ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Compulsary Helmet: ಹೆಲ್ಮೆಟ್‌ ಧರಿಸದ ವಾಹನ ಸವಾರರಿಂದ ದಂಡ ವಸೂಲಿ

ಡಿ.12ರಿಂದಲೇ ಹೆಲ್ಮೆಟ್ ಕಡ್ಡಾಯ ಕಾರ್ಯ ರೂಪಕ್ಕೆ ತಂದಿರುವ ಬಾಗೇಪಲ್ಲಿ ಪೊಲೀಸರು, ಹೆಲ್ಮೆಟ್ ಇಲ್ಲದೇ ಬೈಕ್ ಸವಾರಿ ಮಾಡುವರಿಗೆ ಸರಿಯಾಗಿಯೇ ಬುದ್ದಿಕಲಿಸುತ್ತಿದ್ದಾರೆ. ಇದುವರೆಗೆ ಸುಮಾರು 80 ಕ್ಕೂ ಬೈಕ್‌ಗಳನ್ನು ದಂಡ ವಿಧಿಸಿ ಸುಮಾರು 40,000 ಸಾವಿರ ವಸೂಲಿ ಮಾಡಿದ್ದಾರೆ

ಹೆಲ್ಮೆಟ್‌ ಧರಿಸದ ವಾಹನ ಸವಾರರಿಂದ ದಂಡ ವಸೂಲಿ

-

Ashok Nayak
Ashok Nayak Dec 12, 2025 11:00 PM

ಬಾಗೇಪಲ್ಲಿ: ಜಿಲ್ಲೆಯಾದ್ಯಂತ ಡಿ.12 ರಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ ವಾಗಿದ್ದು ಹೆಲ್ಮೆಟ್ ಹಾಕದೆ ವಾಹನ ಚಲಾಯಿಸಿದರೆ ದಂಡ ಖಚಿತ ಎಂದು ಜಿಲ್ಲಾ ಪೊಲೀಸ್‌‍ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. ಅದರಂತೆ ತಾಲ್ಲೂಕು ಕೇಂದ್ರದಲ್ಲಿ ಇಂದು ಬೆಳಗ್ಗೆ ಯಿಂದಲೇ ಪೊಲೀಸರು ಠಾಣೆ ಮುಂದೆ ಕಾರ್ಯಾಚರಣೆಯಲ್ಲಿ ತೊಡಗಿದ್ದು ಹೆಲ್ಮೆಟ್ ಹಾಕಿ ಕೊಂಡು ಬಾರದವರ ಬಗ್ಗೆ ಪೊಲೀಸರು ವಾಹನ ಸವಾರಿಗೆ 500 ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದಾರೆ.

ಆರಕ್ಷಕ ವೃತ್ತ ನಿರೀಕ್ಷಕ ಪ್ರಶಾಂತ್ ವರ್ಣಿ ಮಾತನಾಡಿ ಡಿ.12ರಿಂದಲೇ ಹೆಲ್ಮೆಟ್ ಕಡ್ಡಾಯ ಕಾರ್ಯ ರೂಪಕ್ಕೆ ತಂದಿರುವ ಬಾಗೇಪಲ್ಲಿ ಪೊಲೀಸರು, ಹೆಲ್ಮೆಟ್ ಇಲ್ಲದೇ ಬೈಕ್ ಸವಾರಿ ಮಾಡುವರಿಗೆ ಸರಿಯಾಗಿಯೇ ಬುದ್ದಿಕಲಿಸುತ್ತಿದ್ದಾರೆ. ಇದುವರೆಗೆ ಸುಮಾರು 80 ಕ್ಕೂ ಬೈಕ್‌ಗಳನ್ನು ದಂಡ ವಿಧಿಸಿ ಸುಮಾರು 40,000 ಸಾವಿರ ವಸೂಲಿ ಮಾಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: Helmet Mandatory: ಇನ್ನು ದ್ವಿಚಕ್ರ ವಾಹನಗಳಲ್ಲಿ ಮಕ್ಕಳಿಗೂ ಹೆಲ್ಮೆಟ್‌ ಕಡ್ಡಾಯ, ತಪ್ಪಿದರೆ ದಂಡ

ಸುರಕ್ಷತೆ ದೃಷ್ಟಿಯಿಂದ ಜಾರಿಗೆ ತಂದಿರುವ ಸಂಚಾರ ನಿಯಮಗಳ ಬಗ್ಗೆ ಮಾಹಿತಿ ಹಾಗೂ ತಿಳಿವಳಿಕೆ ಇದ್ದರೂ ಕೂಡ ಸಾರ್ವಜನಿಕರು ಪಾಲಿಸುತ್ತಿಲ್ಲ. ಅಪಘಾತಗಳನ್ನು ತಪ್ಪಿಸಲು ಸವಾರರ ಹಾಗೂ ಚಾಲಕರ ಮನಸ್ಥಿತಿ ಬದಲಾವಣೆಯಾಗಬೇಕು ಎಂದು ಹೇಳಿದರು.

ಬಾಗೇಪಲ್ಲಿ ಪೊಲೀಸ್ ಠಾಣೆ ಸಬ್‌ಇನ್‌ಸ್ಪೆಕ್ಟರ್ ಸುನಿಲ್ ಮಾತನಾಡಿ, ಸಾರ್ವಜನಿಕರ ಜೀವ ರಕ್ಷಣೆ ಸಲುವಾಗಿ ಸರ್ಕಾರ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಿದ್ದು ಸಂಚಾರ ನಿಯಮ ಉಲ್ಲಂಘಿ ಸುವ ವಾಹನ ಸವಾರರಿಗೆ ದಂಡ ವಿಧಿಸಲಾಗುವುದು ಎಂದು ಹೇಳಿದರು.

ಹೆಲ್ಮೆಟ್‌ ಧರಿಸದ ವಾಹನ ಸವಾರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸುವ ಕೆಲಸ ನಿರಂತರ ವಾಗಿರಬೇಕು. ಅದನ್ನು ಬಿಟ್ಟು ಕೇವಲ ಒಂದು ದಿನಕ್ಕೆ ಸೀಮತವಾಗದಿರಲಿ ಎಂಬ ಮಾತುಗಳು ಸಾರ್ವಜನಿಕರಿಂದ ವ್ಯಕ್ತವಾಗುತ್ತಿದವು.

ಈ ಸಂದರ್ಭದಲ್ಲಿ ಪೊಲೀಸರಾದ ಧನಂಜಯ, ಶ್ರೀನಾಥ್, ಮುನಿರತ್ನಂ,ಕೃಷ್ಣಪ್ಪ, ಹರೀಶ್, ಮಧುಸೂದನ್, ವೆಂಕಟಶಿವ ಇನ್ನೂ ಇತರರು ಹಾಜರಿದ್ದರು.