ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chikkaballapur News: ಮಾ.15ರ ಬಂದ್‌ಗೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಬೆಂಬಲ ಆರ್.ಆಂಜನೇಯರೆಡ್ಡಿ ಘೋಷಣೆ

ಬೆಂಗಳೂರು ತ್ಯಾಜ್ಯ ನೀರನ್ನು ಕೋಲಾರ ಚಿಕ್ಕಬಳ್ಳಾಪುರಕ್ಕೆ ಹರಿಸಲಾಗುತ್ತಿದೆ. ಈ ನೀರನ್ನು ಮೂರನೇ ಹಂತದ ಶುದ್ಧೀಕರಣ ಮಾಡಿಸಿ ಹರಿಸಬೇಕು. ಈ ನೀರಿನ ಬಳಕೆಯಲ್ಲಿರುವ ಜಿಲ್ಲೆಯ ಜನ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಈಗಾಗಲೇ ನಮ್ಮ ತರಕಾರಿ ಬೆಲೆ ಕುಸಿದಿದೆ. ಇದರ ಜತೆಗೆ ಜನತೆ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಆರ್.ಆಂಜನೇಯರೆಡ್ಡಿ ಮಾತನಾಡಿದರು.

ಚಿಕ್ಕಬಳ್ಳಾಪುರ: ಹೆಚ್.ಎನ್ ವ್ಯಾಲಿ(H.N.Valley) 3ನೇ ಹಂತದ ಶುದ್ಧೀಕರಣಕ್ಕೆ ಆಗ್ರಹಿಸಿ ಜನಪರ ಸಂಘಟನೆಗಳು ನಡೆಸುತ್ತಿರುವ ಮಾ.15ರಂದು ನಡೆಸುತ್ತಿರುವ ಚಿಕ್ಕಬಳ್ಳಾಪುರ ಬಂದ್‌ಗೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ತಿಳಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶಾಶ್ವತ ನಿರಾವರಿ ಹೋರಾಟ ಸಮಿತಿಯಿಂದ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಚಿಕ್ಕಬಳ್ಳಾಪುರ ಕೋಲಾರ ಮತ್ತು ಬೆಂಗಳೂರು ಗ್ರಾಮಂತರ ಜಿಲ್ಲೆಗಳ ನೀರಿನ ಮಟ್ಟದ ಪತಾಳಕ್ಕೆ ಇಳಿದು ಹೋಗಿವೆ. ಈ ಭಾಗದ ರೈತರು ಬವಣೆ ನೀಗಿಸಲು ನದಿ ನೀರು ಹರಿಸು ವಂತೆ ಸರ್ಕಾರಕ್ಕೆ ಮನವಿ ಮಾಡಿದರೆ ಅವರು ಬೆಂಗಳೂರಿನ ತ್ಯಾಜ್ಯ ನೀರನ್ನು ಕೆರೆಗಳಿಗೆ ಹರಿಸಿದ್ದಾರೆ. ಆ ನೀರನ್ನಾದರೂ 3ನೆ ಹಂತದ ಶುದ್ಧ ಕಾರಣ ಮಾಡಿ ಹರಿಸಿಲ್ಲ. ಆ ನೀರಿನ ಅಪಾಯದ ಬಗ್ಗೆ ಅಂದೇ ನಾವು ಧ್ವನಿ ಮಾಡಿದ್ದೆವು. ಆದರೆ ನಮ್ಮ ಜೊತೆ ಸೇರಿ ಹೋರಾಟ ಮಾಡಿ ಗೆದ್ದ ಶಾಸಕರೆಲ್ಲ ನಮಗೆ ಮೋಸ ಮಾಡಿದ್ದಾರೆ ಎಂದು ದೂರಿದರು.

ಇದನ್ನೂ ಓದಿ: Chikkaballapur News: ಭಾನುವಾರ ಬಂದ್ ಕರೆ ಸಮಂಜಸವಲ್ಲ, ವ್ಯಾಪಾರಕ್ಕೆ ತೊಂದರೆ, ಬೇರೆ ದಿನದಲ್ಲಿ ಬಂದ್‌ ಮಾಡಿ: ಮಂಜುನಾಥ್ ಆಗ್ರಹ

ಕಳೆದ ಬಜೆಟ್‌ನಲ್ಲಿ ನಮ್ಮ ಜಿಲ್ಲೆಗೆ ಪಂಗನಾಮ ಹಾಕಿರುವ ಸಿಎಂ ಸಿದ್ದರಾಮಯ್ಯ(CM Siddaramaiah)ನವರ ಕಿವಿ ಹಿಂಡಿ ತ್ಯಾಜ್ಯ ನೀರಿನ ಮೂರನೇ ಹಂತದ ಶುದ್ದಿಕರಿಸಿ ನೀರು ಹರಿಸಲು ಒತ್ತಾಯ ಮಾಡಬೇಕಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ(Revenue Minister Krishna Byre Gowda) ತೇಪೆ ಹಚ್ಚಲು ಹೊರಟಿರುವುದು ದುರದೃಷ್ಟಕರ ಎಂದು ದೂರಿದರು.

