ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಸಾಧು ಮಠದಲ್ಲಿ ದತ್ತಾತ್ರೇಯ ಜಯಂತಿ ಸಂಭ್ರಮ : 66ನೇ ವರ್ಷದ ಪೂಜೆಗೆ ಹರಿದು ಬಂದ ಭಕ್ತಸಮೂಹ

೪೦ ವರ್ಷಗಳಿಂದ ಈ ಟ್ರಸ್ಟ್ನಲ್ಲಿದ್ದೇನೆ. ಭಗವಂತನ ಕಾರ್ಯಕ್ರಮಗಳಿಗೆ ಎಂದೂ ಕೂಡ ಹಿನ್ನಡೆ ಆದದ್ದೇ ಇಲ್ಲ.ಒಂದು ವಾರದ ಕಾಲ ನಡೆಯುವ ಧಾರ್ಮಿಕ ಆಚರಣೆ, ಉಪನ್ಯಾಸ, ಪೂಜೆ ಸತ್ಸಂಗ ಪ್ರಸಾದ ವಿನಿಯೋಗದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಭಾಗಿಯಾಗುವ ಮೂಲಕ ಕಾರ್ಯಕ್ರಮ ಯಶಸ್ವಿ ಯಾಗಿ ನಡೆಯಲು ಕಾರಣಕರ್ತರಾಗಿದ್ದಾರೆ. ಇವರೆಲ್ಲರಿಗೂ ಟ್ರಸ್ಟ್ನ ವತಿಯಿಂದ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ

ಸಾಧು ಮಠದಲ್ಲಿ ದತ್ತಾತ್ರೇಯ ಜಯಂತಿ ಸಂಭ್ರಮ

-

Ashok Nayak
Ashok Nayak Dec 4, 2025 11:27 PM

ದೇವರಿಗೆ ಅಭಿಷೇಕ ಸೇರಿ ವಿಶೇಷ ಪೂಜೆ: ಪಾಕ್ಷಿಕ ಆರಾಧನೆ ಅಂತ್ಯ: 500ಕ್ಕೂ ಹೆಚ್ಚು ಮಂದಿಗೆ ಅನ್ನದಾನ ಸೇವೆ

ಚಿಕ್ಕಬಳ್ಳಾಪುರ: ಮಾರ್ಗಶಿರ ಹುಣ್ಣಿಮೆಯಂದು ಆಚರಿಸಲಾಗುವ ದತ್ತಜಯಂತಿ ಕಾರ್ಯಕ್ರಮ ವನ್ನು ಸಾಧುಮಠದ ಶ್ರೀ ದತ್ತಾತ್ರೇಯಸ್ವಾಮಿಗೆ ಅಭಿಷೇಕ ಸಹಿತ ವಿಶೇಷ ಪೂಜೆಯನ್ನು ಏರ್ಪಡಿಸಲಾಗಿದ್ದು ಬೆಳಗಿನಿಂದಲೇ ಭಕ್ತಾಧಿಗಳು ಆಗಮಮಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಪುನೀತರಾದರು.

ನಗರದ ಸಾಧುಮಠದಲ್ಲಿರುವ ಪುರಾತನವಾದ ಶ್ರೀ ದತ್ತಾತ್ರೇಯಸ್ವಾಮಿ ದೇಗುಲದಲ್ಲಿ ಗುರುವಾರ ದತ್ತಜಯಂತಿ ಸಂಭ್ರಮ ಮನೆಮಾಡಿತ್ತು.ದೇವಾಲಯ ಸಮಿತಿ, ಭಕ್ತಾಧಿಗಳ ನೆರವಿನಲ್ಲಿ ದತ್ತಾತ್ರೇಯ ಸ್ವಾಮಿಯ ೬೬ ವಾರ್ಷಿಕೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಸಾಧುಮಠ ದೇವಾಲಯ ಸಮಿತಿ ಟ್ರಸ್ಟ್ ಅಧ್ಯಷ ಕೃಷ್ಣಮೂರ್ತಿ ಮಾತನಾಡಿ ಪ್ರತಿವರ್ಷ ಮಾರ್ಗಶಿರ ಹುಣ್ಣಿಮೆಯಂದು ನಡೆಸಲ್ಪಡುವ ದತ್ತ ಜಯಂತಿ ಸಪ್ತಾಹ ಕಾರ್ಯಕ್ರಮ ಇಷ್ಟೊಂದು ಅರ್ಥಪೂರ್ಣವಾಗಿ ನಡೆಯಲು ಭಕ್ತಾದಿಗಳು ಮತ್ತು ಟ್ರಸ್ಟ್ ಸದಸ್ಯರ ಸಹಕಾರ ಮುಖ್ಯವಾಗಿದೆ.

