ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರಾಷ್ಟ್ರೀಯ ಚೈತನ್ಯ ಶಿರೋಮಣಿ ಪುರಸ್ಕಾರ ಅಡ್ಕಸ್ಥಳ ಕಬೀರ್ ಪಾಲು, ವಿಶ್ವ ಜ್ಞಾನಶ್ರೀ ಪುರಸ್ಕಾರ ಶ್ರೀಮತಿ ಖುಸ್ತರ್ ಬಾನು ಬಗಲಿಗೆ.

ರಾಷ್ಟ್ರೀಯ ಯುವ ದಿನಾಚರಣೆಯಂದು ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಗಣ ರಾಜ್ಯೋತ್ಸವದ ಸಂಭ್ರಮದ ಸನ್ನಿವೇಶದಲ್ಲಿ ಪ್ರತಿಷ್ಠಾನದ ಆಶ್ರಯದಲ್ಲಿ  ಆಯೋಜಿಸ ಲಾದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಲಾಲ್ ಸಾಬ್ ಪೆಂಡಾರಿ ಅವರು ಕಾರ್ಯಕ್ರಮವನ್ನು ಆಯೋಜಿಸಿ ಪ್ರಶಸ್ತಿಗಳನ್ನು ವಿತರಿಸಿದರು.

ವಿಶ್ವ ಜ್ಞಾನಶ್ರೀ ಪುರಸ್ಕಾರ ಶ್ರೀಮತಿ ಖುಸ್ತರ್ ಬಾನು ಬಗಲಿಗೆ ಬಂದಿದೆ

ಚಿಕ್ಕಬಳ್ಳಾಪುರ : ಪ್ರಶಾಂತಿ ಬಾಲ ಮಂದಿರ ಟ್ರಸ್ಟ್ನ ಶ್ರೀ ಸತ್ಯ ಸಾಯಿ ಲೋಕ ಸೇವಾ ಗುರುಕುಲದ ಹಿರಿಯ ಶ್ರೇಣಿಯ ಶಿಕ್ಷಕ, ಸಾಹಿತಿ ಹಾಗೂ ಬಿರುದುಗಳ ಸರದಾರ ಅಡ್ಕಸ್ಥಳ ಕಬೀರ್ ಅವರಿಗೆ ವಿಶೇಷ ಮಾನವೀಯ ಸ್ಪಂದನೆಗಾಗಿ “ರಾಷ್ಟ್ರೀಯ ಚೈತನ್ಯ ಶಿರೋಮಣಿ ಪುರಸ್ಕಾರ” ಹಾಗೂ ಪ್ರಶಾಂತಿ ಬಾಲ ಮಂದಿರದ ಉಪನ್ಯಾಸಕಿ ಶ್ರೀಮತಿ ಖುಸ್ತರ್ ಬಾನು ಅವರಿಗೆ ಬೋಧನಾ ಕ್ಷೇತ್ರದಲ್ಲಿನ ಗಣನೀಯ ಸಾಧನೆಗಾಗಿ ರಾಷ್ಟ್ರೀಯ “ವಿಶ್ವ ಜ್ಞಾನಶ್ರೀ ಪುರಸ್ಕಾರ” ವನ್ನು ಕವಿತ್ತ ಕರ್ಮಮಣಿ ಪ್ರತಿಷ್ಠಾನ, ನಾಗರಮುನ್ನೋಳಿ, ಚಿಕ್ಕೋಡಿ ನೀಡಿದೆ.

ಇದನ್ನೂ ಓದಿ: Raghavendra Chitravani: ರಾಘವೇಂದ್ರ ಚಿತ್ರವಾಣಿಗೆ 50ರ ಸಡಗರ; ಲೋಗೋ ಲಾಂಚ್

ರಾಷ್ಟ್ರೀಯ ಯುವ ದಿನಾಚರಣೆಯಂದು ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಗಣ ರಾಜ್ಯೋತ್ಸವದ ಸಂಭ್ರಮದ ಸನ್ನಿವೇಶದಲ್ಲಿ ಪ್ರತಿಷ್ಠಾನದ ಆಶ್ರಯದಲ್ಲಿ  ಆಯೋಜಿಸ ಲಾದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಲಾಲ್ ಸಾಬ್ ಪೆಂಡಾರಿ ಅವರು ಕಾರ್ಯಕ್ರಮವನ್ನು ಆಯೋಜಿಸಿ ಪ್ರಶಸ್ತಿಗಳನ್ನು ವಿತರಿಸಿದರು.

26cbpm13u ok

ಪ್ರಶಸ್ತಿ ಸ್ವೀಕರಿಸಿ ಪುರಸ್ಕೃರ ಪರವಾಗಿ ಮಾತನಾಡಿದ ಅಡ್ಕಸ್ಥಳ ಕಬೀರ್, “ಈ ಪುರಸ್ಕಾರ ನನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ಪುರಸ್ಕೃತರು ಪುರಸ್ಕಾರದ ಗೌರವವನ್ನು ಕಾಪಾಡಿಕೊಂಡು ಸಮಾಜದ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಬೇಕು” ಎಂದು ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ಕರುನಾಡು ಸಾಹಿತ್ಯ ಪರಿಷತ್ತಿನ ಮ.ಗ.ಹೆಗಡೆ, ಡಾ.ನರೇಂದ್ರ, ಚಿಕ್ಕವೀರಯ್ಯ ಸ್ವಾಮಿ, ಸಾಲಿಗ್ರಾಮ ಗಣೇಶ ಶೆಣೈ, ಅಸ್ಲಂ ಶೇರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.