ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chikkaballapur News: ಯುದ್ದ ನಿಲ್ಲಿಸಿ ಶಾಂತಿ ನೆಲೆಸಲು ಸಹಕರಿಸಿ ಎಂದು ಕ್ರಿಶ್ಚಿಯನ್ ಬಾಂಧವರಿಂದ ವಿಶೇಷ ಪ್ರಾರ್ಥನೆ: ರೆವೆರೆಂಡ್ ಪ್ರವೀಣ್

ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ನಡೆದಿರುವ ಈ ಘಟನೆಯನ್ನು ಇಂದಿಗೂ ಸಹ ಪ್ರಪಂಚ ಎಲ್ಲಾ ದೇಶಗಳಲ್ಲಿಯೂ ಕರ್ಜೂರದ ಗರಿಗಳ ಹಬ್ಬ ಅಥವಾ ಫಾಮ್ ಸಂಡೆ ಎಂದು ಆಚರಿಸುತ್ತಾ ಬರಲಾಗುತ್ತಿದೆ. ಈ ಬಾರಿಯ ಪ್ರಾರ್ಥನೆಗಳಲ್ಲಿ ಪ್ರಪಂಚದಲ್ಲಿ ತಲೆದೂರಿರುವ ಅಶಾಂತಿ ತೊಲಗಿ ಶಾಂತಿ ನೆಲೆಸಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು

ಪ್ರಸ್ತುತ ತಲೆದೋರಿರುವ ಯುದ್ಧದ ವಾತಾವರಣವು ತಿಳಿಗೊಂಡು ಪ್ರಪಂಚದಲ್ಲಿ ಶಾಂತಿ ಸಮಾದಾನ ನೆಲೆಸಲಿ ಎಂದು ಕರ್ಜೂರ ಗರಿಗಳ ಹಬ್ಬವಾದ ಇಂದು ಪ್ರಾರ್ಥಿಸಲಾಯಿತು ಎಂದು ಸಿಎಸ್‌ಐ ಕ್ರೈಸ್ಟ್ ಚರ್ಚಿನ ಸಭಾಪಾಲಕ ಘನ ಪ್ರವೀಣ್ ತಿಳಿಸಿದರು.

ಚಿಕ್ಕಬಳ್ಳಾಪುರ: ಪ್ರಸ್ತುತ ತಲೆದೋರಿರುವ ಯುದ್ಧದ ವಾತಾವರಣವು ತಿಳಿಗೊಂಡು ಪ್ರಪಂಚದಲ್ಲಿ ಶಾಂತಿ ಸಮಾದಾನ ನೆಲೆಸಲಿ ಎಂದು ಕರ್ಜೂರ ಗರಿಗಳ ಹಬ್ಬವಾದ ಇಂದು ಪ್ರಾರ್ಥಿಸಲಾಯಿತು ಎಂದು ಸಿಎಸ್‌ಐ ಕ್ರೈಸ್ಟ್ ಚರ್ಚಿನ ಸಭಾಪಾಲಕರಾದ ಘನ ಪ್ರವೀಣ್ ತಿಳಿಸಿದರು.

ನಗರದ ಸಿಎಸ್‌ಐ ಕ್ರೈಸ್ಟ್ ಚರ್ಚಿನ ವತಿಯಿಂದ ಆಯೋಜಿಸಿದ್ದ ಮೆರವಣಿಗೆಯಲ್ಲಿ ಭಾಗ ವಹಿಸಿ ಮಾತನಾಡಿ, ಶಾಂತಿ ಧೂತನಾದ ಏಸು ಕ್ರಿಸ್ತನು ಯುದ್ದದ ಸಂಕೇತವಾದ ಕುದುರೆ ಯನ್ನು ಏರದೆ ಶಾಂತಿಗೆ ಹೆಸರಾದ ಕತ್ತೆಯ ಮರಿಯನ್ನು ಏರಿ ಕುಳಿತು ಜೆರುಸಲೇಮ್ ಅನ್ನು ಶಾಂತಿ ಧೂತನಾಗಿ ಪ್ರವೇಶ ಮಾಡಿದನು ಎಂದರು.

ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ನಡೆದಿರುವ ಈ ಘಟನೆಯನ್ನು ಇಂದಿಗೂ ಸಹ ಪ್ರಪಂಚ ಎಲ್ಲಾ ದೇಶಗಳಲ್ಲಿಯೂ ಕರ್ಜೂರದ ಗರಿಗಳ ಹಬ್ಬ ಅಥವಾ ಫಾಮ್ ಸಂಡೆ ಎಂದು ಆಚರಿಸುತ್ತಾ ಬರಲಾಗುತ್ತಿದೆ. ಈ ಬಾರಿಯ ಪ್ರಾರ್ಥನೆಗಳಲ್ಲಿ ಪ್ರಪಂಚದಲ್ಲಿ ತಲೆದೂರಿರುವ ಅಶಾಂತಿ ತೊಲಗಿ ಶಾಂತಿ ನೆಲೆಸಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು ಎಂದು ಸಭಾಪಾಲಕರಾದ ಘನ ಪ್ರವೀಣ್ ತಿಳಿಸಿದರು.

ಇದನ್ನೂ ಓದಿ: Chinthamani News: ಮನಸ್ಸು ಸ್ಥಿರವಾಗಿಸಲು ಗುರುಚಿಂತನೆ ಅಗತ್ಯ: ಡಾ.ಜಯರಾಮ್

ಎಂದಿನಂತೆ ಭಾನುವಾರದ ಪ್ರಾರ್ಥನೆಯ ನಂತರ ಏರ್ಪಡಿಸಿದ್ದ ಮೆರವಣಿಗೆಯಲ್ಲಿ ಸಿಎಸ್‌ಐ ಕ್ರೈಸ್ಟ್ ಚರ್ಚಿನ ಸಾವಿರಾರು ಸದಸ್ಯರು ಹೋಸನ್ನ ಹೋಸನ್ನ ಎಂದು ಕೂಗುತ್ತಾ ಊರಿನ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

ಇದೇ ಸಂದರ್ಭದಲ್ಲಿ ಚರ್ಚಿನ ಮಕ್ಕಳು ಏಸು ಸ್ವಾಮಿ ಕತ್ತೆಯನ್ನು ಏರಿಬರುವ, ಏಸು ಕ್ರಿಸ್ತನು ಶಿಲುಬೆಯನ್ನು ಹೊತ್ತು ಸಾಗುವುದು, ಅವರನ್ನು ಹಿಂಬಾಲಿಸುವ ಏಸುವಿನ ಅನುಯಾಯಿಗಳ ಪಾತ್ರಗಳನ್ನು ವೇಷಭೂಷಣಗಳನ್ನು ತೊಟ್ಟು ಸಾಗಿದ ದೃಶ್ಯ ವೀಕ್ಷಿಸಿದ ಜನರ ಮನಸೂರೆಗೊಂಡಿತು.

ಮೆರವಣಿಗೆಯಲ್ಲಿ ಚರ್ಚಿನ ಕಾರ್ಯದರ್ಶಿಗಳಾದ ವಿ.ದಾಸ್, ಖಜಾಂಚಿಗಳಾದ ಹೆನ್ರಿ ಪ್ರಸನ್ನ ಕುಮಾರ್, ಸಭಾಪಾಲನ ಸಮಿತಿಯ ಸದಸ್ಯರಾದ ಜೆ.ಕಿರಣ್‌ವಿಕ್ಟರ್, ಸ್ವಾಮಿ ದಾಸ್,ಆದರ್ಶ್, ರಾಜಶೇಖರ್, ಸಂದೀಪ್, ಪಾಲ್, ಶಶಿಕಲಾ ಸೈಮನ್ ಸಭೆಯ ಹಿರಿಯರಾದ ಎಸ್.ವಿನ್‌ಸ್ಟನ್ ಕೆನಡಿ, ದೇವದಾಸ್,ಎಎಸ್‌ಐ ಮೋಹನ್, ಫ್ಲಾರೆನ್ಸ್ ನೈಟಿಂಗೇಲ್ ಮುಂತಾದವರು ಉಪಸ್ಥಿತರಿದ್ದರು.