ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಲಿಥುವೇನಿಯಾ-ಸಂಸ್ಕೃತದ ಒಂದೇ ರೀತಿಯ ಪದಗಳು ದಶಕಗಳ ಹಿಂದಿನ ನಾಗರಿಕ ಸಂಪರ್ಕಕ್ಕೆ ಸಾಕ್ಷಿ: ಶ್ರೀ ಮಧುಸೂದನ ಸಾಯಿ

Sadguru Sri Madhusudan Sai: ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಸಾಂಸ್ಕೃತಿಕ ಉತ್ಸವ'ದ 60ನೇ ದಿನವಾದ ಮಂಗಳವಾರ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಆಶೀರ್ವಚನ ನೀಡಿದರು.

ಪರಸ್ಪರ ಸಂವಾದದೊಂದಿಗೆ ಉತ್ತಮ ನಾಳೆಯನ್ನು ಸೃಷ್ಟಿಸಬಹುದು

-

Profile Siddalinga Swamy Oct 14, 2025 9:20 PM

ಚಿಕ್ಕಬಳ್ಳಾಪುರ: ಲಿಥುವೇನಿಯಾ ದೇಶದಲ್ಲಿ ಬಳಸುವ ಪದಗಳು ಮತ್ತು ಸಂಸ್ಕೃತದ ಕೆಲವು ಪದಗಳನ್ನು ಹೋಲಿಸಬಹುದಾಗಿದೆ. ನಾವೆಲ್ಲರೂ ಹಲವು ದಶಕಗಳ ಹಿಂದೆಯೇ ಪರಸ್ಪರ ನಾಗರಿಕ ಸಂಪರ್ಕ ಹೊಂದಿದ್ದೆವು ಎಂಬುದನ್ನು ಇದು ಸಾರುತ್ತದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ (Sadguru Sri Madhusudan Sai) ಹೇಳಿದರು. ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ (Sathya Sai Grama) ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಸಾಂಸ್ಕೃತಿಕ ಉತ್ಸವ'ದ 60ನೇ ದಿನವಾದ ಮಂಗಳವಾರ ಸದ್ಗುರು ಆಶೀರ್ವಚನ ನೀಡಿದರು.

ಸಾವಿರಾರು ವರ್ಷಗಳ ಹಿಂದಿನ ಸಂಪರ್ಕ ಅಥವಾ ಸಹೋದರತ್ವವನ್ನು ಒಂದು ಜಗತ್ತು ಒಂದು ಕುಟುಂಬದ ಮಿಷನ್ ಮೂಲಕ ಈಗಲೂ ಮುಂದುವರಿಸಲು ಪ್ರಯತ್ನ ನಡೆಯುತ್ತಿದೆ. ಈ ಜಗತ್ತು ಎಂದಿಗೂ ಶಾಂತಿಯುತ ಸ್ಥಳವಲ್ಲ, 21ನೇ ಶತಮಾನದಲ್ಲಿಯೂ ಏನಾದರೂ ಒಂದು ರೀತಿಯ ಘಟನೆಗಳು ನಡೆಯುತ್ತಲೇ ಇರುತ್ತವೆ. ನಮ್ಮ ಹೋರಾಟ, ಯುದ್ಧ, ಘರ್ಷಣೆಗಳು ಮತ್ತು ಅವ್ಯವಸ್ಥೆಗಳು ಇನ್ನೂ ಮುಗಿದಿಲ್ಲ. ತಪ್ಪುಗಳನ್ನು ಪುನರಾವರ್ತಿಸುತ್ತಲೇ ಇರುತ್ತೇವೆ. ಆದರೆ ಈ ಸಂದರ್ಭದಲ್ಲಿ ಪರಸ್ಪರ ಸಂವಾದ ನಡೆಸಿ, ಬಿರುಕುಗಳನ್ನು ತುಂಬಬಹುದು, ಆಗಿರುವ ಗಾಯಗಳನ್ನು ಗುಣಪಡಿಸಬಹುದು, ಉತ್ತಮ ನಾಳೆಯನ್ನು ಸೃಷ್ಟಿಸಬಹುದು, ಒಂದು ಜಗತ್ತು ಒಂದು ಕುಟುಂಬದ ಧ್ಯೇಯವು ಇದೇ ಆಗಿದೆ ಎಂದು ವಿವರಿಸಿದರು.

Sadguru Sri Madhusudan Sai 1

'ಬೈನ್ ಕ್ಯಾಪಿಟಲ್ ಇಂಡಿಯಾ' ಕಂಪನಿಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕ ಅಮಿತ್ ಚಂದ್ರ ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ನಾಯಕತ್ವ' ಪುರಸ್ಕಾರ ನೀಡಿ ಗೌರವಿಸಲಾಯಿತು. ಆರೋಗ್ಯ ಕ್ಷೇತ್ರಕ್ಕೆ ಬೆಂಬಲ ನೀಡುತ್ತಿರುವ 'ಡಾ.ಎಸ್.ಆರ್. ಚಂದ್ರಶೇಖರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್ ಟ್ರಸ್ಟ್' ಗೆ 'ಸಿಎಸ್ಆರ್ ಸರ್ಕಲ್ ಆಫ್ ಹಾನರ್' ಪುರಸ್ಕಾರ ನೀಡಿ ಗೌರವಿಸಲಾಯಿತು. ಟ್ರಸ್ಟ್‌ನ ಅಧ್ಯಕ್ಷ ಲಯನ್ ವಿವಿ ಕೃಷ್ಣಾ ರೆಡ್ಡಿ, ಟ್ರಸ್ಟಿಗಳಾದ ವಿ.ಎಸ್. ಶಾಂತವರ್ಧನ್, ಡಿ.ಎಲ್. ಸುರೇಶ್ ಬಾಬು ಪ್ರಶಸ್ತಿ ಸ್ವೀಕರಿಸಿದರು.

Sadguru Sri Madhusudan Sai 3

ಈ ಸುದ್ದಿಯನ್ನೂ ಓದಿ | ಮುದ್ದೇನಹಳ್ಳಿ ಆಸ್ಪತ್ರೆಯಲ್ಲಿ ಶೀಘ್ರ ಹೆಲ್ತ್ ಡೇಟಾ ಕಮಾಂಡ್ ಸೆಂಟರ್‌, ಕ್ಯಾಥ್‌ ಲ್ಯಾಬ್ ಆರಂಭ: ಶ್ರೀ ಮಧುಸೂದನ ಸಾಯಿ ಘೋಷಣೆ

ಲಿಥುವೇನಿಯಾ ದೇಶದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಲೆವಾ ಕ್ರಿವಿಕೈಟ್ (Leva Krivickaite) ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಮಾನವೀಯ' ಪುರಸ್ಕಾರ ನೀಡಿ ಗೌರವಿಸಲಾಯಿತು. ಲಿಥುವೇನಿಯಾದ ಪ್ರತಿನಿಧಿಗಳಾದ ಐಸ್ಟೆ ಕೈರೈಟೀನ್ (Aiste Kairaitiene), ರಿಕಾರ್ಡಸ್ ಕೈರೈಟೀಸ್ (Ricardas Kairaities), ಲಾಟ್ವಿಯಾ ದೇಶದ ಪ್ರತಿನಿಧಿ ಎಲಿನಾ ಲೆಡಿನಾ (Elina Ledina) ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.