ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chinthamani News: ಕಾರ್ಮಿಕರ 8 ಗಂಟೆ ಕೆಲಸದ ಹಕ್ಕಿಗಾಗಿ ನಡೆದ ಹೋರಾಟದ ಇತಿಹಾಸ ಸ್ಮರಿಸಿದ ಮೊಹಮ್ಮದ್ ಬೇಗ್

ರಾಜ್ಯ ಟೈಲ್ಸ್ ಮತ್ತು ಗ್ರಾನೈಟ್ ಹಾಗೂ ಇತರ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘ ಸೇರಿದಂತೆ ಹಲವು ಸಂಘಟನೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಮೆರವಣಿಗೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. "ಕಾರ್ಮಿಕರ ದಿನಾಚರಣೆ ಶುಭಾಶಯಗಳು" ಮತ್ತು "ಎಲ್ಲಾ ಕೂಲಿ ಕಾರ್ಮಿಕರಿಗೆ ಜಯವಾಗಲಿ" ಎಂಬ ಘೋಷಣೆಗಳು ಮೆರವಣಿಗೆಯುದ್ದಕ್ಕೂ ಮೊಳಗಿದವು.

ಚಿಂತಾಮಣಿ: ನಗರದಲ್ಲಿ ಇಂದು ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ(International Workers' Day) ಯನ್ನು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ರಾಜ್ಯ ಟೈಲ್ಸ್ ಮತ್ತು ಇತರ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳ ಆಶ್ರಯದಲ್ಲಿ ನಡೆದ ಈ ಕಾರ್ಯ ಕ್ರಮದಲ್ಲಿ ನೂರಾರು ಕಾರ್ಮಿಕರು ಪಾಲ್ಗೊಂಡು ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದರು.

ನಗರದ ಪ್ರವಾಸಿ ಮಂದಿರದಿಂದ ಆರಂಭವಾದ ಈ ಬೃಹತ್ ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳ ಮೂಲಕ ಸಾಗಿತು.ಮೆರವಣಿಗೆಯ ಮುಂಚೂಣಿಯಲ್ಲಿ ಡೋಲು ಬಾರಿಸುವ ತಂಡಗಳು ಇದ್ದು,ಹಬ್ಬದ ವಾತಾವರಣ ನಿರ್ಮಿಸಿದ್ದವು.

ರಾಜ್ಯ ಟೈಲ್ಸ್ ಮತ್ತು ಗ್ರಾನೈಟ್ ಹಾಗೂ ಇತರ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘ ಸೇರಿದಂತೆ ಹಲವು ಸಂಘಟನೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಮೆರವಣಿಗೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. "ಕಾರ್ಮಿಕರ ದಿನಾಚರಣೆ ಶುಭಾಶಯಗಳು"ಮತ್ತು "ಎಲ್ಲಾ ಕೂಲಿ ಕಾರ್ಮಿಕರಿಗೆ ಜಯವಾಗಲಿ"ಎಂಬ ಘೋಷಣೆಗಳು ಮೆರವಣಿಗೆಯುದ್ದಕ್ಕೂ ಮೊಳಗಿದವು.

ಇದನ್ನೂ ಓದಿ: Chikkaballapur (Chinthamani) News: ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ

ನಂತರ ಚಿಂತಾಮಣಿ ನಗರದ ಊರಿನ ಮುಂದೆ ವೇದಿಕೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು ಕಾರ್ಯ ಕ್ರಮ ಉದ್ದೇಶಿಸಿ ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಮೊಹಮ್ಮದ್ ಬೇಗ್ ಮಾತನಾಡಿ 8 ಗಂಟೆ ಕೆಲಸ, 8 ಗಂಟೆ ವಿಶ್ರಾಂತಿ ಮತ್ತು 8 ಗಂಟೆ ವೈಯಕ್ತಿಕ ಜೀವನಕ್ಕಾಗಿ ಮೀಸಲಿಡಬೇಕು ಎಂಬುದು ಈ ದಿನಾಚರಣೆಯ ಮೂಲ ಆಶಯವಾಗಿದೆ ಎಂದು ತಿಳಿಸಿದರು.

19ನೇ ಶತಮಾನದಲ್ಲಿ ಕಾರ್ಮಿಕರು ಈ ನ್ಯಾಯಯುತ ಬೇಡಿಕೆಗಳಿಗಾಗಿ ಶಾಂತಿಯುತ ಪ್ರತಿಭಟನೆ ಆರಂಭಿಸಿದರು. ಮೇ 1ರಿಂದ ಆರಂಭವಾದ ಈ ಪ್ರತಿಭಟನೆಯು ಮೇ 4ರಂದು ನಡೆದ ದೌರ್ಜನ್ಯದ ಘಟನೆಯಲ್ಲಿ ಹಲವು ಕಾರ್ಮಿಕರ ಬಲಿದಾನಕ್ಕೆ ಸಾಕ್ಷಿಯಾಯಿತು ಎಂದು ಸ್ಮರಿಸಿದರು.

cmt

1889ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ವಿಶ್ವ ಕಾರ್ಮಿಕ ನಾಯಕರ ಸಭೆಯಲ್ಲಿ, ಮೇ 1ನೇ ತಾರೀಖನ್ನು 'ಕಾರ್ಮಿಕ ದಿನಾಚರಣೆ' ಎಂದು ಘೋಷಿಸಲಾಯಿತು. ಅಂದಿನಿಂದ ಇಂದಿನವರೆಗೂ ಈ ದಿನವನ್ನು ಕಾರ್ಮಿಕರ ಗೌರವಾರ್ಥವಾಗಿ ಆಚರಿಸಲಾಗುತ್ತಿದೆ ಎಂದ ಅವರು ಕಾರ್ಮಿಕರು ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗಬೇಕು ಮತ್ತು ಕಾರ್ಮಿಕ ಇಲಾಖೆಯ ಸೌಲಭ್ಯಗಳನ್ನು ಸದುಪಯೋಗ ಪಡಿಸಿ ಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಕರೆ ನೀಡಿದರು.

ಸಂಘಟನೆ, ಶಕ್ತಿ ಮತ್ತು ಹೋರಾಟ -ಈ ಮೂರು ತತ್ವಗಳನ್ನು ಅಳವಡಿಸಿಕೊಂಡರೆ ಕಾರ್ಮಿಕರ ಅಭಿವೃದ್ಧಿ ಸಾಧ್ಯ,"ಕಾರ್ಮಿಕರು ಚದುರಿ ಹೋಗದೆ ಒಂದುಗೂಡಬೇಕು. ಸಂಘಟಿತ ಶಕ್ತಿಯಿದ್ದಾಗ ಮಾತ್ರ ಹಕ್ಕುಗಳಿಗಾಗಿ ಧ್ವನಿ ಎತ್ತಲು ಸಾಧ್ಯ. ಅಂತಹ ಸಂದರ್ಭದಲ್ಲಿ ನಾವೇ ಯಾರ ಬಳಿಗೂ ಹೋಗುವ ಅಗತ್ಯವಿರುವುದಿಲ್ಲ,ಬದಲಾಗಿ ನಮ್ಮ ಅವಶ್ಯಕತೆ ಇರುವವರೇ ನಮ್ಮನ್ನು ಹುಡುಕಿ ಕೊಂಡು ಬರುತ್ತಾರೆ ಎಂದು ಎಂದು ಹಿರಿಯ ವಕೀಲ ಮಂಜುನಾಥ್ ರೆಡ್ಡಿ ಪ್ರತಿಪಾದಿಸಿದರು.

