ಚಿಂತಾಮಣಿ: ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳದೆ ಕೇವಲ ಬಾಯಿ ಚಪಲಕ್ಕೆ ಮಾತನಾಡುವವರು, ಸುಳ್ಳು ಹೇಳುವವರ ಬಗ್ಗೆ ಮತದಾರರು ಎಚ್ಚರದಿಂದ ಇರಬೇಕು ಎಂದು ಸಚಿವ ಡಾ.ಎಂ.ಸಿ.ಸುಧಾಕರ್(Dr.M.C.Sudhakar) ಹೇಳಿದರು.
ಕೆಲವರು ಸುಳ್ಳು ಹೇಳುವುದೇ ಒಂದು ರೂಢಿಯಾಗಿದೆ. ನಮ್ಮ ಬದುಕಿನಲ್ಲಿ ಯಾರು ಬದಲಾವಣೆ ತರ್ತಾರೆ,ನಮ್ಮಗೆ ಬೇಕಾದಂತ ಸೌಲಭ್ಯ ಯಾರು ಒದಗಿಸಿಕೊಡ್ತಾರೆ,ಯಾರು ನಮ್ಮ ಮಕ್ಕಳ ಭವಿಷ್ಯ ತ್ ಬಗ್ಗೆ ಚಿಂತನೆ ಮಾಡಿ ಅದಕ್ಕೆ ಬೇಕಾದಂತ ಏನೇನು ಮುಂಜಾಗೃತ ಅಭಿವೃದ್ಧಿ ಕೆಲಸಗಳನ್ನ ತೆಗೆದುಕೊಳ್ತಾರೆ.ಅದನ್ನು ಮತದಾರರು ತಾವೆಲ್ಲ ಅರ್ಥ ಮಾಡಿಕೊಳ್ಳುಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಕಿವಿಮಾತು ಹೇಳಿದರು.
ತಾಲ್ಲೂಕಿನ ಗೋಪಸಂದ್ರ ಗ್ರಾಮದಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಕ್ಷೇತ್ರದ ಗೋಪಸಂದ್ರ ರಸ್ತೆ ಅಭಿವೃದ್ಧಿ,ಕರಿಯಪಲ್ಲಿ ಗ್ರಾಮದಿಂದ ವಿವಿಧ ಕಡೆ ಹಾದು ಹೋಗುವ ರಸ್ತೆ ಅಭಿವೃದ್ಧಿ,ಕಾಗತಿ ಮತ್ತು ದಿಗೂರು ಗ್ರಾಮಗಳ ಅಚ್ಚುಕಟ್ಟಿನಲ್ಲಿರುವ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯದ ೧೦ಲಕ್ಷ ರೂಗಳ ವೆಚ್ಚದ ನಿರ್ಮಾಣ ಕಾಮಗಾರಿಗಳ ಭೂಮಿ ಪೂಜೆ, ತಾಲ್ಲೂಕಿನ ಹಿರಣ್ಯಪಲ್ಲಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ 7 ಲಕ್ಷ ರೂಗಳ ನೂತನ ಗ್ರಂಥಾಲಯದ ಕಟ್ಟಡ ಉದ್ಘಾಟನೆ ಮಾಡಿದ ಸಚಿವರು ಬುಕ್ಕನಹಳ್ಳಿ ಎಸ್.ಸಿ ಕಾಲೋನಿಯಲ್ಲಿ 43 ಲಕ್ಷ ರೂ.ಗಳ ವೆಚ್ಚದ ರಸ್ತೆ ಮತ್ತು ಚರಂಡಿ ಕಾಮಗಾರಿಗಳ ಭೂಮಿಪೂಜೆ ಸಲ್ಲಿಸಿದರು.
ನಗರಕ್ಕೆ ಹೊಂದಿಕೊಂಡಂತೆ ಇರುವ ಗೋಪಸಂದ್ರ, ಮಾರುತಿ ಬಡಾವಣೆ ಮತ್ತು ಕರಿಯಪಲ್ಲಿ ಗ್ರಾಮಗಳಿಗೆ ನಾನು 2008ರಿಂದ 2013ರ ಅವಧಿಯಲ್ಲಿ ಶಾಸಕನಾಗಿದ್ದಂತಹ ಸಂದರ್ಭದಲ್ಲಿ ಒಳ ಚರಂಡಿ ಕಾಮಗಾರಿ ಮಾಡಿಸಿದ್ದು ಇದೀಗ ಹಾಳಾಗಿದ್ದು ಅದನ್ನು ಸರಿಪಡಿಸುವ ಕೆಲಸ ಮಾಡುವು ದಾಗಿ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.
ಬಹಳ ಹಿಂದೆ ಆಗಿರುವ ಈ ರಸ್ತೆ ಈಗಾಗಲೇ ಹಾಳಾಗಿದ್ದು ಒಳಚರಂಡಿ ಸಮಸ್ಯೆಯನ್ನು ಕೂಡ ಜನರು ಹೇಳಿದ್ದಾರೆ. ಈಗಾಗಲೇ ನಾನು ನಗರಸಭೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದ್ದು ಸೋಮ ವಾರ ಅದಕ್ಕೆ ಸಂಬAಧಪಟ್ಟ ಇಲಾಖೆಯವರು ಅವರು ಬಂದು ನೋಡ್ತಾರೆ. ಅದನ್ನ ಯಾವ ರೀತಿ ಪರಿಹಾರ ಮಾಡಬಹುದು ಅನ್ನೋದನ್ನು ಅವರು ತಿಳಿಸಿದ ನಂತರ ಪರಿಹಾರ ದೊರಕಿಸಿ ಕೊಡುವು ದಾಗಿ ಸಚಿವರು ಹೇಳಿದರು.
