MLA Pradeep Eshwar: ಬಿ ಖಾತಾ ಅಭಿಯಾನ ಎರಡನೇ ದಿನವಾದ ಶುಕ್ರವಾರ 871 ಮಂದಿ ಅರ್ಜಿ ಸಲ್ಲಿಕೆ
ಯಾರಿಗಾದರೂ ಆಸ್ತಿ ಮಾರಬೇಕಾದರೆ ನಗರಸಭೆಯಿಂದ ದಾಖಲೆ ಬೇಕೇ ಬೇಕು.ಈ ಬಗ್ಗೆ ಹತ್ತಾರು ವರ್ಷಗಳಿಂದ ನಾಗರೀಕರಿಂದ ಬೇಡಿಕೆಯಿದ್ದ ಕಾರಣ ಸರಕಾರ ಬಿಖಾತಾ ಅಭಿಯಾನ ಆರಂಭಿಸಿದೆ.ಇದರ ಮಹತ್ವ ಅರಿಯದ ನಗರವಾಸಿಗಳು ವದಂತಿ ಗಳಿಗೆ ಕಿವಿಗೊಟ್ಟು ಖಾತೆ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಸುದ್ದಿಯಿದೆ

ಬಿಖಾತಾ ಅಭಿಯನದ ಸ್ಥಳದಲ್ಲಿ ಶಾಸಕ ಪ್ರದೀಪ್ ಈಶ್ವರ್ ಅವರ ಪೋಟೋ..

ಚಿಕ್ಕಬಳ್ಳಾಪುರ: ನಗರದ ನಿವಾಸಿಗಳ ಅನಧಿಕೃತ ಆಸ್ತಿಗಳಿಗೆ ಕಾನೂನಾತ್ಮಕವಾಗಿ ದಾಖಲೆ ಒದಗಿಸುವ ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷೆ ಯೋಜನೆಯಾದ ಬಿ ಖಾತಾ ಅಭಿಯಾ ನದ ಎರಡನೇ ದಿನವಾದ ಶುಕ್ರವಾರ 871 ಮಂದಿ ಮಾತ್ರ ಪೂರ್ಣ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಚಿಕ್ಕಬಳ್ಳಾಪುರ ನಗರದಲ್ಲಿ ಮೊದಲ ದಿನವಾದ ಗುರುವಾರ ಉತ್ತಮ ಸ್ಪಂದನೆ ದೊರೆತಿ ದ್ದರೂ ಎರಡನೇ ದಿನ ಕ್ಷೀಣಿಸಿದೆ. 90 ದಿನಗಳ ಅವಧಿಯಲ್ಲಿ ಕನಿಷ್ಟ 8000 ಖಾತೆಗಳನ್ನಾ ದರೂ ಮಾಡಬೇಕೆಂಬ ಸಂಕಲ್ಪ ಮಾಡಿರುವ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಎರಡು ದಿನದ ಮುಕ್ತಾಯಕ್ಕೆ 1587 ಅರ್ಜಿಗಳಷ್ಟೇ ಸಲ್ಲಿಕೆ ಯಾಗಿರುವುದು ಕೊಂಚ ಸಮಾಧಾನ ತಂದಿದ್ದರೂ ಪೂರ್ಣ ತೃಪ್ತಿಯನ್ನು ತಂದಿಲ್ಲ ಎನ್ನಬಹುದು.
ಇದನ್ನೂ ಓದಿ: Pradeep Eshwar: ನಿಮ್ಮ ಮನೆಬಾಗಿಲಿಗೇ ಖಾತೆ ತಂದು ಕೊಡುವ ಜವಾಬ್ದಾರಿ ನನ್ನದು: ಶಾಸಕ ಪ್ರದೀಪ್ ಈಶ್ವರ್
ಕಾರಣ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿಯೇ ಒಂದು ಮಾಹಿತಿ ಪ್ರಕಾರ 14 ಸಾವಿರಕ್ಕೂ ಹೆಚ್ಚು ನಿವೇಶನ, ಮನೆ, ಆಸ್ತಿಗಳಿಗೆ ಖಾತೆಗಳಿಲ್ಲವಾಗಿದೆ.ಬ್ಯಾಂಕಿನಲ್ಲಿ ಸಾಲ ಪಡೆಯ ಬೇಕಾದರೆ, ಯಾರಿಗಾದರೂ ಆಸ್ತಿ ಮಾರಬೇಕಾದರೆ ನಗರಸಭೆಯಿಂದ ದಾಖಲೆ ಬೇಕೇ ಬೇಕು.ಈಬಗ್ಗೆ ಹತ್ತಾರು ವರ್ಷಗಳಿಂದ ನಾಗರೀಕರಿಂದ ಬೇಡಿಕೆಯಿದ್ದ ಕಾರಣ ಸರಕಾರ ಬಿಖಾತಾ ಅಭಿಯಾನ ಆರಂಭಿಸಿದೆ.ಇದರ ಮಹತ್ವ ಅರಿಯದ ನಗರವಾಸಿಗಳು ವದಂತಿ ಗಳಿಗೆ ಕಿವಿಗೊಟ್ಟು ಖಾತೆ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಸುದ್ದಿಯಿದೆ. ಇದರಿಂದ ಬೇಸರಗೊಂಡಿರುವ ಶಾಸಕ ಪ್ರದೀಪ್ ಈಶ್ವರ್ ನಗರದಲ್ಲಿಯೇ ಬೀಡುಬಿಟ್ಟು ನಗರವಾಸಿಗಳಿಗೆ ಖಾತೆ ಮಾಡಿಸಿಕೊಳ್ಳುವಂತೆ ಮನವೊಲಿಸುತ್ತಿದ್ದಾರೆ. ಶನಿವಾರ ಅರ್ಜಿ ಸ್ವೀಕರಿಸಲು ಕೊನೆಯ ದಿನವಾಗಿದ್ದು ಎಷ್ಟು ಮಂದಿ ಅರ್ಜಿ ಸಲ್ಲಿಸುವರೋ ಕಾದು ನೋಡಬೇಕಿದೆ.
