ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Seakal Ramachandra Gowda: ಆತ್ಮನಿರ್ಭರ ಭಾರತ ಅಭಿಯಾನ ಜನಜಾಗೃತಿ ಮೂಡಿಸ ಬೇಕು : ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ

ಏಕ್ ಭಾರತ್ ಶ್ರೇಷ್ಠ ಭಾರತ್, ಆತ್ಮ ನಿರ್ಭರ ಭಾರತ್ ಹಾಗೂ ಮೇಕ್ ಇನ್ ಇಂಡಿಯಾ ಮೂಲಕ ಸ್ವಾಭಿಮಾನಿ, ಸ್ವಾವಲಂಬಿ ಭಾರತ ನಿರ್ಮಾಣದ ಕನಸನ್ನು ಪ್ರಧಾನಿ ನರೇಂದ್ರ ಮೋದಿಜಿ ಬಿತ್ತಿ ದರು. ದೇಶ ರಕ್ಷಣೆಯ ವ್ಯವಸ್ಥೆಯಲ್ಲಿ, ಸೇನೆ, ಶಸ್ತ್ರಗಳಲ್ಲಿ ಭಾರತ ಆತ್ಮ ನಿರ್ಭರವಾಗಿದೆ. ಯುವಕ ರಲ್ಲಿ, ಮಹಿಳೆಯರಲ್ಲಿ ಈ ಕುರಿತು ಹೆಚ್ಚು ಜಾಗೃತಿ ಮೂಡಿಸಬೇಕು

ಆತ್ಮನಿರ್ಭರ ಭಾರತ ಅಭಿಯಾನ ಜನಜಾಗೃತಿ ಮೂಡಿಸ ಬೇಕು

ನಗರದ ಬಿಜೆಪಿ ಸೇವಾ ಸೌಧದಲ್ಲಿ ಮಂಗಳವಾರ ನಡೆದ ಆತ್ಮನಿರ್ಭರ ಭಾರತ ಸಂಕಲ್ಪ ಅಭಿಯಾನದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಮಾತನಾಡಿದರು. -

Ashok Nayak Ashok Nayak Oct 15, 2025 12:08 AM

ಶಿಡ್ಲಘಟ್ಟ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸ್ವದೇಶಿ ಸಂಕಲ್ಪದ ಆತ್ಮ ನಿರ್ಭರ ಭಾರತ ಅಭಿಯಾನ ಗ್ರಾಮ, ಬೂತ್ ಮಟ್ಟದ ಕಾರ್ಯಕರ್ತರು ತೊಡಗಿಸಿಕೊಂಡು ಜನಜಾಗೃತಿ ಮೂಡಿಸ ಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ(Seakal Ramachandra Gowda)ಕರೆ ನೀಡಿದರು.

ನಗರದ ಬಿಜೆಪಿ ಸೇವಾ ಸೌಧದಲ್ಲಿ ಮಂಗಳವಾರ ನಡೆದ ಆತ್ಮನಿರ್ಭರ ಭಾರತ ಸಂಕಲ್ಪ ಅಭಿಯಾನದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಮದು ಕಡಿಮೆಯಾಗಿ ರಫ್ತು ಜಾಸ್ತಿ ಆಗಬೇಕು. ನಾವೆಲ್ಲರೂ ಸ್ವದೇಶಿ ಉತ್ಪನ್ನಗಳ ಬಳಕೆಗೆ ಧ್ವನಿಯಾಗಬೇಕಿದೆ. ಮನೆಗಳಲ್ಲಿಬಳಸುವ ವಸ್ತು ಸ್ವದೇಶಿ ಇರುವಂತೆ ಸ್ಥಳೀಯ ಉತ್ಪನ್ನವನ್ನೆ? ಖರೀದಿಸಲು ಗಮನ ನೀಡಿದಾಗ ಖಂಡಿತ ಬದಲಾವಣೆ ಸಾಧ್ಯ ಎಂದರು.

ಏಕ್ ಭಾರತ್ ಶ್ರೇಷ್ಠ ಭಾರತ್, ಆತ್ಮ ನಿರ್ಭರ ಭಾರತ್ ಹಾಗೂ ಮೇಕ್ ಇನ್ ಇಂಡಿಯಾ ಮೂಲಕ ಸ್ವಾಭಿಮಾನಿ, ಸ್ವಾವಲಂಭಿ ಭಾರತ ನಿರ್ಮಾಣದ ಕನಸನ್ನು ಪ್ರಧಾನಿ ನರೇಂದ್ರ ಮೋದಿಜಿ ಬಿತ್ತಿ ದರು. ದೇಶ ರಕ್ಷಣೆಯ ವ್ಯವಸ್ಥೆಯಲ್ಲಿ, ಸೇನೆ, ಶಸ್ತ್ರಗಳಲ್ಲಿ ಭಾರತ ಆತ್ಮ ನಿರ್ಭರವಾಗಿದೆ. ಯುವಕ ರಲ್ಲಿ, ಮಹಿಳೆಯರಲ್ಲಿ ಈ ಕುರಿತು ಹೆಚ್ಚು ಜಾಗೃತಿ ಮೂಡಿಸಬೇಕು ಎಂದರು.

