Vishwavani Editorial: ಮುಂಗಾರು ಅಧಿವೇಶನದ ನಿರೀಕ್ಷೆ
ಲೋಕಭೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕವನ್ನು ಸರಕಾರ ಮುಂದಿಡಲು ಕಾಯುತ್ತಿದೆ. ಆದರೆ ಇದರಲ್ಲಿ ಸೀಮಾ ನಿರ್ಣಯ ಮಾಡುವಾಗ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಆಗಬಾರದು ಎಂಬ ಕೂಗು ಇದೆ. ಇದಲ್ಲದೆ ಅಭಿವೃದ್ಧಿ ಹೊಂದಿದ ಭಾರತ ಶಿಕ್ಷಣ ಪ್ರತಿಷ್ಠಾನ ವಿಧೇಯಕ, ಡೋಪಿಂಗ್ ವಿರೋಧಿ ವಿಧೇಯಕ, ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಂಖ್ಯೆ ತಿದ್ದುಪಡಿ ಮಸೂದೆಗಳೂ ಮೇಜು ಏರಬಹುದು.
-
ಇಂದಿನಿಂದ (ಜುಲೈ 20) ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿದೆ. ಹಲವು ವಿಧೇಯಕ ಗಳನ್ನು ಉಭಯ ಸದನಗಳಲ್ಲಿ ಮುಂದಿಟ್ಟು ಅಂಗೀಕಾರ ಮಾಡಿಸಿಕೊಳ್ಳಲು ಸರಕಾರ ಮುಂದಾಗಿದೆ. ಹಾಗೆಯೇ ಹಲವು ಜ್ವಲಂತ ಸಮಸ್ಯೆಗಳನ್ನು ಮುಂದಿಟ್ಟು ಸರಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸಲು ವಿಪಕ್ಷಗಳೂ ಕಾಯುತ್ತಿವೆ.
ಮುಖ್ಯವಾಗಿ, ಎರಡು ಸಂವಿಧಾನ ತಿದ್ದುಪಡಿ ವಿಧೇಯಕಗಳು ರಂಗವನ್ನೇರಲು ಕಾಯುತ್ತಿವೆ. ಕ್ಷೇತ್ರ ಪುನರ್ ವಿಂಗಡಣೆ ಕುರಿತ 131ನೇ ತಿದ್ದುಪಡಿ ವಿಧೇಯಕ ಹಾಗೂ ದೇಶಾದ್ಯಂತ ಏಕಕಾಲದಲ್ಲಿ ಚುನಾವಣೆಗಳನ್ನು ಕೋರುವ 129ನೇ ತಿದ್ದುಪಡಿ ವಿಧೇಯಕಗಳು. ಇದು ಪ್ರತಿಪಕ್ಷಗಳಿಂದ ತೀವ್ರ ವಿರೋಧ, ವಾಕ್ಸಮರಕ್ಕೆ ಸಾಕ್ಷಿಯಾಗುವ ಸನ್ನಿವೇಶವಾಗಲಿದೆ. ಈ ವಿಧೇಯಕಗಳನ್ನು ಅಂಗೀಕಾರ ಮಾಡಿಸಿಕೊಳ್ಳಲು ಎನ್‌ಡಿಎಗೆ 24 ಮತಗಳ ಕೊರತೆ ಇದೆ.
ಇದನ್ನೂ ಓದಿ: Vishwavani Editorial: ದುರಂತದ ಹೊಣೆ ಯಾರು?
ಲೋಕಭೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕವನ್ನು ಸರಕಾರ ಮುಂದಿಡಲು ಕಾಯುತ್ತಿದೆ. ಆದರೆ ಇದರಲ್ಲಿ ಸೀಮಾ ನಿರ್ಣಯ ಮಾಡುವಾಗ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಆಗಬಾರದು ಎಂಬ ಕೂಗು ಇದೆ. ಇದಲ್ಲದೆ ಅಭಿವೃದ್ಧಿ ಹೊಂದಿದ ಭಾರತ ಶಿಕ್ಷಣ ಪ್ರತಿಷ್ಠಾನ ವಿಧೇಯಕ, ಡೋಪಿಂಗ್ ವಿರೋಧಿ ವಿಧೇಯಕ, ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಂಖ್ಯೆ ತಿದ್ದುಪಡಿ ಮಸೂದೆಗಳೂ ಮೇಜು ಏರಬಹುದು.
