ಗೌರಿಬಿದನೂರು: ತಾಲೂಕಿನಲ್ಲಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಹಿಂದೂ ಸಾದರು ಸಮುದಾಯದ ಏಕತೆಗಾಗಿ ಹಾಗೂ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬದವರ ಏಳಿಗೆಗಾಗಿ ತಾಲೂಕಿನಲ್ಲಿ ಹಿಂದೂ ಸಾದರ ಸೇವಾ ಸಂಘವನ್ನು ಸ್ಥಾಪನೆ ಮಾಡಲಾಗುತ್ತಿದೆ ಎಂದು ಹಿಂದೂ ಸಾದರ ಸೇವಾ ಸಂಘದ ಗೌರವ ಅಧ್ಯಕ್ಷ ಪಿ.ಟಿ.ಶ್ರೀನಿವಾಸ್ ತಿಳಿಸಿದರು.
ನಗರದ ನದಿದಡದ ಶ್ರೀ ಆಂಜನೇಯಸ್ವಾಮಿ ಕಲ್ಯಾಣ ಮಂಟಪದಲ್ಲಿ ಸಂಘದ ನೂತನ ನಿರ್ದೇ ಶಕರು ಹಾಗೂ ಪದಾಧಿಕಾರಿಗಳ ಆಯ್ಕೆಗಾಗಿ ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ದರು.
ವ್ಯವಸಾಯವನ್ನೇ ಮುಖ್ಯ ಕಸುಬಾಗಿಸಿಕೊಂಡು ಸಮಾಜದ ಜೊತೆಯಲ್ಲಿ ಸಹಬಾಳ್ವೆಯಿಂದ ಬದುಕುತ್ತಿರುವ ಹಿಂದು ಸಾದರ ಸಮಾಜವು ಇತ್ತೀಚಿನ ಕಾಲಘಟ್ಟದಲ್ಲಿ ವ್ಯವಸಾಯದಿಂದ ಸಾಕಷ್ಟು ನಷ್ಟ ಅನುಭವಿಸಿ ಆರ್ಥಿಕವಾಗಿ ಸಂಕಷ್ಟದ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಕೆಲವರಿಗೆ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಕೊಡಿಸಲಾಗದೆ ಕೈಚಲ್ಲಿರುವುದನ್ನು ಕಂಡಿದ್ದೇವೆ. ಅಂತವರನ್ನು ಗುರುತಿಸಿ ಅವರ ಮಕ್ಕಳಿಗೆ ಶಿಕ್ಷಣ ಕೊಡಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದೇ ಸಂಘದ ಉದ್ದೇಶ ಎಂದು ತಿಳಿಸಿದರು.
ಇದನ್ನೂ ಓದಿ: Chikkaballapur News: ಸರ್ಕಾರದ ನೀತಿ ವಿರುದ್ಧ ಡಿ.21ರಂದು ಬೆಂಗಳೂರಿನ ಸ್ವಾತಂತ್ರ‍್ಯ ಉದ್ಯಾನವನದಲ್ಲಿ ಸಿಪಿಐಎಂ ಪ್ರತಿಭಟನೆ
ಸಂಘದ ಅಧ್ಯಕ್ಷರಾದ ಗುಂಡಾಪುರದ ದೇವರಾಜ್ ಮಾತನಾಡುತ್ತಾ ಕಳೆದ ಆರು ತಿಂಗಳಿಂದ ತಾಲೂಕಿನೆಲ್ಲಡೆ ಓಡಾಡಿ ಹಿಂದು ಸಾದರ ಸೇವಾ ಸಂಘವನ್ನು ಸಂಘಟನೆ ಮಾಡಲಾಗಿದೆ ಇದರ ಜೊತೆಗೆ ಸಂಕಷ್ಟದಲ್ಲಿದ್ದ ನಮ್ಮ ಸಾಮಾಜದವರಿಗೆ ಆರ್ಥಿಕ ನೆರವನ್ನು ನೀಡುವ ಮೂಲಕ ಸಾದರು ಸಮುದಾಯದವರ ದುಃಖ ದುಮ್ಮಾನಗಳಿಗೆ ಭಾಗಿಯಾಗುವ ಮೂಲಕ ಸಮುದಾಯದಲ್ಲಿ ಹೊಸ ಭರವಸೆಯನ್ನು ಮೂಡಿಸಲಾಗಿದೆ ಎಂದ ಅವರು ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಹಿಂದೂ ಸಾದರ ಸೇವಾ ಸಂಘವನ್ನು ಮತ್ತಷ್ಟು ಗಟ್ಟಿಗೊಳಿಸುವ ಮೂಲಕ ಸಂಘವು ಸಮುದಾ ಯದ ಒಳಿತಿಗಾಗಿ ಶ್ರಮಿಸಲಿದೆ ಎಂದರು.
ಸಭೆಯಲ್ಲಿ ಹಿಂದೂ ಸಾದರ ಸೇವಾ ಸಂಘದ ನೂತನ ಪದಾಧಿಕಾರಿಗಳನ್ನು ಇದೇ ಸಂಧರ್ಭದಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಸಂಘದ ಕಾರ್ಯದರ್ಶಿಯಾಗಿ ಚಂದAದೂರು ಶ್ರೀಧರ್, ಉಪಾಧ್ಯಕ್ಷರಾಗಿ ಮರಿಪಡುಗು ನರಸಿಂಹಮೂರ್ತಿ, ಸಂಘಟನಾ ಕಾರ್ಯದರ್ಶಿ ಸೌಭಾ ಗ್ಯಮ್ಮ, ಸಂಘದ ನಿರ್ದೇಶಕರಾಗಿ ಮುರುಳಿ, ಗಾಯಿತ್ರಮ್ಮ, ಶ್ರೀನಿವಾಸಗೌಡ, ಪಟೇಲ್ ಮಂಜು ನಾಥ್, ನಾಗರಾಜ್, ಕಡಬೂರು ಶ್ರೀನಿವಾಸಗೌಡ, ಮುರುಳಿ ಗೋಟಕನಾಪುರ, ನರಸೇಗೌಡ, ದೇವರಾಜ್, ಮಂಜುನಾಥ್ ಅವರುಗಳನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಸಮುದಾಯದ ಹಿರಿಯರಾದ ದೊಡ್ಡಪಯ್ಯ, ರಾಜಶೇಕರ್, ಶಾಂತರಾಜು, ಗಂಗಣ್ಣ, ಗೋವಿಂದಪ್ಪ, ಚಿಕ್ಕಪಯ್ಯ, ಹನುಮಂತರಾಯಪ್ಪ, ಕೃಷ್ಣೇಗೌಡ, ರವಿಕುಮಾರ್, ಮೂರ್ತಿ, ಲಕ್ಷ್ಮೀ ನಾರಾಯಣ್, ಗೋಪಾಲಪ್ಪ, ಮೈಲಪ್ಪ , ತಿಮ್ಮೇಗೌಡ, ನಾರಾಯಣಗೌಡ ಹಾಗೂ ಇನ್ನಿತರರು ಉಪಸ್ಥಿತರಿದ್ದರು.