ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಾಲನೆ

ಜಿಲ್ಲೆಯಾದ್ಯಂತ ಇಂದು ಭೂತ್ ಮಟ್ಟದಲ್ಲಿ ಪಲ್ಸ್ ಪೋಲಿಯೋ‌ ಲಸಿಕಾ ಕಾರ್ಯಕ್ರಮವನ್ನು ಹಮ್ಮಿ ಕೊಂಡಿದ್ದು, 24ರವರೆಗೆ ಮನೆ ಮನೆ ಭೇಟಿ ಮೂಲಕ ಲಸಿಕಾಕರಣ ಮಾಡಲಾಗುತ್ತದೆ. ಮೊದಲ ದಿನವಾದ ಇಂದು‌ ವಿವಿಧ ಲಸಿಕಾ ಕೇಂದ್ರಗಳಲ್ಲಿ ಐದು ವರ್ಷದೊಳಗಿನ‌ ಎಲ್ಲಾ ಮಕ್ಕಳಿಗೂ ಪೋಲಿ ಯೋ ಲಸಿಕೆಯನ್ನು ಉಚಿತವಾಗಿ ಹಾಕಲಾಗುತ್ತದೆ.

ಪೋಲಿಯೋ ಹನಿಗಳೆಂದರೆ ಮಕ್ಕಳಲ್ಲಿ ಅಂಗವೈಕಲ್ಯ ತಡೆಯುವ ಜೀವರಕ್ಷಕ ಹನಿಗಳು

-

Ashok Nayak
Ashok Nayak Dec 21, 2025 11:19 PM

ಚಿಕ್ಕಬಳ್ಳಾಪುರ: ಐದು ವರ್ಷದೊಳಗಿನ‌ ಮಕ್ಕಳಿಗೆ ಹಾಕುವ ಎರಡು ಪೋಲಿಯೋ ಲಸಿಕಾ ಹನಿ ಗಳು ಮಕ್ಕಳಲ್ಲಿ ಶಾಶ್ವತ ಅಂಗವೈಕಲ್ಯವನ್ನು ತಡೆಯುವ ಜೀವ ರಕ್ಷಕ ಹನಿಗಳಾಗಿ‌ ಕೆಲಸ ಮಾಡು ತ್ತವೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ತಾಯಿ‌ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಇಂದಿನಿಂದ ನಾಲ್ಕು ದಿನಗಳವರೆಗೆ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲೆಯಾದ್ಯಂತ ಇಂದು ಭೂತ್ ಮಟ್ಟದಲ್ಲಿ ಪಲ್ಸ್ ಪೋಲಿಯೋ‌ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, 24ರವರೆಗೆ ಮನೆ ಮನೆ ಭೇಟಿ ಮೂಲಕ ಲಸಿಕಾಕರಣ ಮಾಡಲಾಗುತ್ತದೆ. ಮೊದಲ ದಿನವಾದ ಇಂದು‌ ವಿವಿಧ ಲಸಿಕಾ ಕೇಂದ್ರಗಳಲ್ಲಿ ಐದು ವರ್ಷದೊಳಗಿನ‌ ಎಲ್ಲಾ ಮಕ್ಕಳಿಗೂ ಪೋಲಿಯೋ ಲಸಿಕೆಯನ್ನು ಉಚಿತವಾಗಿ ಹಾಕಲಾಗುತ್ತದೆ. ಈ ಹಿಂದೆ ಎಷ್ಟೇ ಬಾರಿ ಮಗುವಿಗೆ ಲಸಿಕೆ ಹಾಕಿಸಿದ್ದರೂ ಐದು ವರ್ಷದ ಒಳಗಿನ‌ ಮಗುವಿಗೆ ಈ ಲಸಿಕಾ ಕಾರ್ಯಕ್ರಮದಲ್ಲಿ ತಪ್ಪದೇ ಮತ್ತು ಕಡ್ಡಾಯವಾಗಿ ಎರಡು ಹನಿ ಲಸಿಕೆ ಹಾಕಿಸಬೇಕು.‌

ಇದನ್ನೂ ಓದಿ: Chikkaballapur News: ಮಂಚೇನಹಳ್ಳಿ ಮಾನಸ ಆಸ್ಪತ್ರೆಯಲ್ಲಿ ಉಚಿತ ಕೀಲು, ಎಲುಬು ಸಾಂಧ್ರತೆ ಪರೀಕ್ಷಾ ಶಿಬಿರ

ಜಿಲ್ಲೆಯನ್ನು ಪೋಲಿಯೋ ಮುಕ್ತ ಮಾಡಲು ಎಲ್ಲಾ ಸಾರ್ವಜನಿಕರೂ ಸಹಕರಿಸಬೇಕು. ಮೊದಲ ದಿನವಾದ ಇಂದು ಲಸಿಕಾ ಕೇಂದ್ರಗಳಲ್ಲಿ ಹಾಗೂ ನಾಳೆಯಿಂದ ಮೂರು ದಿನಗಳ ಕಾಲ ಪ್ರತಿ ಮನೆಗೂ ಭೇಟಿ ನೀಡಿ ಲಸಿಕೆ ಹಾಕಲಾಗುತ್ತದೆ‌. ಜಿಲ್ಲೆಯಲ್ಲಿ ಒಟ್ಟು 1,11,212 ಮಕ್ಕಳಿಗೆ ಲಸಿಕೆ ಹಾಕುವ ಗುರಿಹೊಂದಲಾಗಿದ್ದು, ಶೇ‌.100 ಗುರಿ ಸಾಧಿಸುವ ನಿರೀಕ್ಷೆ ಇದೆ. ಮಗುವಿಗೆ ಹಾಕುವ ಎರಡು ಪೋಲಿಯೊ ಹನಿಗಳನ್ನು ಕೇವಲ ಎರಡು ಹನಿಗಳೆಂದು ಭಾವಿಸದೆ ಅವುಗಳನ್ನು ಜೀವರಕ್ಷಕ ಹನಿಗಳೆಂದು ಭಾವಿಸಬೇಕು. ಪೋಷಕರು ಸ್ವಯಂಪ್ರೇರಿತರಾಗಿ ಪೋಲಿಯೋ ಲಸಿಕೆ ಹಾಕಿಸಲು ಮುಂದಾಗಬೇಕು ಎಂದು‌ ಮನವಿ ಮಾಡಿದರು.

ಜಿಲ್ಲಾ ಪಂಚಾಯತ್ ಸಿಇಒ ಡಾ.ವೈ.ನವೀನ್ ಭಟ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಸ್. ಮಹೇಶ್ ಕುಮಾರ್, ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕಿ ಡಾ.ಮಂಜುಳಾ ಹಾಗೂ ತಾಯಿ ಮತ್ತು ಮಕ್ಕಳ ಅಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಎಂ.ರವಿಕುಮಾರ್ ಹಾಜರಿದ್ದು ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದರು.