#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

ಅಮ್ಮ, ಸಾಲ ಕೊಟ್ಟವರು, ಕಾನೂನಿನಂತೆ ಸಾಲ ಮರುಪಾವತಿ ಮಾಡಿ ಎಂದು ಕೇಳಬೇಕೇ ವಿನಃ ಬಾಯಿಗೆ ಬಂದಂತೆ ಮಾತನಾಡಬಾರದು

ಕಮ್ಮಗುಟ್ಟಹಳ್ಳಿ ಪಂಚಾಯಿತಿ ದಿನ್ನಹಳ್ಳಿ ಗ್ರಾಮದಲ್ಲಿ ಮಂಗಳವಾರ ಶಾಸಕ ಪ್ರದೀಪ್ ಈಶ್ವರ್ ಹಮ್ಮಿಕೊಂಡಿದ್ದ ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮದಲ್ಲಿ ಮಂಡಿಕಲ್‌ನ  ಅಮ್ರಿನ್ ಬಾನು, ಭಾನುಶ್ರೀ,ಸ್ವಾತಿ,ಮಂಜಮ್ಮ,ನಾಜಿಯಾಭಾನು ಸೇರಿ ೧೮ಕ್ಕೂ ಹೆಚ್ಚು ಮಹಿಳೆಯರು ದಿನ್ನ ಹಳ್ಳಿ ಗ್ರಾಮಕ್ಕೆ ಆಗಮಿಸಿ ಶಾಸಕ ಪ್ರದೀಪ್ ಈಶ್ವರ್‌ಗೆ ಮೈಕ್ರೋ ಫೈನಾನ್ಸ್ ಕಿರುಕುಳವನ್ನು ಎಳೆಎಳೆ ಯಾಗಿ ಬಿಚ್ಚಿಟ್ಟಿದ್ದು ಕಂಡು ಶಾಸಕರಾದಿಯಾಗಿ ತಹಶೀಲ್ದಾರ್,ಇಒ ಮೊದಲಾದ ಅಧಿಕಾರಿಗಳೇ ಹೌಹಾರಿದರು

ಮೈಕ್ರೋ ಫೈನಾನ್ಸ್ ಹಾವಳಿಯಿಂದ ಕಾಪಾಡಿ: ಶಾಸಕರ ಬಳಿ ಮಹಿಳೆಯರ ಅಳಲು

ಚಿಕ್ಕಬಳ್ಳಾಪುರ ತಾಲೂಕು ಕಮ್ಮಗುಟ್ಟಹಳ್ಳಿ ಪಂಚಾಯಿತಿ ಚಿಕ್ಕನಾರೇಪಲ್ಲಿ,ಕೊಮ್ಮಲ ಮರಿ, ದಿನ್ನಹಳ್ಳಿ ಗ್ರಾಮಗಳಲ್ಲಿ ಶಾಸಕ ಪ್ರದೀಪ್ ಈಶ್ವರ್ ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮ ನಡೆಸಿಕೊಟ್ಟರು.

Profile Ashok Nayak Jan 29, 2025 12:52 AM

ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಮಿತಿಮೀರಿರುವ ನಡುವೆ ಚಿಕ್ಕಬಳ್ಳಾ ಪುರ ವಿಧಾನಸಭಾ ಕ್ಷೇತ್ರದಲ್ಲಿ ಕೂಡ ಮಂಗಳವಾರ ಶಾಸಕ ಪ್ರದೀಪ್ ಈಶ್ವರ್‌ಗೆ ಇದರ ಬಿಸಿ ತಟ್ಟಿತು,
ಹೌದು. ಕಮ್ಮಗುಟ್ಟಹಳ್ಳಿ ಪಂಚಾಯಿತಿ ದಿನ್ನಹಳ್ಳಿ ಗ್ರಾಮದಲ್ಲಿ ಮಂಗಳವಾರ ಶಾಸಕ ಪ್ರದೀಪ್ ಈಶ್ವರ್ ಹಮ್ಮಿಕೊಂಡಿದ್ದ ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮದಲ್ಲಿ ಮಂಡಿಕಲ್‌ನ  ಅಮ್ರಿನ್ ಬಾನು, ಭಾನುಶ್ರೀ, ಸ್ವಾತಿ, ಮಂಜಮ್ಮ, ನಾಜಿಯಾ ಭಾನು ಸೇರಿ 18ಕ್ಕೂ ಹೆಚ್ಚು ಮಹಿಳೆಯರು ದಿನ್ನ ಹಳ್ಳಿ ಗ್ರಾಮಕ್ಕೆ ಆಗಮಿಸಿ ಶಾಸಕ ಪ್ರದೀಪ್ ಈಶ್ವರ್‌ಗೆ ಮೈಕ್ರೋ ಫೈನಾನ್ಸ್ ಕಿರುಕುಳವನ್ನು ಎಳೆಎಳೆ ಯಾಗಿ ಬಿಚ್ಚಿಟ್ಟಿದ್ದು ಕಂಡು ಶಾಸಕರಾದಿಯಾಗಿ ತಹಶೀಲ್ದಾರ್, ಇಒ ಮೊದಲಾದ ಅಧಿಕಾರಿಗಳೇ ಹೌಹಾರಿದರು.

