ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chinthamani News: ಮನಸ್ಸು ಸ್ಥಿರವಾಗಿಸಲು ಗುರುಚಿಂತನೆ ಅಗತ್ಯ: ಡಾ.ಜಯರಾಮ್

ಗುರುವಿಗೆ ಭಕ್ತಿಯಿಂದ ಶರಣಾಗಿ, ಗುರುವಾಕ್ಯದಲ್ಲಿ ನಂಬಿಕೆ ಇಟ್ಟು, ಸದಾಕಾಲ ಗುರು ಚಿಂತನೆ ಮಾಡುವವರು ಸಹಜಯೋಗಿಗಳು. ಯೋಗಿಯು ತನ್ನ ಸಾಧನೆಯ ಗುಟ್ಟನ್ನು ಬಿಟ್ಟುಕೊಡದೆ ಗುಪ್ತನಾಗಿರುತ್ತಾನೆ ಎನ್ನುತ್ತಾರೆ ಕೈವಾರದ ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರು. ಗುರು ತೋರಿಸಿದ ಹಾದಿಯಲ್ಲಿ ಮುಂದುವರೆಯುತ್ತಾ ಸದಾಕಾಲ ಅಂತರAಗದ ಸಾಧನೆಯಲ್ಲಿ ದಿಟ್ಟವಾಗಿರುತ್ತಾನೆ.

ಮನಸ್ಸು ಸ್ಥಿರವಾಗಿಸಲು ಗುರುಚಿಂತನೆ ಅಗತ್ಯ: ಡಾ.ಜಯರಾಮ್

ಮನಸ್ಸು ಯಾವಾಗ ಜ್ಞಾನವಂತವಾಗಿ, ಸ್ಥಿರವಾಗಿ ನಿಲ್ಲುತ್ತದೋ ಆಗ ನಮ್ಮಲ್ಲಿರುವ ಅವಿದ್ಯೆಗಳು ನಾಶವಾಗಲು ಪ್ರಾರಂಭವಾಗುತ್ತದೆ. ಮನಸ್ಸನ್ನು ಸ್ಥಿರವಾಗಿಸಲು ದೈವಸ್ವರೂಪಿಯಾದ ಗುರುಚಿಂತನೆ ಅಗತ್ಯ ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಅಭಿಪ್ರಾಯಪಟ್ಟರು. -

Profile
Ashok Nayak Mar 30, 2026 12:18 AM

ಚಿಂತಾಮಣಿ: ಮನಸ್ಸು ಯಾವಾಗ ಜ್ಞಾನವಂತವಾಗಿ, ಸ್ಥಿರವಾಗಿ ನಿಲ್ಲುತ್ತದೋ ಆಗ ನಮ್ಮಲ್ಲಿರುವ ಅವಿದ್ಯೆಗಳು ನಾಶವಾಗಲು ಪ್ರಾರಂಭವಾಗುತ್ತದೆ. ಮನಸ್ಸನ್ನು ಸ್ಥಿರ ವಾಗಿಸಲು ದೈವಸ್ವರೂಪಿಯಾದ ಗುರುಚಿಂತನೆ ಅಗತ್ಯ ಎಂದು ಕೈವಾರ ಕ್ಷೇತ್ರದ ಧರ್ಮಾ ಧಿಕಾರಿ ಡಾ.ಎಂ.ಆರ್.ಜಯರಾಮ್ ಅಭಿಪ್ರಾಯಪಟ್ಟರು.

