ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಇತಿಹಾಸವಾದ ಕಾರ್ಯಕ್ರಮದಲ್ಲಿ ಅನುದಾನಕ್ಕೆ ಮೊರೆಯಿಟ್ಟ ಶಾಸಕ : ಅಸ್ತು ಎಂದ ಮುಖ್ಯಮಂತ್ರಿ

ನಮ್ಮ ಕ್ಷೇತ್ರದ ೭೩ ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಗಳೊಟ್ಟಿಗೆ ಸರಕಾರದ ೧೭ ಮಂದಿ ಸಚಿವರು ಒಂದೇ ವೇದಿಕೆಯಲ್ಲಿ ಭಾಗಿಯಾಗಿ ಅಭಿವೃದ್ಧಿ ಕಾರ್ಯಗಳಿಗೆ ಮುನ್ನುಡಿ ಬರೆದಿದ್ದಾರೆ. ೧೬ ಚುನಾವಣೆಗಳಲ್ಲಿ ೧೧ ಬಾರಿ ಕಾಂಗ್ರೆಸ್ ಶಾಸಕರು ಆರಿಸಿ ಬಂದಿ ದ್ದಾರೆ.

ಇತಿಹಾಸವಾದ ಕಾರ್ಯಕ್ರಮದಲ್ಲಿ ಅನುದಾನಕ್ಕೆ ಮೊರೆಯಿಟ್ಟ ಶಾಸಕ

-

Ashok Nayak
Ashok Nayak Nov 24, 2025 10:55 PM

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ 73 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿಯೊಬ್ಬರು ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಮಾಡಿದ್ದಾರೆ. ಈ ನೆನಪು ಹಸಿರಾಗಿರುವಂತಾಗಬೇಕಾದರೆ ಅಭಿವೃದ್ದಿ ಗೆ ವಿಶೇಷ ಅನುದಾನ ಕೊಡಿ ಎಂದು ಶಾಸಕ ಬಿ.ಎನ್.ರವಿಕುಮಾರ್ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಮಾಡಿದರು.

ನಗರ ಹೊರವಲಯದ ಹನುಮಂತಪುರ ಗೇಟ್ ಸಮೀಪ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಿದ್ದ 2000.74 ಕೋಟಿ ವೆಚ್ಚದ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆ, ಹೆಚ್.ಎನ್.ವ್ಯಾಲಿ ೩ನೇ ಹಂತದ ೧೬೪ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮತ್ತು ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ವಿವಿಧ ಫಲಾನುಭವಿಗಳಿಗೆ ಸವಲತ್ತುಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿ ಯಾಗಿ ಮಾತನಾಡಿದರು.

ನಮ್ಮ ಕ್ಷೇತ್ರದ ೭೩ ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಗಳೊಟ್ಟಿಗೆ ಸರಕಾರದ ೧೭ ಮಂದಿ ಸಚಿವರು ಒಂದೇ ವೇದಿಕೆಯಲ್ಲಿ ಭಾಗಿಯಾಗಿ ಅಭಿವೃದ್ಧಿ ಕಾರ್ಯಗಳಿಗೆ ಮುನ್ನುಡಿ ಬರೆದಿದ್ದಾರೆ. ೧೬ ಚುನಾವಣೆಗಳಲ್ಲಿ ೧೧ ಬಾರಿ ಕಾಂಗ್ರೆಸ್ ಶಾಸಕರು ಆರಿಸಿ ಬಂದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುವ ಕಾರಣ ಈ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿ ಎಂದು ಮನವಿ ಮಾಡಿದರು.

ಇದನ್ನೂ ಓದಿ: Chikkaballapur News: ಚದುರಂಗ ಆಡುವುದರಿಂದ ಆಲೋಚನಾ ಶಕ್ತಿ, ಏಕಾಗ್ರತೆ ಹೆಚ್ಚುತ್ತದೆ : ಸಿ.ಇ.ಒ ಡಾ. ವೈ.ನವೀನ್ ಭಟ್ ಚಾಲನೆ