ಪ್ರಸ್ತುತ ಚಿಂತಾಮಣಿ ತಾಲ್ಲೂಕಿನಲ್ಲಿ ಸುಮಾರು 9000ಕ್ಕೂ ಹೆಚ್ಚು ಕಾರ್ಮಿಕರು ಸಂಘಟಿತರಾದರೆ, ಕುಟುಂಬದ ಸದಸ್ಯರನ್ನು ಸೇರಿ ಸುಮಾರು 10000 ಜನರ ಬೃಹತ್ ಶಕ್ತಿಯಾಗಿ ಹೊರ ಹೊಮ್ಮ ಬಹುದು. ಇದು ರಾಜಕೀಯ ಮತ್ತು ಸಾಮಾಜಿಕವಾಗಿ ದೊಡ್ಡ ಬದಲಾವಣೆಗೆ ನಾಂದಿ ಹಾಡಲಿದೆ.

ರಾಮಾಯಣದ ಪ್ರಸಂಗ ಉಲ್ಲೇಖಿಸಿದ ಅವರು, ಬಲಿಷ್ಠನಾದ ಶ್ರೀರಾಮನೂ ಸಹ ಆಂಜನೇಯನ ಸಹಾಯ ಕೋರಿದ್ದನು. ಅಂದರೆ ಶಕ್ತಿಯಿದ್ದವರೂ ಕೂಡ ಸಂಘಟಿತರ ನೆರವು ಪಡೆಯುತ್ತಾರೆ ಎಂಬುದನ್ನು ಮರೆಯಬಾರದು ಎಂದರು.

ಕಾರ್ಯಕ್ರಮದ ನಂತರ ಕಾರ್ಮಿಕರ ಮಕ್ಕಳಿಗೆ ಲೇಖನ ಸಾಮಗ್ರಿಗಳು ವಿತರಣೆ ಮಾಡಿದಲ್ಲದೆ ಕಾರ್ಮಿಕರಿಗೆ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ರಾಜ್ಯ ಟೈಲ್ಸ್ ಮತ್ತು ಇತರ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ರಾಜ್ಯಾ ಧ್ಯಕ್ಷರಾದ ನಾರಾಯಣಸ್ವಾಮಿ, ಉಪಾಧ್ಯಕ್ಷರಾದ ಜಗದೀಶ್, ರಾಜ್ಯ ಕಾರ್ಯಾಧ್ಯಕ್ಷರಾದ ಮೋಹನ್ ಎಸ್,ರಾಜ್ಯ ಪ್ರಧಾನ ಕಾರ್ಯದರ್ಶಿ ಧನಂಜಯ ಚಾರಿ, ಖಜಾಂಚಿ ಉದಯ ಸಿಂಗ್, ಸಹ ಕಾರ್ಯ ದರ್ಶಿ ಅಬ್ದುಲ್ ಕಲೀಮ್, ಸಂಚಾಲಕರಾದ ರಘು ಎಸ್, ಶ್ರೀನಿವಾಸ್, ಗಂಗರಾಜು, ವೆಂಕಟರಾಮ ರೆಡ್ಡಿ, ಬ್ರಹ್ಮಚಾರಿ, ಮಾಜಿ ನಗರಸಭಾ ಸದಸ್ಯರಾದ ದೇವಲಂ ಶಂಕರ್, ರವಿ ಕುಮಾರ್, ಮಂಜು ನಾಥ್ ರೆಡ್ಡಿ,ಇಂತಿಯಾಜ್ ಪಾಷಾ, ತಾಲೂಕು ಅಧ್ಯಕ್ಷರಾದ ಸಾಧಿಕ್ ಪಾಷಾ, ನಯಾಜ್ ಪಾಷಾ, ಚಲಪತಿ, ಅಶೋಕ್, ಸುರೇಶ್, ಶಿವರಾಂ, ನಾಗರಾಜ್, ರೆಹಮಾನ್, ಮುಜಾಹಿದ್ ಪಾಷಾ ಸೇರಿದಂತೆ ಮತ್ತಿತರರು ಇದ್ದರು.