ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಆರ್.ಎಲ್.ಜಾಲಪ್ಪ ಜಾತಿಧರ್ಮದ ಅಡ್ಡಗೋಡೆಗಳನ್ನು ಕೆಡವಿದ ಧೀಮಂತ ನಾಯಕ : ಎನ್.ಹೆಚ್.ಶಿವಶಂಕರ್‌ರೆಡ್ಡಿ

ಜಾಲಪ್ಪನವರು ಸಚಿವರಾಗಿದ್ದ ಸಂಧರ್ಭದಲ್ಲಿ ಸಾವಿರಾರು ಮಂದಿ ರೈತರ ತೆರದ ವಿಫಲ ಬಾವಿಗಳ ಸಾಲವನ್ನು ಮನ್ನಾ ಮಾಡಿ ರೈತರ ಸಂಕಷ್ಟಗಳಿಗೆ ನೆರವಾಗಿದ್ದ ಅವರು ನೇರನುಡಿ ನಿಷ್ಠೂರ ರಾಜಕಾರಣಿಯಾಗಿದ್ದರು. ಇಂದಿನ ರಾಜಕಾರಣಿಗಳಂತೆ ಅವರು ರೈಟು, ಲೆಪ್ಟಿಗೆ ಅಂಟಿಕೊಳ್ಳದೆ ಸ್ಟೆçöÊಟ್ ರಾಜಕಾರಣಿಯಾಗಿದ್ದರು

ಆರ್.ಎಲ್.ಜಾಲಪ್ಪ ಜಾತಿಧರ್ಮದ ಅಡ್ಡಗೋಡೆಗಳ ಕೆಡವಿದ ಧೀಮಂತ ನಾಯಕ

-

Ashok Nayak
Ashok Nayak Nov 9, 2025 6:33 PM

ಗೌರಿಬಿದನೂರು : ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ಅಡ್ಡ ಗೋಡೆಗಳು ಇಂದು ಸಮಾಜದಲ್ಲಿ ನಿರ್ಮಾಣವಾಗಿದೆ,ಇಂತಹ ಸಂಧರ್ಭದಲ್ಲಿ ಜಾಲಪ್ಪನವರಲ್ಲಿ ಇದ್ದ ರಾಜಕೀಯ ಇಚ್ಛಾಶಕ್ತಿಯನ್ನು ನಾವುಗಳು ಅನುಸರಿಸಿ ರಾಜಕೀಯವನ್ನು ಸರಿ ಹಾದಿಗೆ ತರಬೇಕಾಗಿದೆ ಎಂದು ಮಾಜಿ ಸಚಿವ ಎನ್.ಹೆಚ್.ಶಿವಶಂಕರರೆಡ್ಡಿ ಮಾರ್ಮಿಕವಾಗಿ ನುಡಿದರು.

ಅವರು ನಗರದ ಡಾ.ಹೆಚ್.ಎನ್. ಕಲಾ ಭವನದಲ್ಲಿ, ಆರ್.ಎಲ್ ಜಾಲಪ್ಪನವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಅವರ ಅಭಿಮಾನಿಗಳು ಏರ್ಪಡಿಸಿದ್ದ, ಸಾಮಾಜಿಕ ನ್ಯಾಯ, ರಾಜಕಾರಣ ಮತ್ತು ಅಭಿವೃದ್ಧಿಯ ಕುರಿತ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಬಡವರಿಗೆ ಮನೆ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಬದ್ದತೆ ಹಾಗೂ ಸಾಮಾಜಿಕ ಕಾಳಜಿಯಿಂದಾಗಿ ಅವರು ದೇವರಾಜ್ ಅರಸ್ ಎಜುಕೇಶನ್ ಟ್ರಸ್ಟ್ ಸ್ಥಾಪಿಸುವ ಮೂಲಕ ಲಕ್ಷಾಂತರ ಮಂದಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಬೆಳಕನ್ನು ನೀಡಿದ್ದಾರೆ.

ಇದನ್ನೂ ಓದಿ: Chikkaballapur News: ವಿದ್ಯೆಯು ವಿನಯ, ಉತ್ತಮ ನಡತೆ ಕೊಡಬೇಕು: ಸದ್ಗುರು ಶ್ರೀ ಮಧುಸೂದನ ಸಾಯಿ