ದಿನಕ್ಕೆ ಒಬ್ಬೊಬ್ಬರಂತೆ ಯಾರು ಯಾರೋ ಬರುತ್ತಾರೆ. ಮಹಿಳೆಯರು ಮಕ್ಕಳು ಎಂಬುದನ್ನು ನೋಡದೆ ಹಣ ಕೊಡುವವರೆಗೆ ಮನೆ ಬಿಟ್ಟು ಹೋಗುವುದೇ ಇಲ್ಲ. ಗಂಡಸರು ಇಲ್ಲ, ಆಮೇಲೆ ಬನ್ನಿ, ನಮ್ಮ ಬಳಿ ಈಗ ಹಣ ಎಂದರೆ ನೀವಿದ್ದೀರಲ್ಲ, ಯಾರ ಬಳಿ ಮಲಗಿಯಾದರೂ ಸರಿಯೇ ಹಣ ನೀಡಿ, ಅಲ್ಲಿಯವರೆಗೆ ಹೋಗುವುದಿಲ್ಲ ಎಂದು ಅವಮಾನ ಮಾಡುತ್ತಾರೆ. ದಯವಿಟ್ಟು ನಮಗೆ ಇದರಿಂದ ಮುಕ್ತಿ ಕೊಡಿಸಿ ಎನ್ನುತ್ತಾ ರಮೀಜಾ ಕಣ್ಣೀರಾದರು.
ಮಹಿಳೆಯ ಅಹವಾಲು ಸ್ವೀಕರಿಸಿ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್ ಅಳಬೇಡಿ ಅಮ್ಮ, ಸಾಲ ಕೊಟ್ಟವರು, ಕಾನೂನಿನಂತೆ ಸಾಲ ಮರುಪಾವತಿ ಮಾಡಿ ಎಂದು ಕೇಳಬೇಕೇ ವಿನಃ ಬಾಯಿಗೆ ಬಂದಂತೆ ಮಾತನಾಡಬಾರದು. ಇನ್ನೊಮ್ಮೆ ಅವರು ಹೀಗೆಲ್ಲಾ ಮಾತನಾಡಿದರೆ ಅದನ್ನು ವಿಡಿ ಯೋ ಮಾಡಿಕೊಂಡು ಪೊಲೀಸರಿಗೆ ದೂರು ನೀಡಿ. ನಾನೂ ಕೂಡ ಮಾತನಾಡುತ್ತೇನೆ. ನಮ್ಮ ಸರಕಾರ ಇದಕ್ಕಾಗಿ ವಿಶೇಷ ಕಾಯ್ದೆ ತರಲು ಮುಂದಾಗಿದೆ ಎಂದು ಧೈರ್ಯ ತುಂಬಿದರು.

ಇದಕ್ಕೂ ಮೊದಲು ಚಿಕ್ಕನಾರಪ್ಪನಹಳ್ಳಿ,ಕೊಮ್ಮಲಮರಿ ಗ್ರಾಮಕ್ಕೆ ಭೇಟಿ ನೀಡಿದ್ದ ಶಾಸಕ ಪ್ರದೀಪ್ ಈಶ್ವರ್ ಅಕ್ಷರಶಃ ಜನರ ಜತೆ ಅವರಂತೆ ಬೆರೆತು ಸಮಸ್ಯೆ ಆಲಿಸಿದರು. ನಮ್ಮ ಮನೆಯ ಬಳಿಯೇ ಬಂದರೆ ನಮ್ಮ ಕಷ್ಟ ನಿಮಗೆ ತೋರಿಸುತ್ತೇನೆ ಎಂದವರ ಮಾತನ್ನು ನಿರಾಕರಿಸದೆ ಅವರ ಹಿಂದೆ ಯೇ ಹೋಗಿ ಸ್ಥಳಪರಿಶೀಲನೆ ಮಾಡುವ ಮೂಲಕ ತಮಗಿರುವ ಜನಪರ ಕಾಳಜಿಯನ್ನು ಪ್ರದರ್ಶನ ಮಾಡಿದರು.

ಮಂಗಳವಾರ ಬೆಳಗ್ಗೆ 8 ಗಂಟೆ ಸುಮಾರಿಗೆ 113ನೇ ಹಳ್ಳಿಯಾದ ತಾಲೂಕಿನ ಚಿಕ್ಕನಾರಪ್ಪನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಶಾಸಕರು, ಯತಾಸ್ಥಿತಿ ಟಾರ್ಪಲ್ ಮತ್ತು ಚಾಪೆಗಳ ಮೇಲೆ ಜನರೊಂದಿಗೆ ಕುಳಿತು ಅಲ್ಲಿನ ಸಮಸ್ಯೆಗಳನ್ನು ಆಲಿಸಿದರು. ಮೊದಲಿಗೆ ಸಮಸ್ಯೆಯೊಂದನ್ನು ಹೊತ್ತು ತಂದ ಆನಂದ್ ಎಂಬ ಯುವಕ 8 ತಿಂಗಳ ಹಿಂದೆ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದೇನೆ, ಮನೆಯ ನಿರ್ವಹಣೆ ಕಷ್ಟವಾಗಿದೆ, ಹೆಂಡತಿ, ಮಗುವೊಂದಿದೆ. ದೂರು ನೀಡಿದರೂ ಪೊಲೀಸರು ದೂರು ಸ್ವೀಕ ರಿಸಿಲ್ಲ. ಯಾವುದೇ ಪರಿಹಾರವೂ ಬಂದಿಲ್ಲ ಎಂದು ಅಳಲು ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಶಾಸಕರು, ತಾಲೂಕು ಆರೋಗ್ಯ ಅಧಿಕಾರಿಗೆ ಕೃತಕ ಕಾಲು ಜೋಡಣೆ ಹಾಗೂ ಇತರೆ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು. ಖಾಸಗಿಯವರ ಜಾಗದಲ್ಲಿ 22 ಮನೆಗಳನ್ನು ಕಟ್ಟಿಕೊಂಡಿದ್ದ ಸಮಸ್ಯೆಗೆ ಸ್ಪಂಧಿಸಿದ ಶಾಸಕರು ನಿಮಗೆ ದಾಖಲೆಗಳನ್ನು ಮಾಡಿಸಿಕೊಡುತ್ತೇನೆ. ದಾರಿಗೆ ಅಡ್ಡಿ ಪಡಿಸುತ್ತಿರುವ ಜಮೀನು ಮಾಲೀಕರಿಗೆ ನಾನು ಹಣಕೊಟ್ಟು ನಿಮಗೆ ಸಮಸ್ಯೆ ಬಗೆಹರಿಸುತ್ತೇನೆ ಎಂದರು.

ಬಳಿಕ ಊರಿನ ಮಧ್ಯೆ ರಸ್ತೆ ನಿರ್ಮಾಣಕ್ಕೆ ಹಳೆಯ ಮನೆಯೊಂದು ಅಡ್ಡವಾಗಿದೆ. ಅದನ್ನ ತೆರವು ಗೊಳಿಸಿದರೆ ಸೂಕ್ತ ರಸ್ತೆ ನಿರ್ಮಾಣವಾಗಲಿದೆ ಎಂದು ಗ್ರಾಮಸ್ಥರು ಮನವಿ ಮಾಡಿದರು. ಅಡ್ಡವಾ ಗಿರುವ ಮನೆಯ ಯಜಮಾನನನ್ನು ಕರೆದ ಶಾಸಕರು ಅಲ್ಲಿಯೇ ಪಂಚಾಯಿತಿ ನಡೆಸಿದರು. ಮನೆಯ ಯಜಮಾನನಿಗೆ ಸಮಸ್ಯೆಯ ಕುರಿತು ಮನವರಿಕೆ ಮಾಡಿಕೊಟ್ಟ ಶಾಸಕರು ಶೀಘ್ರವೇ ರಸ್ತೆ ನಿರ್ಮಿಸ ಬೇಕು, ಜನರಿಗೆ ತೊಂದರೆಯಾಗದAತೆ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು ಎಂದು ಕಮ್ಮಗುಟ್ಟ ಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒಗೆ ತಿಳಿಸಿದರು.

