ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

PM Narendra Modi: ವಿವಾಹ ಜೀವನಕ್ಕೆ ಶುಭ ಹಾರೈಸಿದ ಪ್ರಧಾನಿ ಮೋದಿ; ನಮೋ ಪತ್ರ ನೋಡಿ ಚಿಕ್ಕಬಳ್ಳಾಪುರದ ನವದಂಪತಿ ಫುಲ್‌ ಖುಷ್‌!

ಚಿಕ್ಕಬಳ್ಳಾಪುರ ತಾಲೂಕಿನ ನುಗುತಹಳ್ಳಿಯ ಯುವಕ ಮಂಜುನಾಥ್ ಹಾಗೂ ತೋಕಲಘಟ್ಟದ ಯುವತಿ ವಿದ್ಯಾಶ್ರೀ ಅವರ ವಿವಾಹವು ಕಳೆದ ಮೇ 13 ರಂದು ಚಿಕ್ಕಬಳ್ಳಾಪುರದ ಕಂದವಾರ ಬಾಗಿಲಿನ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದಿತ್ತು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಜೋಡಿಯು ತಮ್ಮ ಮದುವೆಯ ಲಗ್ನ ಪತ್ರಿಕೆಯನ್ನು ಪೋಸ್ಟ್ ಮೂಲಕ ಕಳುಹಿಸಿ ಆಮಂತ್ರಿಸಿತ್ತು.

ಚಿಕ್ಕಬಳ್ಳಾಪುರದ ನವದಂಪತಿಗೆ ಶುಭ ಹಾರೈಸಿದ ಪ್ರಧಾನಿ ಮೋದಿ

-

Prabhakara R
Prabhakara R Jul 7, 2026 4:51 PM

ಚಿಕ್ಕಬಳ್ಳಾಪುರ: ನವಜೋಡಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಕಡೆಯಿಂದ ವಿಶೇಷ ಗಿಫ್ಟ್ ಸಿಕ್ಕಿದೆ. ಬಿಡುವಿಲ್ಲದ ನಡುವೆಯೂ ಪ್ರಧಾನಿಯವರು ಮರೆಯದೇ ನವದಂಪತಿಗೆ ಪತ್ರ ಬರೆದು ಆಶೀರ್ವಾದ ಮಾಡುವ ಮೂಲಕ ನೂತನ ಜೋಡಿಗೆ ಶುಭ ಕೋರಿದ್ದಾರೆ.

ಹೌದು, ಚಿಕ್ಕಬಳ್ಳಾಪುರ ತಾಲೂಕಿನ ನುಗುತಹಳ್ಳಿಯ ಯುವಕ ಮಂಜುನಾಥ್ ಹಾಗೂ ತೋಕಲಘಟ್ಟದ ಯುವತಿ ವಿದ್ಯಾಶ್ರೀ ಅವರ ವಿವಾಹವು ಕಳೆದ ಮೇ 13 ರಂದು ಚಿಕ್ಕಬಳ್ಳಾಪುರದ ಕಂದವಾರ ಬಾಗಿಲಿನ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಗೌರವ ಹಾಗೂ ಅಭಿಮಾನದಿಂದ ಈ ಜೋಡಿಯು ಮದುವೆಗೆ ಮುಂಚಿತವಾಗಿ ತಮ್ಮ ಮದುವೆಯ ಲಗ್ನ ಪತ್ರಿಕೆಯನ್ನು ಪೋಸ್ಟ್ ಮೂಲಕ ನೇರವಾಗಿ ಪ್ರಧಾನಿ ಕಚೇರಿಗೆ ಕಳುಹಿಸಿ ಆಮಂತ್ರಿಸಿತ್ತು.

ವಿಷಯ ಏನೆಂದರೆ, ಮದುವೆ ಮುಗಿದು ದಿನಗಳು ಕಳೆದಿದ್ದರೂ ಪ್ರಧಾನಿ ಕಾರ್ಯಾಲಯವು ಈ ಆಮಂತ್ರಣವನ್ನು ಮರೆತಿರಲಿಲ್ಲ. ಜೂನ್ 29 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಯಿಂದಲೇ ನವದಂಪತಿಗೆ ವಿಶೇಷ ಶುಭಾಶಯದ ಪತ್ರವೊಂದು ಪೋಸ್ಟ್ ಮೂಲಕ ಮನೆಗೆ ತಲುಪಿದೆ. ದೇಶದ ಪ್ರಧಾನಿಯೇ ತಮಗೆ ಶುಭ ಹಾರೈಸಿ ಬರೆದ ಪತ್ರವನ್ನು ನೋಡಿ ಮಂಜುನಾಥ್ ಮತ್ತು ವಿದ್ಯಾಶ್ರೀ ದಂಪತಿ ಹಾಗೂ ಅವರ ಇಡೀ ಕುಟುಂಬದವರು ಸದ್ಯ ಫುಲ್ ಖುಷ್ ಆಗಿದ್ದಾರೆ.

CM DK Shivakumar: ಕಾನೂನು ಚೌಕಟ್ಟಿನಲ್ಲಿ ಬರಗಾಲ ಪರಿಸ್ಥಿತಿ ಪರಾಮರ್ಶೆ, ಬರ ಪರಿಹಾರಕ್ಕೆ ಚಿಂತನೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಪ್ರಧಾನಿ ಮೋದಿ ಅವರು ಕಳುಹಿಸಿದ ಈ ಲೆಟರ್‌ನಲ್ಲಿ, ನವಜೋಡಿಯ ಮುಂದಿನ ವೈವಾಹಿಕ ಜೀವನ ಸುಖಕರವಾಗಿರಲಿ ಮತ್ತು ಅವರ ಸಂಸಾರದಲ್ಲಿ ಸಂತೋಷ, ನೆಮ್ಮದಿ ಸದಾ ಇರಲಿ ಎಂದು ಹೃತ್ಪೂರ್ವಕವಾಗಿ ಹಾರೈಸಲಾಗಿದೆ. ಸಾಮಾನ್ಯ ಹಳ್ಳಿಯ ಯುವಕ-ಯುವತಿಯ ಮದುವೆಗೆ ಪ್ರಧಾನಿಯವರು ಸ್ಪಂದಿಸಿ ಆಶೀರ್ವದಿಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಸದ್ಯ ಪ್ರಧಾನಿಗಳ ಶುಭಾಶಯ ಪತ್ರದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.