*
ಮೊದಲನೆ ದಿನ ೨೨೮೨ ಅರ್ಜಿಗಳ ಪೈಕಿ ೭೧೬ ಎಲ್ಲಾ ದಾಖಲೆಯುಳ್ಳ ಅರ್ಜಿಗಳನ್ನು ನಗರಸಭೆ ಸಿಬ್ಬಂದಿ ಸ್ವೀಕರಿಸಿದ್ದಾರೆ. ಎರಡನೇ ದಿನ ೧೯೨೦ ಅರ್ಜಿಗಳ ಪೈಕಿ ೮೭೧ ಎಲ್ಲಾ ದಾಖಲೆಯುಳ್ಳ ಅರ್ಜಿಗಳನ್ನು ನಗರಸಭೆ ಸಿಬ್ಬಂದಿ ಸ್ವೀಕರಿಸಿದ್ದಾರೆ.
೧ನೇ ವಾರ್ಡ್-೦೪ ಅರ್ಜಿ,೨ನೇ ವಾರ್ಡ್-೧೦,೩ನೇ ವಾರ್ಡ್-೧೫, ೪-೫೪, ೫-೧೦, ೬-೪೫, ೭-೧೦೨, ೮-೧೩,೯-೦೮, ೧೦-೦೫, ೧೧-೦೪, ೧೨-೧೫, ೧೩-೫೩, ೧೪-೪೫, ೧೫-೬೯, ೧೬-೦೦, ೧೭-೧೩, ೧೮-೨೫, ೧೯-೦೪, ೨೦-೨೧, ೨೧-೯೩, ೨೨-೧೪೫, ೨೩-೦೩, ೨೪-೩೫, ೨೫-೦೨, ೨೬-೦೧, ೨೭-೦೧, ೨೮-೦೧, ೨೯-೧೪, ೩೦-೩೪, ೩೧-೨೭, ಒಟ್ಟು ೧೯೨೦ ಅರ್ಜಿಗಳನ್ನು ವಿತರಣೆ ಮಾಡಿದ್ದು ಈ ಪೈಕಿ -೮೭೧ ಅರ್ಜಿಗಳನ್ನು ದಾಖಲೆ ಸಹಿತ ಪೂರ್ಣಪ್ರಮಾಣದಲ್ಲಿ ನಗರ ಸಭೆ ಸಿಬ್ಬಂದಿ ಸ್ವೀಕರಿಸಿದ್ದಾರೆ.
ಇನ್ನು ಮೂರನೇ ದಿನವಾದ ಶನಿವಾರ ಎಷ್ಟು ಅರ್ಜಿಗಳು ಬರುತ್ತೊ ಗೊತ್ತಿಲ್ಲ. ಫೆ.೨೦ ,೨೧.೨೨ ಮೂರು ದಿನದ ಬಿ ಖಾತಾ ಅಭಿಯಾನದಲ್ಲಿ ಒಟ್ಟು ೩೦೦೦ ಅರ್ಜಿಗಳು ಬರುವ ಲಕ್ಷಣಗಳು ಸಹ ಕಾಣಿಸುತ್ತಿಲ್ಲ. ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ಬಾಕಿಯಿರುವ ಖಾತೆಗಳು ೧೪೬೪೮ ಇವೆ. ಆದರೆ ಮೂರು ದಿನಗಳ ಬಿ ಖಾತಾ ಅಭಿಯಾನದಲ್ಲಿ ಶೇಕಡಾ ೨೦ ರಷ್ಟು ಬಿ ಖಾತಾಗಳು ಆಗುವ ಸಾಧ್ಯತೆಗಳು ಕಡಿಮೆ.
ಒಟ್ಟಿನಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಬಿ ಖಾತಾ ಯೋಜನೆಗೆ ಚಿಕ್ಕಬಳ್ಳಾಪುರ ನಗರದಲ್ಲಿದಲ್ಲಂತೂ ಉತ್ತಮ ಸ್ಪಂದನೆ ಸಿಗುತ್ತಿಲ್ಲ.ಎನ್ನುವುದನ್ನು ಎರಡು ದಿನಗಳ ಅಂಕಿಅಂಶಗಳೇ ಸ್ಪಷ್ಟಪಡಿಸಿವೆ.