ಇದೇ ಗ್ರಾಮದಲ್ಲಿ ಜನರೊಂದಿಗೆ ನಿಂತುಕೊಂಡು ತಿಂಡಿ ತಿಂದ ಶಾಸಕ ತಿಂಡಿ ತಿನ್ನುವಾಗಲೂ ಸಮಸ್ಯೆಗಳನ್ನು ಆಲಿಸಿ ಪರಿಹಾರದ ಬಗ್ಗೆ ಮಾತನಾಡಿದ್ದು ವಿಶೇಷವಾಗಿತ್ತು. ಗುಡಿಬಂಡೆ, ಚಿಕ್ಕ ಬಳ್ಳಾಪುರದಿಂದ ನಮ್ಮ ಗ್ರಾಮಕ್ಕೆ ಬಸ್ ವ್ಯವಸ್ಥೆ ಮಾಡಿಕೊಡಿ ಎಂದು ಅಂತಿಮ ಬಿಕಾಂ ವಿದ್ಯಾ ರ್ಥಿನಿ ಗಂಗೋತ್ರಿ ಶಾಸಕರಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕರು ಒಂದು ವಾರದಲ್ಲಿ ಬಸ್ ವ್ಯವಸ್ಥೆ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.

೯.೩೦ರ ಸುಮಾರಿಗೆ ಮೊದಲೇ ನಿಗದಿಯಾಗಿದ್ದ ಕೊಮ್ಮಲಮರಿ ಗ್ರಾಮಕ್ಕೆ ತೆರಳಿದ ಶಾಸಕರು, ಅಲ್ಲಿನ ಜನರೊಂದಿಗೆ ಕುಳಿತು ಸಮಸ್ಯೆಗಳನ್ನು ಚರ್ಚೆ ಮಾಡಿದರು. ಕೊಮ್ಮಲಿಮರಿ ಗ್ರಾಮದ ಮಹಿಳೆ ಯೊಬ್ಬರು ನಮ್ಮೂರಲ್ಲಿ ಸ್ಮಶಾನ ಇಲ್ಲ, ಓಡಾಡಲು ಸರಿಯಾದ ರಸ್ತೆ ಇಲ್ಲ, ಬಸ್ ವ್ಯವಸ್ಥೆಯೂ ಇಲ್ಲ, ಸರಕಾರಿ ಶಾಲೆ ಇಲ್ಲ ಎಂದು ಸಮಸ್ಯೆಗಳ ಸುರಿಮಳೆಗೈದರು.

ವ್ಯಕ್ತಿಯೊಬ್ಬರು ಹೊಲಕ್ಕೆ ಹೋಗಲು ಕಾಲುದಾರಿ ಬಿಡುತ್ತಿಲ್ಲ ಎಂಬ ಸಮಸ್ಯೆ ಚರ್ಚೆಗೆ ಬಂತು. ಇದಕ್ಕೆ ಸ್ಪಂದಿಸಿದ ಶಾಸಕರು ನಕಾಶೆಯಲ್ಲಿರುವಂತೆ ಕಾಲುದಾರಿಗೆ ರಸ್ತೆ ಬಿಡಲೇಬೇಕು. ಜನರಿಗೆ ತೊಂದರೆ ಕೊಡಬೇಡಿ, 3 ಅಡಿ ಜಾಗ ಕಾಲುದಾರಿಗೆ ಬಿಟ್ಟುಕೊಡಿ ಎಂದು ಮನವಿ ಮಾಡಿದರು. ಗ್ರಾಮದ ವ್ಯಕ್ತಿ ಇದಕ್ಕೆ ಒಪ್ಪಿಗೆ ಸೂಚಿಸಿದರು. ನಿವೇಶನ ಇಲ್ಲದವರ ಪಟ್ಟಿ ಮಾಡಿ, 4 ಎಕರೆ ಜಾಗ ದಲ್ಲಿ ನಿವೇಶನ ಕೊಡುವಂತೆ ಪಿಡಿಒಗೆ ಶಾಸಕರು ಸೂಚಿಸಿದರು.