ವಂದೇ ಮಾತರಂ ಮಸೂದೆಯನ್ನು ಗೃಹ ಸಚಿವರು ಮಂಡಿಸಲಿದ್ದಾರೆ. ಇದು ರಾಷ್ಟ್ರಗೀತೆ ಜನಗಣಮನಕ್ಕೆ ಸಿಗುತ್ತಿರುವ ಕಾನೂನು ಮತ್ತು ನ್ಯಾಯಾಂಗ ರಕ್ಷಣೆಗಳನ್ನು ರಾಷ್ಟ್ರೀಯ ಗೀತೆ ವಂದೇ ಮಾತರಂಗೆ ನೀಡುವ ಗುರಿಯನ್ನು ಹೊಂದಿದೆ. ಇದು ರಾಷ್ಟ್ರೀಯ ಗೀತೆಯನ್ನು ಅವಮಾ ನಿಸುವುದನ್ನು ಶಿಕ್ಷಾರ್ಹ ಅಪರಾಧವನ್ನಾಗಿ ಮಾಡುತ್ತದೆ. ಅವಮಾನಿಸುವವರಿಗೆ ಮೂರು ವರ್ಷ ಜೈಲು ಶಿಕ್ಷೆ, ದಂಡ ವಿಧಿಸ ಲಾಗುತ್ತದೆ. ಈ ಕಾಯಿದೆ ದುರ್ಬಳಕೆಯಾಗಬಹುದು ಎಂಬ ಆತಂಕ ಹಲವರಲ್ಲಿದೆ.
ಒಂದು ಕಡೆ ನೀಟ್ ಪರೀಕ್ಷೆಯಲ್ಲಿ ಆದ ಅವ್ಯವಸ್ಥೆ ವಿರೋಧಿಸಿ ಯುವಜನತೆ ರೊಚ್ಚಿಗೆದ್ದಿದೆ. ಇದನ್ನು ವಿಪಕ್ಷ ಖಂಡಿತವಾಗಿಯೂ ಸಂಸತ್ತಿನಲ್ಲಿ ಪ್ರಶ್ನೆ ಮಾಡಲಿದೆ. ಕರ್ನಾಟಕವೂ ಸೇರಿ ಹಲವು ರಾಜ್ಯಗಳಲ್ಲಿ ಈ ವರ್ಷ ಬರ ಪರಿಸ್ಥಿತಿ ತಾಂಡವ ಆಡಲು ಶುರು ಮಾಡಿದೆ. ಆಯಾ ರಾಜ್ಯಗಳ ಸಿಎಂಗಳು ಪ್ರಧಾನಿಗೆ ಪರಿಹಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಸಿಎಂ ನಿಧಿಯಿಂದ ನೆರವು ಬರಬೇಕಿದೆ. ವಂದೇ ಮಾತರಂ ನಂಥ ವಿಧೇಯಕಗಳನ್ನು ತರುವುದರ ಜೊತೆಗೆ, ಇಂಥ ಅಗತ್ಯ, ಸಾಮಯಿಕ ಪ್ರಶ್ನೆಗಳನ್ನು ಉತ್ತರಿಸಲೂ ಕೇಂದ್ರ ಸರಕಾರ ಸನ್ನದ್ಧ ಆಗುವುದು ಒಳಿತು. ಮಾತಿನ ಚಕಮಕಿಯೊಂದಿಗೆ ಜನಹಿತ ಸಾಧನೆಗೂ ಸಂಸತ್ ಕಲಾಪ ವೇದಿಕೆ ಯಾಗಲಿ.