ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೀದಿ ನಾಟಕಗಳು ಜಾಗೃತಿ ಮೂಡಿಸುವ ಸಮರ್ಥ ಮಾಧ್ಯಮವಾಗಿವೆ: ಜಿಲ್ಲಾ ವಾರ್ತಾಧಿಕಾರಿ ಜುಂಜಣ್ಣ

ಗ್ರಾಮೀಣ ಭಾಗದಲ್ಲಿ ಜನ ಸಮುದಾಯಗಳಿಗೆ ಸರ್ಕಾರದ ಯೋಜನೆಗಳ ಕುರಿತು ಅರಿವನ್ನು ಮೂಡಿಸಲು ನಮ್ಮ ಇಲಾಖೆ ಬೀದಿ ನಾಟಕ ಮತ್ತು ಜಾನಪದ ಸಂಗೀತಗಳ ಮೂಲಕ ಜಾಗೃತಿ ಯನ್ನು ಮೂಡಿಸುತ್ತಿದೆ ಗ್ರಾಮೀಣ ಭಾಗದಲ್ಲಿ ಎಷ್ಟೋ ಜನರಿಗೆ ಸರ್ಕಾರದ ಯೋಜನೆಗಳ ಅರಿವಿರುವುದಿಲ್ಲ, ಇತರದ ಕಾರ್ಯಕ್ರಮಗಳ ಮೂಲಕ ಜಾಗೃತಿಯು ಜನಸಮುದಾಯಗಳಿಗೆ ಅರಿವುಡಿಸಲು ಸಹಕಾರಿಯಾಗುತ್ತಿದೆ

ಗ್ರಾಮೀಣ ಭಾಗದಲ್ಲಿ ಜನ ಸಮುದಾಯಗಳಿಗೆ ಸರ್ಕಾರದ ಯೋಜನೆಗಳ ಕುರಿತು ಅರಿವನ್ನು ಮೂಡಿಸಲು ಬೀದಿ ನಾಟಕಗಳು ಸಮರ್ಥ ಮಾಧ್ಯಮವಾಗಿವೆ ಎಂದು ಜಿಲ್ಲಾ ವಾರ್ತಾಧಿಕಾರಿ ಜುಂಜಣ್ಣ ತಿಳಿಸಿದರು.

ಗೌರಿಬಿದನೂರು: ಗ್ರಾಮೀಣ ಭಾಗದಲ್ಲಿ ಜನ ಸಮುದಾಯಗಳಿಗೆ ಸರ್ಕಾರದ ಯೋಜನೆ ಗಳ ಕುರಿತು ಅರಿವನ್ನು ಮೂಡಿಸಲು ಬೀದಿ ನಾಟಕಗಳು ಸಮರ್ಥ ಮಾಧ್ಯಮವಾಗಿವೆ ಎಂದು ಜಿಲ್ಲಾ ವಾರ್ತಾಧಿಕಾರಿ ಜುಂಜಣ್ಣ ತಿಳಿಸಿದರು.

ತಾಲೂಕಿನ ಜಿ.ಕೊತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೋಳ ಶೆಟ್ಟಹಳ್ಳಿ ಗ್ರಾಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಗೌತಮ ಬುದ್ಧ ಸಾಮಾಜಿಕ ಮತ್ತು ಸಾಂಸ್ಕೃತಿಕ ತಂಡದ ವತಿಯಿಂದ ನಡೆದ ಕರ್ನಾಟಕ ಸರ್ಕಾರದ ವಿವಿಧ ಗ್ಯಾರಂಟಿ ಯೋಜನೆಗಳ ಕುರಿತು ಜನಜಾಗೃತಿ ಮೂಡಿಸುವ ಬೀದಿ ನಾಟಕ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.  

ಕಾರ್ಯಕ್ರಮ ಉದ್ದೇಶಿಸಿ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಜುಂಜಣ್ಣ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಜನ ಸಮುದಾಯಗಳಿಗೆ ಸರ್ಕಾರದ ಯೋಜನೆಗಳ ಕುರಿತು ಅರಿವನ್ನು ಮೂಡಿಸಲು ನಮ್ಮ ಇಲಾಖೆ ಬೀದಿ ನಾಟಕ ಮತ್ತು ಜಾನಪದ ಸಂಗೀತ ಗಳ ಮೂಲಕ ಜಾಗೃತಿಯನ್ನು ಮೂಡಿಸುತ್ತಿದೆ ಗ್ರಾಮೀಣ ಭಾಗದಲ್ಲಿ ಎಷ್ಟೋ ಜನರಿಗೆ ಸರ್ಕಾರದ ಯೋಜನೆಗಳ ಅರಿವಿರುವುದಿಲ್ಲ, ಇತರದ ಕಾರ್ಯಕ್ರಮಗಳ ಮೂಲಕ ಜಾಗೃತಿಯು ಜನಸಮುದಾಯಗಳಿಗೆ ಅರಿವುಡಿಸಲು ಸಹಕಾರಿಯಾಗುತ್ತಿದೆ ಎಂದರು.

ಇದನ್ನೂ ಓದಿ: Chikkaballapur News: ಕನ್ನಡ ಒಂದು ಭಾಷೆ ಮಾತ್ರವಲ್ಲ, ಅದು ನಮ್ಮ ಪಾದೇಶಿಕತೆಯ ಭಾವನೆ: ಡೀನ್ ಡಾ.ಎಂ.ಎಲ್.ಮಂಜುನಾಥ್

ಕಾರ್ಯಕ್ರಮದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಈರೇಗೌಡ ಮಾತನಾಡಿ, ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಮತ್ತು ಇನ್ನಿತರ ಯೋಜನೆಗಳ ಕುರಿತು ಜನರಿಗೆ ಸಮಗ್ರವಾಗಿ ಅರ್ಥವಾಗುವಂತೆ ಹಾಡುಗಳ ನೃತ್ಯ ನಾಟಕದ ಮೂಲಕ ಜನರಿಗೆ ಅರಿವಾಗುವಂತೆ ಕಾರ್ಯಕ್ರಮ ನಡೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಸರ್ಕಾರದ ಪಂಚ ಗ್ಯಾರಂಟಿಗಳು ಮತ್ತು ಇನ್ನಿತರೆ ಸರ್ಕಾರದ ಯೋಜನೆಗಳ ಕುರಿತು ಮನೋಜ್ಞವಾಗಿ ನಾಟಕ ಮೂಡಿ ಬಂದಿತು. ಕಲಾವಿದರಾದ ವೈಟಿ ಪ್ರಸನ್ನ ಇಡುಗೂರು, ಕದಿರಯ್ ಶ್ರೀಕಾಂತ್ ಷಣ್ಮುಖ ನಂದೀಶ್ ಶ್ರೀ ಲಕ್ಷ್ಮಿ ಮಾಲಿನಿ ಲೋಕೇಶ್ ಮುಂತಾದವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು.