Gauribidanur News: ಕೆರೆಗಳ ಪುನಶ್ಚತನದಿಂದ ಅಂತರ್ಜಲ ವೃದ್ಧಿ ವೇಣುಗೋಪಾಲ್
ಕಳೆದ ಆರು ವರ್ಷಗಳಿಂದ ಇದುವರೆಗೂ ತಾಲೂಕಿನಲ್ಲಿ ಸುಮಾರು ಹನ್ನೆರಡು ಕೆರೆಗಳನ್ನು ಪುನಶ್ವೇತನಗೊಳಿಸುವ ಕಾರ್ಯವನ್ಮು ಯಶಸ್ವಿಯಾಗಿ ಮಾಡಿದ್ದು, ಇದರಿಂದಾಗಿ ಅಂತರ್ಜಲ ಮಟ್ಟ ವೃದ್ಧಿಸುವ ಜೊತೆಗೆ ರೈತರ ಕೃಷಿ ಭೂಮಿಗಳಿಗೆ ಫಲವತ್ತಾದ ಕೆರೆ ಯಿಂದ ಹೂಳೆತ್ತದೆ ಮಣ್ಣನ್ನು ಕಾಪಾಡಬೇಕು
-
ಗೌರಿಬಿದನೂರು: ರೈತರ ಜೀವನಾಡಿಗಳಂತಿರುವ ಕೆರೆಗಳನ್ನು ಪುನಶ್ಚೇತನಗೊಳಿಸುವ ಸಂಕಲ್ಪದೊಂದಿಗೆ, ಸ್ಥಳೀಯರಾದ ಕೆಎಎಸ್ ಹಿರಿಯ ಶ್ರೇಣಿ ಅಧಿಕಾರಿ ವರಪ್ರಸಾದ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಅಸ್ತಿತ್ವಕ್ಕೆ ಬಂದ ಗೌರಿಬಿದನೂರು ಸೇವಾ ಪ್ರತಿಷ್ಠಾನ ಸಮರ್ಥವಾಗಿ ಕೆಲಸ ಮಾಡುತ್ತಿದೆ ಎಂದು ಸೇವಾ ಪ್ರತಿಷ್ಠಾನದ ಅಧ್ಯಕ್ಷ ವೇಣುಗೋಪಾಲ್ ತಿಳಿಸಿದರು.
ನಗರದ ನಾಗಪ್ಪ ಬ್ಲಾಕ್ ಸಮೀಪವಿರುವ ಯುರೋ ಕಿಡ್ಸ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಗೌರಿಬಿದನೂರು ಸೇವಾ ಪ್ರತಿಷ್ಠಾನ ಟ್ರಸ್ಟ್ ಕೆರೆಗಳ ಪುನಶ್ವೇತನಕ್ಕಾಗಿ ಸಮುದಾಯದ ಸಹಕಾರ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕಳೆದ ಆರು ವರ್ಷಗಳಿಂದ ಇದುವರೆಗೂ ತಾಲೂಕಿನಲ್ಲಿ ಸುಮಾರು ಹನ್ನೆರಡು ಕೆರೆಗಳನ್ನು ಪುನಶ್ವೇತನಗೊಳಿಸುವ ಕಾರ್ಯವನ್ಮು ಯಶಸ್ವಿಯಾಗಿ ಮಾಡಿದ್ದು, ಇದರಿಂದಾಗಿ ಅಂತರ್ಜಲ ಮಟ್ಟ ವೃದ್ಧಿಸುವ ಜೊತೆಗೆ ರೈತರ ಕೃಷಿ ಭೂಮಿಗಳಿಗೆ ಫಲವತ್ತಾದ ಕೆರೆ ಯಿಂದ ಹೂಳೆತ್ತದೆ ಮಣ್ಣನ್ನು ಕಾಪಾಡಬೇಕು ಎಂದರು.