ಬೆಂಗಳೂರು ತ್ಯಾಜ್ಯ ನೀರನ್ನು ಕೋಲಾರ ಚಿಕ್ಕಬಳ್ಳಾಪುರಕ್ಕೆ ಹರಿಸಲಾಗುತ್ತಿದೆ. ಈ ನೀರನ್ನು ಮೂರನೇ ಹಂತದ ಶುದ್ಧೀಕರಣ ಮಾಡಿಸಿ ಹರಿಸಬೇಕು. ಈ ನೀರಿನ ಬಳಕೆಯಲ್ಲಿರುವ ಜಿಲ್ಲೆಯ ಜನ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಈಗಾಗಲೇ ನಮ್ಮ ತರಕಾರಿ ಬೆಲೆ ಕುಸಿ ದಿದೆ. ಇದರ ಜತೆಗೆ ಜನತೆ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಈ ನೀರಿನ ಕ್ವಾಲಿಟಿ ಬಗ್ಗೆ ಈಗಾಗಲೇ ಅನುಮಾನ ವ್ಯಕ್ತಪಡಿಸಿದ ವಿಜ್ಞಾನಿಗಳು ಜನರ ಅರೋಗ್ಯ ದೃಷ್ಟಿಯಿಂದ ಮೂರನೇ ಹಂತದ ಶುದ್ಧೀಕರಣ ಅಗತ್ಯವಾಗಿ ಬೇಕಾಗಿದೆ ಎಂದು ಹೇಳಿದ್ದಾರೆ. ಇದನ್ನು ಸರಕಾರ ಅರಿಯಬೇಕಿದೆ ಎಂದರು.

ಅವಳಿ  ಜಿಲ್ಲೆಯ ಜನ ನಿಮಗೆ ರಾಜಕೀಯ ಜೀವನ ನೀಡಿದ್ದಾರೆ. ಅವರಿಗೆ ನೀವು ಮೂರನೇ ಹಂತದ ಶುದ್ಧಕರಿಸಿದ ನೀರು ಕೊಡಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡರಿಗೆ ಮನವಿ ಮಾಡಿದ ಅವರು ಜಾಣ ಕುರುಡರಂತೆ ವರ್ತಿಸುವ ನಿಮ್ಮ ಧೋರಣೆ ಬಿಡಿ ಎಂದರು.

2ನೇ ಹಂತದ ಶುದ್ಧೀಕರಣದಿಂದ ಯಾವುದೇ ಅಪಾಯವಿಲ್ಲ ಎನ್ನುವ ಅಪಾಯದ ಹೇಳಿಕೆ ನೀಡುವುದನ್ನು ಕಂದಾಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಬಿಡಬೇಕು. ಕೊಳಚೆ ನೀರಿನಿಂದ ಆಗುತ್ತಿರುವ ಅಪಾಯದ ಬಗ್ಗೆ ಎಚ್ಚರಿಸುತ್ತಿರುವ ವಿಜ್ಞಾನಿಗಳಿಗಿಂತ ನೀವು ದೊಡ್ಡವರಲ್ಲ. ಗಂಭೀರ ಸಮಸ್ಯೆಯನ್ನು ಹಗುರವಾಗಿ ಭಾವಿಸುವುದು ತಪ್ಪು ಎಂದರು.

ಇದೆ ವೇಳೆ ಭಾನುವಾರ ಕರೆದಿರುವ ಚಿಕ್ಕಬಳ್ಳಾಪುರ ಬಂದ್‌ನ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಅವತ್ತಿನ ಬಂದ್‌ಗೆ ನಮ್ಮ ಸಂಘಟನೆ ವತಿಯಿಂದ ಸಂಪೂರ್ಣ ಬೆಂಬಲ ನೀಡುವು ದಾಗಿ ತಿಳಿಸಿದರು.

ಕೋಲಾರ ಜಿಲ್ಲೆಯ ನಿರಾವರಿ ಹೋರಾಟಗಾರ ಹೊಳಲಿ ಪ್ರಕಾಶ್ ಮಾತನಾಡಿ, ಕೋಲಾರ ಕ್ಕೆ ಕೆ.ಸಿ ವ್ಯಾಲಿ ನೀರನ್ನು ಜಿಲ್ಲೆಗೆ ಹರಿಸಿದ ಮಾಜಿ ಸಚಿವ ರಮೇಶ್ ಕುಮಾರ್ ಸಹ ಈಗ ಪಶ್ಚಾತಾಪ ಪಡುತ್ತಿದ್ದಾರೆ. ಆಗ ನಾನು ತಪ್ಪು ಮಾಡಿದೆ. ಮೂರನೇ ಹಂತದ ಶುದ್ದೀಕರಣದ ಆಗಲೇಬೇಕು ಎಂದು ಈಗ ಬಾಯಿ ಬಿಡುತ್ತಿದ್ದಾರೆ. ಕೆಟ್ಟ ಮೇಲೆ ಬುದ್ದಿ ಬರುವುದರ ಬದಲು ಕೆಡುವ ಮೊದಲೇ ಎಚ್ಚರ ವಹಿಸುವುದು ಸೂಕ್ತ. ಈ ನಿಟ್ಟಿನಲ್ಲಿ ಸರಕಾರ ಜಿಲ್ಲಾ ಉಸ್ತುವಾರಿ ಸಚಿವರು, ಕಂದಾಯ ಸಚಿವರು, ಉಪಮುಖ್ಯಮಂತ್ರಿಗಳು ಗಮನ ಹರಿಸಬೇಕು ಎಂದರು

ಸುದ್ದಿಗೊಷ್ಟಿಯಲ್ಲಿ ಕಾಮ್ರೆಡ್ ಲಕ್ಷ್ಮಯ್ಯ, ಸುಷ್ಮಾ ಶ್ರೀನಿವಾಸ್, ರವಿಕುಮಾರ, ರಾಮೇಗೌಡ, ಬಾಗೇಪಲ್ಲಿ ಹರೀನಾಥ ರೆಡ್ಡಿ, ಆನಂದ್, ನಾರಾಯಣಸ್ವಾಮಿ ಮತ್ತಿತರರು ಇದ್ದರು.