Chikkaballapur News: ರಾಷ್ಟ್ರ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗಲು ಸ್ಕೇಟಿಂಗ್ ಉತ್ತಮ ತರಬೇತಿ ನೀಡಲಾಗುತ್ತಿದೆ
ರಾಷ್ಟ್ರ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಸ್ಕೇಟಿಂಗ್ ಅಸೋಸಿಯೇಷನ್ ಮಾನ್ಯತೆ ಪಡೆದಿರುವ ಸಂಸ್ಥೆಯಾಗಿದ್ದು, ಸ್ಕೇಟಿಂಗ್ ಒಂದು ಉತ್ಸಾಹಭರಿತ ಆಟವಾಗಿದೆ. ನಮ್ಮ ಅಸೋಸಿಯೇಷನ್ ವತಿ ಯಿಂದ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ತರುವ ಎಲ್ಲ ಪ್ರಯತ್ನ ಮಾಡಲಾಗು ತ್ತಿದ್ದು, ರಾಷ್ಟ್ರ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗಲು ಸ್ಕೇಟಿಂಗ್ ಉತ್ತಮ ತರಬೇತಿ ನೀಡಲಾಗು ತ್ತಿದೆ


ಚಿಕ್ಕಬಳ್ಳಾಪುರ: ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ವತಿಯಿಂದ ಭಾನುವಾರ ನಗರ ಹೊರವಲಯದಲ್ಲಿರುವ ಬಿಜಿಎಸ್ ವರ್ಲ್ಡ್ ಸ್ಕೂಲ್ ಆವರಣದಲ್ಲಿ ಎರಡನೇ ಇಂಟರ್ ಸ್ಕೂಲ್ ರೋಲರ್ ಸ್ಕೇಟಿಂಗ್ ಸೌಹಾರ್ದ ಸ್ಪರ್ಧೆ ನಡೆಯಿತು. ಮುಂಬರುವ ಜಿಲ್ಲಾ ಹಾಗೂ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಆಯ್ಕೆಯಾಗಲು ಸ್ಪರ್ಧೆ ಯಾವ ರೀತಿ ಇರಲಿದೆ, ಎಂದೆಲ್ಲ ಸ್ಪರ್ಧಾಳುಗಳಿಗೆ ತರಬೇತಿ ನೀಡುವ ಉದ್ದೇಶದಿಂದ ಸ್ಕೇಟಿಂಗ್ ಸೌಹಾರ್ಧ ಸ್ಪರ್ಧೆ ನಡೆಸಲಾಗಿದೆ. ಕೆ.ವಿ.ಆಂಗ್ಲ ಶಾಲೆ,ಬಿಜಿಎಸ್ ವರ್ಲ್ಡ್ ಸ್ಕೂಲ್ ಹಾಗೂ ಇತರೆ ಶಾಲೆಗಳಿಂದ ಸುಮಾರು 85ಕ್ಕೂ ಹೆಚ್ಚು ಮಕ್ಕಳು ಸ್ಕೇಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲನೇ ಎರಡನೇ ಮತ್ತು ಮೂರನೇ ಸ್ಥಾನ ಪಡೆದು ಮೆಡಲ್ ತಮ್ಮದಾಗಿಸಿಕೊಂಡಿದ್ದಾರೆ
ಎಂದು ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಜಿಲ್ಲಾ ಕಾರ್ಯದರ್ಶಿ ಮಹಮದ್ ಜಬಿ ಉಲ್ಲಾ ತಿಳಿಸಿದರು.
