ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chinthamani News: ಅತ್ಯಾಧುನಿಕ ಟೌನ್‌ಶಿಪ್ ಅಭಿವೃದ್ಧಿಗೆ ಸಿದ್ಧತೆ: ಚಿಂತಾಮಣಿ ಹೊರವಲಯದಲ್ಲಿ ಜಾಗ ಪರಿಶೀಲಿಸಿದ ಹಿರಿಯ ಅಧಿಕಾರಿಗಳ ತಂಡ

ನೂತನ ನಗರದಲ್ಲಿ ಯೋಜನಾಬದ್ದ ಬೆಳವಣಿಗೆ ಮತ್ತು ಭವಿಷ್ಯದ ವಸತಿ ಆಶಯ ಈಡೇರಿಸಲು ಈ ಮಹತ್ವಾಕಾಂಕ್ಷಿ ಯೋಜನೆಗೆ ಬಲ ತುಂಬುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಕೋಶದ ಆಯುಕ್ತ ಶಿವಾ ನಂದ ಕಾಪಶಿ ಹಾಗೂ ನಗರ ಯೋಜನಾ ವಿಭಾಗದ ನಿರ್ದೇಶಕ ತಿಪ್ಪೇಸ್ವಾಮಿ ಎನ್.ಕೆ.ನೇತೃತ್ವದ ಉನ್ನತಾಧಿಕಾರಿಗಳ ತಂಡವು ಚಿಂತಾಮಣಿಗೆ ಜಂಟಿ ಭೇಟಿ ನೀಡಿ,ಉನ್ನತ ಮಟ್ಟದ ಸಭೆ ಹಾಗೂ ಸ್ಥಳ ಪರಿಶೀಲನೆ ನಡೆಸಿತು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ವಿಶೇಷ ಕಾಳಜಿ ಹಾಗೂ ದೀರ್ಘದೃಷ್ಟಿಯ ನಿರ್ದೇಶನದಂತೆ ನಗರ ಹೊರವಲಯದಲ್ಲಿ ನೂತನ ಅತ್ಯಾಧುನಿಕ ಟೌನ್‌ಶಿಪ್ ಅಭಿವೃದ್ಧಿಪಡಿಸಲು ಸರ್ಕಾರ ಭರದಿಂದ ಸಿದ್ಧತೆ ನಡೆಸುತ್ತಿದೆ.

ಚಿಂತಾಮಣಿ: ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್(Dr M C Sudhakar) ವಿಶೇಷ ಕಾಳಜಿ ಹಾಗೂ ದೀರ್ಘ ದೃಷ್ಟಿಯ ನಿರ್ದೇಶನದಂತೆ ನಗರ ಹೊರವಲಯದಲ್ಲಿ ನೂತನ ಅತ್ಯಾಧುನಿಕ ಟೌನ್‌ಶಿಪ್ ಅಭಿವೃದ್ಧಿಪಡಿಸಲು ಸರ್ಕಾರ ಭರದಿಂದ ಸಿದ್ಧತೆ ನಡೆಸುತ್ತಿದೆ.

ನೂತನ ನಗರದಲ್ಲಿ ಯೋಜನಾಬದ್ದ ಬೆಳವಣಿಗೆ ಮತ್ತು ಭವಿಷ್ಯದ ವಸತಿ ಆಶಯ ಈಡೇರಿಸಲು ಈ ಮಹತ್ವಾಕಾಂಕ್ಷಿ ಯೋಜನೆಗೆ ಬಲ ತುಂಬುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಕೋಶದ ಆಯುಕ್ತ ಶಿವಾನಂದ ಕಾಪಶಿ ಹಾಗೂ ನಗರ ಯೋಜನಾ ವಿಭಾಗದ ನಿರ್ದೇಶಕ ತಿಪ್ಪೇಸ್ವಾಮಿ ಎನ್.ಕೆ. ನೇತೃತ್ವದ ಉನ್ನತಾಧಿಕಾರಿಗಳ ತಂಡವು ಚಿಂತಾಮಣಿಗೆ ಜಂಟಿ ಭೇಟಿ ನೀಡಿ, ಉನ್ನತ ಮಟ್ಟದ ಸಭೆ ಹಾಗೂ ಸ್ಥಳ ಪರಿಶೀಲನೆ ನಡೆಸಿತು.

