Chikkaballapur News: ಇಫ್ತಿಯಾರ್ ಕೂಟದಲ್ಲಿ ಭಾಗಿಯಾದ ಎಸ್ಪಿ ಕುಶಾಲ್ ಚೌಕ್ಸೆ: ಶಾಂತಿ ಕಾಪಾಡಲು ಮುಖಂಡರಲ್ಲಿ ಮನವಿ
ನಗರದ ಬಿಬಿ ರಸ್ತೆಯಲಿರುವ ಉಸೇನಿಯಾ ದರ್ಗಾಕ್ಕೆ ಭೇಟಿ ನೀಡಿದ್ದ ಎಸ್ಪಿ ಕುಶಾಲ್ ಚೌಕ್ಸೆ ಮುಸ್ಲಿಂ ಬಾಂಧವರು ಏರ್ಪಡಿಸಿದ್ದ ಇಫ್ತಿಯಾರ್ ಕೂಟದಲ್ಲ ಭಾಗಿಯಾಗಿ ನೆಲದ ಕಾನೂನು ಎಲ್ಲರಿಗೂ ಒಂದೇ ಆಗಿದ್ದು ಅದಕ್ಕೆ ಗೌರವ ಕೊಡುವುದನ್ನು ಕಲಿಯಬೇಕಿದೆ. ರಂಜಾನ್ ಹಬ್ಬ ವೂ ಸೇರಿದಂತೆ ಎಲ್ಲಾ ಹಬ್ಬಗಳ ಸಾರ ಭಾವೈಕ್ಯತೆ, ಧಾರ್ಮಿಕ ಸಾಮರಸ್ಯವೇ ಆಗಿದೆ.

ನಗರದ ಬಿಬಿ ರಸ್ತೆಯ ಹುಸೇನಿ ಮಸೀದಿಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕುಶಾಲ್ ಚೌಕ್ಸೆ ಭೇಟಿ ನೀಡಿ ಇಪ್ತಿಯಾರ್ ಕೂಟದಲ್ಲಿ ಭಾಗಿಯಾಗಿದ್ದರು.

ಚಿಕ್ಕಬಳ್ಳಾಪುರ : ನಗರದ ಹುಸೇನಿ ಮಸೀದಿಯಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆ ಮತ್ತು ಇಪ್ತಿಯಾರ್ ಕೂಟದಲ್ಲಿ ಭಾಗವಹಿಸಿದ್ದ ಎಸ್ಪಿ ಕುಶಾಲ್ ಚೌಕ್ಸೆ ಮುಸ್ಲಿಂ ಬಾಂಧವರಿಗೆ ರಂಜಾನ್ ಶುಭಾಶಯ ಕೋರಿ ಶಾಂತಿ ಸೌಹಾರ್ಧತೆಯಿಂದ ಹಬ್ಬ ಆಚರಿಸಲುವಂತೆ ಮುಖಂಡರಲ್ಲಿ ಮನವಿ ಮಾಡಿದರು. ನಗರದ ಬಿಬಿ ರಸ್ತೆಯಲಿರುವ ಉಸೇನಿಯಾ ದರ್ಗಾಕ್ಕೆ ಭೇಟಿ ನೀಡಿದ್ದ ಎಸ್ಪಿ ಕುಶಾಲ್ ಚೌಕ್ಸೆ ಮುಸ್ಲಿಂ ಬಾಂಧವರು ಏರ್ಪಡಿಸಿದ್ದ ಇಫ್ತಿಯಾರ್ ಕೂಟದಲ್ಲ ಭಾಗಿಯಾಗಿ ನೆಲದ ಕಾನೂನು ಎಲ್ಲರಿಗೂ ಒಂದೇ ಆಗಿದ್ದು ಅದಕ್ಕೆ ಗೌರವ ಕೊಡುವುದನ್ನು ಕಲಿಯಬೇಕಿದೆ. ರಂಜಾನ್ ಹಬ್ಬವೂ ಸೇರಿದಂತೆ ಎಲ್ಲಾ ಹಬ್ಬಗಳ ಸಾರ ಭಾವೈಕ್ಯತೆ, ಧಾರ್ಮಿಕ ಸಾಮರಸ್ಯವೇ ಆಗಿದೆ. ಇದನ್ನು ಕಾಪಾಡುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ರಂಜಾನ್ ಆಚರಣೆ ವೇಳೆ ಅಹಿತಕರ ಘಟನೆಗಳು ನಡೆಯದಂತೆ ಜಾಗೃತೆವಹಿಸಬೇಕಿದೆ ಎಂದರು.
