Gauribidanur News: ಅಮರಶಿಲ್ಪಿ ಜಕಣಾಚಾರಿ ಸಮುದಾಯವು ರಾಜಕೀಯ ಪರಿಜ್ಞಾನ ಬೆಳೆಸಿಕೊಳ್ಳಬೇಕಿದೆ : ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸುಜ್ಞಾನಮೂರ್ತಿ
ತಾಲ್ಲೂಕಿನಲ್ಲಿ ನಮ್ಮ ಸಮುದಾಯದವರು 10 ಸಾವಿರ ಜನಸಂಖ್ಯೆ ಇದ್ದಾರೆ, ನಾವು ಒಂದಾದರೆ ರಾಜಕೀಯದಲ್ಲಿ ಯಾರನ್ನಾದರೂ ಸೋಲಿಸಬಹುದು ಅಥವಾ ಗೆಲ್ಲಿಸಬಹುದು. ನಮ್ಮ ಸ್ಥಾನ ವನ್ನು ನಾವು ಪಡೆಯಬೇಕು ಎಂದರೆ ವಿಧಾನಸಭೆಯಲ್ಲಿ ನಮ್ಮ ಕೂಗನ್ನು ಕೇಳಿಸಿಕೊಳ್ಳುವವರನ್ನು ಆಯ್ಕೆ ಮಾಡಿಕೊಳ್ಳಬೇಕು
ಅಮರಶಿಲ್ಪಿ ಜಕಣಾಚಾರಿಯವರು ಕಲ್ಲನ್ನು ಕೆತ್ತಿ , ಜೀವ ಕೊಟ್ಟು ಅದನ್ನು ಪೂಜೆ ಮಾಡಿಕೊಳ್ಳುವ ಅವಕಾಶ ಮಾಡಿಕೊಟಂತಹ ಮಹಾನ್ ಪುರುಷ ಎಂದು ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸುಜ್ಞಾನಮೂರ್ತಿ ಹೇಳಿದರು. -
ಗೌರಿಬಿದನೂರು: ಅಮರಶಿಲ್ಪಿ ಜಕಣಾಚಾರಿ(Amarashilpi Jakanachari)ಯವರು ಕಲ್ಲನ್ನು ಕೆತ್ತಿ , ಜೀವ ಕೊಟ್ಟು ಅದನ್ನು ಪೂಜೆ ಮಾಡಿಕೊಳ್ಳುವ ಅವಕಾಶ ಮಾಡಿಕೊಟ್ಟಂತಹ ಮಹಾನ್ ಪುರುಷ ಎಂದು ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸುಜ್ಞಾನಮೂರ್ತಿ ಹೇಳಿದರು.
ನಗರದ ಹೊರಹೊಲಯದಲ್ಲಿರುವ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಅಮರಶಿಲ್ಪಿ ಜಕಣಾಚಾರಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಡೀ ಜಗತ್ತಿನಲ್ಲಿ ನಮ್ಮ ಶಿಲ್ಪ ಕಲೆ ಅಮರಶಿಲ್ಪಿ ಜಕಣಾಚಾರಿ ಅವರಿಂದ ಇನ್ನು ಜೀವಂತವಾಗಿದೆ. ಜಗತ್ತಿನ ಎಲ್ಲಾ ವರ್ಗದ ಜನರಿಗೆ ಪೂಜಿಸುವ ದೇವರ ಮೂರ್ತಿ ಮಾಡಿಕೊಟ್ಟು ಕಲ್ಲಿಗೆ ಜೀವ ತುಂಬುವಂತಹವರು ನಾವು, ಆದರೆ ವಿಶ್ವಕರ್ಮದವರ ಜೀವನ ಮಟ್ಟ ಇನ್ನೂ ಹಸನು ಆಗಲೇ ಇಲ್ಲ ಎಂದರು.
ತಾಲ್ಲೂಕಿನಲ್ಲಿ ನಮ್ಮ ಸಮುದಾಯದವರು 10 ಸಾವಿರ ಜನಸಂಖ್ಯೆ ಇದ್ದಾರೆ, ನಾವು ಒಂದಾದರೆ ರಾಜಕೀಯದಲ್ಲಿ ಯಾರನ್ನಾದರೂ ಸೋಲಿಸಬಹುದು ಅಥವಾ ಗೆಲ್ಲಿಸಬಹುದು. ನಮ್ಮ ಸ್ಥಾನ ವನ್ನು ನಾವು ಪಡೆಯಬೇಕು ಎಂದರೆ ವಿಧಾನಸಭೆಯಲ್ಲಿ ನಮ್ಮ ಕೂಗನ್ನು ಕೇಳಿಸಿಕೊಳ್ಳು ವವರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ: Gauribidanur News: 6.5 ಕೋಟಿ ರೂ. ವಿಶೇಷ ಅನುದಾನದಲ್ಲಿ ನಿರ್ಮಾಣ: ನಿಷ್ಕ್ರಿಯವಾಗಿರುವ ಸುಸಜ್ಜಿತ ನೂತನ ಕಟ್ಟಡ
ನಮ್ಮ ಜನಾಂಗದಲ್ಲೂ ತುಂಬಾ ಕಡುಬಡವರು ಇದ್ದಾರೆ. ಅವರ ಶ್ರೇಯೋಭಿವೃದ್ಧಿಗಾಗಿ ನಿಗಮಕ್ಕೆ ಮುಖ್ಯ ಮಂತ್ರಿಗಳು, ಉಪ ಮುಖ್ಯಮಂತ್ರಿಗಳು 50 ಕೋಟಿ ಅನುದಾನವನ್ನು ನೀಡಿದ್ದಾರೆ. ಅರ್ಜಿ ಯನ್ನು ಸಲ್ಲಿಸಿ ಅರ್ಹ ವ್ಯಕ್ತಿಗಳು ಸೌಲಭ್ಯವನ್ನು ಪಡೆಯಬಹುದು. ಶಿಕ್ಷಣಕ್ಕೆ ನಮ್ಮಲ್ಲಿ ಮೊದಲು ಆದ್ಯತೆ ವಿದೇಶದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ 50 ಲಕ್ಷದವರೆಗೂ ಶಿಕ್ಷಣ ಸಾಲದ ಅವಕಾಶ ಕಲ್ಪಿಸಲಾಗಿದೆ ಬಡ ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡೆದುಕೊಳ್ಳಿ ಎಂದರು.