ಶ್ರೀಕ್ಷೇತ್ರ ಕೈವಾರದ ಗವಿಯ ಬಳಿಯ ಪ್ರಕೃತಿಯ ಮಡಿಲಲ್ಲಿ ನೆಲೆಸಿರುವ ಯೋಗಾ ನರಸಿಂಹಸ್ವಾಮಿ ವೈಕುಂಠ ಯಾಗಶಾಲೆಯಲ್ಲಿ ಕೈವಾರ ತಾತಯ್ಯನವರ 300ನೇ ಜಯಂತಿ ಯ ಅಂಗವಾಗಿ ಆಯೋಜಿಸಲಾಗಿದ್ದ ಶ್ರೀರಾಮಭವತಾರಕ ಮಂತ್ರದ ಶ್ರೀರಾಮಕೋಟಿ ಜಪಯಜ್ಞ ಉದ್ಘಾಟಿಸಿ ಮಾತನಾಡಿದರು.

ಗುರುವಿಗೆ ಭಕ್ತಿಯಿಂದ ಶರಣಾಗಿ, ಗುರುವಾಕ್ಯದಲ್ಲಿ ನಂಬಿಕೆ ಇಟ್ಟು, ಸದಾಕಾಲ ಗುರು ಚಿಂತನೆ ಮಾಡುವವರು ಸಹಜಯೋಗಿಗಳು. ಯೋಗಿಯು ತನ್ನ ಸಾಧನೆಯ ಗುಟ್ಟನ್ನು ಬಿಟ್ಟುಕೊಡದೆ ಗುಪ್ತನಾಗಿರುತ್ತಾನೆ ಎನ್ನುತ್ತಾರೆ ಕೈವಾರದ ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರು. ಗುರು ತೋರಿಸಿದ ಹಾದಿಯಲ್ಲಿ ಮುಂದುವರೆಯುತ್ತಾ ಸದಾಕಾಲ ಅಂತರಂಗದ ಸಾಧನೆಯಲ್ಲಿ ದಿಟ್ಟವಾಗಿರುತ್ತಾನೆ.

ಇದನ್ನೂ ಓದಿ: Chinthamani News: ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಅನಧಿಕೃತ ಜೆಪಿ ಅಕಾಡೆಮಿ

ಯೋಗಿಯು ಕೇವಲ ಶಾಸ್ತçಗಳನ್ನು ಓದುತ್ತಾ ಕಾಲ ಕಳೆಯುವುದಿಲ್ಲ. ಎಷ್ಟು ಓದಬೇಕೋ ಓದಿಕೊಂಡು ಯೋಗಸಾಧನೆಯಲ್ಲಿ ಮಗ್ನನಾಗಿ ಗುರಿಯನ್ನು ತಲುಪುತ್ತಾನೆ, ಆತ್ಮಶೋಧಕ ನಾಗುತ್ತಾನೆ. ಯೋಗಸಿದ್ಧಿಯನ್ನು ಪಡೆದಿದ್ದರೂ ಯೋಗಿ ಅದನ್ನು ಹೊರಕ್ಕೆ ತೋರಿಸದೆ ಗೂಢಸಾಧಕನಾಗಿರುತ್ತಾನೆ. ಹೊರಗೆ ಸಾಮಾನ್ಯನಂತೆಯೇ ಜನರಿಗೆ ಕಂಡುಬರುತ್ತಾನೆ  ಎಂದರು.

ಕಾರ್ಯಕ್ರಮಕ್ಕೂ ಮೊದಲಿಗೆ ಘಂಟಾನಾದ, ಸುಪ್ರಭಾತ, ಗೋಪೂಜೆಯನ್ನು ಶ್ರೀಯೋಗಿ ನಾರೇಯಣ ಮಠದಲ್ಲಿ ನೆರವೇರಿಸಲಾಯಿತು. ನಂತರ ಗವಿಯ ಬಳಿಗೆ ಭಕ್ತರು ಬಂದರು. ಗವಿ ಯಾಗಶಾಲೆಯಲ್ಲಿರುವ ಶ್ರೀಗಣಪತಿ, ಮಹಾಲಕ್ಷ್ಮೀ, ಯೋಗಾನರಸಿಂಹಸ್ವಾಮಿ ಹಾಗೂ ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರ ವಿಗ್ರಹಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

cbpm3k

ಶ್ರೀರಾಮಕೋಟಿ ನಡೆಯುವ ಸ್ಥಳದಲ್ಲಿ ವಿಶೇಷ ವೇದಿಕೆ ಹಾಕಲಾಗಿತ್ತು. ಆ ವೇದಿಕೆಯಲ್ಲಿ ಶ್ರೀಸೀತಾರಾಮರ ವಿಗ್ರಹಗಳನ್ನು, ಕೈವಾರ ತಾತಯ್ಯನವರ ಭಾವಚಿತ್ರಗಳನ್ನು ಹಾಗೂ ಮಧ್ಯದಲ್ಲಿ ದೀಪಸ್ತಂಭವನ್ನು ಇಡಲಾಗಿತ್ತು. ಧರ್ಮಾಧಿಕಾರಿ ದಂಪತಿಗಳು ದೀಪ ಬೆಳಗುವುದರ ಮೂಲಕ ರಾಮಕೋಟಿ ಜಪಯಜ್ಞಕ್ಕೆ ಚಾಲನೆ ನೀಡಿದರು.

ರಾಮಕೋಟಿಯನ್ನು ಅಖಂಡ 24 ಗಂಟೆಗಳ ಕಾಲ ನಿರಂತರವಾಗಿ ಮಾಡಲಾಯಿತು.

ಶ್ರೀಯೋಗಾನರಸಿಂಹಸ್ವಾಮಿ ತಂಡ, ಶ್ರೀಅಮರನಾರೇಯಣಸ್ವಾಮಿ ತಂಡ, ಶ್ರೀಮಹಾ ಲಕ್ಷ್ಮೀ ತಂಡಗಳೆಂದು ಮೂರು ತಂಡಗಳನ್ನು ಮಾಡಲಾಗಿತ್ತು. ಒಂದು ಗಂಟೆಗೆ ಒಂದು ತಂಡವು “ರಾಮ ರಾಮ ಮುಕುಂದ ಮಾಧವ ರಾಮ ಸದ್ಗುರು ಕೇಶವಾ, ರಾಮ ದಶರಥ ತನಯ ದೇವಾ ರಾಮಶ್ರೀ ನಾರೇಯಣ” ಎಂಬ ಶ್ರೀರಾಮಭವತಾರಕ ಮಂತ್ರವನ್ನು ಪಠಿಸು ತ್ತಾ, ತಾಳ ಹಾಕುತ್ತಾ, ಶ್ರೀರಾಮರ ವೇದಿಕೆಯ ಸುತ್ತಲೂ ಹೆಜ್ಜೆ ಹಾಕುತ್ತಾ ಭಕ್ತಿಯಿಂದ ಪಠಿಸುತ್ತಿದ್ದರು. ಶಿಕ್ಷಕ ಶಂಕರರೆಡ್ಡಿ ಪ್ರಸ್ತಾವಿಕವಾಗಿ ಮಾತನಾಡಿದರು. ವಿದುಷಿ ಉಷಮ್ಮ ಹಾಗೂ ದಾಕ್ಷಾಯಿಣಿ ಪ್ರಾರ್ಥಿಸಿದರು.

ಕಾರ್ಯಕ್ರಮದಲ್ಲಿ ಶ್ರೀಯೋಗಿನಾರೇಯಣ ಮಠದ ಉಪಾಧ್ಯಕ್ಷರಾದ ಜೆ.ವಿಭಾಕರರೆಡ್ಡಿ, ಖಜಾಂಚಿ ಆರ್.ಪಿ.ಎಂ.ಸತ್ಯನಾರಾಯಣ್, ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆ ಸಂಚಾಲಕರಾದ ವಿದ್ವಾನ್ ವಾನರಾಶಿ ಬಾಲಕೃಷ್ಣ ಭಾಗವತರ್ ಹಾಗೂ ವಿವಿಧ ಭಾಗಗಳಿಂದ ಬಂದ ಭಕ್ತರು ಭಾಗವಹಿಸಿದ್ದರು.