ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MLA B.N. Ravikumar: 3ನೇ ವರ್ಷದ ಕ್ರೈಸ್ತ ಜಯಂತಿ ಕಾರ್ಯಕ್ರಮಕ್ಕೆ ಶಾಸಕ ಬಿಎನ್ ರವಿಕುಮಾರ್ ಚಾಲನೆ

ಎಲ್ಲಾ ಜಾತಿ ಜನಾಂಗದಲ್ಲಿಯೂ, ಬಡವರು, ಹಿಂದುಳಿದವರು ಬದುಕಿಗಾಗಿ ನಿತ್ಯವೂ ಹಗಲಿರುಳು ಕಷ್ಟಪಡುತ್ತಿರುವವರು ಇನ್ನೂ ಇದ್ದಾರೆ. ಅವರೆಲ್ಲರಿಗೂ ಕ್ರೈಸ್ತ ಜಯಂತಿಯ ಶುಭಾಶಯಗಳನ್ನು ತಿಳಿಸುತ್ತಾ 1979-80 ರಲ್ಲಿ ಸುಮಾರು 2 ವರ್ಷಗಳ ಕಾಲ ಪ್ರತಿ ಶುಕ್ರವಾರ ಚರ್ಚ್ನಲ್ಲಿ ನಾನು ಕೂಡ ಪ್ರಾರ್ಥನೆ ಮಾಡಿರುವುದಾಗಿ ತಿಳಿಸಿದರು.

ಯೇಸು ಕ್ರಿಸ್ತರ ಪ್ರಭಾವದಿಂದಾಗಿ ಸಹನೆ, ಕ್ಷಮೆ, ಮಾನವೀಯತೆ, ಸಹೋದರತ್ವದಂತಹ ಮಾನವೀಯ ಮೌಲ್ಯಗಳು ಜಗತ್ತಿಗೆ ಪಸರಿಸಿವೆ. ಈ ಬೋಧನೆಗಳ ಪ್ರಭಾವದಿಂದಾಗಿ ಕ್ರೈಸ್ತ ಸಂಸ್ಥೆಗಳು ಭಾರತದಲ್ಲಿ ಶಿಕ್ಷಣ ಪ್ರಸಾರದಲ್ಲಿ ಮಹತ್ವದ ಕಾರ್ಯಗಳನ್ನು ಮಾಡಿವೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.

ಶಿಡ್ಲಘಟ್ಟ: ಯೇಸು ಕ್ರಿಸ್ತರ ಪ್ರಭಾವದಿಂದಾಗಿ ಸಹನೆ,ಕ್ಷಮೆ, ಮಾನವೀಯತೆ, ಸಹೋದರತ್ವದಂತಹ ಮಾನವೀಯ ಮೌಲ್ಯಗಳು ಜಗತ್ತಿಗೆ ಪಸರಿಸಿವೆ. ಈ ಬೋಧನೆಗಳ ಪ್ರಭಾವದಿಂದಾಗಿ ಕ್ರೈಸ್ತ ಸಂಸ್ಥೆ ಗಳು ಭಾರತದಲ್ಲಿ ಶಿಕ್ಷಣ ಪ್ರಸಾರದಲ್ಲಿ ಮಹತ್ವದ ಕಾರ್ಯಗಳನ್ನು ಮಾಡಿವೆ ಎಂದು ಶಾಸಕ ಬಿ.ಎನ್.ರವಿಕುಮಾರ್(MLA B.N.Ravikumar) ತಿಳಿಸಿದರು.

ಶಿಡ್ಲಘಟ್ಟ ನಗರದ ಹೂರವಲಯದ ಬಾಲಾಜಿ ಕನ್ವೆನ್ಷನ್ ಹಾಲ್‌ನಲ್ಲಿ ಸಭಾಪಾಲಕರ ಕ್ಷೇಮಾ ಭಿವೃದ್ಧಿ ಸಂಘದ ವತಿಯಿಂದ ಸೋಮವಾರ ಸಂಜೆ ನಡೆದ 3ನೇ ವರ್ಷದ ಕ್ರೈಸ್ತ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಎಲ್ಲಾ ಜಾತಿ ಜನಾಂಗದಲ್ಲಿಯೂ, ಬಡವರು, ಹಿಂದುಳಿದವರು ಬದುಕಿಗಾಗಿ ನಿತ್ಯವೂ ಹಗಲಿರುಳು ಕಷ್ಟಪಡುತ್ತಿರುವವರು ಇನ್ನೂ ಇದ್ದಾರೆ. ಅವರೆಲ್ಲರಿಗೂ ಕ್ರೈಸ್ತ ಜಯಂತಿಯ ಶುಭಾಶಯಗಳನ್ನು ತಿಳಿಸುತ್ತಾ 1979-80 ರಲ್ಲಿ ಸುಮಾರು 2 ವರ್ಷಗಳ ಕಾಲ ಪ್ರತಿ ಶುಕ್ರವಾರ ಚರ್ಚ್ನಲ್ಲಿ ನಾನು ಕೂಡ ಪ್ರಾರ್ಥನೆ ಮಾಡಿರುವುದಾಗಿ ತಿಳಿಸಿದರು.

