ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chikkaballapur News: ವಿದ್ಯಾರ್ಥಿಗಳ ಜೀವನ ರೂಪಿಸಿದ ಗುರುಗಳ ಋಣ ತೀರಿಸಲಾಗದು: ಕೆ.ವಿ.ನವೀನ್ ಕಿರಣ್

ಕೆ.ವಿ. ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಅಧ್ಯಕ್ಷನಾಗಿದ್ದರೂ ನಾನೂ ಸಹ ಶಿಕ್ಷಕರ ಶಿಷ್ಯನೇ ಆಗಿದ್ದೇನೆ. ಸಮಾಜದಿಂದ ನಾವು ಏನಾದರೂ ಪಡೆಯುವುದಕ್ಕಿಂತ ಮೊದಲು ಸಮಾಜಕ್ಕೆ ನಾನೇನು ಮಾಡಿದ್ದೇನೆ ಎಂಬುದನ್ನು ನಾವು ಮನದಟ್ಟು ಮಾಡಿಕೊಳ್ಳಬೇಕು. ಸಮಾಜಕ್ಕೆ ಒಳಿತಾಗುವ ಕಾರ್ಯ ಮಾಡಿ ಆದರ್ಶ ವ್ಯಕ್ತಿಗಳಾಗಿ ಬಾಳಬೇಕು ಎಂಬುದು ನಮ್ಮ ಶಿಕ್ಷಕರ ಆಶಯವಾಗಿತ್ತು

ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳ ಜೀವನ ರೂಪಿಸಿದ ಗುರುಗಳ ಋಣ ತೀರಿಸಲಾಗದು.  ವಿದ್ಯಾರ್ಥಿಗಳಿಂದ ನಡೆಯುವ ಗುರುವಂದನಾ ಕಾರ್ಯಕ್ರಮಗಳು ಶಿಕ್ಷಕರಿಗೆ ಗೌರವ ಸಲ್ಲಿಸುವ, ಹಳೆಯ ನೆನಪುಗಳನ್ನು ಹಂಚಿಕೊಳ್ಳುವ ಮತ್ತು ಗುರು-ಶಿಷ್ಯರ ಬಾಂಧವ್ಯವನ್ನು ನವೀಕರಿಸುವ ಅರ್ಥಪೂರ್ಣ ಕಾರ್ಯಕ್ರಮಗಳಾಗಿವೆ ಎಂದು ಕೆ.ವಿ. ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಅಧ್ಯಕ್ಷ ಹಾಗೂ ಬಿಎಂಟಿಸಿ (BMTC)ಮಾಜಿ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್ ತಿಳಿಸಿದರು.

ನಗರದ ಪಿಪಿಹೆಚ್ ಎಸ್ ಪ್ರೌಢಶಾಲೆಯಲ್ಲಿ ಭಾನುವಾರ ನಡೆದ ಗುರುವಂದನಾ ಕಾರ್ಯ ಕ್ರಮದಲ್ಲಿ ತಮ್ಮ ಗುರುಗಳಿಗೆ ಸನ್ಮಾನಿಸುವ ಮೂಲಕ ಗುರುವಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.,

ಗುರುವಂದನೆ ಎಂಬುದು ಹಳೆಯ ನೆನಪುಗಳ ಮೆಲುಕು, ಶಿಕ್ಷಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳ ಅನಾವರಣ ಮತ್ತು ಶಾಲೆಗೆ ಸಹಾಯ ಹಸ್ತ ನೀಡುವುದು ಸಾಮಾನ್ಯ ವಾಗಿದೆ ಎಂದು ಮೇಲ್ನೋಟಕ್ಕೆ ಕಂಡರೂ ಸಹ ಇದು ನಮ್ಮ ಆತ್ಮಪೂರ್ವಕವಾಗಿ ಗುರುಗಳಿಗೆ ಶಿರಬಾಗಿ ನಮನ ಸಲ್ಲಿಸುವುದಾಗಿದೆ ಎಂದರು.

