Gauribidanur News: ವೃತ್ತಿಯ ಬಗ್ಗೆ ಅಭಿಮಾನವಿರಲಿ: ಸ್ವಾಮಿ ವೀರೇಶಾನಂದ ಸರಸ್ವತಿ
ಶಿಕ್ಷಕರು ತಮ್ಮ ವೃತ್ತಿಯನ್ನು ಎಂದಿಗೂ ಲಘುವಾಗಿ ಪರಿಗಣಿಸಬಾರದು. ಸಮಾಜ ಶಿಕ್ಷಕರ ವೃತ್ತಿಯನ್ನು ಕಡೆಗಣಿಸಿದರೆ ತಮ್ಮ ಕರ್ತವ್ಯ ಮತ್ತು ಸಾಧನೆಯ ಮೂಲಕವೇ ಉತ್ತರ ನೀಡಬೇಕು. ಶಿಕ್ಷಕರು ಕಿಂಗ್ ಆಗದಿರಬಹುದು, ಆದರೆ ಕಿಂಗ್ ಮೇಕರ್ ಆಗುತ್ತಾರೆ. ಹೀಗಾಗಿ ಶಿಕ್ಷಕರಿಗೆ ಸಮಾಜದಲ್ಲಿ ಸದಾ ಗೌರವ ಹಾಗೂ ಪವಿತ್ರ ಸ್ಥಾನವಿದೆ ಎಂದರು.
-
ಗೌರಿಬಿದನೂರು: ಶಿಕ್ಷಕರು ತಮ್ಮ ವೃತ್ತಿಯ ಬಗ್ಗೆ ಅಭಿಮಾನ ಹಾಗೂ ಆತ್ಮವಿಶ್ವಾಸ ಹೊಂದಿ ಕರ್ತವ್ಯ ನಿರ್ವಹಿಸಬೇಕು. ಜ್ಞಾನ ಮತ್ತು ಬದ್ಧತೆಯನ್ನು ಮೈಗೂಡಿಸಿಕೊಂಡು ಶಿಕ್ಷಕ ಪರಂಪರೆಯ ಘನತೆಯನ್ನು ಎತ್ತಿ ಹಿಡಿಯಬೇಕು ಎಂದು ತುಮಕೂರು ರಾಮಕೃಷ್ಣ–ಸ್ವಾಮಿ ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ ಕರೆ ನೀಡಿದರು.
ನಗರದ ಡಾ.ಎಚ್.ಎನ್.ಕಲಾಭವನದಲ್ಲಿ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ(Teachers Day) ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಶಿಕ್ಷಕರು ತಮ್ಮ ವೃತ್ತಿಯನ್ನು ಎಂದಿಗೂ ಲಘುವಾಗಿ ಪರಿಗಣಿಸಬಾರದು. ಸಮಾಜ ಶಿಕ್ಷಕರ ವೃತ್ತಿ ಯನ್ನು ಕಡೆಗಣಿಸಿದರೆ ತಮ್ಮ ಕರ್ತವ್ಯ ಮತ್ತು ಸಾಧನೆಯ ಮೂಲಕವೇ ಉತ್ತರ ನೀಡಬೇಕು. ಶಿಕ್ಷಕರು ಕಿಂಗ್ ಆಗದಿರಬಹುದು, ಆದರೆ ಕಿಂಗ್ ಮೇಕರ್ ಆಗುತ್ತಾರೆ. ಹೀಗಾಗಿ ಶಿಕ್ಷಕರಿಗೆ ಸಮಾಜ ದಲ್ಲಿ ಸದಾ ಗೌರವ ಹಾಗೂ ಪವಿತ್ರ ಸ್ಥಾನವಿದೆ ಎಂದರು.
ಇದನ್ನೂ ಓದಿ; Gauribidanur News: ಕಸಬಾ ಸೊಸೈಟಿಗೆ 10 ಕೋಟಿ ರೂ. ಸಾಲ ಸೌಲಭ್ಯ: ಕೆ.ಎನ್.ವೆಂಕಟರಾಮರೆಡ್ಡಿ
ಸುಮಾರು 500 ವರ್ಷಗಳಿಂದ ವಿವಿಧ ರೂಪಗಳಲ್ಲಿ ಶಿಕ್ಷಕರ ದಿನಾಚರಣೆ ನಡೆಯುತ್ತಿದ್ದು, ಸರ್ವಪಲ್ಲಿ ರಾಧಾಕೃಷ್ಣನ್(Sarvapally Radhakrishnan) ಅವರ ಹೆಸರಿನಲ್ಲಿ ರಾಷ್ಟ್ರೀಯ ಶಿಕ್ಷಕರ ದಿನಾಚರಣೆ ನಡೆಯುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ. ಆದರೆ ಭಾರತೀಯ ಪರಂಪರೆ ಯಲ್ಲಿ ಶಿಕ್ಷಕರಿಗೆ ಗೌರವ ಸಲ್ಲಿಸುವ ಆಚರಣೆ ಇದಕ್ಕೂ ಹಿಂದಿನಿಂದಲೂ ಇದೆ ಎಂದು ಹೇಳಿದರು.
ಸಮಾಜ ಶಿಕ್ಷಕರನ್ನು ಲಘುವಾಗಿ ಪರಿಗಣಿಸಬಾರದು. ಹಾಗೆ ಮಾಡಿದರೆ ಅದು ಸಮಾಜದ ಜ್ಞಾನದ ಮಿತಿಯನ್ನು ತೋರಿಸುತ್ತದೆ. ಶಿಕ್ಷಕರು ಜ್ಞಾನಪಿಪಾಸುಗಳಾಗಿ ನಿರಂತರ ಕಲಿಕೆಯಲ್ಲಿ ತೊಡಗಬೇಕು. ಜ್ಞಾನ ಹಾಗೂ ಬದ್ಧತೆ ಉತ್ತಮ ಶಿಕ್ಷಕರನ್ನು ರೂಪಿಸುವ ಪ್ರಮುಖ ಗುಣಗಳಾಗಿವೆ ಎಂದರು.
ಇದೇ ಸಂದರ್ಭದಲ್ಲಿ ಸ್ವಾಮಿ ವೀರೇಶಾನಂದ ಸರಸ್ವತಿ ರಚಿಸಿರುವ ‘ಗುರು ಎಂದರೆ ಲಘುವಲ್ಲ’ ಕೃತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿಡುಗಡೆ ಮಾಡಿದರು.
ಸಮಾರಂಭದಲ್ಲಿ ಜಿಎನ್‌ಆರ್ ಗ್ಲೋಬಲ್ ಅಕಾಡೆಮಿ ಸಂಸ್ಥೆಯ ಮುಖ್ಯಸ್ಥ ಹಾಗೂ ಒಕ್ಕೂಟದ ಅಧ್ಯಕ್ಷ ಜಿ.ಎನ್.ಚಂದ್ರಶೇಖರರೆಡ್ಡಿ, ಬಿಆರ್‌ಸಿ ಸಂಯೋಜಕ ಜಿ.ಗಂಗರೆಡ್ಡಿ ಮಾತನಾಡಿದರು.
ಒಕ್ಕೂಟದ ಗೌರವಾಧ್ಯಕ್ಷ ಎಸ್.ಎಸ್.ರೆಡ್ಡಿ, ಉಪಾಧ್ಯಕ್ಷ ಪಠಾನ್ ಸೈಫುಲ್ಲಾ, ಕಾರ್ಯದರ್ಶಿ ಕೆ.ಎನ್. ರವಿಕುಮಾರ್, ಜಂಟಿ ಕಾರ್ಯದರ್ಶಿ ಎಂ.ರಾಜಾ ಸೋಲೋಮನ್, ಖಜಾಂಚಿ ಕೆ.ನಾಗಭೂಷಣ ರಾವ್, ನಿರ್ದೇಶಕರಾದ ಡಾ. ಜಿ.ಎ. ಸುದರ್ಶನ್, ಡಿ. ಸ್ಯಾಮ್ಸನ್, ಕೆ.ಎಚ್. ಸತ್ಯನಾರಾಯಣರಾವ್, ವಿಜಯಲಕ್ಷ್ಮಿ, ಬಿ.ಆರ್. ಚಂದ್ರಮೌಳಿ ಉಪಸ್ಥಿತರಿದ್ದರು.