ಇದನ್ನೂ ಓದಿ: Dr. Ramachandra Guha: ಇತಿಹಾಸಕಾರ, ಲೇಖಕ ಡಾ.ರಾಮಚಂದ್ರ ಗುಹಾಗೆ ‘ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ’

ಚಿಕ್ಕಬಳ್ಳಾಪುರದಲ್ಲಿ ಪ್ರಸಿದ್ಧ ಶ್ರೀನಿವಾಸ ಸಾಗರ ಡ್ಯಾಂನಲ್ಲಿ  ಪ್ರವಾಸಿಗರು ಹುಚ್ಚಾಟ ಮೆರೆದಿದ್ದಾರೆ. ಶ್ರೀನಿವಾಸ ಸಾಗರದಲ್ಲಿ ೫೦ ಅಡಿ ಎತ್ತರದಿಂದ ಧುಮುಕುವ ನೀರಿನ ಬಳಿ ಇದ್ದ ಗಂಗಮ್ಮ ದೇವಿ ವಿಗ್ರಹಕ್ಕೆ ಯುವತಿಯೊಬ್ಬಳು ಅಪಮಾನ ಮಾಡಿದ್ದಾಳೆ. ಇಲ್ಲಿಗೆ ಪ್ರವಾಸಕ್ಕೆ ಬಂದಿದ್ದ ಮುಸ್ಲಿಂ ಫ್ಯಾಮಿಲಿ ಯುವತಿಯರು ಗಂಗಮ್ಮ ದೇವಿ ವಿಗ್ರಹದ ಮೇಲೆ ಕಾಲಿಟ್ಟಿದ್ದಾರೆ. ಎಲ್ಲ ಜಾತಿಯ ದೇವರು ಒಂದೇ ಗಂಗಮ್ಮನಿಗೆ ಹುಡುಗಿಯರ ವರ್ತನೆ ಖಂಡಿಸಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕಾರ್ಯದರ್ಶಿ ಅಶೋಕ್, ಮುರುಳಿಧರ್ ಕನಕ ಪ್ರಸಾದ್, ಮಧುಚಂದ್ರ, ನರೇಶ್, ಡಾ.ಸತ್ಯನಾರಾಯಣರಾವ್ ಇದ್ದರು.

ಆರ್ ಎಸ್ ಎಸ್ ನ ನಿಷೇಧ ಮಾಡುವುದು ಕನಸಿನ ಮಾತು
"ಕಾಂಗ್ರೆಸ್ ಪಕ್ಷ ಹಿಂದು ವಿರೋಧಿ ಮಾನಸಿಕತೆ ಹೊಂದಿದೆ. ಆರ್ ಎಸ್ ಎಸ್ ನ ನಿಷೇಧ ಮಾಡು ವುದು ಕನಸಿನ ಮಾತು. ಮಾಡಿದರೂ ಅದಕ್ಕೆ ಹಿಂದು ಸಂಘಟನೆಗಳು ಉತ್ತರ ಕೊಡಲಿದ್ದಾರೆ" ಕಾಂಗ್ರೆಸ್-ಪಾಕಿಸ್ತಾನದ ನಡುವೆ ಹೊಂದಾಣಿಕೆ ಇದೆ ಎಂದು ತಿಳಿಯುತ್ತಿದೆ. ಆರ್ ಎಸ್ ಎಸ್ ಹಾಗಾಗಿ ಒಂದೇ ರೀತಿ ನೋಡ್ತಿದಾರೆ. ಇದು ದೇಶದ ಹಿಂದೂಗಳಿಗೆ ಮಾಡಿದ ಘನ ಘೋರ ಅಪಮಾನ" ಎಂದು ವಾಗ್ದಾಳಿ ನಡೆಸಿದರು."
-ಸೀಕಲ್ ರಾಮಚಂದ್ರಗೌಡ ಬಿಜೆಪಿ ಜಿಲ್ಲಾಧ್ಯಕ್ಷ-