Chikkaballapur News: ತಾಯಿ ಪ್ರೀತಿ, ತ್ಯಾಗ, ಕರುಣೆ ಮತ್ತು ಮೌಲ್ಯಗಳ ಜೀವಂತ ಪ್ರತಿರೂಪ: ದಿಬ್ಬೂರಹಳ್ಳಿ ನಾಗರಾಜ್
ಮಗುವಿನ ವ್ಯಕ್ತಿತ್ವ, ಸಂಸ್ಕಾರ, ಚಿಂತನೆ ಮತ್ತು ಜೀವನ ಮೌಲ್ಯಗಳನ್ನು ರೂಪಿಸುವಲ್ಲಿ ತಾಯಿ ಯ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ತಿಳಿಸಿದರು. ಶಿಕ್ಷಣವೆಂದರೆ ಕೇವಲ ಪುಸ್ತಕ ಜ್ಞಾನವಲ್ಲ, ಉತ್ತಮ ವ್ಯಕ್ತಿತ್ವ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಪ್ರಕ್ರಿಯೆ ಯಾಗಿದೆ. ಆ ಮೌಲ್ಯಗಳ ಅಡಿಪಾಯವನ್ನು ಹಾಕುವವರು ತಾಯಂದಿರೇ ಆಗಿದ್ದಾರೆ
ತಾಯಿ ಎನ್ನುವುದು ಕೇವಲ ಒಂದು ಸಂಬಂಧವಲ್ಲ, ಅದು ಪ್ರೀತಿ, ತ್ಯಾಗ, ಕರುಣೆ ಮತ್ತು ಮೌಲ್ಯಗಳ ಜೀವಂತ ಪ್ರತಿರೂಪವಾಗಿದೆ" ಎಂದು ದಿಬ್ಬೂರಳ್ಳಿ ಕಾಂಗ್ರೆಸ್ ಮುಖಂಡ ನಾಗರಾಜ್ ಹೇಳಿದರು. -
ಚಿಕ್ಕಬಳ್ಳಾಪುರ: ತಾಯಿ ಎನ್ನುವುದು ಕೇವಲ ಒಂದು ಸಂಬಂಧವಲ್ಲ, ಅದು ಪ್ರೀತಿ, ತ್ಯಾಗ, ಕರುಣೆ ಮತ್ತು ಮೌಲ್ಯಗಳ ಜೀವಂತ ಪ್ರತಿರೂಪವಾಗಿದೆ" ಎಂದು ದಿಬ್ಬೂರಳ್ಳಿ ಕಾಂಗ್ರೆಸ್ ಮುಖಂಡ ನಾಗರಾಜ್ ಹೇಳಿದರು.
ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ಮಾತೆಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದ ಸೌಹಾರ್ದತೆ ಮತ್ತು ಕುಟುಂಬದ ಬಲವರ್ಧನೆಗೆ ತಾಯಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಜಚನಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಡಾ.ಶಿವಜೋತಿ ಮಾತನಾಡಿ, ಮಕ್ಕಳ ವ್ಯಕ್ತಿತ್ವ ರೂಪಿಸುವ ಮೊದಲ ಗುರು ತಾಯಿಯೇ ಆಗಿದ್ದು, ಉತ್ತಮ ಸಂಸ್ಕಾರ ಮತ್ತು ಜೀವನ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸುವ ಜವಾಬ್ದಾರಿ ತಾಯಂದಿರ ಮೇಲಿದೆ ಎಂದರು.
ಮಗುವಿನ ವ್ಯಕ್ತಿತ್ವ, ಸಂಸ್ಕಾರ, ಚಿಂತನೆ ಮತ್ತು ಜೀವನ ಮೌಲ್ಯಗಳನ್ನು ರೂಪಿಸುವಲ್ಲಿ ತಾಯಿಯ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ತಿಳಿಸಿದರು. ಶಿಕ್ಷಣವೆಂದರೆ ಕೇವಲ ಪುಸ್ತಕ ಜ್ಞಾನವಲ್ಲ, ಉತ್ತಮ ವ್ಯಕ್ತಿತ್ವ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಪ್ರಕ್ರಿಯೆಯಾಗಿದೆ. ಆ ಮೌಲ್ಯಗಳ ಅಡಿಪಾಯವನ್ನು ಹಾಕುವವರು ತಾಯಂದಿರೇ ಆಗಿದ್ದಾರೆ ಎಂದರು.
ಇಂದಿನ ವೇಗದ ಜೀವನಶೈಲಿಯಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳು, ಪ್ರೀತಿ, ಸಹನೆ ಮತ್ತು ಸಮಾಜದ ಬಗ್ಗೆ ಕಾಳಜಿಯನ್ನು ಬೆಳೆಸುವುದು ಅಗತ್ಯವಾಗಿದೆ. ಮಕ್ಕಳು ಸಾಧನೆಯ ಎತ್ತರಕ್ಕೆ ತಲುಪಬೇಕಾದರೆ ತಾಯಿಯ ಪ್ರೋತ್ಸಾಹ, ಮಾರ್ಗದರ್ಶನ ಮತ್ತು ತ್ಯಾಗ ಬಹಳ ಮುಖ್ಯವಾಗಿದೆ ಎಂದು ಹೇಳಿದರು. ತಾಯಂದಿರ ಪ್ರೀತಿ ಮತ್ತು ಆಶೀರ್ವಾದ ವೇ ಮಕ್ಕಳ ಯಶಸ್ಸಿನ ಬಲವಾದ ಅಡಿಪಾಯವಾಗಿದ್ದು, ಸಮಾಜದ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಸದಾ ಸ್ಮರಣೀಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದಿಬ್ಬೂರಹಳ್ಳಿ ನಾಗರಾಜ್, ಶ್ರೀ ಜಚನಿ ಕಾಲೇಜು ಮಹಾಸಂಸ್ಥಾನದ ಆಡಳಿತಾಧಿಕಾರಿ ಡಾ.ಶಿವಜ್ಯೋತಿ, ಮಾಜಿ ಬ್ಯಾಂಕ್ ಮ್ಯಾನೇಜರ್ ಸುನಿಲ್, ಸತ್ಯ ಸಾಯಿ ಹಾಸ್ಪಿಟಲ್‌ನ ಸೇವಾದಾರಿ ರವಿ , ಗಂಗಾ ಸೂಪರ್ ಮಾರ್ಕೆಟ್ ಮಾಲೀಕರಾದ ಬಿ.ಕೆ.ಶಾಂತಕ್ಕ, ಬ್ರಹ್ಮಾಕುಮಾರೀಸ್ ಚಿಕ್ಕಬಳ್ಳಾಪುರ ಶಾಖೆಯ ಸಂಚಾಲಕರು ಇದ್ದರು.
ಕಾರ್ಯಕ್ರಮದಲ್ಲಿ ಅನೇಕ ಈಶ್ವರೀಯ ಪರಿವಾರದ ಅನುಯಾಯಿಗಳಾದ ಮಾತೆಯರನ್ನು ಸನ್ಮಾನಿಸಿ ಗೌರವಿಸಲಾಯಿತು.