ಚಿಕ್ಕಬಳ್ಳಾಪುರ: ನಗರದ ಮದೀನಾ ಶಾದಿ ಮಹಲ್‌ನಲ್ಲಿ ಬಿಜೆಪಿ ಮುಖಂಡ ಹಾಗೂ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ಬಿ ರೆಡ್ಡಿ ಅವರು ರಂಜಾನ್ ಹಬ್ಬದ ಅಂಗವಾಗಿ 1,000 ಬಡ ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಿ ಸಾಮರಸ್ಯ ಮೆರೆದರು.
ಈ ವೇಳೆ ಸಂದೀಪ್ ಬಿ ರೆಡ್ಡಿ ಮಾತನಾಡಿ, ಸಾಮರಸ್ಯವೇ ಭಾರತೀಯರ ಜೀವನ ಕ್ರಮವಾಗಿದೆ.
ಸಂವಿಧಾನಕ್ಕೆ ಬದ್ಧವಾಗಿ ಇಲ್ಲಿನ ಪ್ರಜೆಗಳು ಜಾತಿ-ಧರ್ಮ ಭೇದವಿಲ್ಲದೆ ಪರಸ್ಪರ ಪ್ರೀತಿ ವಿಶ್ವಾಸ ಹಾಗೂ ಸಹಕಾರದಿಂದ ಬದುಕುತ್ತಿದ್ದಾರೆ. ಇವರ ನಡುವೆ ಪ್ರೀತಿಯನ್ನು ಹಂಚೋಣ ಭ್ರಾತೃತ್ವ ಉಳಿಸೋಣ ಎಂದರು.
ಇದನ್ನೂ ಓದಿ: Ugadi-Ramzan Fashion 2026: ಯುಗಾದಿ-ರಂಜಾನ್ ಸೀಸನ್‌ನಲ್ಲಿ ಬ್ಯಾಂಗಲ್ಸ್ ಕಲರವ!
140 ಕೋಟಿಯಷ್ಟು ಬೃಹತ್ ಜನಸಂಖ್ಯೆ ಹೊಂದಿರುವ ದೇಶದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಗಳು ಬಂದರೂ ಅವನ್ನು ಮರೆತು ಮತ್ತೆ ಒಂದಾಗಿ ಸಾಗುವುದು ನಮ್ಮ ಭಾರತೀಯರ ಗುಣ. ನಾವೆಲ್ಲರೂ ಭಾರತೀಯರು ಎಂದು ಹೇಳಿಕೊಳ್ಳುವುದರಲ್ಲಿ ಹೆಮ್ಮೆ ಇದೆ ಎಂದು ಅಭಿಪ್ರಾಯ ಪಟ್ಟರು.
ಎಲ್ಲ ಸಮುದಾಯಗಳ ನಡುವೆ ಪರಸ್ಪರ ಸಹಕಾರ ಮತ್ತು ಪ್ರೀತಿ ಇದ್ದರೆ ಸದೃಢ ಭಾರತ ನಿರ್ಮಾಣ ಸಾಧ್ಯ. ನಾನು ಯಾವುದೇ ತಾರತಮ್ಯ ನೀತಿಯನ್ನು ಅನುಸರಿಸುವುದಿಲ್ಲ. ಎಲ್ಲಾ ಧರ್ಮದವರಿಗೂ ಅಗತ್ಯವಿರುವ ಸಹಾಯ ಮಾಡುತ್ತೇನೆ. ವಿವಿಧ ಜಾತಿ, ಧರ್ಮ, ಭಾಷೆಗಳ ನಡುವೆ ದೇಶ ಮೊದಲು ಎನ್ನುವ ಭಾವನೆ ಎಲ್ಲರಲ್ಲೂ ಇದೆ. ಸಾಮರಸ್ಯ ಕಾಪಾಡೋಣ ಚಿಕ್ಕಬಳ್ಳಾಪುರವನ್ನು ಶಾಂತಿಯ ತೋಟವಾಗಿಸೋಣ ಎಂದು ಕರೆ ನೀಡಿದರು.
ಮುಖಂಡರಾದ ಇಸ್ಮಾಯಿಲ್, ಅಮ್ಜದ್, ನಯಾಜ್, ಹಿದಾಯತ್, ಮೌಲ, ಸಾಧಿಕ್, ಅಸ್ಲಂ, ಇಮ್ತಿಯಾಜ್, ಮುಬಾರಕ್ ಇದ್ದರು.