ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಸಾಮಾಜಿಕ ನ್ಯಾಯಕ್ಕೆ ಆಗ್ರಹಿಸಿ ಡಿ.೬ರಂದು ಸಿದ್ದರಾಮನ ಹುಂಡಿಯಿಂದ ಕಾಲ್ನಡಿಗೆ ಜಾಥ : ಸಮಿತಿ ರಾಜ್ಯಾಧ್ಯಕ್ಷ ಕೇಶವಮೂರ್ತಿ ಹೇಳಿಕೆ

ಮಾದಿಗ ಮೀಸಲಾತಿ ಹೋರಾಟ ಸಮಿತಿ ಸೇರಿದಂತೆ ರಾಜ್ಯದಲ್ಲಿ ಕಳೆದ ೩೫ ವರ್ಷಗಳಿಂದ ಒಳ ಮೀಸಲಾತಿ ಹೋರಾಟಗಳು ನಿರಂತರವಾಗಿ ನಡೆದಿವೆ. ಈ ಹೋರಾಟ ತೀವ್ರವಾಗುತ್ತಿದ್ದಂತೆ ರಾಜ್ಯ ಸರ್ಕಾರ ಜಸ್ಟೀಸ್ ಸದಾಶಿವ ಆಯೋಗ, ಕಾಂತರಾಜು ಆಯೋಗ, ಈಗ ಜಸ್ಟಿಸ್ ನಾಗಮೋಹನ್ ದಾಸ್ ಆಯೋಗ ರಚನೆ ಮಾಡಿತು

ಚಿಕ್ಕಬಳ್ಳಾಪುರ : ಪರಿಪೂರ್ಣ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಸಿದ್ದರಾಮನ ಹುಂಡಿಯಿAದ ಡಿಸೆಂಬರ್ ೬ರಂದು ಬೃಹತ್ ಕಾಲ್ನಡಿಗೆ ಜಾಥ ಆಯೋಜಿಸಲಾಗಿದೆ ಎಂದು ಸಮಿತಿಯ ರಾಜ್ಯ ಸಂಚಾಲಕ ಕೇಶವ ಮೂರ್ತಿ ತಿಳಿಸಿದರು

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮಾದಿಗ ಮೀಸಲಾತಿ ಹೋರಾಟ ಸಮಿತಿ ಸೇರಿದಂತೆ ರಾಜ್ಯದಲ್ಲಿ ಕಳೆದ ೩೫ ವರ್ಷಗಳಿಂದ ಒಳ ಮೀಸಲಾತಿ ಹೋರಾಟಗಳು ನಿರಂತರವಾಗಿ ನಡೆದಿವೆ. ಈ ಹೋರಾಟ ತೀವ್ರವಾಗುತ್ತಿದ್ದಂತೆ ರಾಜ್ಯ ಸರ್ಕಾರ ಜಸ್ಟೀಸ್ ಸದಾಶಿವ ಆಯೋಗ, ಕಾಂತರಾಜು ಆಯೋಗ, ಈಗ ಜಸ್ಟಿಸ್ ನಾಗಮೋಹನ್ ದಾಸ್ ಆಯೋಗ ರಚನೆ ಮಾಡಿತು. ಆದರೆ ಅವುಗಳ ಶಿಫಾರಸ್ಸಿನ ಆಧಾರದಲ್ಲಿ ಮೀಸಲಾತಿ ನೀಡದೆ ರಾಜ್ಯ ಸರ್ಕಾರ ಎಬಿಸಿ ವರ್ಗಿಕರಣದ ಆಧಾರದಲ್ಲಿ ಆರು ಆರು ಐದು ಮೀಸಲಾತಿ ನೀಡುವುದಾಗಿ ಸಚಿವ ಸಂಪುಟದಲ್ಲಿ ಘೋಷಿಸಿತು.

೨೦೨೪ರ ಆಗಸ್ಟ್ ಒಂದರಂದು ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಜಾರಿಯ ಹಕ್ಕನ್ನು ರಾಜ್ಯ ಸರ್ಕಾರಗಳಿಗೆ ನೀಡಿತು. ಅಲ್ಲಿಂದ ಇವರಿಗೆ ರಾಜ್ಯ ಸರ್ಕಾರ ಪರಿಪೂರ್ಣವಾಗಿ ಒಳ ಮೀಸಲಾತಿ ಜಾರಿ ಮಾಡುವಲ್ಲಿ ವಿಫಲವಾಗಿದೆ. ಇದನ್ನು ಖಂಡಿಸಿ ಡಿಸೆಂಬರ್ ಆರರಂದು ಸಿದ್ದರಾಮಯ್ಯ ಹುಂಡಿಯಿAದ ಪ್ರಾರಂಭವಾಗುವ ಕಾಲ್ನಡಿಗೆ ಜಾಥಾ ಡಿಸೆಂಬರ್ ೧೧ ರಂದು ಮೈಸೂರಿನಲ್ಲಿ ರಾಜ್ಯಮಟ್ಟದ ಬೃಹತ್ ಪ್ರತಿಭಟನಾ ಸಮಾವೇಶ ಆಯೋಜಿಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗು ವುದು ಎಂದರು.

ಇದನ್ನೂ ಓದಿ: Chikkaballapur News: ಸಾಧು ಮಠದಲ್ಲಿ ದತ್ತಾತ್ರೇಯ ಜಯಂತಿ ಸಂಭ್ರಮ : 66ನೇ ವರ್ಷದ ಪೂಜೆಗೆ ಹರಿದು ಬಂದ ಭಕ್ತಸಮೂಹ

ಅಲೆಮಾರಿಗಳ ಧ್ವನಿಯನ್ನು ಕಿತ್ತುಕೊಂಡ ಸರ್ಕಾರ  ಮೀಸಲಾತಿಯನ್ನು ನಿರಾಕರಿಸಿ ರುವುದು ಸರಿಯಲ್ಲ. ಪರಿಣಾಮ ಅವರು ನ್ಯಾಯಕ್ಕಾಗಿ ಹೈಕೋರ್ಟಿನ ಮೊರೆ ಹೋಗಿದ್ದು ಹೈಕೋರ್ಟ್ ಒಳ ಮೀಸಲಾತಿ ಜಾರಿಗೆ ತಡೆ ನೀಡಿದೆ. ಸಾಮಾಜಿಕ ನ್ಯಾಯದ ಹರಿಕಾರರಾದ ಮುಖ್ಯಮಂತ್ರಿ ಸಿದ್ದರಾ ಮಯ್ಯ ಅವರು ಎಲ್ಲಾ ಜಾತಿ ಜನವರ್ಗಗಳಿಗೂ ಸಮಾನವಾದ ಮೀಸಲಾತಿ ಹಂಚಿಕೆ ಮಾಡುವು ದಾಗಿ ವಾಗ್ದಾನ ನೀಡಿದ್ದರು.

2024ರ ಆಗಸ್ಟ್ ೧ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿ ೧೪ ತಿಂಗಳು ಕಳೆದಿದೆ. ಪಂಜಾಬ್, ಹರಿಯಾಣ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಒಳಮೀಸಲಾತಿ ಜಾರಿ ಮಾಡಿ ತಿಂಗಳುಗಳೇ ಕಳೆದಿದೆ. ಆದರೆ ಕರ್ನಾಟಕ ಸರ್ಕಾರ ಒಳಮೀಸಲಾತಿ ವಿಚಾರದಲ್ಲಿ ಇನ್ನೂ ಮೀನಾಮೇಷ ಎಣಿಸುತ್ತಿದ್ದು, ಸರಕಾರದ ವಿಳಂಬ ಧೋರಣೆ ಖಂಡಿಸಿ ಕಳೆದ ಆ.೧೧ರಂದು ನಾಗಮೋಹನ್ ದಾಸ್ ಆಯೋಗದ ಶಿಫಾರಸ್ಸು ಯಥಾವತ್ತಾಗಿ ಜಾರಿಗೊಳಿಸಲು ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅನಿರ್ಧಿಷ್ಟಾವಧಿ ಹೋರಾಟ ನಡೆಸಲಾಯಿತು ಎಂದರು.

