ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Poor Quality Helmet: ಚಿಂತಾಮಣಿಯಲ್ಲಿ ಕಳಪೆ ಹೆಲ್ಮೆಟ್ ಮಾರಾಟ: ಹೆಸರಿಗೆ ಹೆಲ್ಮೆಟ್ ಸವಾರರ ಸುರಕ್ಷತೆಗಿಲ್ಲ ಗ್ಯಾರಂಟಿ

ಹೆಲ್ಕೆಟ್‌ಗಾಗಿ ಶೋರೂಮ್, ಅಂಗಡಿಗಳಿಗೆ ಭೇಟಿ ನೀಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ನಗರದ ತಹಸೀಲ್ದಾ‌ರ್ ಕಚೇರಿ,ಬೆಂಗಳೂರು ರಸ್ತೆ,ಚೇಳೂರು ವೃತ್ತ,ಬಾಗೇಪಲ್ಲಿ ಸರ್ಕಲ್ ಸೇರಿದಂತೆ ಬೀದಿ ಬದಿಯಲ್ಲಿ ವ್ಯಾಪಾರಿಗಳು ಹೆಲ್ಮೆಟ್ ಮಾರಾಟ ಮಾಡುತ್ತಿದ್ದು ಮೊದಲ ದಿನ ಯಾವುದೋ ಒಂದು ಹೆಲ್ಮೆಟ್ ಲಭಿಸಿದರೆ ಆನಂತರ ಗುಣಮಟ್ಟದ ಹೆಲ್ಮೆಟ್ ಖರೀದಿ ಮಾಡೋಣ ಎಂದು ಗುಣಮಟ್ಟ ಲೆಕ್ಕಿಸದೆ ಬೀದಿಬದಿ ಹೆಲ್ಮೆಟ್ ಖರೀದಿಸುತ್ತಿದ್ದಾರೆ

ಚಿಂತಾಮಣಿ: ನಗರದ ರಸ್ತೆಬದಿ,ವೃತ್ತಗಳಲ್ಲಿ ಕಳಪೆ ಗುಣಮಟ್ಟದ ಹೆಲೈಟ್‌(Poor Quality Helmet) ಗಳು ಭರ್ಜರಿಯಾಗಿ ಮಾರಾಟ ಮಾಡಲಾಗುತ್ತಿದ್ದು ಹೆಲ್ಮೆಟ್ ದಂಡಕ್ಕೆ ಹೆದರಿ ಬೈಕ್ ಸವಾರರು ಮುಗಿಬಿದ್ದು ಖರೀದಿಸ ತೊಡಗಿದ್ದಾರೆ.

ಜಿಲ್ಲೆಯಾದ್ಯಂತ ಶುಕ್ರವಾರದಿಂದ ಬೈಕ್‌ ಸವಾರ, ಹಿಂಬದಿ ಸವಾರರು ಹೆಲೈಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಒಂದು ವಾರದಿಂದ ನಗರ, ಗ್ರಾಮೀಣದಲ್ಲಿ ಡಿ.12ರಿಂದ ಹೆಲೈಟ್ ಧರಿಸಿ ವಾಹನ ಚಲಾಯಿಸುವಂತೆ ಆಯಾ ಠಾಣಾ ವ್ಯಾಪ್ತಿಯ ಪೊಲೀಸ್‌ ಇಲಾಖೆಯಿಂದ ಪ್ರಚಾರ ನಡೆಸಿದ್ದರಿಂದ ಹೆಲ್ಮೆಟ್ ಬಳಕೆ ಹೆಚ್ಚಾಗಿದೆ. ಪೊಲೀಸರು ನಿಯಮ ಬಿಗಿಗೊಳಿಸಿದ್ದರಿಂದ ಹೆಲೈಟ್ ಧರಿಸಿ ವಾಹನ ಚಲಾಯಿಸುತ್ತಿದ್ದಾರೆ.

ಇದನ್ನೂ ಓದಿ: Compulsary Helmet: ಹೆಲ್ಮೆಟ್‌ ಧರಿಸದ ವಾಹನ ಸವಾರರಿಂದ ದಂಡ ವಸೂಲಿ

ಹೆಲ್ಕೆಟ್‌ಗಾಗಿ ಶೋರೂಮ್, ಅಂಗಡಿಗಳಿಗೆ ಭೇಟಿ ನೀಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ನಗರದ ತಹಸೀಲ್ದಾ‌ರ್ ಕಚೇರಿ,ಬೆಂಗಳೂರು ರಸ್ತೆ,ಚೇಳೂರು ವೃತ್ತ,ಬಾಗೇಪಲ್ಲಿ ಸರ್ಕಲ್ ಸೇರಿದಂತೆ ಬೀದಿ ಬದಿಯಲ್ಲಿ ವ್ಯಾಪಾರಿಗಳು ಹೆಲ್ಮೆಟ್ ಮಾರಾಟ ಮಾಡುತ್ತಿದ್ದು ಮೊದಲ ದಿನ ಯಾವುದೋ ಒಂದು ಹೆಲ್ಮೆಟ್ ಲಭಿಸಿದರೆ ಆನಂತರ ಗುಣಮಟ್ಟದ ಹೆಲ್ಮೆಟ್ ಖರೀದಿ ಮಾಡೋಣ ಎಂದು ಗುಣಮಟ್ಟ ಲೆಕ್ಕಿಸದೆ ಬೀದಿಬದಿ ಹೆಲ್ಮೆಟ್ ಖರೀದಿಸುತ್ತಿದ್ದಾರೆ. ಆದರೆ ಕಳಪೆ, ಅರ್ಧ ಹೆಲ್ಮೆಟ್ ಧರಿಸಿದರೆ ಅಪಘಾತ ಸಂಭವಿಸಿದಾಗ ಪ್ರಾಣ ಹಾನಿಯಾಗುವ ಸಾಧ್ಯತೆಯಿದೆ.

ಕಳಪೆ ಹೆಲ್ಮೆಟ್ ಮಾರಾಟಗಾರರಿಗೆ ಪೊಲೀಸರು, ಸಾರಿಗೆ, ಕಾನೂನು ಮಾಪನಾ ಇಲಾಖೆ ಅಧಿಕಾರಿ ಗಳು ಬಿಸಿ ಮುಟ್ಟಿಸಬೇಕಾಗಿದೆ ಎಂದು ಪ್ರಜ್ಞಾವಂತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.