ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gauribidanur News: ರಸ್ತೆ ಅಗಲೀಕರಣಕ್ಕೆ ಆಗ್ರಹಿಸಿ ಪ್ರತಿಭಟನೆ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಮಾನದಂಡಗಳನ್ನು ಹಾಗೂ ನಿಯಮಾವಳಿಗಳನ್ನು ಉಲ್ಲಂಘಿಸಿ ಕಟ್ಟಡ ಮಾಲೀಕರ ಆಮಿಷ ಹಾಗೂ ಒತ್ತಡಗಳಿಗೆ ಮಣಿದು ಎಂಬತ್ತು ಅಡಿಗಳ ರಸ್ತೆ ವಿಸ್ತೀರಣಕ್ಕೆ ಮುಂದಾಗಿರುವುದು ನಿಜಕ್ಕೂ ಆಘಾತಕಾರಿ ವಿಚಾರ ಎಂದರು

ರಸ್ತೆ ಅಗಲೀಕರಣಕ್ಕೆ ಆಗ್ರಹಿಸಿ ಪ್ರತಿಭಟನೆ

-

Ashok Nayak
Ashok Nayak Jan 6, 2026 11:40 PM

ಗೌರಿಬಿದನೂರು: ನಗರದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯನ್ನು ಅಭಿವೃದ್ಧಿ ಹಾಗೂ ಆಗಲೀಕರಣವನ್ನು ರಾಷ್ಟ್ರೀಯ ಹೆದ್ದಾರಿಯ ಮಾನದಂಡಗಳನ್ನು ಅನುಸರಿಸಿ, ರಸ್ತೆಯನ್ನು ನೂರು ಅಡಿಗಳಷ್ಟು ಆಗಲೀಕರಣ ಮಾಡಬೇಕೆಂದು ಒತ್ತಾಯಿಸಿ ನಗರದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಮುಖಂಡರು ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ: Gauribidanur News: ಕೆರೆಗಳ ಪುನಶ್ಚತನದಿಂದ ಅಂತರ್ಜಲ ವೃದ್ಧಿ ವೇಣುಗೋಪಾಲ್

ನಗರದ ನಾಗಯ್ಯರೆಡ್ಡಿ ವೃತ್ತದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಅಖಿಲ ಕರ್ನಾಟಕ ರೈತ ಸಂಘ(All Karnataka Farmers' Association) ದ ಸಂಚಾಲಕ ರವಿಚಂದ್ರರೆಡ್ಡಿ ಮಾತನಾಡುತ್ತಾ, ನಗರದ ಮಧುಗಿರಿ ರಸ್ತೆಯ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹಾಗೂ ಅಭಿವೃದ್ಧಿ ಕೆಲಸ ಪ್ರಗತಿಯಲ್ಲಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಮಾನದಂಡಗಳನ್ನು ಹಾಗೂ ನಿಯಮಾವಳಿಗಳನ್ನು ಉಲ್ಲಂಘಿಸಿ ಕಟ್ಟಡ ಮಾಲೀಕರ ಆಮಿಷ ಹಾಗೂ ಒತ್ತಡಗಳಿಗೆ ಮಣಿದು ಎಂಬತ್ತು ಅಡಿಗಳ ರಸ್ತೆ ವಿಸ್ತೀರಣಕ್ಕೆ ಮುಂದಾಗಿರುವುದು ನಿಜಕ್ಕೂ ಆಘಾತಕಾರಿ ವಿಚಾರ ಎಂದರು. 

ಪ್ರತಿಭಟನಾಕಾರರಿಂದ ಆಗ್ರಹ ಪತ್ರವನ್ನು ಸ್ವೀಕರಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಇಇ ರಾಜಾರೆಡ್ಡಿ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸತ್ಯನಾರಾಯಣ ಕರವೇ ಜಿಎಲ್ ಅಶ್ವತ್ಥನಾರಾಯಣ ಉಪಸ್ಥಿತ ರಿದ್ದರು.