ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gauribidanur News: ಡಿ.ಪಾಳ್ಯದಲ್ಲಿ ಬ್ರಹ್ಮ ರಥೋತ್ಸವ

ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿವಿಧ ರೀತಿಯ ದೇವತಾ ಕಾರ್ಯ ಗಳು ನೆರೆವೇರಿದವು, ಮಹಾ ಮಂಗಳಾರತಿಯ ನಂತರ ಅಭಿಜಿತ್ ಮುಹೂರ್ತದಲ್ಲಿ ಸಾವಿರಾರು ಮಂದಿ ಭಕ್ತರ ಜಯ ಘೋಷ ದೊಂದಗೆ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಗ್ರಾಮದ ರಾಜ ಬೀದಿಗಳಲ್ಲಿ ಸಾಗಿದ ಬ್ರಹ್ಮ ರಥೋತ್ಸವಕ್ಕೆ ಗ್ರಾಮಸ್ಥರು ಪೂಜೆಯನ್ನು ನೆರವೇರಿಸಿದರು

Gauribidanur News: ಡಿ.ಪಾಳ್ಯದಲ್ಲಿ ಬ್ರಹ್ಮ ರಥೋತ್ಸವ

-

Profile
Ashok Nayak May 2, 2026 11:39 PM

ಗೌರಿಬಿದನೂರು: ತಾಲೂಕಿನ ಡಿ.ಪಾಳ್ಯ ಗ್ರಾಮದಲ್ಲಿ ಶ್ರೀ ರಾಮಚಂದ್ರ ಸ್ವಾಮಿಯ ಒಂಬತ್ತನೆಯ ಬ್ರಹ್ಮ ರಥೋತ್ಸವ ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿತು.

ಮುಂಜಾನೆಯಿಂದಲೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿವಿಧ ರೀತಿಯ ದೇವತಾ ಕಾರ್ಯ ಗಳು ನೆರೆವೇರಿದವು, ಮಹಾ ಮಂಗಳಾರತಿಯ ನಂತರ ಅಭಿಜಿತ್ ಮುಹೂರ್ತದಲ್ಲಿ ಸಾವಿರಾರು ಮಂದಿ ಭಕ್ತರ ಜಯ ಘೋಷದೊಂದಗೆ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಗ್ರಾಮದ ರಾಜ ಬೀದಿಗಳಲ್ಲಿ ಸಾಗಿದ ಬ್ರಹ್ಮ ರಥೋತ್ಸವಕ್ಕೆ ಗ್ರಾಮಸ್ಥರು ಪೂಜೆ ನೆರವೇರಿಸಿದರು.

ಇದನ್ನೂ ಓದಿ: Gauribidanur News: 4 ಕೋಟಿ ವೆಚ್ಚದ ವಿದ್ಯುತ್ ಚಿತಾಗಾರಕ್ಕೆ ಭೂಮಿ ಪೂಜೆ

ಭಕ್ತಾದಿಗಳಿಗೆ ಪಾನಕ, ಮಜ್ಜಿಗೆ ಹಾಗೂ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು. ದೇವತಾ ಕಾರ್ಯಗಳನ್ನು ಅರ್ಚಕರಾದ ಸುಬ್ರಹ್ಮಣ್ಯ ಶರ್ಮಾ ನೆರವೇರಿಸಿದರು.

ಬ್ರಹ್ಮರಥೋತ್ಸವದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಘವೇಂದ್ರ ಹನುಮಾನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಅರುಂಧತಿ, ಕೆ ನಾಗಭೂಷಣ್ ರಾವ್, ಕೊಂಡಪ್ಪ, ಮಾರತಿ, ರಂಗನಾಥ ಗೌಡ, ಶ್ರೀನಿವಾಸ ಕಲ್ಯಾಣ್, ಶಶಿಧರ್, ಸುಧಾಕರ್, ಮೈಲಪ್ಪ, ಚಂದ್ರು, ರವಿ, ಮೋಹನ್ ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು.