ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Somnath Jyotirlinga: ಮಾ.14ರಿಂದ ಜಿಲ್ಲೆಯಲ್ಲಿ ಸೋಮನಾಥ ಜ್ಯೋತಿರ್ಲಿಂಗ ದರ್ಶನ ಪ್ರಾರಂಭ : ಚಂದ್ರಿಕಾ ಹೇಳಿಕೆ

ಮಾ.15ರ ಬೆಳಿಗ್ಗೆ 7ರಿಂದ 11ಗಂಟೆಯವರೆಗೆ ಜ್ಯೋತಿರ್ಲಿಂಗ ದರ್ಶನ ಹಾಗು ಸತ್ಸಂಗವನ್ನು ಗುಡಿಬಂಡೆ ಪಟ್ಟಣದ ತಾಲೂಕು ಆಫೀಸ್ ಪಕ್ಕದ ಮುಖ್ಯ ರಸ್ತೆಯ  ಲಕ್ಷ್ಮೀ ಆದಿ ನಾರಾಯಣ ಸ್ವಾಮಿ ದೇವಸ್ಥಾನದಲ್ಲಿ  ಮತ್ತು ಅಂದು ಸಂಜೆ ಸಂಜೆ 5.30ರಿಂದ 9 ಗಂಟೆಯವರೆಗೆ ಬಾಗೇಪಲ್ಲಿಯ ಡಿ.ವಿ.ಜಿ  ರಸ್ತೆಯಲ್ಲಿರುವ ಶ್ರೀ ಸಾಯಿ ಶ್ರೀನಿವಾಸ ಕಾಂಪ್ಲೆಕ್ಸ್ನ ದ್ವಾರಕಾ ಫಂಕ್ಷನ್ ಹಾಲ್‌ನಲ್ಲಿ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಆಸ್ತಿಕ ಭಕ್ತರು ಆಗಮಿಸಲು ಮನವಿ ಮಾಡಿದರು

ಸುಮಾರು ೧ ಸಾವಿರ ವರ್ಷ ಪುರಾತನ ಸೋಮನಾಥ ಜ್ಯೋತಿರ್ಲಿಂಗವನ್ನು  ಜಿಲ್ಲೆಯ ಜನತೆ  ವೀಕ್ಷಿಸಲು ಅವಕಾಶ ದೊರೆಯುತ್ತಿದೆ ಎಂದು ದಿ ಆರ್ಟ್ ಆಫ್ ಲಿವಿಂಗ್‌ನ ಚಂದ್ರಿಕಾ ತಿಳಿಸಿದರು.

ಚಿಕ್ಕಬಳ್ಳಾಪುರ: ಸುಮಾರು 1 ಸಾವಿರ ವರ್ಷ ಪುರಾತನ ಸೋಮನಾಥ ಜ್ಯೋತಿರ್ಲಿಂಗ( Somnath Jyotirlinga) ವನ್ನು ಜಿಲ್ಲೆಯ ಜನತೆ ವೀಕ್ಷಿಸಲು ಅವಕಾಶ ದೊರೆಯುತ್ತಿದೆ ಎಂದು ದಿ ಆರ್ಟ್ ಆಫ್ ಲಿವಿಂಗ್‌ನ ಚಂದ್ರಿಕಾ ತಿಳಿಸಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಗುರುವಾರ ನಡದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.  

ಬೆಂಗಳೂರು ಗ್ರಾಮಾಂತರ ಜಿಲ್ಲೆಯ  ದೊಡ್ಡಬಳ್ಳಾಪುರ ನಗರದ ಸೋಮೇಶ್ವರ ದೇವಸ್ಥಾನದಲ್ಲಿ (ಜಿ ರಾಮೇಗೌಡ ವೃತ್ತದ ಸಮೀಪ) ಮಾ.14ರ ಶನಿವಾರ ಬೆಳಗ್ಗೆ 7ರಿಂದ 11 ಗಂಟೆಯವರೆಗೆ ದರ್ಶನ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆ.

ಅಂದು ಸಂಜೆ 5-30 ರಿಂದ 9 ಗಂಟೆಯವರೆಗೆ ಚಿಕ್ಕಬಳ್ಳಾಪುರ ನಗರದ ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸೋಮನಾಥ್ ಜ್ಯೋತಿರ್ಲಿಂಗ ದರ್ಶನ ಹಾಗು ಸತ್ಸಂಗ ನಡೆಯುತ್ತದೆ ಎಂದರು.

ಇದನ್ನೂ ಓದಿ: Chikkaballapur News: ಭಾನುವಾರ ಬಂದ್ ಕರೆ ಸಮಂಜಸವಲ್ಲ, ವ್ಯಾಪಾರಕ್ಕೆ ತೊಂದರೆ, ಬೇರೆ ದಿನದಲ್ಲಿ ಬಂದ್‌ ಮಾಡಿ: ಮಂಜುನಾಥ್ ಆಗ್ರಹ

ಮಾ.15ರ ಬೆಳಿಗ್ಗೆ 7ರಿಂದ 11ಗಂಟೆಯವರೆಗೆ ಜ್ಯೋತಿರ್ಲಿಂಗ ದರ್ಶನ ಹಾಗು ಸತ್ಸಂಗವನ್ನು ಗುಡಿಬಂಡೆ ಪಟ್ಟಣದ ತಾಲೂಕು ಆಫೀಸ್ ಪಕ್ಕದ ಮುಖ್ಯ ರಸ್ತೆಯ  ಲಕ್ಷ್ಮೀ ಆದಿ ನಾರಾಯಣಸ್ವಾಮಿ ದೇವಸ್ಥಾನದಲ್ಲಿ  ಮತ್ತು ಅಂದು ಸಂಜೆ ಸಂಜೆ 5.30ರಿಂದ 9 ಗಂಟೆ ಯವರೆಗೆ ಬಾಗೇಪಲ್ಲಿಯ ಡಿ.ವಿ.ಜಿ  ರಸ್ತೆಯಲ್ಲಿರುವ ಶ್ರೀ ಸಾಯಿ ಶ್ರೀನಿವಾಸ ಕಾಂಪ್ಲೆಕ್ಸ್ನ ದ್ವಾರಕಾ ಫಂಕ್ಷನ್ ಹಾಲ್‌ನಲ್ಲಿ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಆಸ್ತಿಕ ಭಕ್ತರು ಆಗಮಿಸಲು ಮನವಿ ಮಾಡಿದರು.

ಸೋಮನಾಥದ ಮೂಲ ಜ್ಯೋತಿರ್ಲಿಂಗವನ್ನು ಗುರುದೇವ ರವಿಶಂಕರರು ಪುನಃ ಪ್ರತಿಷ್ಠಾಪಿಸಿದರು.

ಸನಾತನ ಧರ್ಮದ ಪ್ರಕಾರ 12 ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದಾದ ಸೋಮನಾಥ ದೇವಾಲಯವನ್ನು ಸತ್ಯಯುಗದಲ್ಲಿ ಸೋಮ ಅಂದರೆ ಚಂದ್ರನು ಪ್ರತಿಷ್ಠಾಪಿಸಿದನು. ಇಲ್ಲಿ ಶ್ರೀಕೃಷ್ಣನು ತಪಸ್ಸು ಮಾಡಿದ್ದನು ಎಂಬ ಪ್ರತೀತಿ ಇದೆ. ಈ ಮೂಲ ಜ್ಯೋತಿರ್ಲಿಂಗವು ಗಾಳಿಯಲ್ಲಿ ತೇಲುತ್ತಿತ್ತು ಎಂದು ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖವಾಗಿದೆ.

1924ರಲ್ಲಿ ಕಂಚಿ ಶಂಕರಾಚಾರ್ಯರು ಈ ಅಗ್ನಿಹೋತ್ರಿಗಳಿಗೆ ಈ ಶಿವಲಿಂಗಗಳನ್ನು ನೂರು ವರ್ಷಗಳ ಕಾಲ ಗುಪ್ತವಾಗಿ ಸಂರಕ್ಷಿಸುವAತೆ ತಿಳಿಸಿದರು ಮತ್ತು ಅದನ್ನು ರವಿಶಂಕರರಿಗೆ ನೀಡುವಂತೆ ಸೂಚಿಸಿದ್ದರು. ಅದೇ ರೀತಿ ಜನವರಿ 2025ರಲ್ಲಿ ಅಗ್ನಿಹೋತ್ರಿಗಳು ಈ ಶಿವಲಿಂಗಗಳನ್ನು ರವಿಶಂಕರರಿಗೆ  ಹಸ್ತಾಂತರಿಸಿದರು.

ಮಹಾಶಿವರಾತ್ರಿಯಂದು ಜ್ಯೋತಿರ್ಲಿಂಗದ ಈ ಭಾಗಗಳನ್ನು ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ, ಒಂದು ಸಾವಿರ ವರ್ಷಗಳ ನಂತರ ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕ ವೀಕ್ಷಣೆಗೆ ಮತ್ತು ದರ್ಶನಕ್ಕೆ ಮುಕ್ತಗೊಳಿಸಲಾಯಿತು. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವತಿಯಿಂದ ದರ್ಶನವನ್ನು ಭಕ್ತರಿಗೆ ಕಲ್ಪಿಸಲಾಗಿದೆ.

ಅಗ್ನಿಹೋತ್ರಿ ಬ್ರಾಹ್ಮಣರು ಶತಮಾನಗಳಿಂದ ಸಂರಕ್ಷಿಸಿಟ್ಟಿದ್ದ ಸೋಮನಾಥ ಜ್ಯೋತಿ ರ್ಲಿಂಗದ ಮೂಲ ಭಾಗ ಇದಾಗಿದೆ. ಈ ಜ್ಯೋತಿರ್ಲಿಂಗವು ಭಾರತದ ಸಾಂಸ್ಕೃತಿಕ ಮತ್ತು ಧಾರ್ಮಿಕ ಇತಿಹಾಸದ ಪುನರುತ್ಥಾನದ ಸಂಕೇತವಾಗಿದೆ ಎಂದರು. ಈ ವೇಳೆ ದಿ ಆರ್ಟ್ ಆಫ್ ಲಿವಿಂಗ್‌ನ ರಘುರಾಜ್ ಇದ್ದರು.