ಬಾಗೇಪಲ್ಲಿ: ರಾಜಕೀಯ ಬಲಾಡ್ಯರ ಪಾಲಾಗುತ್ತಿದ್ದ 6 ಕೋಟಿ ರೂ ಬೆಲೆಬಾಳುವ ಸರ್ಕಾರಿ ಬೀಳು ಜಮೀನನ್ನು ಮಂಗಳವಾರದಂದು ಪೊಲೀಸರ ಸರ್ಪ ಕಾವಲುನಲ್ಲಿ ಭೂ ಮಾಪನಾ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೇ ನಡೆಸಿ ಗಡಿ ರೇಖೆ ಗುರುತಿಸಿರುವ ಘಟನೆ ಬಾಗೇ ಪಲ್ಲಿ ತಾಲೂಕಿನ ಚಿಕ್ಕತಿಮ್ಮನಹಳ್ಳಿ ಗ್ರಾಮದ ಬಳಿ ನಡೆದಿದೆ.
ಬಾಗೇಪಲ್ಲಿ ಪಟ್ಟಣದ ಸುತ್ತಮುತ್ತಲಿನ ಪ್ರದೇಶದ ಸೇರಿದಂತೆ ಕಸಭಾ ಹೋಬಳಿ ವ್ಯಾಪ್ತಿಯಲ್ಲಿ ಭೂಮಿ ಬೆಲೆ ಗಗನ ಕುಸುಮವಾಗಿದ್ದು, ಚಿನ್ನದ ಬೆಲೆಗಿಂತ ಕೃಷಿ ಜಮೀನಿನ ಬೆಲೆ ವೇಗವಾಗಿ ಬೆಳೆ ಯುತ್ತಿರುವ ಹಿನ್ನಲೆಯಲ್ಲಿ ಸರ್ಕಾರಿ ಗೋಮಾಳ, ಖರಾಬು ಜಮೀನುಗಳ ಕಬಳಿಕೆಗಾಗಿ ಪರಿತಪಿಸು ತ್ತಿರುವ ಕೆಲ ಬಲಾಢ್ಯರು ತಹಶೀಲ್ದಾರ್ ಅದೇಶಕ್ಕೂ ಕವಡೆಕಾಸಿನನ ಬೆಲೆ ನೀಡದೆ ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಬೀಳು ಜಮೀನಿನ ಆಳತೆ ಕಾರ್ಯಕ್ಕೆ ಸದಾ ಅಡ್ಡಿಪಡಿಸಿ ದರ್ಪ ತೋರುತ್ತಿದ್ದ ಬಲಾಢ್ಯರ ನಡೆಗೆ ತಹಶೀಲ್ದಾರ್ ಮನಿಷಾಪತ್ರಿ ಎಡೆಮುರಿ ಕಟ್ಟಿದ್ದಾರೆ.
ಬಾಗೇಪಲ್ಲಿ ತಾಲೂಕಿನ ಕಸಭಾ ಹೋಬಳಿಯ ಯಲ್ಲಂಪಲ್ಲಿ ಗ್ರಾಮದ ಸರ್ವೇ ನಂ 490ರಲ್ಲಿ ಬಾಗೇಪಲ್ಲಿ ಪಾತಪಾಳ್ಯ ರಾಜ್ಯ ಹೆದ್ದಾರಿಗೆ ಹೊಂದಿಕೊಂಡು 11 ಎಕರೆ ಸರ್ಕಾರಿ ಜಮೀನು ಇದ್ದು, ಸದರಿ ಸರ್ಕಾರಿ ಜಮೀನಿನ ವಿಸ್ತೀರ್ಣದಲ್ಲಿ ಚಿಕ್ಕತಿಮ್ಮನಹಳ್ಳಿಯ ನಂಜುಂಡಪ್ಪ ಎಂಬವರಿಗೆ 2 ಎಕರೆ, ರ‍್ರಪ್ಪ ಎಂಬವರಿಗೆ 3 ಎಕರೆ ಜಮೀನು ಮಂಜೂರು ಆಗಿದ್ದು, ಉಳಿಕೆ 6 ಎಕರೆ ಜಮೀನು ಸರ್ಕಾರಿ ಬೀಳು ಎಂದು ಕಂದಾಯ ಇಲಾಖೆ ಮೂಲ ದಾಖಲೆ ಸೇರಿದಂತೆ ಪಹಣಿ ಮತ್ತು ಮುಟೇಷನ್‌ನಲ್ಲಿ ನಮೂದಾಗಿರುತ್ತದೆ. ಸರ್ಕಾರಿ ಜಮೀನಿನ ಆಳತೆಗೆ ಬಂದಂತಹ ಭೂಮಾಪನಾ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಗ್ರಾಮದ ಕೆಲವರು ಪ್ರತಿ ಬಾರಿಯೂ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದರು.
ಇದನ್ನೂ ಓದಿ: Chikkaballapur News: ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಾಲನೆ
ತಹಶೀಲ್ದಾರ್ ಮನೀಷಾ ಪತ್ರಿ ಗ್ರಾಮ ಅಢಳಿತ ಆಧಿಕಾರಿಗಳ ವರದಿಯಂತೆ ಸರ್ವೇ 490 ರಲ್ಲಿರುವ ಸರ್ಕಾರಿ ಜಮೀನುನ್ನು ಆಳತೆ ಮಾಡಲು ಸೂಕ್ತ ಪೊಲೀಸ್ ಬಂದೋಬಸ್ತ್ನೊಂದಿಗೆ ಡಿ.15 ರಂದು ಬಾಗೇಪಲ್ಲಿ ತಾಲೂಕು ಭೂಮಾಪನಾ ಸಹಾಯಕ ನಿರ್ದೇಶಕ ಮಂಜುನಾಥ್, ರಾಜಸ್ವ ನಿರೀಕ್ಷಕ ಪ್ರಶಾಂತ್, ತಾಲೂಕು ಸರ್ವೇಯರ್ ನರಸಿಂಹಮೂರ್ತಿ ಹಾಗೂ ಅಧಿಕಾರಿಗಳ ತಂಡದೊAದಿಗೆ ಸರ್ಕಾರಿ ಬೀಳು ಜಮೀನು ಆಳತೆಗೆ ಹೋದಾಗ ಗ್ರಾಮದ ಕೆಲ ಬಲಾಢ್ಯರು ಸರ್ವೇ ಕಾರ್ಯ ನಡೆಸ ದಂತೆ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದರಿಂದ ಬಂದ ದಾರಿಗೆ ಸುಂಖ ಇಲ್ಲ ಎಂಬಂತೆ ಅಧಿಕಾರಿಗಳು ಹಿಂದಿರುಗಿರುವ ಪ್ರಸಂಗ ನಡೆದಿದ್ದು, ಡಿ.23 ರಂದು ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಅಯೋ ಜಿಸಿ ಜಮೀನು ಅಳತೆ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ.
ಕ್ರಿಮಿನಲ್ ಕೇಸು ದಾಖಲಿಸುವಂತೆ ಅದೇಶ: ಸರ್ಕಾರದ ವಿವಿಧ ಇಲಾಖೆಗಳಿಗೆ ಸರ್ಕಾರಿ ಜಮೀನಿನ ಅವಶ್ಯಕತೆ ಇರುವ ಹಿನ್ನಲೆಯಲ್ಲಿ ರಾಷ್ಟೀಯ ಮತ್ತು ರಾಜ್ಯ ಹೆದ್ದಾರಿಗಳಿಗೆ ಹೊಂದಿಕೊಂಡಿರುವ ಸರ್ಕಾರಿ ಜಮೀನುಗಳ ಒತ್ತುವರಿಗೆ ತೆರವಿಗೆ ಮುಂದಾಗಿರುವ ತಾಲೂಕು ಆಡಳಿತದ ಅದೇಶಕ್ಕೆ ಸ್ಥಳೀಯವಾಗಿ ಅಡ್ಡಿಪಡಿಸಿದರೆ ಅಂತಹ ವ್ಯಕ್ತಿಗಳ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಪೊಲೀಸ್ ಇಲಾಖೆಗೆ ಅದೇಶ ನೀಡಿರುವ ಹಿನ್ನಲೆಯಲ್ಲಿ ಸರ್ವೇ ಸಮಯದಲ್ಲಿ ಎಲ್ಲರೂ ಮೌನಕ್ಕೆ ಜಾರಿರುವ ಪ್ರಸಂಗ ನಡೆಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮನೀಷಾಪತ್ರಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮುನಿರತ್ನಂ, ರಾಜಸ್ವ ನಿರೀಕ್ಷಕ ಪ್ರಶಾಂತ್,ತಾಲೂಕು ಸರ್ವೇಯರ್ ನರಸಿಂಹಮೂರ್ತಿ ಹಾಗೂ ಸಿಬ್ಬಂದಿ
ವರ್ಗದವರು ಇದ್ದರು.