ನಗರದಲ್ಲಿ ಈಗಾಗಲೇ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ನಗರದ ಪಾಲಿಟೆಕ್ನಿಕ್‌ಗೆ 76 ವರ್ಷ ಆಗಿದೆ. ಸದರಿ ಪಾಲಿಟೆಕ್ನಿಕ್ ಅನ್ನು 76 ಕೋಟಿ ಅನುದಾನದಲ್ಲಿ ಅಭಿವೃದ್ಧಿಯಾಗುತ್ತಿದೆ. ಮಹಿಳಾ ಕಾಲೇಜ್‌ಗೆ 23 ಕೋಟಿ, ಬಾಲಕರ ಕಾಲೇಜ್‌ಗೆ 27 ಕೋಟಿ, ಹೆಚ್ಚುವರಿ 14 ಗುಂಟೆ ಜಮೀನು ಸಹ ಕೊಡಿಸಿ ಅಲ್ಲಿ ಕಟ್ಟಡ ಕಾಮಗಾರಿ ಪ್ರಾರಂಭ ಮಾಡಿರುವು ದಾಗಿ ಸಚಿವರು ಹೇಳಿದ್ದಾರೆ.
ಇಂಜಿನಿಯರಿಂಗ್ ಕಾಲೇಜು ಕಟ್ಟಡವನ್ನು 160 ಕೋಟಿಯಲ್ಲಿ ನಿರ್ಮಾಣವಾಗುತ್ತಿದೆ. ಈಗಾಗಲೇ ಇಂಜನಿಯರ್ ವಿದ್ಯಾರ್ಥಿಗಳು ಮೂರನೇ ಸೆಮಿಸ್ಟರ್ ಪರೀಕ್ಷೆ ಬರೆಯುತ್ತಿದ್ದಾರೆ. ಇಲ್ಲಿ ಎರಡನೇ ವರ್ಷದ ಇಂಜಿನಿಯರಿಂಗ್ ನಡೀತಾಯಿದ್ದು, ನನ್ನ ಇಲಾಖೆಯಲ್ಲಿ 2.5 ವರ್ಷದಲ್ಲಿ ಮಾಡಿದ ಅಭಿವೃದ್ಧಿ ಮತ್ತು ಸಾಧನೆಯ ಬಗ್ಗೆ ನನಗೆ ಖುಷಿ ಇದೆ ಎಂದ ಅವರು ಕೈಗಾರಿಕಾ ಪ್ರದೇಶದ ಭೂ ಸ್ವಾಧೀನ ಪ್ರಕ್ರಿಯೆಗೆ ಈಗಾಗಲೇ 500 ಕೋಟಿ ಕೊಡಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಈರುಳ್ಳಿ ಶಿವಣ್ಣ, ಕೋಚಿಮುಲ್ ಮಾಜಿ ನಿರ್ದೇಶಕ ಊಲವಾಡಿ ಅಶ್ವಥನಾರಾಯಣಬಾಬು, ಊಲವಾಡಿ ಗ್ರಾಮ ಪಂಚಾಯತಿಯ ಅಧ್ಯಕ್ಷ ರತ್ನಮ್ಮ, ಉಪಾಧ್ಯಕ್ಷರಾದ ಕವಿತಾ, ಮುಖಂಡರಾದ ಮಂಜುನಾಥರೆಡ್ಡಿ, ಅಶ್ವಥರೆಡ್ಡಿ, ಗೋಪ ಸಂದ್ರ ಶ್ರೀರಾಮರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಣಿಕಂಠ, ಮಾಡಿಕೆರೆ ಈರಪ್ಪರೆಡ್ಡಿ, ಇಂಜಿನಿಯರ್ ಶ್ರೀಧರ್, ಶ್ರೀನಿವಾಸ ರೆಡ್ಡಿ, ಕರಿಯಪಲ್ಲಿ ಮಾಲಿಕ್ ಪಾಷಾ, ಪುಂಗನೂರ್ ನಾರಾ ಯಣ ಸ್ವಾಮಿ, ಸೈಯದ್ ಏಜಾಜ್, ಅಮ್ಜದ್ ಪಾಷಾ, ಹಾಜಿ ಅನ್ಸರ್ ಖಾನ್, ಲಕ್ಷ್ಮಿ ನಾರಾಯಣ ರೆಡ್ಡಿ, ಕೆ ಎನ್ ಅನಿಲ್ ಕುಮಾರ, ನಂದಿಗಾನಹಳ್ಳಿ ವಿ ಎಸ್ ಎಸ್ ಅಧ್ಯಕ್ಷರಾದ ನರಸಿಂಹಮೂರ್ತಿ, ರಾಜಣ್ಣ, ವೆಂಕಟರಾಮರೆಡ್ಡಿ ಶ್ರೀನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.