ವಿದ್ಯುತ್ ಸಮಸ್ಯೆಯಿದೆ ಎಂದು ಕೆಲ ಮಹಿಳೆಯರು ಅಲವತ್ತುಕೊಂಡರು, ಬೆಸ್ಕಾಂ ಅಧಿಕಾರಿ ಯೊಂದಿಗೆ ಚರ್ಚಿಸಿದ ಶಾಸಕರು, ಸಾಧ್ಯಸಾಧ್ಯತೆಗಳನ್ನು ಜನರಿಗೆ ತಿಳಿಸಿ, ಕೂಡಲೇ ಬಗೆಹರಿಸುವಂತೆ ಸೂಚಿಸಿದರು.
ಸ್ಮಶಾನ ಜಾಗ ನಮಗೆ ಗೊತ್ತೇ ಇಲ್ಲ : ಸ್ಮಶಾನ ಜಾಗ ಎಲ್ಲಿದೆ ಎಂಬುದೇ ನಮಗೆ ಗೊತ್ತಿಲ್ಲ. ನಮ್ಮ ಹೊಲಗಳಲ್ಲೇ ಶವಸಂಸ್ಕಾರ ಮಾಡಿಕೊಳ್ಳುತ್ತಿದ್ದೇವೆ ಎಂದು ಕೊಮ್ಮಲಮರಿ ಗ್ರಾಮಸ್ಥರು ತಿಳಿಸಿ ದರು. ಶಾಸಕರ ಪಕ್ಕದಲ್ಲೇ ಕುಳಿತಿದ್ದ ಕಂದಾಯ ಅಧಿಕಾರಿ, ಎರಡು ದಿನಗಳಲ್ಲಿ ಸ್ಥಳ ಪರಿಶೀಲನೆ ನಡೆಸಿ, ಎರಡು ಎಕರೆ ಸ್ಮಶಾನ ಜಾಗ ಗುರುತಿಸುವುದಾಗಿ ಉತ್ತರಿಸಿದರು.

ಬಳಿಕ ಮೂರನೇ ಗ್ರಾಮವಾದ ದಿನ್ನಹಳ್ಳಿಗೆ ಭೇಟಿ ನೀಡಿದ ಶಾಸಕರು ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಭರವಸೆ ನೀಡಿದರು.ವಯೋವೃದ್ಧ ಮಹಿಳೆಗೆ ಮಾಶಾಸನ ಮಾಡಿಸಿಕೊಡುವ ಭರವಸೆ ನೀಡಿದ ಶಾಸಕರು,ದರಖಾಸ್ತು ಸಮಸ್ಯೆ ಪರಿಹರಿಸಲು ತಹಶೀಲ್ದಾರ್‌ಗೆ ಸೂಚಿಸಿದರು.ಹೀಗೆ ಶಾಸಕ ಪ್ರದೀಪ್ ಈಶ್ವರ್ ಅವರ ವಿನೂತನ ಮಾದರಿಯ  ನಮ್ಮೂರಿಗೆ ನಮ್ಮ ಶಾಸಕರು ಕಾರ್ಯ ಕ್ರಮ ಸಾರ್ಥಕವಾದ ಹೆಜ್ಜೆಗಳನ್ನಿಡುತ್ತಾ ಯಶಸ್ವಿಯಾಗಿ ಮುನ್ನಡೆಯುತ್ತಾ ಜನಪರವಾಗುತ್ತಿದೆ.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಅನಿಲ್ ಕುಮಾರ್, ಇ.ಒ.ಮಂಜುನಾಥ್, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಶೇಷಾದ್ರಿ, ತಾಲೂಕು ಆರೋಗ್ಯಾಧಿಕಾರಿ ಮಂಜುಳ, ಸಮುದಾಯ ಆರೋಗ್ಯಾಧಿ ಕಾರಿ ಶ್ವೇತ, ಕಮ್ಮಗುಟ್ಟಹಳ್ಳಿ ಗ್ರಾಪಂ ಪಿಡಿಒ, ಬೆಸ್ಕಾಂ ಎಇ, ಆಶಾ ಕಾರ್ಯಕರ್ತೆಯರು, ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.