ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gubbi News: ಎಸ್ಐಆರ್ ಜಾರಿಗೆ ತಂದ ಬಿಜೆಪಿಯಿಂದಲೇ ವಿರೋಧ..! : ಎಸ್.ಆರ್.ಶ್ರೀನಿವಾಸ್

ಪಶ್ಚಿಮ ಬಂಗಾಳದಲ್ಲಿ ಮಾಡಿದಂತೆ ಬಿಜೆಪಿಗೆ ಬಾರದ ಮತಗಳನ್ನು ಕಿತ್ತು ಹಾಕಲು ನಮ್ಮಲ್ಲಿ ಆಗುತ್ತಿಲ್ಲ ಎಂದು ನೋವು ಪಡುತ್ತಿರುವ ಬಿಜೆಪಿ ಪಕ್ಷದವರು ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವ ಕಾರಣವನ್ನೇ ಮುಂದಿಟ್ಟುಕೊಂಡು ಸಲ್ಲದ ಆರೋಪಕ್ಕೆ ಮುಂದಾಗಿದೆ. ಕಾಂಗ್ರೆಸ್ ಕಾರ್ಯ ಕರ್ತರು ಎಲ್ಲೆಡೆ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ. ಅವರ ಪಕ್ಷದ ಬಿಎಲ್ಎ 2 ಕೆಲಸ ಮಾಡಬೇಕಿದೆ

ಗುಬ್ಬಿ: ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ(SIR) ಕಾರ್ಯಕ್ರಮ ದೇಶದಲ್ಲಿ ಜಾರಿಗೆ ತಂದ ಬಿಜೆಪಿ ಪಕ್ಷ ನಮ್ಮ ರಾಜ್ಯದಲ್ಲಿ ವಿರೋಧ ವ್ಯಕ್ತಪಡಿಸಿರುವುದು ಹಾಸ್ಯಾಸ್ಪದ ಎನಿಸುತ್ತದೆ. ಎಲ್ಲಾ ಪಕ್ಷದಲ್ಲಿ ಬೂತ್ ಮಟ್ಟದ ಏಜೆಂಟ್ ನೇಮಕ ಮಾಡಿ ತರಬೇತಿ ನೀಡಿ ಪರಿಷ್ಕರಣೆ ನಡೆಸಿದ್ದರೂ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್(MLA S R Srinivas) ಹೇಳಿದರು.

ತಾಲ್ಲೂಕಿನ ಕಸಬ ಹೋಬಳಿ ಪತ್ರೆ ಮತ್ತಿಘಟ್ಟ ಹಾಗೂ ಕರೆಕುರಿಹಟ್ಟಿ ಗ್ರಾಮದಲ್ಲಿ ಒಂದು ಕೋಟಿ ರೂಗಳ ಸಿಸಿರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಈಗಾಗಲೇ ಮ್ಯಾಪಿಂಗ್ ಮೂಲಕ ಶೇ.98.07 ರಷ್ಟು ಮತದಾರರು ಅರ್ಹರು ಎನ್ನಲಾಗಿದೆ. ಉಳಿದ ಒಂದು ಪರ್ಸೆಂಟ್ ಮತದಾರರು ತಮ್ಮ ದಾಖಲಾತಿ ನೀಡುತ್ತಾರೆ. ಅಚ್ಚುಕಟ್ಟಾಗಿ ನಡೆದ ಎಸ್ಐಆರ್ ಕಾರ್ಯದಲ್ಲಿ ಗೊಂದಲ ಮೂಡಿಸುವ ಬಿಜೆಪಿಯ ಡೋಂಗಿ ಆಟ ಏನೂ ಎಂದು ತಿಳಿಯಲಾಗುತ್ತಿಲ್ಲ ಎಂದು ಛೇಡಿಸಿದರು.

ಇದನ್ನೂ ಓದಿ: Gubbi News: ರಾಸಾಯನಿಕಯುಕ್ತ ಆಹಾರವೇ ಕ್ಯಾನ್ಸರ್ ಗೆ ಮೂಲ: ಅನುಪಮಾ ಡಿ.