ಸುಮಾರು ಆರು ವರ್ಷಗಳ ಹಿಂದೆ ಕೆಎಎಸ್ ಅಧಿಕಾರಿ ವರಪ್ರಸಾದ್ ರೆಡ್ಡಿ ಅವರ ಪ್ರೇರಣೆ ಯಿಂದಾಗಿ ಮೊದಲ ಪ್ರಯತ್ನವಾಗಿ ತಾಲ್ಲೂಕಿನ ಧಾರ್ಮಿಕ ಕ್ಷೇತ್ರ ಮುದುಗಾನಕುಂಟೆ ಶ್ರೀ ಕ್ಷೇತ್ರದ ಕೆರೆಯನ್ನು ಆಯ್ಕೆ ಮಾಡಿಕೊಂಡು ಸ್ಥಳೀಯ ಗಂಗಸಂದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರು ಹಾಗೂ ಕೆರೆಕಟ್ಟೆ ಅಚ್ಚುಕಟ್ಟುದಾರರ ಸಹಭಾಗಿತ್ವದಲ್ಲಿ ಸುಮಾರು 85 ದಿನಗಳ ಕಾಲ ನಿರಂತರವಾಗಿ ಕೆರೆಯಲ್ಲಿ ತುಂಬಿದ ಮಣ್ಣನ್ನು ಹೂಳೆತ್ತುವ ಕೆಲಸ ವನ್ನು ಮಾಡಲಾಯಿತು ಎಂದರು.
ಇದರ ಜೊತೆಗೆ ಕೆರೆಗೆ ನೀರುಣ್ಣಿಸುವ ಮುಚ್ಚಿಹೋಗಿದ್ದ ಕೆರೆಯ ಪೋಷಕ ಕಾಲುವೆಗಳನ್ನು ಸರಿಪಡಿಸಲಾಯಿತು. ಇದರ ಪರಿಣಾಮವಾಗಿ, ಸುಮಾರು ಇಪ್ಪತ್ತು ವರ್ಷಗಳ ನಂತರ ಮೊದಲ ಮಳೆಗೆ ಮುದುಗಾನಕುಂಟೆ ಕೆರೆ ತುಂಬಿ ಕೋಡಿ ಹರಿಯಿತು.
ಜೊತೆಗೆ ರೈತರು ಫಲವತ್ತಾದ ಕೆರೆಯ ಮಣ್ಣನ್ನು ತಮ್ಮ ಹೊಲಗಳಿಗೆ ಸೇರಿಸಿದ್ದರಿಂದ ಭೂಮಿ ಫಲವತ್ತಾಗಿ ಉತ್ತಮ ಬೆಳೆಯನ್ನು ರೈತರು ಬೆಳೆದಿದ್ದಾರೆ. ಜೊತೆಗೆ ಹೊಲಗಳು ಫಲವತ್ತಾದ ಕಾರಣ ರೈತರು ಬೆಳೆಗಳಿಗೆ ರಸಗೊಬ್ಬರ ಬಳಕೆಯನ್ನು ಕಡಿಮೆ ಮಾಡಿರು ವುದು ಕಂಡು ಬಂದಿದೆ ಎಂದರು.
ಇದುವರೆಗೂ ತಾಲ್ಲೂಕಿನಲ್ಲಿ ಸೇವಾ ಪ್ರತಿಷ್ಠಾನದ ವತಿಯಿಂದ ಒಟ್ಟು ಹನ್ನೆರಡು ಕೆರೆ ಗಳನ್ನು ಅಭಿವೃದ್ಧಿ ಮಾಡಲಾಗಿದೆ. ಇದರಿಂದಾಗಿ ಸುಮಾರು ನಾಲ್ಕು ನೂರು ಎಕರೆ ಯಷ್ಟು ಕೆರೆಯ ಅಂಗಳದ ಮಣ್ಣನ್ನು ಹೂಳೆತ್ತಲಾಗಿದೆ, ಇದರಿಂದಾಗಿ ಕೆರೆಗಳಲ್ಲಿ ಸುಮಾರು 129 ಕೋಟಿ ಲೀಟರ್ ಹೆಚ್ಚುವರಿ ನೀರನ್ನು ಸಂಗ್ರಹಿಸುವ ಸಾಮಾರ್ಥ್ಯ ಕೆರೆಗಳಿಗೆ ಹೆಚ್ಚಿಸಲಾಗಿದೆ ಎಂದರು.