ಜೊತೆಗೆ ಅವರ ಅಧಿಕಾರದ ಅವಧಿಯಲ್ಲಿ ಅವರು ರೈತರಿಗಾಗಿ ಪಿನಾಕಿನಿ ನದಿಗೆ ಅಡ್ಡಲಾಗಿ ಕಿಂಡಿ ಅಣೆಕಟ್ಟೆಯನ್ನು ನಿರ್ಮಿಸಿಕೊಟ್ಟರು,ಇದರಿಂದಾಗಿ ಸುಮಾರು ಏಳು ಕೆರೆಗಳಿಗೆ ಕಿಂಡಿ ಅಣೆಕಟ್ಟೆನಿಂದ ನೀರು ಕಾಲುವೆಗಳ ಮೂಲಕ ಹರಿಯುತ್ತಿದೆ,ಇದರಿಂದಾಗಿ ಕೆರೆಗಳು ತುಂಬಿ ಅಂತರ್ಜಲ ಹೆಚ್ಚಾಗಿ ರೈತರ ಕೊಳವೆಬಾವಿಗಳಲ್ಲಿ ಸಮೃದ್ದಿಯಾಗಿ ನೀರು ಸಿಗುತ್ತಿದೆ ಎಂದ ಅವರು ಜಾಲಪ್ಪನವರ ಜನ್ಮಶತಾಬ್ದಿ ನೆನಪಿನಲ್ಲಿ ಅವರ ಹೆಸರಿನಲ್ಲಿ ಶತಮಾನೋತ್ಸವದ ಭವನವನ್ನು ನಿರ್ಮಿಸಲು ಯೋಜನೆ ಮಾಡುತ್ತಿದ್ದು,ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅವರಿಂದ ಹಣ ಮಂಜೂರು ಮಾಡಿಸಿ ಶೀಘ್ರವಾಗಿ ಭವನವನ್ನು ನಿರ್ಮಿಸಲಾಗುವುದು ಎಂದರು.

ಜಿ.ಪಂ ಮಾಜಿ ಅಧ್ಯಕ್ಷ ಹಾಗೂ ಜಾಲಪ್ಪನವರ ನಿಕಟವರ್ತಿಗಳಲ್ಲಿ ಒಬ್ಬರಾಗಿದ್ದ ಎಚ್ ವಿ.ಮಂಜುನಾಥ್ ಅವರು ಮಾತನಾಡುತ್ತಾ, ಜಾಲಪ್ಪನವರು ಸಾಮಾಜಿಕ ತಳಹದಿಯ ಮೇಲೆ ಅಭಿವೃದ್ಧಿಯ ರಾಜಕೀಯ ನಡೆಸಿದವರು,ಐವತ್ತು ಸಾವಿರ ಒಕ್ಕಲಿಗರ ಪ್ರಾಬಲ್ಯ ವಿದ್ದ ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ವಾಮನಮೂರ್ತಿಯಂತೆ ಬೆಳೆದ ಜಾಲಪ್ಪನವರು ಸದಾಕಾಲವೂ ತಳಮಟ್ಟದ ಸಮಾಜಗಳ ಬಗ್ಗೆ ಚಿಂತಿಸುತ್ತಿದ್ದರು, ವಿಶೇಷವಾಗಿ ಅವರು ಸಹಕಾರ ಸಚಿವರಾಗಿದ್ದ ಸಂಧರ್ಭದಲ್ಲಿ, ರೈತರು ಸಹಕಾರಿ ಬ್ಯಾಂಕುಗಳಲ್ಲಿ ಮಾಡಿದ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಿದ ದೇಶದ ಮೊದಲ ರಾಜಕಾರಣಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ದಿವಂಗತ ಜಾಲಪ್ಪನವರ ಪುತ್ರ ರಾಜೇಂದ್ರ ಅವರು ಮಾತನಾಡಿ, ಜಾಲಪ್ಪನವರು ಸಚಿವರಾಗಿದ್ದ ಸಂಧರ್ಭದಲ್ಲಿ ಸಾವಿರಾರು ಮಂದಿ ರೈತರ ತೆರದ ವಿಫಲ ಬಾವಿಗಳ ಸಾಲವನ್ನು ಮನ್ನಾ ಮಾಡಿ ರೈತರ ಸಂಕಷ್ಟಗಳಿಗೆ ನೆರವಾಗಿದ್ದ ಅವರು ನೇರನುಡಿ ನಿಷ್ಠೂರ ರಾಜಕಾರಣಿಯಾಗಿದ್ದರು. ಇಂದಿನ ರಾಜಕಾರಣಿಗಳಂತೆ ಅವರು ರೈಟು ,ಲೆಪ್ಟಿಗೆ ಅಂಟಿಕೊಳ್ಳದೆ ಸ್ಟೆçöÊಟ್ ರಾಜಕಾರಣಿಯಾಗಿದ್ದರು ಎಂದು ತಿಳಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ದೇವರಾಜ್ ಅರಸ್ ಟ್ರಸ್ಟ್ ಅಧ್ಯಕ್ಷ ಜಿಎಚ್.ನಾಗರಾಜ್ ,ವಕೀಲ ದ್ವಾರಕಾನಾಥ್, ನಗರಸಭೆ ಮಾಜಿ ಅಧ್ಯಕ್ಷೆ ಗೀತಾಜಯಂಧರ್, ಕಾಂಗ್ರೆಸ್ ಪಕ್ಷದ ಜಲ್ಲಾಧ್ಯಕ್ಷ ಕೇಶವರೆಡ್ಡಿ, ನಿವೃತ್ತ ಅಪರ ಜಿಲ್ಲಾಧಿಕಾರಿ ಬಾಬಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ಥನಾರಾಯಣಗೌಡ ಹಾಗೂ ಇನ್ನಿತರರು ಉಪಸ್ಥಿತರಿದ್ದರು.