ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chikkaballapur News: 50 ದಿನ ಪೂರೈಸಿದ ಸಿಂಗಾಡಿ ಕದಿರೇನಹಳ್ಳಿ ಭೂ ಹೋರಾಟ: ಅರಣ್ಯ ಇಲಾಖೆಗೆ ಮುಂಭಾಗ ಸಂತ್ರಸ್ಥರ ಆಕ್ರೋಶ

ನಗರ ಹೊರವಲಯ ಸೂಲಾಲಪ್ಪನ ದಿನ್ನೆಯ ಬಳಿಯಿರುವ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿ ಕಾರಿಗಳ ಕಚೇರಿ ಎದುರು ಕಳೆದ 50 ದಿನಗಳಿಂದ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ನಡೆಸುತ್ತಿರುವ ಅನಿರ್ಧಿಷ್ಠಾವಧಿ ಹೋರಾಟವು ಯಾವುದೇ ಫಲ ನೀಡದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಚೇರಿಗೆ ತೆರಳದಂತೆ ಬಾಗಿಲಿಗೆ ಅಡ್ಡಕುಳಿತು ತೀವ್ರ ಆಕ್ರೋಶ ಹೊರಹಾಕಿದರು.

ಚಿಕ್ಕಬಳ್ಳಾಪುರ: ಸಿಂಗಾಡಿ ಕದಿರೇನಹಳ್ಳಿ 14 ದಲಿತ ಕುಟುಂಬಗಳ ಸಾಗುವಳಿ ಭೂಮಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಕುರುಕುಳ ಖಂಡಿಸಿ ಜಿಲ್ಲಾ ಉಪಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಎದುರು ನಡೆಯುತ್ತಿರುವ ಹೋರಾಟವು 50 ದಿನ ಪೂರೈಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಬಾಗಿಲಿಗೆ ಅಡ್ಡಕುಳಿತ ಸಂತ್ರಸ್ಥರು, ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಗರ ಹೊರವಲಯ ಸೂಲಾಲಪ್ಪನ ದಿನ್ನೆಯ ಬಳಿಯಿರುವ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿ ಕಾರಿಗಳ ಕಚೇರಿ ಎದುರು ಕಳೆದ 50 ದಿನಗಳಿಂದ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ನಡೆಸು ತ್ತಿರುವ ಅನಿರ್ಧಿಷ್ಠಾವಧಿ ಹೋರಾಟವು ಯಾವುದೇ ಫಲ ನೀಡದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಚೇರಿಗೆ ತೆರಳದಂತೆ ಬಾಗಿಲಿಗೆ ಅಡ್ಡಕುಳಿತು ತೀವ್ರ ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ: Chikkaballapur News: ಹಿರಿಯರು ಸಮಾಜದ ಅನುಭವದ ಸಂಪತ್ತು; ಗೌರವವೇ ಭಾರತೀಯ ಸಂಸ್ಕೃತಿಯ ಜೀವಾಳ: ನ್ಯಾ. ಟಿ.ಪಿ. ರಾಮಲಿಂಗೇಗೌಡ

ಈ ವೇಳೆ ಮಾತನಾಡಿದ ದಸಂಸ ತಾಲೂಕು ಸಂಚಾಲಕ ಪರಮೇಶ್ ತಾಲೂಕಿನ ನಂದಿ ಹೋಬಳಿಯ ಸಿಂಗಾಡಿ–ಕದಿರೇನಹಳ್ಳಿ ಭೂ ವಿವಾದಕ್ಕೆ ಕಾರಣವಾಗಿರುವ ಅರಣ್ಯ ಇಲಾಖೆಯೇ ಈ ಸಮಸ್ಯೆಯನ್ನು  ಶೀಘ್ರ ಬಗೆಹರಿಸಬೇಕು.

1972ರಲ್ಲಿ ಕಂದಾಯ ಇಲಾಖೆಯೇ ಕೊಟ್ಟಿರುವ ದಾಖಲಾತಿಗಳನ್ನು ಇಟ್ಟುಕೊಂಡು ರೈತರು ಸಾಗುವಳಿ ಮಾಡುತ್ತಿದ್ದರೂ ದುರುದ್ದೇಶದಿಂದ ಡೀಮ್ಡ್ ಫಾರೆಸ್ಟ್ ಹೆಸರಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತೊಂದರೆ ನೀಡುತ್ತಿರುವುದು ಸರಿಯಲ್ಲ. ಈ ವಿಚಾರದಲ್ಲಿ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ತಟಸ್ಥ ಧೋರಣೆ ಸರಿಯಲ್ಲ, ನಿಯಮಗಳಿರು ವುದು ನಾಗರೀಕರಿಗೆ ಸಹಾಯ ಮಾಡುವುದಕ್ಕಾಗಿಯೇ ಹೊರತು ತೊಂದರೆ ಕೊಡುವುದಕ್ಕಲ್ಲ. ಸಂವಿಧಾನದ ನಿಯಮಗಳನ್ನು ಗಾಳಿಗೆ ತೂರಿ ಅಮಾಯಕ ದಲಿತರಿಗೆ ಅನ್ಯಾಯ ಮಾಡುವುದು ಸರಿಯಲ್ಲ ಎಂದು ದೂರಿದರು.

3cbpm6kadi (1) ok

ಸಿಂಗಾಡಿ–ಕದರೆನಹಳ್ಳಿ ಗ್ರಾಮದ ದಲಿತ ಕುಟುಂಬಗಳ ಭೂ ಸಮಸ್ಯೆ ಐವತ್ತು ದಿನಗಳು ಪೂರೈಸು ತ್ತಿದ್ದರೂ ಜಿಲ್ಲಾಧಿಕಾರಿಗಳಾಗಲಿ, ಕಂದಾಯ ಅರಣ್ಯ ಇಲಾಖೆ ಅಧಿಕಾರಿಗಳಾಗಲಿ ಸಮಸ್ಯೆ ಪರಿಹಾರ ಮಾಡುವುದಕ್ಕಿಂತ ಅದು ಇನ್ನಷ್ಟು ಬಿಗಡಾಯಿಸುವಂತೆ ಮಾಡುತ್ತಿರುವುದು ಸರಿಯಲ್ಲ ಎಂದರು. ಈ ಸಂಬAಧ ಹಲವು ಬಾರಿ ಸಂಬAಧ ಪಟ್ಟವರಿಗೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಷ್ಟ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ ಅವರು ಬೇಗ ಇತ್ಯರ್ಥಪಡಿಸಲಿಲ್ಲ ಎಂದರೆ ಮುಂದಿನ ಸಮಸ್ಯೆಗಳಿಗೆ ಜಿಲಾಡಳಿತ ಅರಣ್ಯ ಇಲಾಖೆ, ಕಂದಾಯ ಇಲಾಖೆಯೇ ನೇರ ಹೊಣೆಯಾಗಲಿದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಿಂಗಾಡಿ ಕದಿರೇನಹಳ್ಳಿ ಸಂತ್ರಸ್ಥ ದಲಿತರು.ದಸಂಸ ತಾಲೂಕು ಸಂಚಾಲಕ ಪರಮೇಶ್, ಜಿಲ್ಲಾ ಸಂಘಟನಾ ಸಂಚಾಲಕ ಎನ್. ವೆಂಕಟೇಶ್, ಕಲಾಮಂಡಳಿ ಜಿಲ್ಲಾ ಸಂಚಾಲಕ ಇಸ್ಕೂಲಪ್ಪ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.