ಬನ್ನಿಕುಪ್ಪೆ ಗ್ರಾಮಕ್ಕೆ ಆಪದ್ಭಾಂದವನಾಗಿ ಶುದ್ದ ಕುಡಿಯುವ ನೀರು ಒದಗಿಸಿ ಮಾತು ಉಳಿಸಿಕೊಂಡ ಸಂದೀಪ್‌ರೆಡ್ಡಿ
ನಗರಕ್ಕೆ ಹೊಂದಿಕೊಂಡಂತಿರುವ ಬನ್ನಿಕುಪ್ಪೆ ಗ್ರಾಮಸ್ಥರು ಶುದ್ಧ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದ ಪಡಿಪಾಟಲನ್ನು ಮಾಧ್ಯಮಗಳ ಮೂಲಕ ತಿಳಿದು ಮರುಗಿದ್ದ ಸಮಾಜ ಸೇವಕ ಸಂದೀಪ್‌ರೆಡ್ಡಿ, ಯುಗಾದಿ ಹಬ್ಬದ ದಿನವೇ ಈ ಗ್ರಾಮಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅಶ್ವತ್ಥಕಟ್ಟೆ ಮೇಲೆ ಕುಳಿತು ಗ್ರಾಮಸ್ಥರ ಸಮ್ಮುಖದಲ್ಲಿ ಸಭೆ ನಡೆಸಿದ್ದರಲ್ಲದೆ ಶುದ್ಧ ಕುಡಿಯುವ ನೀರು ಒದಗಿಸುವುದಾಗಿ ಮಾತು ಕೊಟ್ಟಿದ್ದರು.
ಬನ್ನಿಕುಪ್ಪೆ ಗ್ರಾಮದ ಜನತೆಗೆ ಶುದ್ಧಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಒದಗಿಸಿ ಕೊಟ್ಟ ಮಾತು ಉಳಿಸಿಕೊಂಡ ಸಂದೀಪ್‌ರೆಡ್ಡಿ ಅವರ ನೆರವಿನ ನೋಟ... -
ಚಿಕ್ಕಬಳ್ಳಾಪುರ: ಬನ್ನಿಕುಪ್ಪೆ ಗ್ರಾಮಕ್ಕೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ವ್ಯವಸ್ಥೆ ಮಾಡುವ ಮೂಲಕ ಯುಗಾದಿ ಹಬ್ಬದ ದಿನ ಕೊಟ್ಟ ಮಾತನ್ನು ಉಳಿಸಿಕೊಂಡ ಕೀರ್ತಿಗೆ ಭಗತ್‌ಸಿಂಗ್ ಚಾರಿಟೇಬಲ್ ಟ್ರಸ್ಟ್(Bhagat Singh Charitable Trust ಅಧ್ಯಕ್ಷ ಸಂದೀಪ್‌ರೆಡ್ಡಿ ಭಾಜನರಾಗಿದ್ದಾರೆ. ಶುದ್ಧ ಕುಡಿಯುವ ನೀರು ಒದಗಿಸಲು ಮುಂದಾಗಿರುವ ಇವರನ್ನು ಗ್ರಾಮಸ್ಥರು ಮನದುಂಬಿ ಹಾರೈಸಿದ್ದಾರೆ.
ಏನಿದು ಕೊಟ್ಟ ಮಾತು!!!!
ನಗರಕ್ಕೆ ಹೊಂದಿಕೊಂಡಂತಿರುವ ಬನ್ನಿಕುಪ್ಪೆ ಗ್ರಾಮಸ್ಥರು ಶುದ್ಧ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದ ಪಡಿಪಾಟಲನ್ನು ಮಾಧ್ಯಮಗಳ ಮೂಲಕ ತಿಳಿದು ಮರುಗಿದ್ದ ಸಮಾಜ ಸೇವಕ ಸಂದೀಪ್‌ರೆಡ್ಡಿ, ಯುಗಾದಿ ಹಬ್ಬದ ದಿನವೇ ಈ ಗ್ರಾಮಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅಶ್ವತ್ಥಕಟ್ಟೆ ಮೇಲೆ ಕುಳಿತು ಗ್ರಾಮಸ್ಥರ ಸಮ್ಮುಖದಲ್ಲಿ ಸಭೆ ನಡೆಸಿದ್ದರಲ್ಲದೆ ಶುದ್ಧ ಕುಡಿಯುವ ನೀರು ಒದಗಿಸುವುದಾಗಿ ಮಾತು ಕೊಟ್ಟಿದ್ದರು. ಈ ಮಾತನ್ನು ಹಬ್ಬ ಮುಗಿದು ವಾರಕಳೆಯುವ ಮೊದಲೇ ಸೋಮವಾರ ಈಡೇರಿಸಿ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ.
ಭರವಸೆಯೇ ಬೆಳಕು!!
ಹೌದು ರಾಜಕಾರಣಿಯಾಗಿ ಪ್ರತಿಷ್ಠಾಪನೆಗೊಳ್ಳುವ ಏಕೈಕ ಉದ್ದೇಶವಿಟ್ಟುಕೊಂಡು ಸಮಾಜ ಸೇವೆಯ ವೇಷ ಧರಿಸಿ ಕ್ಷೇತ್ರಗಳಿಗೆ ಬರುವವರಿಗೇನೂ ಕೊರತೆಯಿಲ್ಲ. ಆದರೆ ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಇನ್ನೂ ಚುನಾವಣೆ ದೂರವಿದೆ. ಆದರೂ ಚುನಾವಣೆ ಬಗ್ಗೆ ತಲೆಕೆಡಿಸಿಕೊಳ್ಳದೆ, ಸ್ಥಾನಮಾನಗಳಿಗೆ ಒತ್ತು ನೀಡದೆ, ಬಡವರ ಸೇವೆಯೇ ಭಗವಂತನ ಸೇವೆ ಎಂದು ನಂಬಿದವರೊಬ್ಬರಿದ್ದಾರೆ. ಹಬ್ಬ ಹರಿದಿನ ಎನ್ನದೆ,ವಾರ ತಿಥಿ ನೋಡದೆ ಅಕ್ಷರಶ: ನೊಂದವರ ಸೇವೆಗೆ ಟೊಂಕ ಕಟ್ಟಿ ನಿಂತಿದ್ದಾರೆ.