ಹೋರಾಟದ ಒತ್ತಡಕ್ಕೆ ಮಣಿದ ಸರ್ಕಾರ ಕಳೆದ ಆ.೧೯ರಂದು ವಿಶೇಷ ಸಚಿವ ಸಂಪುಟದಲ್ಲಿ ಒಲ್ಲದ ಮನಸ್ಸಿನಿಂದ ಪರಿಶಿಷ್ಟಜಾತಿಗಳನ್ನು ೫ ಪ್ರವರ್ಗಗಳ ಬದಲಾಗಿ ೩ ಪ್ರವರ್ಗಗಳನ್ನಾಗಿ ವಿಂಗಡಿಸಿತು. ಇದರಿಂದ ಒಳಮೀಸಲಾತಿಯನ್ನು ಬಲಾಡ್ಯ ಕೋಮುಗಳಾದ ಪ್ರವರ್ಗ-ಸಿಗೆ ಸೇರಿಸಿ ಅವರನ್ನು ಶಾಶ್ವತವಾಗಿ ಮೀಸಲಾತಿಯಿಂದ ವಂಚಿಸಲಾಯಿತು. ಆದಿಕರ್ನಾಟಕ, ಆದಿದ್ರಾವಿಡ ಮತ್ತು ಅದಿಆಂಧ್ರ ಜಾತಿಗಳ ಬದಲಿಗೆ ಮೂಲ ಜಾತಿಗಳ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರ ವಿತರಿಸಲು ಕಂದಾಯ ಇಲಾಖೆಗೆ ಆದೇಶಿಸಬೇಕಾಗಿದೆ. ಜಾತಿ ಪ್ರಮಾಣ ಪತ್ರದ ಪರಿಶೀಲನೆಗೆ ಮೇಲ್ವಿಚಾರಣಾ ಸಮಿತಿ ರಚಿಸಬೇಕಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಒಳಮೀಸಲಾತಿ ಅಸಾಧ್ಯ ಎಂದು ಮುಖ್ಯಮಂತ್ರಿಗಳ ಹೇಳಿಕೆ ಸಮುದಾಯಕ್ಕೆ ಅನ್ಯಾಯ ಮಾಡುವಂತಿದೆ ಎಂದರು.

ಮೈಸೂರಿನ ಸಮಾವೇಶದಲ್ಲಿ ಪೂರ್ಣ ಪ್ರಮಾಣದ ಒಳ ಮೀಸಲಾತಿ ಜಾರಿ ಮಾಡಿ ಇಲ್ಲವೇ ಕುರ್ಚಿ ಖಾಲಿ ಮಾಡಿ ಎಂಬ ಆಗ್ರಹದ ಹಿನ್ನೆಲೆಯಲ್ಲಿ ಹೋರಾಟ ನಡೆಯಲಿದೆ ಎಂದರು.

ಒಳ ಮೀಸಲಾತಿ ಜಾರಿಗೆ ಜಸ್ಟೀಸ್ ಸದಾಶಿವ ಆಯೋಗದ ವರದಿ ಕಣ್ಣ ಮುಂದೆ ಇದ್ದರೂ ನೋಡದ ಸರ್ಕಾರ ಒತ್ತಡ ತಂತ್ರಕ್ಕೆ ಮಣಿದು ಜಸ್ಟಿಸ್ ನಾಗಮೋಹನ್ ದಾಸ್ ಏಕ ಸಮಿತಿ ರಚಿಸಿ ವರದಿ ಯನ್ನು ಸಿದ್ಧಪಡಿಸಿತು. ಈ ವರದಿಯನ್ನು ಕೂಡ ಜಾರಿ ಮಾಡದೆ ಸರ್ಕಾರ ತನ್ನ ಮೂಗಿನ ನೇರಕ್ಕೆ ಎ ವರ್ಗಕ್ಕೆ ಆರು, ಬಿ ವರ್ಗಕ್ಕೆ ಆರು, ಸಿ ವರ್ಗಕ್ಕೆ ಐದು ಮೀಸಲಾತಿ ನಿಗದಿಗೊಳಿಸಿ ಅಧಿಸೂಚನೆ ಹೊರಡಿಸಿದೆ.

ಆದಷ್ಟು ಬೇಗ ರಾಜ್ಯ ಸರಕಾರ ಪೂರ್ಣಪ್ರಮಾಣದಲ್ಲಿ ಒಳಮೀಸಲಾತಿ ಜಾರಿ ಮಾಡಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಸರಕಾರಕ್ಕೆ ಸರಿಯಾದ ಪಾಠ ಕಲಿಸಬೇಕಾಗುತ್ತದೆ ಎಂದು ಹೇಳಿದರು.

ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿಯ ಟಿ.ಮುನಿಕೃಷ್ಣಪ್ಪ, ಬಿ.ಎನ್. ಗಂಗಾಧರಪ್ಪ, ಸುರೇಶ್.ವಿ, ಮುನಿಕೃಷ್ಣಪ್ಪ ಇದ್ದರು.