ಸಭೆಯ ತರುವಾಯ ಉನ್ನತಾಧಿಕಾರಿಗಳ ದಂಡು ನೇರವಾಗಿ ನೂತನ ಟೌನ್‌ಶಿಪ್ ಅಭಿವೃದ್ಧಿ ಪಡಿಸಲು ಪ್ರಾಥಮಿಕವಾಗಿ ಗುರುತಿಸಲಾಗಿರುವ ನಗರ ಹೊರವಲಯದ ನಿಗದಿತ ಜಮೀನುಗಳಿಗೆ ಭೇಟಿ ನೀಡಿತು. ಸ್ಥಳದಲ್ಲಿ ಭೂಮಿಯ ನೈಸರ್ಗಿಕ ಸ್ವರೂಪ ಉದ್ದೇಶಿತ ರಸ್ತೆ ಸಂಪರ್ಕದ ನಕ್ಷೆ ಹಾಗೂ ಭವಿಷ್ಯದಲ್ಲಿ ನಗರದ ವಿಸ್ತರಣೆಗೆ ಇರುವ ಮುಕ್ತ ಅವಕಾಶಗಳನ್ನು ಹಿರಿಯ ಅಧಿಕಾರಿಗಳು ಕೂಲಂಕಷವಾಗಿ ಅವಲೋಕಿಸಿದರು.

ಇದನ್ನೂ ಓದಿ: Chinthamani News: ನೂತನ ಬಿ ಇ ಓ ರವರಿಗೆ ನಿವೃತ್ತ ನೌಕರರ ಸಂಘದ ವತಿಯಿಂದ ಸನ್ಮಾನ

ಇದೇ ಸಂದರ್ಭದಲ್ಲಿ ಕಂದಾಯ ಮತ್ತು ಸರ್ವೆ ದಾಖಲೆಗಳನ್ನು ತರೆಸಿಕೊಂಡು ಪರಿಶೀಲಿಸಿದ ಅಧಿಕಾರಿಗಳು, ಲಭ್ಯವಿರುವ ಅಂದಾಜು 450 ಎಕರೆ ಸರ್ಕಾರಿ ಪ್ರದೇಶದಲ್ಲಿ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ತಾಂತ್ರಿಕ ಕ್ರಮಗಳು ಹಾಗೂ ಪ್ರಕ್ರಿಯೆಗಳ ಸರಳೀಕರಣದ ಕುರಿತು ಸ್ಥಳದಲ್ಲೇ ಸುದೀರ್ಘ ಸಮಾಲೋಚನೆ ನಡೆಸಿದರು.

ಚಿಂತಾಮಣಿಯ ಭವಿಷ್ಯದ ದಿಕ್ಕೂಚಿಯಾಗಲಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪ್ರಭು ಜಿ,ಉಪವಿಭಾಗಾಧಿಕಾರಿ ಅಶ್ವಿನ್ ಹಾಗೂ ತಹಸೀಲ್ದಾರ್ ಸುದರ್ಶನ್ ಯಾದವ್ ಆಡಳಿತಾ ತ್ಮಕ ಮಾಹಿತಿ ನೀಡಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಾಥ್ ರೆಡ್ಡಿ, ನಿರ್ದೇಶಕ ಸುರೇಶ್, ಮುಖಂಡ ಉಮೇಶ್, ಆರ್ ಎಂ ಜೆ ಶ್ರೀನಿವಾಸ್, ಭೂಮಾಪನಾ ಇಲಾಖೆಯ ಮುಖ್ಯಸ್ಥರು ಹಾಗೂ ವಿವಿಧ ಇಲಾಖೆಗಳ ಪ್ರಮುಖ ಅಧಿಕಾರಿಗಳು ಭಾಗವಹಿಸಿ ಯೋಜನೆಗೆ ಪೂರಕವಾದ ತಾಂತ್ರಿಕ ವಿವರಗಳನ್ನು ಹಂಚಿಕೊಂಡರು.

ಉಸ್ತುವಾರಿ ಸಚಿವರ ವಿಶೇಷ ಆಸಕ್ತಿಯಿಂದಾಗಿ ಈ ಯೋಜನೆಗೆ ಈಗ ತೀವ್ರ ವೇಗ ಸಿಕ್ಕಂತಾಗಿದ್ದು, ತಾಲೂಕಿನ ಸಾರ್ವಜನಿಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.