ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ಹಿರಿಯರು ಸಮಾಜದ ಅನುಭವದ ಸಂಪತ್ತು; ಗೌರವವೇ ಭಾರತೀಯ ಸಂಸ್ಕೃತಿಯ ಜೀವಾಳ: ನ್ಯಾ. ಟಿ.ಪಿ. ರಾಮಲಿಂಗೇಗೌಡ

ಭಾರತೀಯ ಸಂಸ್ಕೃತಿಯ ಮೂಲ ಮೌಲ್ಯಗಳನ್ನು ಉಲ್ಲೇಖಿಸಿದ ಅವರು, "ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ" ಎಂಬ ಸಂದೇಶಗಳು ಕೇವಲ ಉಲ್ಲೇಖಗಳಲ್ಲ; ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಜೀವನ ಮೌಲ್ಯಗಳಾಗಿವೆ ಎಂದು ಹೇಳಿದರು. ಹಿರಿಯರ ಅನುಭವ, ಜ್ಞಾನ ಮತ್ತು ಮಾರ್ಗದರ್ಶನದಿಂದ ಸಮಾಜ ಸದೃಢವಾಗಿ ಬೆಳೆಯುತ್ತದೆ. ಆದ್ದರಿಂದ ಅವರನ್ನು ಗೌರವದಿಂದ ಕಾಣುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ

ಹಿರಿಯರು ಸಮಾಜದ ಅನುಭವದ ಸಂಪತ್ತು

-

Profile
Ashok Nayak Aug 3, 2026 8:27 PM

ಚಿಕ್ಕಬಳ್ಳಾಪುರ: ಹಿರಿಯ ನಾಗರಿಕರು ಸಮಾಜಕ್ಕೆ ಭಾರವಲ್ಲ; ಅವರು ಅನುಭವದ ಭಂಡಾರ, ಮೌಲ್ಯಗಳ ಮಾರ್ಗದರ್ಶಕರು ಹಾಗೂ ಸಮಾಜದ ಸ್ಥಿರತೆಗೆ ಆಧಾರಸ್ತಂಭಗಳಾಗಿದ್ದಾರೆ. ಹಿರಿಯ ರನ್ನು ಗೌರವಿಸುವುದು ಭಾರತೀಯ ಸಂಸ್ಕೃತಿಯ ಜೀವಾಳವಾಗಿದ್ದು, ಅವರ ಹಕ್ಕುಗಳನ್ನು ರಕ್ಷಿಸು ವುದು ಪ್ರತಿಯೊಬ್ಬರ ಸಾಮಾಜಿಕ ಹೊಣೆಗಾರಿಕೆಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಪಿ. ರಾಮಲಿಂಗೇಗೌಡ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲ ಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ "ಹಿರಿಯ ನಾಗರಿಕರ ಹಕ್ಕುಗಳು ಮತ್ತು ಸರ್ಕಾರಿ ಕಲ್ಯಾಣ ಕಾರ್ಯಕ್ರಮಗಳ ಕುರಿತ ಒಂದು ದಿನದ ವಿಶೇಷ ಕಾರ್ಯಗಾರ" ಉದ್ಘಾಟಿಸಿ ಮಾತನಾಡಿದರು.

ಭಾರತೀಯ ಸಂಸ್ಕೃತಿಯ ಮೂಲ ಮೌಲ್ಯಗಳನ್ನು ಉಲ್ಲೇಖಿಸಿದ ಅವರು, "ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ" ಎಂಬ ಸಂದೇಶಗಳು ಕೇವಲ ಉಲ್ಲೇಖಗಳಲ್ಲ; ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಜೀವನ ಮೌಲ್ಯಗಳಾಗಿವೆ ಎಂದು ಹೇಳಿದರು. ಹಿರಿಯರ ಅನುಭವ, ಜ್ಞಾನ ಮತ್ತು ಮಾರ್ಗದರ್ಶನದಿಂದ ಸಮಾಜ ಸದೃಢವಾಗಿ ಬೆಳೆಯುತ್ತದೆ. ಆದ್ದರಿಂದ ಅವರನ್ನು ಗೌರವದಿಂದ ಕಾಣುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ಇದನ್ನೂ ಓದಿ: Chikkaballapur News: ಉದ್ಯೋಗ, ಶಿಕ್ಷಣದ ಹೆಸರಿನ ವಂಚನೆಗೆ ಎಚ್ಚರ; ಮಾನವ ಕಳ್ಳಸಾಗಣಿಕೆ ತಡೆಗೆ ಸಮೂಹ ಜಾಗೃತಿ ಅಗತ್ಯ

ರಾಷ್ಟ್ರಕವಿ ಕುವೆಂಪು ಹಾಗೂ ಡಿ.ವಿ.ಜಿ. ಅವರ ಸಾಹಿತ್ಯದಲ್ಲೂ ಹಿರಿಯರ ಬಗ್ಗೆ ಅಪಾರ ಗೌರವ ವ್ಯಕ್ತವಾಗಿದೆ. ಬಾಲ್ಯದಲ್ಲಿ ನಮ್ಮನ್ನು ಕೈಹಿಡಿದು ನಡೆಸಿದ ಹಿರಿಯರು ವಯೋವೃದ್ಧರಾದಾಗ ಅವರ ಜೀವನಕ್ಕೆ ನಾವು ಆಸರೆಯಾಗಬೇಕು. ಇಂದಿನ ಯುವಜನತೆ ಹಿರಿಯರ ಆರೈಕೆ ಮತ್ತು ಗೌರವವನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಈ ಕಾರ್ಯಗಾರದ ಮೂಲಕ ಹಿರಿಯ ನಾಗರಿಕರಿಗೆ ಅವರ ಹಕ್ಕುಗಳು, ಸರ್ಕಾರಿ ಸೌಲಭ್ಯಗಳು ಹಾಗೂ ಕಾನೂನು ರಕ್ಷಣೆಗಳ ಕುರಿತು ಸಮಗ್ರ ಮಾಹಿತಿ ನೀಡಲಾಗುತ್ತಿದೆ. ಹಿರಿಯರು ತಮ್ಮ ಸಮಸ್ಯೆಗಳನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದೊಂದಿಗೆ ಹಂಚಿಕೊಂಡು ಕಾನೂನಿನ ನೆರವು ಪಡೆದು ನ್ಯಾಯ ಪಡೆಯಬೇಕು ಎಂದು ಸಲಹೆ ನೀಡಿದರು.

ಉಪವಿಭಾಗಾಧಿಕಾರಿ ಡಿ.ಎಚ್. ಅಶ್ವಿನ್ ಮಾತನಾಡಿ, ಹಿರಿಯ ನಾಗರಿಕರ ರಕ್ಷಣೆಗೆ ಸಂವಿಧಾನಾ ತ್ಮಕ ಹಾಗೂ ಕಾನೂನಾತ್ಮಕ ವ್ಯವಸ್ಥೆಗಳನ್ನು ಸರ್ಕಾರ ಕಲ್ಪಿಸಿದೆ. ಮಕ್ಕಳು ತಂದೆ-ತಾಯಿಯನ್ನು ಅಥವಾ ಕುಟುಂಬದ ಹಿರಿಯರನ್ನು ನಿರ್ಲಕ್ಷಿಸಿದರೆ, ಅವರಿಗೆ ಜೀವನಾಂಶ ದೊರಕಿಸುವ ಅವಕಾಶ ವನ್ನು ಕಾನೂನು ಒದಗಿಸಿದೆ. ಹಿರಿಯರು ತಮ್ಮ ಜೀವನ ನಿರ್ವಹಣೆಗೆ ಅಗತ್ಯವಾದ ನೆರವನ್ನು ಮಕ್ಕಳಿಂದ ಕಾನೂನಿನ ಮೂಲಕ ಪಡೆಯಬಹುದಾಗಿದೆ ಎಂದರು.

3cbpm2jಹಿರಿಯ ನಾಗರಿಕರಿಗೆ ಕಾರ್ಯಾಗಾರ- (11) ok

ಹಿರಿಯ ನಾಗರಿಕರಿಂದ ಒತ್ತಾಯಪೂರ್ವಕವಾಗಿ ಅಥವಾ ಮೋಸದ ಮೂಲಕ ಆಸ್ತಿ, ಜಮೀನು ಸೇರಿದಂತೆ ಇತರ ಆಸ್ತಿಗಳನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿರುವುದು ಕಂಡುಬಂದರೆ, ಅಂತಹ ನೋಂದಣಿಗಳನ್ನು ರದ್ದುಪಡಿಸಿ ಪುನಃ ಹಿರಿಯರ ಹೆಸರಿಗೆ ವರ್ಗಾಯಿಸುವ ಕಾನೂನು ಅವಕಾಶವೂ ಇದೆ ಎಂದು ವಿವರಿಸಿದರು.

ಜಿಲ್ಲಾಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳ ನ್ಯಾಯಾಲಯಗಳಲ್ಲಿ ಇಂತಹ ಪ್ರಕರಣಗಳು ಆಗಾಗ್ಗೆ ವಿಚಾರಣೆಗೆ ಬರುತ್ತಿವೆ. ಹಿರಿಯ ನಾಗರಿಕರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ನ್ಯಾಯಸಮ್ಮತ ತೀರ್ಪುಗಳನ್ನು ನೀಡಲಾಗುತ್ತಿದ್ದು, ಸಮಸ್ಯೆ ಎದುರಾದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ಜಿಲ್ಲಾಡಳಿತದ ಸಕ್ಷಮ ಪ್ರಾಧಿಕಾರಗಳನ್ನು ಸಂಪರ್ಕಿಸಿ ನ್ಯಾಯ ಪಡೆಯಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶಿಲ್ಪಾ ಬಿ., ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ವಿ. ಅಭಿಲಾಶ್, ಡಿಡಿಪಿಐ ರಮೇಶ್, ಡಿಡಿಪಿಯು ಪಂಡಾರಿನಾಥ್, ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ. ಬಿ.ವಿ. ಕೃಷ್ಣ, ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಜಯರಾಮ್ ರೆಡ್ಡಿ, ಕಾರ್ಯದರ್ಶಿ ತಿರುಮಲಪ್ಪ, ಕಾನೂನು ಮತ್ತು ಪರೀಕ್ಷಣಾಧಿಕಾರಿ ರಾಮೇಗೌಡ ಡಿ.ಕೆ., ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಜ್ಯೋತಿಲಕ್ಷ್ಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಹಿರಿಯ ನಾಗರಿಕರು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.