ಇದನ್ನೂ ಓದಿ: Chikkaballapur News: ಜಿಲ್ಲೆಯ ಎಸ್.ಎಸ್.ಎಲ್.ಸಿ ಫಲಿತಾಂಶ ಉತ್ತಮ ಪಡಿಸಲು ಕ್ರಮ ವಹಿಸಿ: ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಸೂಚನೆ

೪೦ ವರ್ಷಗಳಿಂದ ಈ ಟ್ರಸ್ಟ್ನಲ್ಲಿದ್ದೇನೆ. ಭಗವಂತನ ಕಾರ್ಯಕ್ರಮಗಳಿಗೆ ಎಂದೂ ಕೂಡ ಹಿನ್ನಡೆ ಆದದ್ದೇ ಇಲ್ಲ.ಒಂದು ವಾರದ ಕಾಲ ನಡೆಯುವ ಧಾರ್ಮಿಕ ಆಚರಣೆ, ಉಪನ್ಯಾಸ, ಪೂಜೆ ಸತ್ಸಂಗ ಪ್ರಸಾದ ವಿನಿಯೋಗದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಭಾಗಿಯಾಗುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಕಾರಣಕರ್ತರಾಗಿದ್ದಾರೆ. ಇವರೆಲ್ಲರಿಗೂ ಟ್ರಸ್ಟ್ನ ವತಿಯಿಂದ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

1960ಕ್ಕೂ ಹಿಂದಿನಿಂದ ಇಲ್ಲಿ ದೇವತಾ ಕಾರ್ಯಗಳನ್ನು ನಮ್ಮ ಪೂರ್ವಜರು ನಡೆಸಿಕೊಂಡು ಬರುತ್ತಿದ್ದಾರೆ. ತ್ರಿಮೂರ್ತಿಗಳ ಸ್ವರೂಪನಾದ ದತ್ತಾತ್ರೇಯ ಸ್ವಾಮಿಯ ಅನುಗ್ರಹ ಪ್ರಾಪ್ತಿ ಯಾದವ ರಿಗೆ ಸಕಲವೂ ಸಿದ್ಧಿಸಲಿದೆ.ಹೀಗಾಗಿ ಪ್ರತಿ ವರ್ಷವೂ ಇಲ್ಲಿ ಗುರು ಆರಾಧನೆ, ನವರಾತ್ರಿ ಉತ್ಸವ,ಈಗ ದತ್ತಾತ್ರೇಯ ಜಯಂತಿ ಹೀಗೆ ಕಾಲಕಾಲಕ್ಕೆ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗಿದೆ.

cbpm2p ಒಕ

ನಮ್ಮ ಅವಧಿಯಲ್ಲಿ ದೇವಾಲಯವನ್ನು ಸಾಕಷ್ಟು ಅಭಿವೃದ್ದಿಪಡಿಸಲಾಗಿದ್ದು ಎಲ್ಲಕ್ಕೂ ಭಕ್ತರ ನೆರವು ಹೆಚ್ಚಿದೆ. ೬೬ನೇ ದತ್ತ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಎಲ್ಲಾ ಭಕ್ತಾಧಿಗಳಿಗೆ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಶಾಂತಕುಮಾರಿ ಮತ್ತು ಎಸ್.ಶ್ರೀನಿವಾಸ ದಂಪತಿಗಳು ನಡೆಸಿ ಕೊಟ್ಟಿದ್ದಾರೆ.

ಸುಶೀಲಮ್ಮ ನಾಗರಾಜ್ ದಂಪತಿಗಳು ಶಾಶ್ವತ ಪೂಜೆಗೆ ೧೦ ಸಾವಿರ ನೆರವನ್ನು ನೀಡಿದ್ದಾರೆ.ಹೀಗೆ ಶ್ರೀಮಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಸಾಂಗೋಪಾಂಗವಾಗಿ ನಡೆಸಿಕೊಂಡು ಹೋಗು ತ್ತಿದ್ದೇವೆ ಎಂದರು.

ಸಂಜೆ ದೇವಾಲಲಯದ ಆವರಣದಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಸುಮಂಗಲಿಯರು ಬಂದು ದೀಪ ಬೆಳಗಿ ದೇವರ ದರ್ಶನ ಪಡೆದರು.

ಕಾರ್ಯಕ್ರಮದಲ್ಲಿ ಸಾಧುಮಠ ಟ್ರಸ್ಟ್ನ ಕಾರ್ಯದರ್ಶಿ ರಾಮಚಂದ್ರರೆಡ್ಡಿ, ಖಜಾಂಚಿ ಶ್ರೀನಾಥ್, ಜಂಠಿ ಕಾರ್ಯದರ್ಶಿ, ಆರ್.ಒ.ಪ್ರಭಾಕರ್, ಸದಸ್ಯರಾದ ಕೆ.ಎನ್.ಹರಿಕುಮಾರ್, ಹೆಚ್.ಶ್ರೀನಿವಾಸ್, ಅಂಗಣಗೊAದಿ ರಂಗಪ್ಪ,ಕ್ಯಾತಪ್ಪ, ನಾಗಭೂಷಣ್, ಸುಬ್ರಹ್ಮಣ್ಯಾಚಾರಿ,ಎಂ.ಕೃಷ್ಣಪ್ಪ, ಪುರದಗಡ್ಡೆ ಕೃಷ್ಣಪ್ಪ, ವ್ಯವಸ್ಥಾಪಕ ನರಸಿಂಹಯ್ಯ, ನಗರಸಭೆ ಮಾಜಿ ಅಧ್ಯಕ್ಷ ಆನಂದಬಾಬು ರೆಡ್ಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯಾಚಾರಿ, ಪ್ರೇಮಲೀಲಾ ವೆಂಕಟೇಶ್ ಮತ್ತಿತರರು ಇದ್ದರು.