ಇದನ್ನೂ ಓದಿ: Chinthamani News: ತಂದೆ ತಾಯಿಯ ತ್ಯಾಗವೇ ನಮಗೆ ಪ್ರೇರಣೆ ಅವರೇ ನಿಜವಾದ ನಾಯಕರು

ಕೆ.ವಿ. ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಅಧ್ಯಕ್ಷನಾಗಿದ್ದರೂ ನಾನೂ ಸಹ ಶಿಕ್ಷಕರ ಶಿಷ್ಯನೇ ಆಗಿದ್ದೇನೆ. ಸಮಾಜದಿಂದ ನಾವು ಏನಾದರೂ ಪಡೆಯುವುದಕ್ಕಿಂತ ಮೊದಲು ಸಮಾಜಕ್ಕೆ ನಾನೇನು ಮಾಡಿದ್ದೇನೆ ಎಂಬುದನ್ನು ನಾವು ಮನದಟ್ಟುಮಾಡಿಕೊಳ್ಳಬೇಕು. ಸಮಾಜಕ್ಕೆ ಒಳಿತಾಗುವ ಕಾರ್ಯ ಮಾಡಿ ಆದರ್ಶ ವ್ಯಕ್ತಿಗಳಾಗಿ ಬಾಳಬೇಕು ಎಂಬುದು ನಮ್ಮ ಶಿಕ್ಷಕರ ಆಶಯವಾಗಿತ್ತು ಎಂದರು. 

 ಶಿಕ್ಷಕರು ವಿದ್ಯಾರ್ಥಿಗಳಲ್ಲಿನ ಆತ್ಮವಿಶ್ವಾಸ ಹೆಚ್ಚಿಸಿದಾಗ ಮಾತ್ರ ಗುರುಶಿಷ್ಯರಲ್ಲಿ ಬಾಂಧ ವ್ಯ ಹುಟ್ಟಿಕೊಳ್ಳುತ್ತದೆ. ಅದು ಶಿಷ್ಯಂದಿರಲ್ಲಿ ಪ್ರೀತಿ ವಿಶ್ವಾಸ ಹೆಚ್ಚಿಸಲು ಮೂಲ ಕಾರಣ ವಾಗುತ್ತದೆ. ಜನತೆಯ ಪ್ರೀತಿವಿಶ್ವಾಸ ಎಂದಿಗೂ ಅಜರಾಮರ ಗುರುಶಿಷ್ಯರ ನಡುವಿನ ಪ್ರೀತಿ ವಿಶ್ವಾಸವೆ ಇಂದು ನಡೆಯುತ್ತಿರುವ ಗುರುವಂದನಾ ಕಾರ್ಯಕ್ರಮ ಗುರುಶಿಷ್ಯರ ಸಮಾಗಮಕ್ಕೆ ಮೂಲ ಕಾರಣ ಎಂದರು.

1cbpm4pp

ಗುರು ವಂದನಾ ಎಂದರೆ ಜ್ಞಾನ ನೀಡುವ ಗುರುಗಳಿಗೆ ಗೌರವ ಕೃತಜ್ಞತೆ ಮತ್ತು ಭಕ್ತಿ ಸಲ್ಲಿಸುವ ಪ್ರಾರ್ಥನೆ. ಇದು ಸಂಸ್ಕೃತ ಶ್ಲೋಕಗಳ ಮೂಲಕ ಗುರುವಿನ ದೈವಿಕತೆಯನ್ನು ಸ್ಮರಿಸುವ ಸಾಂಪ್ರದಾಯಿಕ ಪದ್ಧತಿಯಾಗಿದ್ದು ಜೀವನದಲ್ಲಿ ಮಾರ್ಗದರ್ಶನ ನೀಡಿದವರನ್ನು 'ಬ್ರಹ್ಮವಿಷ್ಣು ಮತ್ತು ಮಹೇಶ್ವರ'ರಿಗೆ ಸಮಾನವೆಂದು ಕೊಂಡಾಡ ಲಾಗುತ್ತದೆ ಎಂದು ತಿಳಿಸಿದರು.