ಕ್ಷೇತ್ರದ ಮತದಾರರು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಆಶೀರ್ವಾದಿಂದ 2023ರಲ್ಲಿ ಮೊದಲ ಬಾರಿಗೆ ಶಾಸಕನಾದ ನಾನು ಕ್ಷೇತ್ರಸಂಚಾರ ಮಾಡುವಾಗ ಹದಗೆಟ್ಟ ರಸ್ತೆಗಳನ್ನು ಸರಿಮಾಡಲು ಜನತೆ ಮನವಿ ಮಾಡುತ್ತಿದ್ದಾರೆ.ಅನುದಾನ ಇಲ್ಲದೆ ಅವರಿಗೆ ಮಾತುಕೊಡದೆ ಅಸಹಾಯಕನಾಗಿದ್ದೇನೆ. ಈ ಎರಡುವರೆ ವರ್ಷದಲ್ಲಿ ನನ್ನ ಕ್ಷೇತ್ರದಲ್ಲಿ ೧೭ ಮಂದಿ ರಸ್ತೆ ಅಪಘಾತಗಳಲ್ಲಿ ಮೃತರಾಗಿದ್ದಾರೆ.ದಯವಿಟ್ಟು ರಸ್ತೆ ಸರಿ ಮಾಡಲಾದರೂ ಅನುದಾನ ಕೊಡಿ ಎಂದು ಮನವಿ ಮುಖ್ಯಮಂತ್ರಿಗಳಿಗೆ ಕೈಮುಗಿದರು.

ಇಂದಿನ ಅದ್ಧೂರಿ ಕಾರ್ಯಕ್ರಮದಲ್ಲಿ ನನ್ನ ಕ್ಷೇತ್ರದಲ್ಲಿ 200ಕೋಟಿ ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣ ಆಗುತ್ತಿರುವುದು ಸಂತೋಷ ತಂದಿದ್ದು ಅನುದಾನ ಕೊಟ್ಟ ಮುಖ್ಯಮಂತ್ರಿಗಳು ಸರಕಾರಕ್ಕೆ ಜನತೆಯ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ.ಅದೇ ರೀತಿ ಶಿಡ್ಲಘಟ್ಟ ನಗರದ ನೀರಿನ ಭವಣೆ ತಪ್ಪಿಸಲು ೯೩ಕೋಟಿ ಅನುದಾನದಲ್ಲಿ ರಾಮ ಸಮುದ್ರ ಕರೆಯ ನೀರನ್ನು ನಗರಕ್ಕೆ ಹರಿಸಲು ಶಂಕುಸ್ಥಾಪನೆ ಮಾಡಲಾಗಿದೆ.

ಹೆಚ್.ಎನ್.ವ್ಯಾಲಿ ಸಂಸ್ಕರಿಸಿದ ನೀರನ್ನು ತಾಲೂಕಿನ ೪೫ ಕೆರೆಗಳಿಗೆ ಹರಿಸಲು 350 ಕೋಟಿ, ಅಮರಾವತಿಯಲ್ಲಿ ನಿರ್ಮಾನ ಆಗುತ್ತಿರುವ ಉತ್ತರ ವಿಶ್ವವಿದ್ಯಾಲಯದ ಎರಡನೇ ಹಂತದ ಕಾಮಕಾರಿಗೆ 120 ಕೋಟಿ ಅನುದಾನ ನೀಡಲಾಗಿದೆ ಎಂದರು.

ನಮ್ಮ ಮನವಿ ಮೇಲೆ ಮುಖ್ಯಮಂತ್ರಿಗಳು ಮಿನಿ ವಿಧಾನಸೌಧ ಹಾಗೂ ಅಂಬೇಡ್ಕರ್ ಭವನದ ಕಾಮಗಾರಿಗೆ ಅನುದಾನ,ಕೇಂದ್ರ ಗ್ರಂಥಾಲಯ ನಿರ್ಮಾಣಕ್ಕೆ ಅನುದಾನ ಒದಗಿಸುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದು ಸಂತೋಷ ಎಂದರು.

ಜೆಡಿಎಸ್ ಶಾಸಕರಾದರೂ ಕೂಡ ರವಿಕುಮಾರ್ ಈ ಕಾರ್ಯಕ್ರಮ ನಡೆಯಲು ಸಂಪೂರ್ಣ ಸಹಕಾರ ನೀಡಿದ್ದಾರೆ. ಇವರು ಕೇಳಿರುವ ಎಲ್ಲಾ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಈಡೇರಿಸಲಾಗುವುದು ಎಂದು ಬೆನ್ನು ತಟ್ಟಿದ ಮುಖ್ಯಮಂತ್ರಿಗಳು ಕಾರ್ಯಕ್ರಮದ ಯಶಸ್ಸಿನಿಂದ ಅತ್ಯಂತ ಸಂತುಷ್ಟರಾಗಿದ್ದರು. ಇದು ಸಹಜವಾಗಿ ಶಾಸಕರ ಮೊಗದಲ್ಲಿ ಮಂದಹಾಸ ಉಂಟಾಗುವಂತೆ ಮಾಡಿತ್ತು.