ಇದನ್ನೂ ಓದಿ: Chikkaballapur News: ಇಂತಹ ಪಿಡುಗುಗಳಿಂದ ಸಾರ್ವಜನಿಕ ಆಚೆ ಬಂದು ಎಲ್ಲರೂ ಒಂದೇ ಎಂದು ತಿಳಿದು ಬದುಕಬೇಕು
ರಾಷ್ಟ್ರ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಸ್ಕೇಟಿಂಗ್ ಅಸೋಸಿಯೇಷನ್ ಮಾನ್ಯತೆ ಪಡೆದಿರುವ ಸಂಸ್ಥೆಯಾಗಿದ್ದು, ಸ್ಕೇಟಿಂಗ್ ಒಂದು ಉತ್ಸಾಹಭರಿತ ಆಟವಾಗಿದೆ. ನಮ್ಮ ಅಸೋಸಿಯೇಷನ್ ವತಿಯಿಂದ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ತರುವ ಎಲ್ಲ ಪ್ರಯತ್ನ ಮಾಡಲಾಗು ತ್ತಿದ್ದು, ರಾಷ್ಟ್ರ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗಲು ಸ್ಕೇಟಿಂಗ್ ಉತ್ತಮ ತರಬೇತಿ ನೀಡಲಾಗುತ್ತಿದೆ. ಇಲ್ಲಿಯವರೆಗೆ ತರಬೇತಿ ಪಡೆದ ಹಲವಾರು ಮಕ್ಕಳು ರಾಷ್ಟ್ರ ರಾಜ್ಯ ಹಾಗೂ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇನ್ನು ಇಂದಿನ ಸೌಹಾರ್ದ ಸ್ಪರ್ಧೆಯ ಮುಖಾಂತರ ತರಬೇತಿ ನೀಡಲಾಗಿದೆ ಎಂದರು.
ಜಿಲ್ಲೆಯ ಶಿಡ್ಲಘಟ್ಟ,ಚಿಂತಾಮಣಿ, ಗೌರಿಬಿದನೂರು,ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ಸಮೇತ ಜಿಲ್ಲೆಯಲ್ಲಿ ಒಟ್ಟು ಸ್ಕೇಟಿಂಗ್ ಕ್ಲಬ್ ಕಾರ್ಯನಿರ್ವಹಿಸುತ್ತಿದ್ದು ಸುಮಾರು 700ಕ್ಕೂ ಹೆಚ್ಚು ಮಕ್ಕಳು ತರಬೇತಿ ಪಡೆಯುತ್ತಿದ್ದಾರೆ. ಪ್ರತಿ ವರ್ಷ ಹಲವಾರು ಮಕ್ಕಳು ಜಿಲ್ಲಾ ಹಾಗೂ ರಾಜ್ಯಮಟ್ಟದ ಸ್ಪರ್ಧೆಗಳಿಗೆ ಅಯ್ಕೆಯಾಗುತ್ತಿದ್ದು ನಮ್ಮ ಅಸೋಸಿಯೇಷನ್ ವತಿಯಿಂದ ತರಬೇತಿ ಪಡೆಯುವ ಮಕ್ಕಳಿಗೆ ಎಲ್ಲ ರೀತಿಯ ಸಹಕಾರ ನೀಡುವುದಲ್ಲದೆ ಅವರಲ್ಲಿ ಸ್ಪೂರ್ತಿ ತುಂಬುವ ಕೆಲಸ ಮಾಡ ಲಾಗುತ್ತಿದೆ ಎಂದರು.
ಇಂದಿನ ಸ್ಕೇಟಿಂಗ್ ಸ್ಪರ್ಧೆಯಲ್ಲಿ 6 ವರ್ಷ ಒಳಗಿನ,6 ರಿಂದ 8 ವರ್ಷ 8 ರಿಂದ 10,10 ರಿಂದ 12 ಹಾಗೂ 12 ರಿಂದ 15 ವರ್ಷಗಳ ಮಕ್ಕಳಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಸಲಾಯಿತು. ಪ್ರತ್ಯೇಕವಾಗಿಯೆ ಐದು ವಿಭಾಗದಲ್ಲಿ ಮೊದಲನೇ ಎರಡನೇ ಹಾಗೂ ಮೂರನೇ ಸ್ಥಾನ ಪಡೆದ ಮಕ್ಕಳಿಗೆ ಸರ್ಟಿಫಿ ಕೇಟ್ ಜತೆ ಮೆಡಲ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಉಪಾಧ್ಯಕ್ಷ ಕೃಷ್ಣಾಚಾರಿ, ರೆಫ್ರೀಗಳಾದ ಸೈಯದ್ ಒವೇಜ್, ಮೊಹಮ್ಮದ್ ರೋಷನ್, ಇಲಾಹಿ ಜುನೈದ್, ರೋಷನ್ ಇದ್ದರು.