ್ಗದರ್ಶಕಿ ಆರತಿ ಹೇಳಿದರು.

ನಗರದಲ್ಲಿ ಪಿರಮಿಡ್ ಧ್ಯಾನ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಬೃಹತ್ ಸಸ್ಯಾಹಾರ ಜನಜಾಗೃತಿ ಜಾಥಾದ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿದಿನ ಧ್ಯಾನ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ, ಏಕಾಗ್ರತೆ ಹಾಗೂ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಧ್ಯಾನವು ವ್ಯಕ್ತಿಯ ಆಂತರಿಕ ಬೆಳವಣಿಗೆಗೆ ಪೂರಕವಾಗಿದ್ದು, ಜೀವನವನ್ನು ಶಾಂತಿ, ಸಂತೃಪ್ತಿ ಮತ್ತು ಸಮತೋಲನದತ್ತ ಕೊಂಡೊಯ್ಯುತ್ತದೆ ಎಂದು ತಿಳಿಸಿದರು.

ಸಸ್ಯಾಹಾರವು ಕೇವಲ ಆಹಾರ ಪದ್ಧತಿಯಲ್ಲ, ಆರೋಗ್ಯ, ಕರುಣೆ ಮತ್ತು ಮಾನವೀಯ ಮೌಲ್ಯ ಗಳನ್ನು ಬೆಳೆಸುವ ಜೀವನಶೈಲಿಯಾಗಿದೆ. ಪ್ರತಿಯೊಬ್ಬರೂ ಸಸ್ಯಾಹಾರವನ್ನು ಅಳವಡಿಸಿಕೊಳ್ಳುವು ದರೊಂದಿಗೆ ಧ್ಯಾನದ ಮಹತ್ವವನ್ನು ಅರಿತು ತಮ್ಮ ದೈನಂದಿನ ಬದುಕಿನ ಭಾಗವಾಗಿಸಿಕೊಳ್ಳಬೇಕು. ಇದೇ ಉದ್ದೇಶದಿಂದ ರಾಜ್ಯಾದ್ಯಂತ ಸಸ್ಯಾಹಾರ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳ ಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: Vishwavani Editorial: ಮುಂಗಾರು ಅಧಿವೇಶನದ ನಿರೀಕ್ಷೆ

ರಚಿತ ಕೀರ್ತಿ ಮಾತನಾಡಿ, ಬ್ರಹ್ಮರ್ಷಿ ಪಿತಾಮಹ ಡಾ. ಸುಭಾಷ್ ಪತ್ರೀಜಿ ಅವರ ಜೀವನ, ಧ್ಯಾನ ಸಾಧನೆ ಹಾಗೂ ಸಸ್ಯಾಹಾರದ ಮಹತ್ವವನ್ನು ಪರಿಚಯಿಸುವ ಕಿರುಚಿತ್ರವನ್ನು ನಗರದ ಶ್ರೀ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಪ್ರದರ್ಶಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಕಿರುಚಿತ್ರವು ಧ್ಯಾನದ ಮಹತ್ವ, ಸಸ್ಯಾಹಾರದ ಅಗತ್ಯತೆ ಹಾಗೂ ಮಾನವೀಯ ಮೌಲ್ಯಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶ ಹೊಂದಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಿರುಚಿತ್ರವನ್ನು ವೀಕ್ಷಿಸಿ, ಡಾ. ಸುಭಾಷ್ ಪತ್ರೀಜಿ ಅವರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು. ಧ್ಯಾನ ಮತ್ತು ಸಸ್ಯಾಹಾರದ ಮೂಲಕ ಆರೋಗ್ಯವಂತ, ಶಾಂತಿಯುತ ಹಾಗೂ ಮೌಲ್ಯಾಧಾರಿತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.

ನಗರದ ಮಯೂರ ವೃತ್ತದಿಂದ ಆರಂಭವಾದ ಬೃಹತ್ ಸಸ್ಯಾಹಾರ ಜನಜಾಗೃತಿ ಜಾಥಾವು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಶ್ರೀ ವೆಂಕಟೇಶ್ವರ ಚಿತ್ರಮಂದಿರದವರೆಗೆ ಸಾಗಿತು. ಜಾಥಾದಲ್ಲಿ ನೂರಾರು ಧ್ಯಾನಾಭಿಮಾನಿಗಳು ಧ್ಯಾನ, ಸಸ್ಯಾಹಾರ ಹಾಗೂ ಆರೋಗ್ಯಕರ ಜೀವನಶೈಲಿಯ ಮಹತ್ವ ಸಾರುವ ಘೋಷಣೆಗಳನ್ನು ಕೂಗುತ್ತಾ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಅಜಯ್ ಕೀರ್ತಿ, ಮುತ್ತುರಾಜ್ ಕಲಬುರಗಿ, ಹರೀಶ್ ಕುಮಾರ್, ಪದ್ಮಲತಾ, ಅಂಬಿಕಾ, ಕೃಷ್ಣಮೂರ್ತಿ ಸೇರಿದಂತೆ ನೂರಾರು ಧ್ಯಾನಾಭಿಮಾನಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.