ಸ್ವಂತ ದುಡಿಮೆಯಿಂದ ಬಂದ ಲಾಭದಲ್ಲಿ ನಿರಂತರವಾಗಿ ಜನಸೇವೆ ಮಾಡುತ್ತಿದ್ದಾರೆ. ಸೂರಿಲ್ಲದವರಿಗೆ ಸೂರು ಒದಗಿಸಿ,ಓದುವ ಮಕ್ಕಳಿಗೆ ಅನ್ನದಾನ ನೀಡಿ, ಆರೋಗ್ಯ ಸಮಸ್ಯೆ ಯೆಂದು ಬಮದವರಿಗೆ ಚಿಕಿತ್ಸೆ ಜತೆಗೆ ಔಷದೋಪಚಾರಕ್ಕೆ ಆರ್ಥಿಕ ನೆರವು, ಸಾವಿರಾರು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮದ್ಯಾಹ್ನದ ನಿತ್ಯವೂ ಊಟದ ವ್ಯವಸ್ಥೆ, ದೇವಾಲಯ ನಿರ್ಮಾಣ, ಮಧುವೆ, ಮುಂಜಿ, ಹಬ್ಬ ಹರಿದಿನ ಹೀಗೆ ತಮ್ಮ ಬಳಿ ಸಹಾಯ ಕೇಳಿ ಬರುವವ ರಿಗೆ, ತಮ್ಮನ್ನೆ ನಂಬಿ ಬಂದವರಿಗೆ ಊರುಗೋಲಾಗಿ ನಿಂತು, ನೆರವು ಎಂಬ ಬೆಳಕು ಚೆಲ್ಲುತ್ತಿರುವ ಯುವಶಕ್ತಿಯ ಕಣ್ಮಣಿಯೇ ಈ ಸಂದೀಪ್‌ರೆಡ್ಡಿ ಎಂಬ ಯುವ ನಾಯಕ.
ನೀರಸೇವೆಗೆ ಜನತೆ ಖುಷ್!!
ಭರವಸೆ ನೀಡಿ ಮರೆತುಹೋಗುವ ಅನುಕೂಲಸಿಂಧು ಜನಪ್ರತಿನಿಧಿಗಳ ನಡುವೆ ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್‌ರೆಡ್ಡಿ ಭಿನ್ನವಾಗಿ ನಿಲ್ಲುತ್ತಾರೆ. ಹೌದು ಬನ್ನಿಕುಪ್ಪೆ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ನೀಗಿಸಿ ಗ್ರಾಮಸ್ಥರ ಪಾಲಿಗೆ ಆಧುನಿಕ ಭಗೀರಥ ಎನಿಸಿಕೊಂಡಿದ್ದಾರೆ.ತಾತ್ಕಾಲಿಕ ವ್ಯವಸ್ಥೆ ಮೂಲಕ ಶುದ್ದ ಕುಡಿಯುವ ನೀರು ಒದಗಿಸುವ ಮಹತ್ಕಾರ್ಯಕ್ಕೆ ಮುಂದಾಗಿರುವ ಇವರು ಭವಿಷ್ಯದಲ್ಲಿ ಗ್ರಾಮಸ್ಥರ ಜತೆಗೂಡಿ ಶಾಶ್ವತವಾದ ಶುದ್ಧಕುಡಿಯುವ ನೀರಿನ ವ್ಯವಸ್ಥೆ ಮಾಡಲು ಯೋಜನೆ ರೂಪಿಸಿದ್ದಾರೆ ಎಂಬುದು ಸಂದೀಪ್‌ರೆಡ್ಡಿ ಆಪ್ತರ ಮಾತಾಗಿದ್ದು ಜನತೆ ಫುಲ್ ಖುಷಿಯಾಗಿದ್ದಾರೆ.
ಏನೇ ಆಗಲಿ ಜನತೆಯ ಸೇವೆಗೆ ಸದಾ ಸಿದ್ಧವಿರುವ ಇಂತಹವರ ಸಂಖ್ಯೆ ಸಾಸಿರವಾಗಲಿ. ಹಳ್ಳಿ ಗ್ರಾಮ ನಗರ ಪಟ್ಟಣವೆನ್ನದೆ, ಪ್ರತಿಫಲಾಪೇಕ್ಷೆಯಿಲ್ಲದೆ ಸಮಾಜ ಸೇವೆಯಲ್ಲಿಯೇ ಸಾರ್ಥಕತೆ ಕಂಡಿರುವ ಸಂದೀಪ್‌ರೆಡ್ಡಿ ತರದ ಸಮಾಜ ಸೇವಕರ ಸೇವೆ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ನಿರಂತರವಾಗಿ ದೊರೆಯಲಿ.ಇನ್ನೂ ಹೆಚ್ಚಿನ ಮಂದಿಗೆ ಸಮಾಜ ಸೇವೆ ಮಾಡುವ ಶಕ್ತಿಯನ್ನು ಭಗವಂತ ಇವರಿಗೆ ಕರುಣಿಸಲಿ ಎನ್ನುವುದು ಪತ್ರಿಕೆಯ ಕಳಕಳಿಯಾಗಿದೆ.