ಇದನ್ನೂ ಓದಿ: Chikkaballapur News: ಜಿಲ್ಲಾಧಿಕಾರಿಗಳ ನ್ಯಾಯಾಲಯ ನೀಡಿದ್ದ ಅನರ್ಹತೆ ಆದೇಶಕ್ಕೆ ಹೈಕೋರ್ಟಿಂದ ತಡೆ
ಇತ್ತೀಚಿನ ದಿನಗಳಲ್ಲಿ ಮೈಕ್ರೋ ಪೈನಾನ್ಸ್ ಹಾವಳಿ, ಸೈಬರ್ ಕ್ರೈಂ, ಡಿಜಿಟಲ್ ಅರೆಸ್ಟ್ ನಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ. ಶ್ರಮ ವಹಿಸದೆ ಬರುವ ಯಾವುದೇ ಹಣ ವಂಚನೆಯ ಜಾಲದ ಬಲೆಯಾಗಿರುತ್ತದೆ. ಇಂತಹ ಆಮಿಷಗಳಿಗೆ ಬಲಿಯಾಗಿ ಬದುಕನ್ನು ಹಾಳು ಮಾಡಿಕೊಳ್ಳಬೇಡಿ. ಮುಸ್ಲಿಂ ಸಮುದಾಯದ ಯುವಕರಲ್ಲಿ ವ್ಹೀಲಿಂಗೆ ಮಾಡುವ ಹವ್ಯಾಸ ಹೆಚ್ಚಿದೆ. ಇದು ಕಾನೂನು ಪ್ರಕಾರ ಅಪರಾಧವಾಗಿದೆ. ಇಂತಹ ಕೃತ್ಯಗಳಲ್ಲಿ ಭಾಗಿಯಾದರೆ ದಂಡದ ಸಹಿತ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದರು.
ಚಿಕ್ಕಬಳ್ಳಾಪುರ ಬೆಂಗಳೂರಿಗೆ ತೀರ ಸಮೀಪದ ನಗರವಾಗಿದೆ. ಇಲ್ಲಿ ದ್ವಿಚಕ್ರವಾಹನದಲ್ಲಿ ಹೋಗುವ ಮಂದಿ ತಲೆಗೆ ಹೆಲ್ಮೆಟ್ ಧರಿಸುವುದನ್ನು ಮರೆತು ತಂಡ ಕಟ್ಟುತ್ತಾರೆ.ಆದರೆ ದೇವನಹಳ್ಳಿಯಿಂದ ಆಚೆಗೆ ಹೋಗುವಾಗ ಹೆಲ್ಮೆಟ್ ಧರಿಸುತ್ತಾರೆ. ಅಲ್ಲಿನ ಕಾನೂನು ಬೇರೆ, ಇಲ್ಲಿನ ಕಾನೂನು ಬೇರೆ ಎಂದು ಚಿಂತಿಸುವುದು ತಪ್ಪು.ಸಂಚಾರಿ ನಿಯಮಗಳು ಎಲ್ಲೆಡೆ ಒಂದೇ ಆಗಿರುತ್ತವೆ.ಸೈಬರ್ ಅಪರಾಧಗಳು ಕಂಡು ಬಂದಲ್ಲಿ ಕೂಡಲೇ ಪೊಲೀಸರಿಗೆ ತಿಳಿಸಿ ಅಪಾಯದಿಂದ ಪಾರಾಗಿ ಎಂದರು.
ಈ ವೇಳೆ ಹುಸೇನಿ ಮಸೀದಿಯ ಮುಖಂಡರಾದ ಇಬ್ರಾಹಿಂ ಖಲೀಲ್, ಮೌಲ, ನಯಾಜ್, ನಿಸಾರ್, ಮುಬಾರಕ್, ಮಕ್ಸೂದ್, ಇಂದಾದ್, ನಿಜಾಮ್ ಇತರರು ಇದ್ದರು.