ಚಿಕ್ಕಬಳ್ಳಾಪುರ, ಅ. 26: ''ಭಾರತ ಸೇರಿದಂತೆ ಜಗತ್ತಿನಾದ್ಯಂತ ಮಕ್ಕಳಿಗೆ ಕೌಶಲ್ಯ ಹಾಗೂ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಿದರೆ ಜಗತ್ತಿನಲ್ಲಿ ದೊಡ್ಡ ಪರಿವರ್ತನೆಯಾಗುತ್ತದೆ'' ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ (Sadhguru Shri Madhusudan Sai) ಹೇಳಿದರು. (Chikkaballapur News) ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಸಾಂಸ್ಕೃತಿಕ ಉತ್ಸವ'ದ 72ನೇ ದಿನವಾದ ಭಾನುವಾರ (ಅಕ್ಟೋಬರ್ 26) ಆಶೀರ್ವಚನ ನೀಡಿದ ಅವರು, ʼʼಉತ್ತಮ ಶಿಕ್ಷಣವನ್ನು ಪಡೆದಾಗ ಮಕ್ಕಳು ನೈತಿಕತೆಯ ಮೂಲಕ ತಮ್ಮದೇ ಆದ ಜೀವನವನ್ನು ನಡೆಸುತ್ತಾರೆ. ಇದು ವ್ಯಕ್ತಿಯನ್ನು ಮಾತ್ರವಲ್ಲದೆ, ಸಮಾಜವನ್ನು ಬದಲಾಯಿಸುತ್ತದೆʼʼ ಎಂದು ನುಡಿದರು.
ʼʼಹೊಸ ಮೌಲ್ಯಗಳು, ಹೊಸ ಸಾಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಇದು ಉತ್ತಮ ಸಮಯ. ಒಂದು ಜಗತ್ತು ಒಂದು ಕುಟುಂಬ ಅಭಿಯಾನದ ಮೂಲಕ ಜಗತ್ತನ್ನು ಒಂದುಗೂಡಿಸಬಹುದು. ಮೊದಲಿಗಿಂತಲೂ ನೆಮ್ಮದಿಯ ತಾಣವಾಗಿಸುವುದು ನಮ್ಮ ಉದ್ದೇಶ. ಇದಕ್ಕೆ ಹೆಚ್ಚಿನ ಸಮಯ ತೆಗೆದುಕೊಳ್ಳುವುದಿಲ್ಲ ಎಂದು ಭಾವಿಸುತ್ತೇನೆ. ಆದರೆ ಇದಕ್ಕೆ ಒಂದೇ ಒಂದು ಕೀಲಿ ಕೈ ಎಂದರೆ ಸರಿಯಾದ ರೀತಿಯಲ್ಲಿ ಮಕ್ಕಳನ್ನು ಬೆಳೆಸುವುದುʼʼ ಎಂದರು.
ಈ ಸುದ್ದಿಯನ್ನೂ ಓದಿ: Sadhguru Shri Madhusudan Sai: ಅತ್ಯಂತ ದುರ್ಬಲ ಸಮುದಾಯಗಳ ಮೇಲೆತ್ತುವುದೇ ನಮ್ಮ ಗುರಿ: ಸದ್ಗುರು ಶ್ರೀ ಮಧುಸೂದನ ಸಾಯಿ

ಪೋರ್ಚುಗಲ್‌ನಲ್ಲಿ ಕಾಸಾ ಡಿ ಸಾಂತಾ ಇಸಾಬೆಲ್ ಸಂಸ್ಥೆ ಮೂಲಕ ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ಹೆಂಡ್ರಿಯನ್ ಸಿಲ್ವಾ ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಮಾನವೀಯ ಪುರಸ್ಕಾರ' ಘೋಷಿಸಲಾಯಿತು. ಸಿಲ್ವಾ ಅವರ ಅನುಪಸ್ಥಿತಿಯಲ್ಲಿ ಕಾರ್ಲೊಸ್ ಕ್ಯಾಂಟೊ ಪ್ರಶಸ್ತಿ ಸ್ವೀಕರಿಸಿದರು.
ʼʼನಮ್ಮ ಮಕ್ಕಳಿಗೆ ಸರಿಯಾದ ಮೌಲ್ಯಗಳನ್ನು ಕಲಿಸಿದಾಗ ಉತ್ತಮ ವ್ಯವಸ್ಥೆಗಳನ್ನು ನಿರ್ಮಿಸಿದಂತಾಗುತ್ತದೆ. ಇಲ್ಲದಿದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ, ಪ್ರಾಥಮಿಕ ಶಾಲೆಯಿಂದ ಉನ್ನತ ಮಟ್ಟದವರೆಗೆ ಭಾರತದಲ್ಲಿ ಸುಮಾರು 25 ಕೋಟಿ ವಿದ್ಯಾರ್ಥಿಗಳಿದ್ದಾರೆ. ಅವರೆಲ್ಲರಿಗೂ ಸರಿಯಾದ ರೀತಿಯ ತಿಳುವಳಿಕೆಯ ಅಗತ್ಯವಿದೆ. ಪ್ರಪಂಚದ ಅನೇಕ ಭಾಗಗಳಲ್ಲಿ ಮೌಲ್ಯಗಳ ಜತೆಗೆ ಸಂಸ್ಕೃತಿಯನ್ನು ಕಲಿಸಬೇಕಿದೆʼʼ ಎಂದು ಹೇಳಿದರು.