ಇದರೊಟ್ಟಿಗೆ ಸ್ಥಳೀಯ ರೈತರಿಗೆ ಫಲವತ್ತಾದ ಮಣ್ಣಿನ ರೂಪದಲ್ಲಿ ಸಾವಯವ ಗೊಬ್ಬರ ನೀಡುವ ಮೂಲಕ ಬೆಳೆಗಳ ಇಳುವರಿಗೆ ಸಹಕರಿಸಿದ್ದೇವೆ. ಜೊತೆಗೆ ಕೆರೆಗಳ ಪುನಶ್ಚೇತನ ದಿಂದಾಗಿ ಅಂತರ್ಜಲ ಹೆಚ್ಚಳವಾಗಿ ರೈತರ ಕೊಳವೆ ಬಾವಿಗಳಲ್ಲಿ ನೀರಿನ ಹರಿವು ಹೆಚ್ಚಳ ವಾಗಿದೆ ಎಂದ ಅವರು ಈ ಕಾರ್ಯಕ್ಕೆ ಸರಕಾರದಿಂದ ಯಾವುದೇ ಸಹಾಯ ಪಡೆಯದೆ ಕೇವಲ ಸಂಘ ಸಂಸ್ಥೆಗಳ ಸಹಕಾರದಿಂದ ಮಾಡಿದ್ದೇವೆ. ಪ್ರತಿಷ್ಠಾನದ ಮಾರ್ಗದರ್ಶಕರಾದ ವರಪ್ರಸಾದ್ ರೆಡ್ಡಿ ಅವರ ಸೂಚನೆಯಂತೆ ಈ ವರ್ಷ ತಾಲ್ಲೂಕಿನ ನಗರಗೆರೆ ಹೋಬಳಿಯ ಮೇಳ್ಯ, ಡಿ. ಪಾಳ್ಯ, ಬಂದಾರ್ಲಹಳ್ಳಿ ಕೆರೆಗಳನ್ನು ಅಭಿವೃದ್ಧಿ
ಪಡಿಸಲು ಪ್ರತಿಷ್ಠಾನದ ಪದಾಧಿಕಾರಿಗಳು ನಿರ್ಧರಿ ಸಿದ್ದೇವೆ. ಈ ಸತ್ಕಾರ್ಯಕ್ಕೆ ಸಮುದಾಯ ಮತ್ತು ಸಂಘ ಸಂಸ್ಥೆಗಳಿಂದ ಸಹಕಾರ ನಿರೀಕ್ಷಿಸಿದ್ದು, ಹಂತ ಹಂತವಾಗಿ ಸುಮಾರು ನೂರು ಕೆರೆಗಳ ಅಭಿವೃದ್ಧಿಗೆ ಮುಂದಾಗಿದ್ದೇವೆ ಎಂದರು.
ಸುದ್ದಿಗೋಷ್ಟಿಯಲ್ಲಿ ಪ್ರತಿಷ್ಠಾನದ ಗೌರವಾಧ್ಯಕ್ಷ ಸಂಜೀವ ರೆಡ್ಡಿ, ಉಪಾಧ್ಯಕ್ಷರಾದ ದಯಾನಂದ್, ಶಿವಾರೆಡ್ಡಿ, ಕಾನೂನು ಸಲಹೆಗಾರ ಹರೀಶ್, ಖಜಾಂಚಿ ಉಪೇಂದ್ರ ಗುಪ್ತ, ಸದಸ್ಯರಾದ ನರಸಿಂಹರೆಡ್ಡಿ, ರಾಘವ, ಬ್ರಹ್ಮಶ್ ಭಾಗವಹಿಸಿದ್ದರು.