ಇದನ್ನೂ ಓದಿ: MLA B.N. Ravikumar: ಹಿಂದೂ ರುದ್ರಭೂಮಿ ದುರಸ್ತಿ ಮಾಡಲು ಶಾಸಕ ಬಿ.ಎನ್.ರವಿಕುಮಾರ್‌ಗೆ ಮನವಿ ಸಲ್ಲಿಕೆ

ಕ್ರೈಸ್ತ ಸಮುಯದ ವಿಚಾರದಲ್ಲಿ ಭವನ ಹಾಗೂ ರುದ್ರ ಭೂಮಿಗೆ ಬೇಡಿಕೆ ಇಡಲಾಗಿದೆ. ನಾನು ವಿರೋದ ಪಕ್ಷದ ಶಾಸಕನಾಗಿದ್ದರೂ ಕೂಡ ಸರ್ಕಾರಕ್ಕೆ ಮನವಿ ಸಲ್ಲಿಸಿ ಆದಷ್ಟು ಬೇಗ ನಿಮ್ಮ ಬೇಡಿಕೆ ಈಡೇರಿಸುತ್ತೇನೆ ಎಂದು ಭರವಸೆ ನೀಡಿದರು.

ನಿಮ್ಮ ಮಕ್ಕಳಿಗೆ ನಿಮಗಿಂತ ಉತ್ತಮ ಮಟ್ಟದ ಜೀವನ ರೂಪಿಸಲು ಅವರಿಗೆ ಗುಣಮಟ್ಟದ ಶಿಕ್ಷಣ ನಿಡಬೇಕು.ಯಾವ ಮಕ್ಕಳೂ ಕೂಡ ಶಿಕ್ಷಣದಿಂದ ವಂಚಿತರಾಗಬಾರದು. ಏನಾದರೂ ಸಾಧನೆ ಮಾಡಬೇಕು ಎಂದರೆ ಅದಕ್ಕೆ ಶಿಕ್ಷಣವೇ ದೊಡ್ಡ ಅಸ್ತ್ರವಾಗಿದೆ ಎಂದರು.

ಸಭಾಪಾಲಕರ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ಪಾಸ್ಟರ್ ಸತ್ಯನಾರಾಯಣಪ್ಪ ಮಾತನಾಡಿ, ದೇವರು ಮನುಷ್ಯನಾಗಿ ಈ ಧರೆಯಲ್ಲಿ ಹುಟ್ಟಿದ ದಿನದ ಆಚರಣೆಯೇ ಕ್ರಿಸ್ಮಸ್. ಕಷ್ಟ, ನೋವು, ಪಾಪ ಇಂತಹ ಹತ್ತು ಹಲವು ಅಡಚಣೆಗಳಿಂದ ಮನುಕುಲವನ್ನು ರಕ್ಷಿಸಲು ದೇವರು ಯೇಸುವಿನ ಮುಖಾಂತರ ನರನಾದರು. ‘ಯೇಸು’ ಎಂದರೆ ‘ಜನರನ್ನು ಪಾಪಗಳಿಂದ ರಕ್ಷಿಸಿ ಉದ್ಧಾರ ಮಾಡುವವನು’  ಕ್ರೈಸ್ತ ಜಯಂತಿಗೆ ನಮಗೆ ಸಹಕಾರ ನೀಡಿ ಕಾರ್ಯಕ್ರಮಕ್ಕೆ ಆಗಮಿಸಿ ರುವ ಶಾಸಕ ಬಿಎನ್ ರವಿಕುಮಾರ್ ರವರಿಗೆ ಧನ್ಯವಾದಗಳನ್ನು ತಿಳಿಸುತ್ತ ತಮ್ಮ ಕುಟುಂಬಕ್ಕೆ ದೇವರು ಆಯಸ್ಸು ಆರೋಗ್ಯ ನೀಡಿ ಕಾಪಾಡಲಿ ಎಂದು ಆಶಿಸಿದರು.