ʼʼಮಕ್ಕಳ ಮೇಲೆ ಹೂಡಿಕೆ ಮಾಡಬೇಕು. ಆದರೆ ಅದು ಖರ್ಚು ಅಲ್ಲ, ಭವಿಷ್ಯಕ್ಕಾಗಿ ಹೂಡಿಕೆ ಮಾಡುವುದಾಗಿದೆ. ಮಗುವಿನ ಭವಿಷ್ಯ ಮಾತ್ರವಲ್ಲ, ನಿಮ್ಮ ಸ್ವಂತ ಭವಿಷ್ಯವಾಗಿದೆ. ಏಕೆಂದರೆ ಮಗು ನಿಮ್ಮ ಭವಿಷ್ಯದ ಭಾಗವಾಗಲಿದೆ. ಜಗತ್ತಿನ ಮಕ್ಕಳನ್ನು ನಿಮ್ಮವರಂತೆ ನೋಡಿಕೊಂಡ ನಂತರ ವಿಷಯಗಳು ಬದಲಾಗಲು ಪ್ರಾರಂಭಿಸುತ್ತವೆ. ತಕ್ಷಣವೇ ಅಲ್ಲದಿದ್ದರೂ ಒಂದು ಅಥವಾ ಎರಡು ದಶಕಗಳ ನಂತರ ನೀವು ಇಂದಿನದಕ್ಕಿಂತ ಉತ್ತಮವಾದುದನ್ನು ನೋಡುತ್ತೀರಿ. ಉತ್ತಮ ಭವಿಷ್ಯವನ್ನು ನಿರ್ಮಿಸದಿದ್ದರೆ ಸಾಮರಸ್ಯದ ಸಮಾಜಕ್ಕಿಂತ ಹೆಚ್ಚಾಗಿ ಅಪಾಯಕಾರಿ ದಿನಗಳನ್ನು ಕಾಣಬೇಕಾಗುತ್ತದೆʼʼ ಎಂದು ಎಚ್ಚರಿಸಿದರು.
ಅತಿಥಿ ದೇಶ ಪೋರ್ಚುಗಲ್ ಬಗ್ಗೆ ಮಾತನಾಡಿದ ಸದ್ಗುರು, ʼʼಪೋರ್ಚುಗಲ್ ಭಾರತಕ್ಕೆ ಅಪರಿಚಿತವಲ್ಲ. 15ನೇ ಶತಮಾನದಲ್ಲಿ ವಾಸ್ಕೋಡಿಗಾಮ ನೇತೃತ್ವದಲ್ಲಿ ಪೋರ್ಚುಗೀಸರು ಭಾರತಕ್ಕೆ ಆಗಮಿಸಿದರು. ಉಭಯ ದೇಶಗಳ ಸಂಬಂಧ ಇಂದಿಗೂ ಮುಂದುವರಿದಿದೆ. ನಮ್ಮ ಸಾಂಸ್ಕೃತಿಕ ಸಂಬಂಧಗಳನ್ನು ನೆನಪಿಸುವ ಅನೇಕ ಸ್ಮಾರಕಗಳಿವೆ. ಭಾರತದ ಯಾವುದೇ ಕರಾವಳಿ ಪಟ್ಟಣಗಳಲ್ಲಿ ಪೋರ್ಚುಗೀಸ್ ಶೈಲಿಯ ವರ್ಣರಂಜಿತ ಮನೆಗಳನ್ನು ಕಾಣಬಹುದುʼʼ ಎಂದರು.
ಆರೋಗ್ಯ ಕ್ಷೇತ್ರದಲ್ಲಿ ಬೆಂಬಲ ನೀಡುತ್ತಿರುವ ಆರ್‌ವಿ ಸಮೂಹ ಸಂಸ್ಥೆಗಳಿಗೆ 'ಸಿಎಸ್ಆರ್ ಸರ್ಕಲ್ ಆಫ್ ಹಾನರ್' ಪುರಸ್ಕಾರ ನೀಡಲಾಯಿತು. ಸಂಸ್ಥೆಯ ಪ್ರತಿನಿಧಿ, ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್‌ನ ಅಧ್ಯಕ್ಷ ಎಂ.ಪಿ. ಶ್ಯಾಮ್ ಪ್ರಶಸ್ತಿ ಸ್ವೀಕರಿಸಿದರು. ಪೋರ್ಚುಗಲ್‌ನಲ್ಲಿ ಕಾಸಾ ಡಿ ಸಾಂತಾ ಇಸಾಬೆಲ್ ಸಂಸ್ಥೆ (Casa De Santa Isabel) ಮೂಲಕ ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ಹೆಂಡ್ರಿಯನ್ ಸಿಲ್ವಾ (Hendrien Silva) ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಮಾನವೀಯ' ಪುರಸ್ಕಾರ ಘೋಷಿಸಲಾಯಿತು. ಸಿಲ್ವಾ ಅವರ ಅನುಪಸ್ಥಿತಿಯಲ್ಲಿ ಕಾರ್ಲೊಸ್ ಕ್ಯಾಂಟೊ ಪ್ರಶಸ್ತಿ ಸ್ವೀಕರಿಸಿದರು. ಪೋರ್ಚುಗಲ್ ಪ್ರತಿನಿಧಿ ಅನಾ ಲೂಸಿಯಾ ಸಿಲ್ವಾ ಡಿಕಾಸ್ಟ್ರೊ ತಮ್ಮ ದೇಶದ ಕಲೆ, ಸಂಸ್ಕೃತಿ, ಸಂಗೀತ, ಪ್ರಸಿದ್ಧ ತಾಣಗಳು, ಖಾದ್ಯಗಳು, ಸಾಂಪ್ರದಾಯಿಕ ಉಡುಪು ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಿದರು.