ಗೌರಿಬಿದನೂರು: ಪಟ್ಟಣದ ಮುನೇಶ್ವರ ಬಡಾವಣೆಯ ತೀರ್ಥ ಶಾಲೆಯಲ್ಲಿ ಅಣ್ಣೆ ಫಾತಿಮಾ ಶಿಕ್ಷಕರ ತರಬೇತಿ ಸಂಸ್ಥೆಯ ಗುರು ಶಿಷ್ಯರ ಸಮಾಗಮ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪ್ರಾಂಶುಪಾಲರಾಗಿ ಕೆಲಸ ನಿರ್ವಹಿಸಿದ್ದ ಪ್ರೊ. ಕೆ.ವಿ. ಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಣ್ಣೆ ಫಾತಿಮಾ ಶಿಕ್ಷಕರ ತರಬೇತಿ ಸಂಸ್ಥೆ ಮೂರು ದಶಕಗಳ ಕಾಲ ಉತ್ಕೃಷ್ಟ ಶಿಕ್ಷಣ ನೀಡಿ, ಗುಣಮಟ್ಟದ ಶಿಕ್ಷಕರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ. ಸಂಸ್ಥೆ ನಮಗೆ ಅನ್ನ, ನಿಮಗೆ ಅಕ್ಷರ ನೀಡಿದೆ. ಆದ್ದರಿಂದ ನಾವು ಸಂಸ್ಥೆಗೆ ಕೃತಜ್ಞರಾಗಿ ಸಮಾಜದಲ್ಲಿ ಉತ್ತಮ ಕೆಲಸಗಳನ್ನು ಮಾಡಬೇಕಾಗಿದೆ. ಗುರು ಶಿಷ್ಯರ ಪರಂಪರೆ ಹೀಗೆ ಮುಂದುವರೆಯಬೇಕು. ತಾವುಗಳು ಸಂಸ್ಥೆಯಿAದ ಪಡೆದಿರುವ ಮೌಲ್ಯಯುತ ಶಿಕ್ಷಣ ಮತ್ತು ಸಂಸ್ಕಾರವನ್ನು ಸಮಾಜಕ್ಕೆ ನೀಡಬೇಕು. ನೈತಿಕತೆ ಯಿಂದ ಕೆಲಸ ಮಾಡಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕು. ಇದೊಂದು ಗುರು ಶಿಷ್ಯರ ಭಾವನಾತ್ಮಕ ಬೆಸುಗೆಯ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: Gauribidanur News: ಡಿ.ಪಾಳ್ಯದಲ್ಲಿ ಬ್ರಹ್ಮ ರಥೋತ್ಸವ
ಉಪನ್ಯಾಸಕರಾದ ನಾಗಭೂಷಣ್ ರೆಡ್ಡಿ ಮಾತನಾಡಿ, ಗುರು ಹಿರಿಯರ ಆಶೀರ್ವಾದ ಗಳೊಂದಿಗೆ ತಮ್ಮ ಜೀವನವನ್ನು ಸಾರ್ಥಕ ಮಾಡಿಕೊಂಡಿದ್ದಕ್ಕೆ ನಮಗೆ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದರು.
ಉಪನ್ಯಾಸಕ ಲಕ್ಷ್ಮಣ್ ಮೂರ್ತಿ, ಸಿದ್ದಯ್ಯ ಮತ್ತು ನವೀನ್ ಕುಮಾರ್ ಮಾತನಾಡಿ, ವಿದ್ಯಾರ್ಥಿ ಜೀವನ ಶ್ರೇಷ್ಠವಾದದ್ದು, ನಾವುಗಳು ನೀಡಿರುವ ಶಿಸ್ತಿನ ಶಿಕ್ಷಣವನ್ನು ಜೀವನದಲ್ಲಿ ಅಳವಡಿಸಿಕೊಳ್ಳ ಬೇಕೆಂದು ಕರೆ ಕೊಟ್ಟರು.
ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಎಂ. ಶೋಭಾ, ಸಹಾಯಕಿ ಉಡುಮಲೋಡು ಲಲಿತಮ್ಮ, ಹಿರಿಯ ವಿದ್ಯಾರ್ಥಿಗಳಾದ ಮಂಜುನಾಥ್, ಗಂಗಪ್ಪ, ರವಿಕುಮಾರ್, ಶಿವಶಂಕರ್, ಕಡಬೂರು ಗೌರಿ, ನಾಗಮಣಿ ಪವಿತ್ರಾ, ಶರ್ಮಾ, ಸುನಿಲ್ ಕುಮಾರ್, ನಂದೀಶ್, ರಾಮಚಂದ್ರ, ಜಯಣ್ಣ, ಕೆಂಪರಾಜ್ ಉಪಸ್ಥಿತರಿದ್ದರು.