ಚಳ್ಳಕೆರೆ ಪ್ರಸನ್ನಕುಮಾರ್ ಮಾತನಾಡಿ, ನಮ್ಮ ರಾಜ್ಯದಲ್ಲಿ ಪ್ರವಾಸೋದ್ಯಮ ಬೆಳೆಯುತ್ತಿದೆ ಎಂದರೆ ಅದು ಜಕಣಾಚಾರಿಯವರು ಅಂದು ಕೆತ್ತಿರುವ ಕೆತ್ತನೆಗಳಿಂದಲೇ ಆಗಿದೆ. ಉದಾಹರಣೆಗೆ ಕಾಳಿಕಾದೇವಿ, ವೀರಬ್ರಹ್ಮೇಂದ್ರಸ್ವಾಮಿ, ಇಂಥಹ ಮಹಾನ್ ಪುರುಷರು ಹುಟ್ಟಿದಂಥಹ ಸಮು ದಾಯ. ನಮ್ಮದು ಯಾವ ವ್ಯಕ್ತಿ ನೋವಲ್ಲಿದ್ದರೆ ಅವರ ಪರವಾಗಿ ಕೆಲಸ ಮಾಡುವ ಸಮುದಾಯ ವಾಗಿದೆ. ಸಹಾಯ ಮಾಡಲು ಸಂಘಟನೆಗಳನ್ನು ಕಟ್ಟಬೇಕೇ ಹೊರತು ವೈಯಕ್ತಿಕ ಲಾಭಕ್ಕಾಗಿ ಜನಾಂಗದ ಸಂಘಟನೆಯನ್ನು ಬಳಸಿಕೊಳ್ಳಬಾರದು ಎಂದು ಕಿವಿ ಮಾತು ಹೇಳಿದರು.
ತಾಲ್ಲೂಕು ಅಧ್ಯಕ್ಷ ರಾಧಾಕೃಷ್ಣ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಜನಸಿದ ನಮ್ಮ ಜಕಣಾ ಚಾರಿ ಅವರ ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡಬೇಕು ಎಂದು ಆದೇಶ ಹೊರಡಿ ಸಲು ನಾನು ಸಾಕಷ್ಟು ಕಚೇರಿಗಳಿಗೆ ಅಲೆದಾಡಿ ತುಂಬಾ ಶ್ರಮ ಪಟ್ಟಿದ್ದೇನೆ. ಈಗೆಲ್ಲ ದಿನಕ್ಕೊಂದು ದಿನಾಚರಣೆಗಳನ್ನು ಆಚರಣೆ ಮಾಡುತ್ತಿದ್ದಾರೆ. ಅದರ ಹಿಂದೆ ನಮ್ಮಂತವರ ಪರಿಶ್ರಮ ಇರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಅರವಿಂದ್.ಕೆ.ಎಂ. ವಿಶ್ವಕರ್ಮ ಸಮುದಾಯದ ಮುಖಂಡರಾದ ಬಿ.ಎಂ.ಚನ್ನರಾಯಚಾರಿ, ಎಸ್.ಎ. ಲಕ್ಷ್ಮೀನರಸಿಂಹಮೂರ್ತಿ, ರಾಘವೇಂದ್ರ, ಕೆ.ಶಿವ ರಾಮು, ಚಳ್ಳಕೆರೆ ಪ್ರಸನ್ನ ಕುಮಾರ್, ಎಚ್.ಎಸ್. ಜಗದೀಶ್ವರಾಚಾರಿ, ಎಂ.ಎನ್.ವಿಜಯಕುಮಾರ್, ಎಲ್.ಎಸ್. ಗುರು, ಲಕ್ಷ್ಮೀಕಾಂತಾಚಾರ್, ಪುಷ್ಪಲತ ಪಿ ಸೇರಿದಂತೆ ಇನ್ನಿತರರಿದ್ದರು.