ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

MP Dr.K.Sudhakar: ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡುವುದೇ ನಿಜವಾದ "ಗ್ಯಾರೆಂಟಿ" : ಸಂಸದ ಡಾ.ಕೆ.ಸುಧಾಕರ್ ಅಭಿಮತ

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ನೀಡಿರುವ ವೋಕಲ್ ಫಾರ್ ಲೋಕಲ್ ಕರೆಯಂತೆ ಸ್ಥಳೀಯ ಉತ್ಪನ್ನಗಳನ್ನು ಪ್ರೋತ್ಸಾಹಿಸೋಣ. ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಎನ್‌ಆರ್‌ಎಲ್‌ಎಂ-ಅಜೀವಿಕಾ ಯೋಜನೆಯಡಿ ತರಬೇತಿ ಪಡೆದು, ಇಂದು ಉದ್ಯಮಿಗಳಾಗಿ ಬೆಳೆಯುತ್ತಿರುವ ಈ ಸೋದರಿಯರ ಬೆನ್ನಿಗೆ ನಾವೆಲ್ಲರೂ ನಿಲ್ಲೋಣ. ಇವರ ಈ ಪರಿಶ್ರಮಕ್ಕೆ ಮಾರುಕಟ್ಟೆ ಕಲ್ಪಿಸಿಕೊಡಲು ಕೈಜೋಡಿಸೋಣ.

ಚಿಕ್ಕಬಳ್ಳಾಪುರ : ಇಂದು ಎಲ್ಲೆಡೆ 'ಗ್ಯಾರೆಂಟಿ'ಗಳ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಆದರೆ ನನ್ನ ಪ್ರಕಾರ, ಒಬ್ಬ ಮಹಿಳೆಗೆ ತನ್ನ ಸ್ವಂತ ಕಾಲ ಮೇಲೆ ನಿಲ್ಲುವ ಶಕ್ತಿ ನೀಡುವುದು ಮತ್ತು ಆಕೆಗೆ ಸ್ವಾವಲಂಬಿ ಬದುಕು ಕಟ್ಟಿಕೊಡುವುದೇ ನಾವು ನೀಡಬಹುದಾದ ಅತ್ಯಂತ ದೊಡ್ಡ ಮತ್ತು ಶಾಶ್ವತವಾದ 'ಗ್ಯಾರೆಂಟಿ' ಎಂದು ಸಂಸದ ಡಾ.ಕೆ.ಸುಧಾಕರ್(MP Dr. K. Sudhakar) ಹೇಳಿದರು.

ನಗರಹೊರವಲಯ ಜಿಲ್ಲಾಡಳಿತ ಭವನದಲ್ಲಿರುವ ಸಂಸದ ಕಚೇರಿಯಲ್ಲಿ ಸೋಮವಾರ ನಡೆದ ಸಂಸದರ ಜನತಾ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ 'ಸಂಜೀವಿನಿ' ಮಹಿಳಾ ಸ್ವಸಹಾಯ ಗುಂಪುಗಳ ಮಹಿಳೆಯರು ಸಂಸದರನ್ನು ಭೇಟಿ ಅಕ್ಕ ತಿನಿಸುಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಈ ವೇಳೆ ಮಾತನಾಡಿದ ಅವರು"ಅಕ್ಕ ಮಾಡಿದ ಅಕ್ಕರೆಯ ತಿನಿಸುಗಳು" - ಈ ಬ್ರ‍್ಯಾಂಡ್ ಅಡಿಯಲ್ಲಿ ನಮ್ಮ ಜಿಲ್ಲೆಯ ವಿಶಿಷ್ಟ ದೇಸಿ ತಿಂಡಿಗಳಾದ ಚಿಂತಾಮಣಿಯ ಖಾರದ ಕಡಲೆಕಾಯಿ ಬೀಜ, ಪೆರೇಸಂದ್ರದ ಗರಿಗರಿಯಾದ ಚಕ್ಕುಲಿ, ಕೋಡುಬಳೆ ಮತ್ತು ನಿಪ್ಪಟ್ಟುಗಳು, ಆರೋಗ್ಯ ದಾಯಕವಾದ ರಾಗಿ ಲಾಡು, ಬೆಲ್ಲದ ಕೊಬ್ಬರಿ ಮಿಠಾಯಿ... ಹೀಗೆ ಅನೇಕ ಸ್ವಾದಿಷ್ಟ ತಿನಿಸುಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಮತ್ತು ಶುಚಿಯಾಗಿ ಪ್ಯಾಕ್ ಮಾಡಲಾಗಿದೆ ಎಂದರು.

ಇದನ್ನೂ ಓದಿ: MP Dr K Sudhakar: ಕರಕುಶಲಕರ್ಮಿಗಳು ಪಿ.ಎಂ.ವಿಶ್ವಕರ್ಮ ಯೋಜನೆಯ ಸದುಪಯೋಗ ಪಡೆಯಿರಿ : ಸಂಸದ ಡಾ.ಕೆ.ಸುಧಾಕರ್ ಕರೆ

ಅಕ್ಕತಂಡದ ಸಹೋದರಿಯರ ಮುಖದಲ್ಲಿ ಅಪ್ರತಿಮ ಆತ್ಮವಿಶ್ವಾಸ ಎದ್ದು ಕಾಣುತ್ತಿದೆ. ಅವರು ಪ್ರೀತಿಯಿಂದ ತಯಾರಿಸಿರುವ "ಅಕ್ಕ ಮಾಡಿದ ಅಕ್ಕರೆಯ ತಿನಿಸುಗಳು" ಎಂಬ ಉತ್ಪನ್ನಗಳ ಬ್ರ‍್ಯಾಂಡಿಂಗ್ ಮತ್ತು ಗುಣಮಟ್ಟವನ್ನು ಕಂಡು ಅಚ್ಚರಿ ಮತ್ತು ಸಂತೋಷ ಎರಡೂ ಆಯಿತು. ದಿನನಿತ್ಯದ ಸ್ನ್ಯಾಕ್ಸ್ ಗಾಗಿ, ಹಬ್ಬ-ಹರಿದಿನಗಳಲ್ಲಿ ಅಥವಾ ಅತಿಥಿಗಳಿಗೆ ನೀಡುವ ಉಡುಗೊರೆಗಳಲ್ಲಿ ಇಂತಹ ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ನೀಡುವುದರಿಂದ ಈ ಮಹಿಳಾ ಸಂಘಗಳಿಗೆ ದೊಡ್ಡ ಮಟ್ಟದ ಪ್ರೋತ್ಸಾಹ ಸಿಗಲಿದೆ ಎಂದರು.

ಪ್ರಧಾನಿ ಶ್ರೀ ನರೇಂದ್ರ ಮೋದಿ(Prime Minister Shri Narendra Modi) ಅವರು ನೀಡಿರುವ ವೋಕಲ್ ಫಾರ್ ಲೋಕಲ್ ಕರೆಯಂತೆ ಸ್ಥಳೀಯ ಉತ್ಪನ್ನಗಳನ್ನು ಪ್ರೋತ್ಸಾಹಿ ಸೋಣ. ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಎನ್‌ಆರ್‌ ಎಲ್‌ಎಂ-ಅಜೀವಿಕಾ ಯೋಜನೆಯಡಿ ತರಬೇತಿ ಪಡೆದು, ಇಂದು ಉದ್ಯಮಿಗಳಾಗಿ ಬೆಳೆಯುತ್ತಿರುವ ಈ ಸೋದರಿಯರ ಬೆನ್ನಿಗೆ ನಾವೆಲ್ಲರೂ ನಿಲ್ಲೋಣ. ಇವರ ಈ ಪರಿಶ್ರಮಕ್ಕೆ ಮಾರುಕಟ್ಟೆ ಕಲ್ಪಿಸಿಕೊಡಲು ಕೈಜೋಡಿಸೋಣ.

1su

ನಮ್ಮ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಮಹಿಳಾ ಸ್ವಸಹಾಯ ಗುಂಪುಗಳಲ್ಲಿ ಕ್ರಿಯಾಶೀಲ ರಾಗಿ ಇಂತಹ ಅಧ್ಬುತ ಕೆಲಸ ಮಾಡುತ್ತಿರುವ ಎಲ್ಲಾ ಸಾಧಕ ಮಹಿಳೆಯರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಿಮ್ಮ ಈ ಸಾಧನೆ ಇಡೀ ಸಮಾಜಕ್ಕೆ ಸ್ಫೂರ್ತಿಯಾಗಲಿ ಎಂದು ಹಾರೈಸಿದರು.

ಹೀಗಾಗಿ ಸೋಮವಾರ ಜಿಲ್ಲಾಡಳಿತ ಭವನದಲ್ಲಿ  ನಡೆದ 'ಜನತಾದರ್ಶನ' ಕಾರ್ಯಕ್ರಮ ಕೇವಲ ಕುಂದುಕೊರತೆಗಳನ್ನು ಆಲಿಸುವ ವೇದಿಕೆಯಾಗಲಿಲ್ಲ, ಬದಲಿಗೆ ನಮ್ಮ ಜಿಲ್ಲೆಯ ಹೆಣ್ಣುಮಕ್ಕಳ ಅದ್ಭುತ ಸಾಧನೆಯನ್ನು ಕಣ್ಣಾರೆ ಕಂಡು ಹೆಮ್ಮೆ ಪಡುವ ಸುಸಂದರ್ಭವಾಗಿ ಬದಲಾದ ಕಾರ್ಯಕ್ರಮವಾಗಿತ್ತು ಎಂದರೆ ತಪ್ಪಿಲ್ಲ.

ಎಂದಿನಂತೆ ಸೋಮವಾರ ನಡೆದ ಸಂಸದರ ಜನತಾ ದರ್ಶನ ಬೆಳಿಗ್ಗೆ 10.30 ಕ್ಕೆ ಆಯೋಜನೆಯಾಗಿತ್ತು. ಆದರೆ ಸಂಸದರು ಬರುವ ವೇಳೆಗೆ ಸಂಜೆ 4 ಗಂಟೆಯಾಗಿತ್ತು. ಸರಿ ಸುಮಾರು 5 ಗಂಟೆ ತಡವಾಗಿ ಬಂದರೂ ಜನತೆ ಸಂಸದರಿಗಾಗಿ ಕಾದಿದ್ದರಲ್ಲದೆ, ಆಗಲೂ ಕೂಡ ತಮ್ಮ ನೋವು ನಲಿವು ಕಷ್ಟಗಳನ್ನು ಅಹವಾಲುಗಳ ರೂಪದಲ್ಲಿ ಹಂಚಿಕೊಂಡರು.

ಈ ವೇಳೆ ಅಪಾರ ಅಭಿಮಾನಿಗಳು ಪಕ್ಷದ ಮುಖಂಡರು ಇದ್ದರು.