Sadguru Sri Madhusudan Sai: ಶಿಕ್ಷಣ ವ್ಯವಸ್ಥೆಯಲ್ಲಿ ಪೋಷಕರು ಸಕ್ರಿಯ ಪಾತ್ರ ವಹಿಸಬೇಕು: ಸದ್ಗುರು ಶ್ರೀ ಮಧುಸೂದನ ಸಾಯಿ
Sathya Sai Grama: ಶಿಕ್ಷಣ ವ್ಯವಸ್ಥೆಗೆ ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳೇ ಆಧಾರ ಸ್ತಂಭಗಳು. ಇಲ್ಲಿಯವರೆಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಮಾತ್ರವೇ ಸಂಯೋಜಿಸಲಾಗುತ್ತಿತ್ತು. ನಮ್ಮಲ್ಲಿ ಪೋಷಕರು ಸಹ ಈ ವ್ಯವಸ್ಥೆಯಲ್ಲಿ ಸಕ್ರಿಯ ಪಾತ್ರ ವಹಿಸಬೇಕು ಎನ್ನುವ ಚಿಂತನೆ ಇತ್ತು. ಅದೇ ರೀತಿ ನಮ್ಮ ಶಿಕ್ಷಣ ವ್ಯವಸ್ಥೆ ರೂಪಿಸಿದೆವು ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ತಿಳಿಸಿದ್ದಾರೆ.

-

ಚಿಕ್ಕಬಳ್ಳಾಪುರ: ಸೇವೆಗಾಗಿ ಸತ್ಯ ಸಾಯಿ ಗ್ರಾಮಕ್ಕೆ ಬರುವ ಪೋಷಕರು ತಮ್ಮಲ್ಲಿರುವ ಕೆಟ್ಟ ಅಭ್ಯಾಸಗಳನ್ನು ಬಿಟ್ಟಿರುವ ಸಾಕಷ್ಟು ನಿದರ್ಶನಗಳಿವೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ (Sadguru Sri Madhusudan Sai) ಹೇಳಿದರು. ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ (Sathya Sai Grama) ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ' ದ 64ನೇ ದಿನವಾದ ಶನಿವಾರ ಸದ್ಗುರು ಆಶೀರ್ವಚನ ನೀಡಿದರು.
ವೈದ್ಯಕೀಯ ವಿದ್ಯಾರ್ಥಿಗಳು, ಪ್ಯಾರಾ ಮೆಡಿಕಲ್ ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳ ಪೋಷಕರು ಇಲ್ಲಿಗೆ ಬಂದು ಸೇವೆಯನ್ನು ಮಾಡುವ ಮೂಲಕ ತಮ್ಮ ಸಮಯ ಮತ್ತು ಕೌಶಲ್ಯ ವಿನಿಯೋಗಿಸಬೇಕು ಸಲಹೆ ನೀಡಿದರು.
ಶಿಕ್ಷಣ ವ್ಯವಸ್ಥೆಗೆ ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳೇ ಆಧಾರ ಸ್ತಂಭಗಳು. ಇಲ್ಲಿಯವರೆಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಮಾತ್ರವೇ ಸಂಯೋಜಿಸಲಾಗುತ್ತಿತ್ತು. ನಮ್ಮಲ್ಲಿ ಪೋಷಕರು ಸಹ ಈ ವ್ಯವಸ್ಥೆಯಲ್ಲಿ ಸಕ್ರಿಯ ಪಾತ್ರ ವಹಿಸಬೇಕು ಎನ್ನುವ ಚಿಂತನೆ ಇತ್ತು. ಅದೇ ರೀತಿ ನಮ್ಮ ಶಿಕ್ಷಣ ವ್ಯವಸ್ಥೆ ರೂಪಿಸಿದೆವು ಎಂದು ವಿವರಿಸಿದರು.

ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ಮಕ್ಕಳ ಪೋಷಕರು ಸೇವಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ವ್ಯವಸ್ಥೆಗಾಗಿ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗಿದೆ. ಸೇವೆಯ ಅವಕಾಶಗಳಿಗಾಗಿ ಸ್ಲಾಟ್‌ಗಳನ್ನು ಮಾಡಲಾಗಿದೆ. ಇಲ್ಲಿಗೆ ಬರುವ ಪೋಷಕರ ಪ್ರಯಾಣಕ್ಕಾಗಿ ಮುಂಗಡ ಬುಕಿಂಗ್ ಕೂಡ ಮಾಡಲಾಗುತ್ತದೆ. ಭಕ್ತರಲ್ಲಿಯೂ ಹಲವರಿಗೆ ದೇಣಿಗೆ ನೀಡಲು ಸಾಧ್ಯವಾಗುವುದಿಲ್ಲ. ಅಂಥವರು ಶರೀರ ಶ್ರಮದ ಮೂಲಕ ಸೇವೆ ಸಲ್ಲಿಸಬಹುದು. ಇಲ್ಲಿಗೆ ಬಂದವರಲ್ಲಿ ಕೆಲವರು ಧೂಮಪಾನ, ಮದ್ಯಪಾನದಂತಹ ಕೆಲವು ಕೆಟ್ಟಭ್ಯಾಸಗಳಿಂದ ದೂರ ಇರುವುದಾಗಿ ಹೇಳಿದ್ದಾರೆ ಎಂದು ಅನುಭವ ಹಂಚಿಕೊಂಡರು.
ಅತಿಥಿ ರಾಷ್ಟ್ರ ಜಾಂಬಿಯಾ ಬಗ್ಗೆ ಮಾತನಾಡಿ, ಜಾಂಬಿಯಾದಲ್ಲಿ ಶಿಕ್ಷಣ ಮತ್ತು ಆರೋಗ್ಯವನ್ನು ಉತ್ತೇಜಿಸಲು 'ಒಂದು ಜಗತ್ತು ಒಂದು ಕುಟುಂಬ ಮಿಷನ್' ನಿಂದ ಕೈಲಾದಷ್ಟು ಮಾಡುತ್ತೇವೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | ಸತ್ಯ ಸಾಯಿ ಗ್ರಾಮದ ಹೊಸ ಆಸ್ಪತ್ರೆಯಲ್ಲಿ ಶೀಘ್ರ ಫರ್ಟಿಲಿಟಿ ಕೇಂದ್ರ ಆರಂಭ: ಸದ್ಗುರು ಶ್ರೀ ಮಧುಸೂದನ ಸಾಯಿ
'ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ' ಗೆ ಬೆಂಬಲ ನೀಡುತ್ತಿರುವ 'ರಂಕಾ ಗ್ರೂಪ್' ಗೆ 'ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ' ನೀಡಿ ಗೌರವಿಸಲಾಯಿತು. ರಂಕಾ ಸ್ಟೀಲ್ಸ್ ಕಂಪನಿಯ ನಿರ್ದೇಶಕ ಅಶೋಕ್ ರಂಕಾ ಪ್ರಶಸ್ತಿ ಸ್ವೀಕರಿಸಿದರು. ಎಂಎಸ್ಎನ್ ಸಮೂಹದ ಸಂಸ್ಥಾಪಕ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕ ಮಣ್ಣೆ ಸತ್ಯನಾರಾಯಣ ರೆಡ್ಡಿ ಹಾಗೂ ಮಣಿಪಾಲ್ ಸಮೂಹದ ಕಾರ್ಯನಿರ್ವಾಹಕ ಅಧ್ಯಕ್ಷ ಗೌತಮ್ ಪೈ ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ನಾಯಕತ್ವ' ಪುರಸ್ಕಾರ ನೀಡಿ ಗೌರವಿಸಲಾಯಿತು. ಜಾಂಬಿಯಾ ದೇಶದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಲೇಟ್ ಡಾ ಕೆನ್ನೆತ್ ಡೇವಿಡ್ ಕೌಂಡಾ (Dr Kenneth Kaunda) ಮತ್ತು ಕೌಂಡಾ ಕುಟುಂಬಕ್ಕೆ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಮಾನವೀಯ ಪುರಸ್ಕಾರ' ಘೋಷಿಸಲಾಯಿತು. ಡಾ. ಕೆನ್ನೆತ್ ಅವರ ಮೊಮ್ಮಗ ಮಝುಭಾ ಕೌಂಡಾ ಅವರು ಪ್ರಶಸ್ತಿ ಸ್ವೀಕರಿಸಿದರು. ಜಾಂಬಿಯಾ ದೇಶದ ಪ್ರತಿನಿಧಿ ಕಸಂಬಾ ಸಿಕಾಪಿಜ್ಯೆ (Kasamba Sikapizye) ಅವರು ತಮ್ಮ ದೇಶದ ಮಾಹಿತಿಯನ್ನು ಹಂಚಿಕೊಂಡರು.