ನಿವೃತ್ತ ಮುಖ್ಯೋಪಾಧ್ಯಾಯಿನಿ ಅಂಬಿಕಮ್ಮ ಸನ್ಮಾನ ಸ್ವೀಕರಿಸಿ ಮಾತನಾಡಿ, “ಎಲ್ಲ ಸಮಸ್ಯೆ ಗಳಿಗೆ ಶಿಕ್ಷಣವೇ ಪರಿಹಾರ ಎಂದು ಸ್ವಾಮಿ ವಿವೇಕಾನಂದರು ಈ ಹಿಂದೆ ಹೇಳಿದ್ದು ಇಂದಿಗೂ ಪ್ರಸ್ತುತವೆನಿಸಿದೆ. ಇಂದು ಹೊಟ್ಟೆ ತುಂಬಿಸುವ ಶಿಕ್ಷಣ ನೀಡಲಾಗುತ್ತಿದೆಯೇ ಹೊರತು ಮನುಷ್ಯ ರನ್ನಾಗಿ ರೂಪಿಸುವ ವ್ಯವಸ್ಥೆ ಕಾಣುತ್ತಿಲ್ಲ. ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಕಾರ್ಯಕ್ಕೆ ಒತ್ತು ನೀಡಬೇಕು. ವಿದ್ಯಾರ್ಥಿಯ ಭವಿಷ್ಯಕ್ಕೆ ನಾನೇ ಜವಾಬ್ದಾರಿ ಎಂದು ಭಾವಿಸಿದ ಶಿಕ್ಷಕರಷ್ಟೇ ಗುರು ಸ್ಥಾನಕ್ಕೇರಲು ಸಾಧ್ಯ,' . ದೇಶದ ಎಲ್ಲ ಸಮಸ್ಯೆಗಳಿಗೆ ಶಿಕ್ಷಣವೇ ಪರಿಹಾರವೆನಿಸಿದೆ. ಹಾಗಾಗಿ ಎಲ್ಲರಿಗೂ ಶಿಕ್ಷಣ ನೀಡಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು. 

 ನಿವೃತ್ತ ಮುಖ್ಯೋಪಾಧ್ಯಾಯ ಅವುಲಪ್ಪ ಸನ್ಮಾನ ಸ್ವೀಕರಿಸಿ ಮಾತನಾಡಿ,''ತನಗೆ ತಿಳಿದ ಜ್ಞಾನ ವನ್ನು ಇನ್ನೊಂದು ತಲೆಮಾರಿಗೆ ತಿಳಿಸುವವನೇ ಗುರು. ಹಾಗಾಗಿ ಗುರುವಿಗೆ ಮಹತ್ವದ ಸ್ಥಾನವಿದೆ. ತಾಯಿ ಲಕ್ಷಣವಿರುವವರು ಮಾತ್ರ ಗುರುವಾಗಲು ಸಾಧ್ಯ. ಆದರೆ ತಾಯಿ ಲಕ್ಷಣವಿರುವ ಗುರುಗಳ ಕೊರತೆ ತೀವ್ರವಾಗಿ ಕಾಡುತ್ತಿದೆ. ಹಾಗೆಯೇ ಸರಿಯಾದ ಗುರಿ ನಿರೂಪಣೆ ನೀಡುವ ಗುರುಗಳ ಕೊರತೆಯೂ ಇದೆ,'' ಎಂದರು.    

ಪಿಪಿಹೆಚ್ ಎಸ್ ಪ್ರೌಢಶಾಲೆ 1978 ರಲ್ಲಿ ಪ್ರಾರಂಭವಾಗಿದ್ದು, ಅಂದಿನಿಂದ ಇಂದಿನ ವರೆಗೂ ಸೇವೆ ಸಲ್ಲಿಸಿದ ಮತ್ತು ಸಲ್ಲಿಸುತ್ತಿರುವ ಗುರುಗಳಿಗೆ 1978 ರಿಂದ ಇಂದಿನ ವರೆಗೂ ವಿದ್ಯಾಬ್ಯಾಸ ನಡೆಸಿದ್ದ ಮತ್ತು ನಡೆಸುತ್ತಿರುವ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಿ ಧನ್ಯರಾದರು. ಮೃತ ಶಿಕ್ಷಕರಿಗೆ ಸಂತಾಪ ಸೂಚಿಸಿದರು.  

ಈ ಸಂಧರ್ಭದಲ್ಲಿ ವಿವಿಧ ಕ್ಷೇತಗಳಲ್ಲಿ ಸಾಧನೆ ಗೈದಿರುವ ಹಳೇ ವಿದ್ಯಾರ್ಥಿಗಳಾದ ಡಾ.ಆರ್.ವೆಂಕಟೇಶ್, ಡಾ.ಮುದ್ದುಗಂಗಾಧರ್, ವಿ.ಕೆ.ಲಿಂಗಾರೆಡ್ಡಿ, ಜಗದೀಶ್, ಮೌಲಾ ,ದಿನೇಶ್, ಸಿ.ಬಿ.ಸಂತೋಷ್, ಎಸ್.ವಿ.ಸುರೇಶ್, ಜಲಜ, ಅನ್ನಪೂರ್ಣ, ಬೈಯ್ಯಣ್ಣ ಸೇರಿದಂತೆ ಸಹಸ್ರಾರು ಮಂದಿ ಇದ್ದರು.