ಪಶ್ಚಿಮ ಬಂಗಾಳದಲ್ಲಿ ಮಾಡಿದಂತೆ ಬಿಜೆಪಿಗೆ ಬಾರದ ಮತಗಳನ್ನು ಕಿತ್ತು ಹಾಕಲು ನಮ್ಮಲ್ಲಿ ಆಗುತ್ತಿಲ್ಲ ಎಂದು ನೋವು ಪಡುತ್ತಿರುವ ಬಿಜೆಪಿ ಪಕ್ಷದವರು ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವ ಕಾರಣವನ್ನೇ ಮುಂದಿಟ್ಟುಕೊಂಡು ಸಲ್ಲದ ಆರೋಪಕ್ಕೆ ಮುಂದಾಗಿದೆ. ಕಾಂಗ್ರೆಸ್ ಕಾರ್ಯ ಕರ್ತರು ಎಲ್ಲೆಡೆ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ. ಅವರ ಪಕ್ಷದ ಬಿಎಲ್ಎ 2 ಕೆಲಸ ಮಾಡಬೇಕಿದೆ ಎಂದರು.

ಕುಮಾರಸ್ವಾಮಿ ಅವರು ಹತ್ತು ಸಾವಿರ ಓಟು ಅನರ್ಹ ಎಂದು ಒಂದು ಕೋಮಿನವರನ್ನು ದೂರು ತ್ತಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಮತ ನೀಡುತ್ತಿದ್ದ ಮುಸ್ಲಿಂ ಬಾಂಧವರು ಈ ಮೊದಲು ಬೇಕಿತ್ತು. ಈಗ ಮತ ಹಾಕಲಿಲ್ಲ ಎಂದು ದೂರುವುದು ಸರಿಯಲ್ಲ ಎಂದ ಅವರು ಶೀಘ್ರದಲ್ಲಿ ನಮ್ಮ ಸರ್ಕಾರ ಸ್ಥಳೀಯ ಚುನಾವಣೆ ನಡೆಸಲಿದೆ. ಮೀಸಲಾತಿ ಮಾತ್ರ ಬಾಕಿ ಇದೆ ಎಂದರು.

ರಾಜ್ಯದಲ್ಲಿ ಮುಂಗಾರು ಮಳೆ ಕೈ ಕೊಟ್ಟಿದೆ. ಕೃಷಿಕರಿಗೆ ಈ ಮಳೆ ಬೇಕಿತ್ತು. ಕುಡಿಯುವ ನೀರಿನ ಸಮಸ್ಯೆ ಸಹ ತಲೆದೋರುತ್ತದೆ. ಬೆಂಗಳೂರಿನಲ್ಲಿ ನೀರು ಪೂರೈಕೆ ಮಾಡುವುದು ಕಷ್ಟವಾಗಲಿದೆ. ನಮ್ಮ ಗುಬ್ಬಿ ತಾಲ್ಲೂಕಿನಲ್ಲಿ 12 ಕಡೆ ಮಾತ್ರ ಸಮಸ್ಯೆ ಕಂಡು ಈಗಾಗಲೇ ಕ್ರಮ ವಹಿಸಿ ಬೋರ್ ವೆಲ್ ಕೊರೆಸಲಾಗಿದೆ. ತಡವಾಗಿ ಮಳೆ ಬರುವ ಸಾಧ್ಯತೆ ಇದೆ. ನಮಗೆ ಹೇಮಾವತಿ ಡ್ಯಾಂ ತುಂಬ ಬೇಕಿದೆ. ಇಲ್ಲವಾದಲ್ಲಿ ಸಮಸ್ಯೆ ಆಗಲಿದೆ. ಹಿಂಗಾರು ಮಳೆ ಸಾಧ್ಯತೆ ಬಗ್ಗೆ ನಿರೀಕ್ಷೆ ಸರ್ಕಾರ ಹೊಂದಿದೆ ಎಂದರು.

ಮುಖಂಡರಾದ ಪತ್ರೆ ದಿನೇಶ್, ಹೇಮಂತ್, ದೇವರಾಜ್, ರವಿ, ಸಿದ್ದರಾಜು, ಪಾಂಡುರಂಗಯ್ಯ, ಭದ್ರಯ್ಯ, ಲಕ್ಕಣ್ಣ, ಲಕ್ಷ್ಮಣ್, ಗೋಪಾಲ್, ಹಿಮಾಮ್ ಸಾಬ್, ಗುತ್ತಿಗೆದಾರರಾದ ಸಂಪ್ರೀತ್, ಶ್ರೀನಿವಾಸ್ ಗೌಡ ಇತರರು ಇದ್ದರು.